ಸ್ಟೇಟಸ್ ಕತೆಗಳು (ಭಾಗ ೯೩೭)- ಎತ್ತರ

ಸ್ಟೇಟಸ್ ಕತೆಗಳು (ಭಾಗ ೯೩೭)- ಎತ್ತರ

ಎತ್ತರ ತುಂಬಾ ದೊಡ್ಡದು. ನೋಡುವಾಗಲೇ ಭಯ ಆಗುತ್ತೆ. ಅದನ್ನ ದಾಟುವುದೇನೊ ಬಂತು. ಆದರೆ ಮುಂದೆ ಸಾಗಬೇಕು. ಆ ವಿಳಾಸವನ್ನು ತಲುಪಬೇಕು ಅಂತ ಅಂದ್ರೆ ಆ ಮೊದಲ ಎತ್ತರವನ್ನ ದಾಟಲೇಬೇಕು. ಮೊದಲ ಎತ್ತರದ ಆ ಕಡೆ ಏನಿದೆ ಅನ್ನೋದು ಒಂದು ಚೂರು ಕಾಣುತ್ತಿಲ್ಲ. ಮೊದಲ ಎತ್ತರವನ್ನೇರುವಾಗ ದೇಹ ಸುಸ್ತಾಗಬಹುದು, ಗಾಯವಾಗಬಹುದು, ನೋವಾಗಬಹುದು, ಏನಾದರೂ ಸಹ ಆ ಎತ್ತರವನ್ನು ದಾಟಲೇಬೇಕು ತುಂಬಾ ಜನ ಬಂದು ಆ ಎತ್ತರದ ಮುಂದೆ ನಿಂತಿದ್ದಾರೆ. ಅದನ್ನ ಏರುವುದಕ್ಕೆ ಒಬ್ಬೊಬ್ಬರು ಒಂದೊಂದು ರೀತಿಯ ಪ್ರಯತ್ನವನ್ನು ಪಡ್ತಾ ಇದ್ದಾರೆ. ಕೆಲವರಂತೂ ಆ ಎತ್ತರವೇ ಬೇಡ ಅಂದುಕೊಂಡು ಸುಮ್ಮನಾಗಿಬಿಟ್ಟಿದ್ದಾರೆ. ಕೆಲವರು ತಿರುಗಿ ಹೊರಟು ಇನ್ಯಾವುದೋ ದಾರಿಯನ್ನ ಹುಡುಕ ಹೊರಟಿದ್ದಾರೆ. ಕಷ್ಟಪಟ್ಟು ಶ್ರಮವಹಿಸಿ ಮೊದಲ ಹಂತವನ್ನು ದಾಟಿದವರಿಗೆ ಮುಂದಿನ ಹಂತದಿಂದ ಒಂದಷ್ಟು ಸಣ್ಣ ಹೆಜ್ಜೆಗಳು ಸಿಗಲಾರಂಬಿಸಿದವು. ತಲುಪಬೇಕಾದ ಊರು ಹತ್ತಿರವಾಗಲು ಆರಂಭಿಸಿತು. ಮೊದಲು ಏರುವುದಕ್ಕೆ ಸಾಧ್ಯವಾಗದವರು ಆ ದಾರಿಯ ಬಗ್ಗೆ ಮನಸ್ಸಿಗೆ ಇಷ್ಟ ಬಂದಂತೆ ಮಾತನಾಡುತ್ತಾ ಅದರ ವ್ಯರ್ಥತೆಯನ್ನು ಜಗಜ್ಜಾಹೀರು ಮಾಡುತ್ತಾ ಮನೆಯ ಕಡೆಗೆ ನಡೆದಿದ್ದಾರೆ. ಮುಂದೆ ಸಾಗಿದವರು ಮಾತ್ರ ಹೊಸ  ಹುಮ್ಮಸ್ಸಿನಿಂದ ಮುಂದುವರೆದಿದ್ದಾರೆ. ಹಾಗಾಗಿ ದಾಟಬೇಕಿರುವ ಮೊದಲ  ಹಂತವನ್ನು ಪೂರ್ಣಗೊಳಿಸಿದರೆ ಮಾತ್ರ ಮುಂದಿನ ಹಂತಗಳು ಸುಲಭ ಸಾಧ್ಯವಾಗುತ್ತದೆ ಪರಿಶ್ರಮ ಪಡಬೇಕು ದೃಢ ನಿಶ್ಚಯ ಬೇಕು... ಎತ್ತರವನ್ನು ಏರುವುದ್ದಕ್ಕೆ ಕಾಯುತ್ತಿದ್ದಾನೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ