ಸ್ಟೇಟಸ್ ಕತೆಗಳು (ಭಾಗ ೯೪೫)- ಮೀನು

ಸ್ಟೇಟಸ್ ಕತೆಗಳು (ಭಾಗ ೯೪೫)- ಮೀನು

ನನ್ನ ಜೀವನಕ್ಕೆ ಏನು ಅರ್ಥ ಎಲ್ಲರಂತೆ. ನಾನು ಒಬ್ಬ ಜೀವಿ. ನನಗೂ ಬದುಕುವ ಹಕ್ಕಿದೆ.ಆದರೆ ನನ್ನ ಬದುಕು ಎಲ್ಲರ ಹಾಗಿಲ್ಲ. ನಾನು ನಿಮ್ಮನ್ನ ಸಂತೋಷ ಪಡಿಸುವುದಕ್ಕೆ ಸಂಭ್ರಮ ಪಡಿಸುವುದಕ್ಕೆ ಮಾತ್ರ ಹುಟ್ಟಿದ್ದೇನೆ ಅನ್ನುವ ಯೋಚನೆ ನನ್ನನ್ನು ಕಾಡ್ತಾ ಇದೆ. ಅಲ್ಲೆಲ್ಲೋ ಸಮುದ್ರದಲ್ಲಿ ನನ್ನಷ್ಟಕ್ಕೆ ಸಂಭ್ರಮದಿಂದ ಆಟವಾಡ್ತಾ ಇದ್ದಂತಹ ಕುಟುಂಬ ನಮ್ಮದು. ಆದರೆ ನಮ್ಮನ್ನ ಇದೀಗ ತಂದು ಹಾಕಿ ಒಂದಷ್ಟು ಪರಿಧಿಗಳನ್ನ ಎಳೆದು ಅದರೊಳಗೆ ನೀರನ್ನು ಸುರಿದು ನಿಮ್ಮನ್ನು ಸಂಭ್ರಮಿಸುವುದಕ್ಕೆ ಅಂತ ಅಭ್ಯಾಸ ಮಾಡಿ ನೇಮಿಸುತ್ತಾರೆ. ನನಗೆಲ್ಲಿ ಕಾಡೋದೇನು ಅಂತಂದ್ರೆ ನಮ್ಮ ಇಡೀ ಜೀವನ ನಿಮ್ಮನ್ನ ಸಂಭ್ರಮ ಪಡಿಸುವುದರಲ್ಲಿ ಕಳೆದು ಹೋಗ್ತಾ ಇದೆ, ನಮ್ಮದಾದ ಸ್ವಂತ ಬದುಕು ಸ್ವಂತ ಆಲೋಚನೆ ಯಾವುದು ಇಲ್ಲದೆ ನೀವು ಹೇಳಿದಂತೆ ಕುಣಿಯುವ ಗೊಂಬೆಗಳಾಗಿ ಬಿಟ್ಟಿದ್ದೇವೆ. ನಿಮಗೂ ಒಂದು ದಿನವೂ ಅನ್ಸಿಲ್ವಾ ನಮಗೂ ಯೋಚನೆಗಳು ಇದೆ ನಮಗೂ ಬದುಕುವ ಸ್ವತಂತ್ರ ಇದೆ ಅಂತ. ನಿಮಗೆ ಒಂದಷ್ಟು ನಿಮ್ಮ ದೈನಂದಿನದ ಕೆಲಸಗಳಿಗೆ ತೊಂದರೆ ಆದರೆ ಸ್ವಾತಂತ್ರ್ಯವನ್ನು ಕಿತ್ತುಕೊಂಡವರು ಎಂಬ ದೊಡ್ಡ ದೊಡ್ಡ ಮಾತುಗಳನ್ನ ಆಡ್ತೀರಿ. ಈಗ ನಮ್ಮ ಕುರಿತು ನೀವು ಮಾಡ್ತಾ ಇರೋದೇನು?, ಹೀಗೆಂದು ಆ ಡಾಲ್ಫಿನ್ ಮೀನು ಜೋರಾಗಿ ಹೇಳಿ ನೀರೊಳಗೆ ಮುಳುಗಿ ಕುಣಿಯೋದಕ್ಕೆ ಪ್ರಾರಂಭಿಸಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ