ಸ್ಟೇಟಸ್ ಕತೆಗಳು (ಭಾಗ ೯೨೦)- ಹೆಸರು

ಸ್ಟೇಟಸ್ ಕತೆಗಳು (ಭಾಗ ೯೨೦)- ಹೆಸರು

ನಾನು ಎಷ್ಟೇ ಕೆಲಸ ಮಾಡಿದರೂ ಮನ್ನಣೆಗಳು ಸಿಗ್ತಾ ಇಲ್ಲ. ಯಾರೂ ನನ್ನನ್ನ ಗುರುತಿಸ್ತಾ ಇಲ್ಲ. ಮಾಡಿದ ಕೆಲಸಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸುವವರು ಸಿಗ್ತಾ ಇಲ್ಲ. ಹೀಗಿದ್ದಾಗ ಇನ್ನೊಂದಿಷ್ಟು ಕೆಲಸ ಯಾಕೆ ಮಾಡಬೇಕು ಅನ್ನೋ ಯೋಚನೆ ಮನಸಲ್ಲಿ ಕಾಡುತ್ತಾನೆ ಇರುತ್ತೆ. ಪ್ರತಿಸಲ ಮನಸ್ಸಿಗೆ ಬೇಜಾರಾದಾಗ ನನ್ನ ಗೆಳೆಯನಲ್ಲಿ ಫೋನ್ ಮಾಡಿ ಹೇಳ್ತಾ ಇದ್ದೆ. ಹಲವು ಸಲ ಇದನ್ನ ಕೇಳಿಕೊಂಡ ಆತ ಅವತ್ತು ಉತ್ತರವನ್ನು ಕೊಟ್ಟಿದ್ದ ."ನಿನ್ನ ಕೈಗೊಂಡು ಉತ್ತರ ಪತ್ರಿಕೆಯನ್ನು ಕೊಡುತ್ತೇನೆ. ಆ ಉತ್ತರ ಪತ್ರಿಕೆಯಲ್ಲಿ ಅದ್ಭುತವಾಗಿ ಉತ್ತರವನ್ನು ಬರೀತಾ ಹೋಗ್ತೀಯಾ, ಎಲ್ಲಾ ಪ್ರಶ್ನೆಗಳಿಗೂ ಸರಿಯಾದ ವಿವರಣೆಯನ್ನು ನೀಡುತ್ತೀಯಾ, ಹೀಗಿದ್ದೂ ನಿನ್ನ ಹೆಸರನ್ನ ನೀನಲ್ಲಿ ದಾಖಲಿಸದೇ ಹೋದಾಗ ಆ ಉತ್ತರ ಪತ್ರಿಕೆಯಿಂದ ನಿನಗೆ ಅಂಕ ಲಭ್ಯವಾಗದು. ಹಾಗೆ ಕೆಲವೊಂದು ಸಲ ನಾವು ಮಾಡಿದ್ದೇವೆ ಅನ್ನೋದು ತಿಳಿದಾಗ ಮಾತ್ರ ಅದರ ಆ ಕೆಲಸದ ಗೌರವೂ ಸಲ್ಲುತ್ತದೆ. ಗೌರವ ಸಿಗಬೇಕು ಎನ್ನುವ ಕಾರಣಕ್ಕೆ ಕೆಲಸ ಮಾಡುವುದು ತಪ್ಪು, ಆದರೆ ನೀನು ಶ್ರಮ ಪಟ್ಟ ಕೆಲಸಕ್ಕೆ ಗೌರವ ಸಿಗಬೇಕಾಗಿರೋದು ಅರ್ಹವಾಗಿದೆ. ಅದಕ್ಕೆ ನಿನ್ನ ಉತ್ತರ ಪತ್ರಿಕೆಯಲ್ಲಿ ಮೊದಲು ನಿನ್ನ ಹೆಸರನ್ನು ಸರಿಯಾಗಿ ದಾಖಲಿಸಿಕೊಂಡು ಆಮೇಲೆ ಉತ್ತರವನ್ನು ಬರೆಯುವುದಕ್ಕೆ ಪ್ರಾರಂಭಿಸು. ಈಗಲಾದ್ರೂ ಅರ್ಥವಾಗಿದೆ ಅಂದುಕೊಳ್ತೇನೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ