ಸ್ಟೇಟಸ್ ಕತೆಗಳು (ಭಾಗ ೯೪೨)- ಯಾಕಿವ ಹೀಗೆ?

ಸ್ಟೇಟಸ್ ಕತೆಗಳು (ಭಾಗ ೯೪೨)- ಯಾಕಿವ ಹೀಗೆ?

ಒಳಗಿರುವವನು ಯಾರು? ಅವನ್ಯಾಕೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಆಲೋಚನೆಗಳನ್ನ ವಿವೇಚನೆಗಳನ್ನು ನೀಡುತ್ತಾ ಹೋಗುತ್ತಾನೆ. ಒಬ್ಬ ರಾತ್ರಿ ಹಗಲೆನ್ನದೇ ಪರಿಶ್ರಮ ಪಟ್ಟು ಉನ್ನತ ಹುದ್ದೆ ಏರುವಂತೆ ಪ್ರೇರೇಪಿಸುತ್ತಾನೆ. ಇನ್ನೊಬ್ಬ ಕೈಗೆ ಸಿಕ್ಕಿದ ದುಡ್ಡುಗಳನ್ನ ವ್ಯರ್ಥವಾಗಿ ಖರ್ಚು ಮಾಡಿಕೊಂಡು ಬದುಕು ದೂಡುವುದು ಹೇಗೆ ಎನ್ನುವುದನ್ನು ಯೋಚಿಸುವಂತೆ ಮಾಡುತ್ತಿರುತ್ತಾನೆ. ವಿಪರೀತ ಸಾಲ ಮಾಡಿ ಸಾಲ ತೀರಿಸುವುದು ಹೇಗೆ ಅಂತ ಹೆದರಿ ಸಾವಿಗೆ ಶರಣಾಗುವಂತೆ ಮಾಡುವವನು ಇದ್ದಾನೆ. ಬಾಯಲ್ಲೊಂದು ಮಾತನಾಡಿ ಕಾರ್ಯದಲ್ಲಿ ಯಾವುದನ್ನು ಮಾಡದ ಮನಸ್ಥಿತಿಯನ್ನು ಅವನೇ ನಿರ್ಮಿಸುತ್ತಾನೆ, ದೊಡ್ಡ ದೊಡ್ಡ ಮಾತುಗಳನ್ನ ಆಡುತ್ತಾ ಜಗತ್ತಿಗೆ ತಾನೇ ಅದ್ಭುತ ವ್ಯಕ್ತಿ ಎಂದು ತೋರಿಸಿ. ಸುತ್ತಮುತ್ತಲಿನ ಬಾರಿಗೆ ತೊಂದರೆ ಮಾಡುವ ಕೆಟ್ಟ ಸ್ಥಿತಿಯ ಮನಸ್ಸನ್ನು ಅವನೇ ನಿರ್ಮಿಸುತ್ತಾನೆ, ಎಲ್ಲರಿಗೂ ಒಳಿತು ಮಾಡುತ್ತಾ ತಾನು ಮೌನವಾಗಿರುವ ಮನಸ್ಸನ್ನು ಗಟ್ಟಿಗೊಳಿಸುತ್ತಾನೆ, ಎದುರಿನ ವ್ಯಕ್ತಿಯನ್ನು ಚೂರಿ ಚಾಕುವಿನಿಂದ ಚುಚ್ಚಿ ಸಾಯಿಸಿ ಸಂಭ್ರಮ ಪಡುವ  ವಿಕೃತಿಯನ್ನು ಅವನೇ ಸೃಷ್ಟಿಸುತ್ತಾನೆ. ಮನೆಯವರ ಒಳಿತಿಗಾಗಿ ನಗುವಿನಿಂದಲೇ ಬದುಕುವ ಧೈರ್ಯವನ್ನು ಅವನೇ ಕೊಡುತ್ತಾನೆ, ಮೋಸ ಮಾಡೋ ತರ ,ಒಳ್ಳೆಯದನ್ನು ಹೇಳುವ ತರಹ, ಕೆಟ್ಟ ಆಲೋಚನೆ ಬರೋ ತರಹ, ಪ್ರೀತಿಯ ತರಹ, ಹೀಗೆ ಒಳಗೆ ಕುಳಿತು ಎಲ್ಲವನ್ನು ಅವನೇ ನಿರ್ವಹಿಸುತ್ತಿರುವಾಗ ಎಲ್ಲರನ್ನೂ ಒಂದೇ ದಾರಿಯಲ್ಲಿ ಸಾಗುವಂತೆ ಮಾಡಬಹುದಲ್ವಾ? ಎಲ್ಲರ ಮೊಗದಲ್ಲಿ ನಗುವರಳಿ, ಎಲ್ಲರೂ ಸಾಧನೆಯ ಕಡೆಗೆ ಸಾಗುತ್ತಾ ಹೋದರೆ ಜಗತ್ತು ಇನ್ನೊಂದಷ್ಟು ದೊಡ್ಡ ಬೆಳಕನ್ನ ಕಾಣುವುದಕ್ಕೆ ಸಾಧ್ಯ ಇದೆ ಅಲ್ವಾ? ಒಳಗೆ ಕುಳಿತ ಅವನು ಒಬ್ಬನೇ ಆದರೆ ಎಲ್ಲರೂ ಒಂದೇ ತರ ಯಾಕೆ ಇರ್ತಾ ಇಲ್ಲ. ನನಗಂತೂ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ ತಿಳಿದವರು ನೀವು ನಿಮ್ಮ ಮುಂದಿಟ್ಟಿದ್ದೇನೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ