ಹಿಂದೆ ಹೇಗೆ ಬದುಕಿದರೆಂದು...

ಹಿಂದೆ ಹೇಗೆ ಬದುಕಿದರೆಂದು...

ಕವನ

ಹಿಂದೆ ಹೇಗೆ ಬದುಕಿದರೆಂದು

ನಮಗೇಕೆ  ಪ್ರಿಯ ಗೆಳೆಯನೇ

ಈ ದಿನದ ನಾಳೆಗಳ ಬಗೆಗೆ ಚಿಂತೆ

ಚಾಯವಾಲನೊ ರೋಟಿ ತಿನ್ನುವವನೊ

ಆಡಳಿತ ಚುಕ್ಕಾಣಿ ಹಿಡಿದಿಹನು ನೋಡು

ಭದ್ರ ಆಡಳಿತ ಸಿಗುವಾಗ ನಮಗೇಕೆ ಚಿಂತೆ !

 

ದೇಶಕ್ಕೆ ಆಪತ್ತು ಬಂದಾಗ ಎದ್ದು ನಿಲ್ಲುತ

ನಮ್ಮ ಕೊಡುಗೆಯೇನು ತಿಳಿಯುವ 

ನಾವು ಬರಿದೆ ಕಾಲನು ಎಳೆಯದೆಲೆ 

ಇಂದು ಸಾಗುವ ಮುಂದು ಮುಂದು

ಮುಂದು ಹಸಿದ ಕಣ್ಣುಗಳಿಗೆ ಸಾಂತ್ವನ

ಹೇಳುವ ಚಿತ್ತದಲಿ ತಾಪವನು ತುಂಬದೆಲೆ

 

ಹಣದಾಹ ಇಲ್ಲದೆಯೆ ಸೇವೆಯನು ಮಾಡು

ಗಳಿಸಿ ಉಳಿಸಿದುದನೆಲ್ಲ ದಾನ ಮಾಡು 

ಅವರಿಗೆ ರಾಷ್ಟ್ರದ ಚಿಂತೆ ಇರಲವಗೆ ಬಿಡು

ಒಬ್ಬ ಬಡವನ ಚಿಂತೆ ಇರಲದುವೆ ಸಾಕು

ನಮಗೆ ನಮಗೆ ನಾವೇ ಸಾಟಿ ದೇಶ ಕಾಯಲು

ಸೇನಾನಿ ಹೊರಟಿಹನು ಕಾಲಾಳುಗಳು ನಾವು

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್