ಎಲ್ಲ ಪುಟಗಳು

ಲೇಖಕರು: Ennares
ವಿಧ: Basic page
March 04, 2008
- ನವರತ್ನ ಸುಧೀರ್ 3rd March 2008 - ಶ್ರೀ  ಜಮ್‍ಷೆಡ್ಜಿ ಟಾಟಾ ಅವರ 169ನೇ ಜನ್ಮದಿನ. ಭಾರತೀಯ ವಿಜ್ನಾನ ಸಂಸ್ಥೆ ಮತ್ತು ಟಾಟಾ ಸಂಸ್ಥೆಗಳ Founders Day. 2008-2009 ಭಾರತೀಯ ವಿಜ್ನಾನ ಸಂಸ್ಥೆಯ ಶತಮಾನೋತ್ಸವ ವರ್ಷ ಕೂಡ. ಇಸವಿ 1822. ಈಗಿನ ಗುಜರಾತ್‍ನ ನವಸಾರಿ ಎಂಬ ಸಣ್ಣ ಊರಿನಲ್ಲಿ ಒಂದು ಬಡ ಪಾರಸೀ ಅಗ್ನಿ ದೇವಾಲಯದ ಪುರೋಹಿತರ ಕುಟುಂಬದಲ್ಲಿ ಜನಿಸಿದ ಮಗು ನಸ್ಸರ್‍ವಾನ್ಜೀ ಟಾಟಾ. ಹುಟ್ಟಿದ ಮಗುವನ್ನು ಕಂಡ ಜ್ಯೋತಿಷಿಯೊಬ್ಬರು “ ಈ ಮಗು ಬಹಳ ದೇಶ ವಿದೇಶಗಳ ಪ್ರಯಾಣ ಮಾಡಿ, ಹೇರಳ…
ಲೇಖಕರು: subin
ವಿಧ: Basic page
March 04, 2008
ಇಂದು ಅಳುವವರು ಯಾರೋ ಅಂದು ಜೋತೆಗಿದ್ದವರು ಯಾರೋ ಸಣ್ಣ ಗಾಯದ ನೋವಿಗೆ ವಿಷವಿಟ್ಟವರು ಯಾರೋ ಬೆಂದ ದೇಹದ ಮೇಲೆ ಕಂಬಳಿ ಹೊದಿಸಿದವರು ಯಾರೋ ಇಂದು ಕೊರಗುವವರು ಯಾರೋ ಅಂದು ಮೆಚ್ಚಿದವರು ಯಾರೋ ಕಣ್ಣಮುಂದೆ ಕನಸು ತಂದುಕೊಟ್ಟವರು ಯಾರೋ ಪ್ರೀತಿಗೆ ಅನುಮಾನ ತಂದು ಇಟ್ಟವರು ಯಾರೋ ಇಂದು ಪ್ರೀತಿ ಮರೆತಿರುವವರು ಯಾರೋ ಮುಂದೆ ನೆನಪಲ್ಲಿ ಉಳಿಯುವವರು ಯಾರೋ
ಲೇಖಕರು: savithru
ವಿಧ: ಬ್ಲಾಗ್ ಬರಹ
March 04, 2008
MOSFET ಹೇಗೆ ಕೆಲ್ಸ ಮಾಡುತ್ತೆ ( ಸ್ವಿಚಿಂಗ್ ಹೇಗೆ ನಡೆಯುತ್ತೆ) ಅಂತ ಅರ್ಥ ಆಗ್ಬೇಕು ಅಂದ್ರೆ ನಾವು ಮೊದ್ಲು ಕೆಪಸಿಟರ್ ಅಂದ್ರೆ ಏನು , ಹೇಗೆ ಕೆಲ್ಸ ಮಾಡುತ್ತೆ ಅಂತ ತಿಳ್ಕೊಬೇಕು! ಕೆಪಸಿಟರ್ ಸ್ವಲ್ಪ ಬ್ಯಾಟರಿ ತರ. ಕೆಲಸ ಮಾಡೋ ರೀತಿ ಬೇರೆ ಬೇರೆ ಆದರೂ , ಇವೆರಡೂ ಸಹ ಎಲೆಕ್ಟ್ರಿಕಲ್ ಚಾರ್ಜ್ ಅನ್ನು ಬಂಧಿಸಿಡುವ ಸಾಧನಗಳು. ಬ್ಯಾಟರಿಗೆ ಎರಡು ತುದಿ (terminals) ಗಳಿರುತ್ತವೆ. ಒಳಗೆ ನಡೆಯುವ ಕೆಮಿಕಲ್ ರಿ ಆಕ್ಷನ್ ಇಂದು ತುದಿಯಲ್ಲಿ ಎಲೆಕ್ಟ್ರಾನ್ ಗಳನ್ನೂ ಉತ್ಪತ್ತಿ ಮಾಡುತ್ತವೆ (…
ಲೇಖಕರು: venkatesh
ವಿಧ: Basic page
March 04, 2008
ಮಾರ್ಚ್ ೩, ೨೦೦೮ ನೆಯ ತಾರೀಖು, ಅವಿಸ್ಮರಣೀಯದಿನಗಳಲ್ಲೊಂದು। ನಮ್ಮ ಪ್ರೀತಿಯ ಜಮ್ ಸೆಟ್ ಜಿ ನುಝರ್ ವಾನ್ ಜಿ ಟಾಟಾ ರವರು, ಜನ್ಮತಳೆದು, ೧೬೯ ವರ್ಷಗಳಾಗಿವೆ. ಈ ಸುದಿನ, ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಟಾಟಾ ಸಂಸ್ಥೆಗಳ Founders Day, ಕೂಡ. ಟಾಟಾರವರು, ನಮ್ಮ ದೇಶದ ಕೈಗಾರಿಕಾ ಕ್ಷೇತ್ರದ ನಕ್ಷೆಯನ್ನೇ ಬದಲಾಯಿಸಿದರು ! ನಮ್ಮದೇಶದ ಕರ-ಕುಶಲ ಕೈಗಾರಿಕೆಗಳ ಜೊತೆಗೆ ಯಂರ್ತ್ರೋದ್ಯಮದಲ್ಲಿ ಒಂದು ಕ್ರಾಂತಿಯನ್ನು ತಂದರು . ಮುಖ್ಯವಾಗಿ, ದಿನಬಳಕೆಯ ವಸ್ತುಗಳನ್ನು ಸಾಮಾನ್ಯ ಜನರ…
ಲೇಖಕರು: rajeshnaik111
ವಿಧ: Basic page
March 04, 2008
ಸ್ಥಳ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬಳ್ಳಿಗಾವಿ. ಕಲ್ಯಾಣಿ ಚಾಲುಕ್ಯರ ದಕ್ಷಿಣ ಭಾಗದ ನಾಡಿನ ರಾಜಧಾನಿಯಾಗಿತ್ತು ಬಳ್ಳಿಗಾವಿ. ಶಿರಾಳಕೊಪ್ಪದಿಂದ ೩ ಕಿಮಿ ದೂರ ಇರುವ ಈ ಪುಟ್ಟ ಊರು ಚಾಲುಕ್ಯ ಮತ್ತು ಹೊಯ್ಸಳ ಕಾಲದ ಹಲವು ದೇವಾಲಯಗಳನ್ನು ಹೊಂದಿದೆ. ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿತ್ತು ಬಳ್ಳಿಗಾವಿ. ಶಿರಾಳಕೊಪ್ಪದಿಂದ ಕೆರೆಯ ಬದಿಯಲ್ಲೇ ಬರುವಾಗ ಮೊದಲಿಗೆ ಗೋಚರಿಸುವುದು ಕೇದಾರೇಶ್ವರ ದೇವಸ್ಥಾನ. ಈ ದೇವಸ್ಥಾನದಲ್ಲಿರುವ ಲಿಂಗವನ್ನು…
ಲೇಖಕರು: ASHOKKUMAR
ವಿಧ: Basic page
March 03, 2008
(ಇ-ಲೋಕ-64)(3/3/2008)   ಮಕ್ಕಳು ಇಲ್ಲದೆಯೋ,ದೂರದೂರಲ್ಲಿ ವಾಸವಾಗಿರುವ ಕಾರಣಕ್ಕೆ ಒಬ್ಬಂಟಿಯಾಗಿರ ಬೇಕಾದ ಹಿರಿಯ ನಾಗರಿಕರಿಗೆ ಒಬ್ಬಂಟಿತನ ಕಾಡುವುದು ಸಹಜ.ಇದರಿಂದ ಹೊರಬರಲು ಅವರು ಸಾಕುಪ್ರಾಣಿಗಳ ಮೊರೆ ಹೋಗುತ್ತಾರೆ.ಆದರೆ ಈ ಹಿರಿಯರು ದೈಹಿಕವಾಗಿ ದುರ್ಬಲರಾಗಿದ್ದು,ಸಾಕು ಪ್ರಾಣಿಗಳನ್ನು ಸಾಕುವ ಚೈತನ್ಯ ಹೊಂದದೆ ಇರದಿರಬಹುದು.ಅದಕ್ಕಾಗಿ ಕೆಲವು ಕಂಪೆನಿಗಳು ರೊಬೋಟ್ ಸಾಕು ನಾಯಿಯನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಿದೆ.  ಆದರೆ ಈ ರೊಬೋಮರಿಗಳು ನೈಜ ಪ್ರಾಣಿಗಳಿಗೆ…
ಲೇಖಕರು: skakkilaya
ವಿಧ: Basic page
March 03, 2008
ಅಪ್ಪ ದೂರದಲ್ಲೆಲ್ಲೋ ಬಹುಮಹಡಿ ಕಟ್ಟಡದ ಮೇಲ್ವಿಚಾರಣೆ ಮಾಡುತ್ತಿದ್ದಾನೆ, ಗಗನಚುಂಬಿಗಳನ್ನು ಎಬ್ಬಿಸುವ ಗುಂಗಿನಲ್ಲಿರುವಾತನಿಗೆ ಮನೆಗೆ ಹೋಗಲು ಪುರೊಸೊತ್ತಾಗಲೀ, ಮಗಳೊಂದಿಗೆ ಮಾತನಾಡುವ  ವ್ಯವಧಾನವಾಗಲೀ ಆತನಿಗೆ ಇದ್ದಂತಿಲ್ಲ. ಅಪ್ಪನನ್ನು ಕಾದು ಸುಸ್ತಾದ ಮಗಳಿಗೆ ಮೊಬೈಲ್ ಫೋನೇ ಗತಿ. ಅಪ್ಪನಾದರೋ ತಾನಿದ್ದಲ್ಲಿಂದಲೇ ಆಗಸವನ್ನು ನೋಡಿ ಆ ಕಡೆ ಫೋನನ್ನಾಲಿಸುತ್ತಿರುವ ಮಗಳಿಗೆ ನಕ್ಷತ್ರಪುಂಜಗಳ ಬಗ್ಗೆ ಹೇಳುತ್ತಾನೆ. ಮಗಳಿಗೆಷ್ಟು ಖುಷಿಯಾಯಿತೋ, ಬಿಟ್ಟಿತೋ ಗೊತ್ತಿಲ್ಲ. ನೆಟ್ ವರ್ಕ್ ಗಟ್ಟಿ,…
ಲೇಖಕರು: madhava_hs
ವಿಧ: ಬ್ಲಾಗ್ ಬರಹ
March 03, 2008
ನೀವು ’ಪಾತ್ರೆಗೆ ಮಸಿ ಹತ್ತಿಸುವುದು’ ಎಂಬುದನ್ನು ಕೇಳಿದ್ದೀರಾ? ತಾಮ್ರ/ಹಿತ್ತಾಳೆಗೆ ಕಲಾಯ ಹಾಕಿಸುವುದಕ್ಕೆ ಹಾಗೆನ್ನುತ್ತಾರೆಯೆ? ಅಥವಾ ಹಿತ್ತಾಳೆ ಪಾತ್ರೆಯನ್ನು ಅಡುಗೆಗೆ ಬಳಸಿದಾಗ ಕಪ್ಪಾಗುವುದಕ್ಕೆ ಹಾಗೆನ್ನುತ್ತಾರೆಯೆ?? ಒಟ್ಟಿನಲ್ಲಿ ಈ ರೀತಿ ’ಹತ್ತಿಸಿದ’ ಮಸಿ "ಅಷ್ಟು ಸುಲಭವಾಗಿ ಹೋಗುವುದಲ್ಲ" ಎಂಬರ್ಥದಲ್ಲಿ ಈ ಮಾತನ್ನು ಬಳಸುವುದನ್ನು ಕೇಳಿದ್ದೇನೆ. ಮನುಷ್ಯನಿಗೆ ಹತ್ತಿದ ಪಾಪ ಕರ್ಮಗಳು ಅಷ್ಟು ಸುಲಭವಾಗಿ ಹೋಗುವಂಥವಲ್ಲ ಎಂಬರ್ಥದಲ್ಲಿ ಈ ಮಾತನ್ನು ಬಳಸುತ್ತಾರೆ.!!
ಲೇಖಕರು: gvijaihemmaragala
ವಿಧ: ಬ್ಲಾಗ್ ಬರಹ
March 03, 2008
ಚೆಲುವೆಯ ಬಣ್ಣಿಸಲಾಗದೆ ಕವಿತೆ ಸೋತಿದೆ ಈ ರೂಪ ಹಿಡಿದಿಡಲು ಪದಗಳೇ ಸಾಲದೆ ಈ ನಡಿಗೆಯ ಮೋಡಿಗೆ ನವಿಲು ನಾಚಿದೆ ಕುಡಿನೋಟದ ಮಿಂಚಿಗೆ ಉಪಮೇ ಎಲ್ಲಿದೆ ತುಟಿ ಅಂಚಿನ ಕಿರು ನಗೆ ಕಾದಿದೆ ಮುಖ ಚಂದಿರ ಬೆಳದಿಂಗಳ ಹಾಲು ಸುರಿದಿದೆ ಮುಂಗುಳುರಿನ ಮಾಟವು ಸನಿಹ ಕರೆದಿದೆ ಈ ಸೊಬಗಿಗೆ ಹೋಲಿಕೆ ಎಲ್ಲಿದೆ ಹಗಲಲ್ಲು ಹೊಳೆವ ತಾರೆ ಇವಳ ಕಂಗಳು ಸವಿ ಮಾತು ಅತಿಮಧುರ ಜೇನಿಗಿಂತಲು ಈ ಕವಿಗೆ ಸವಾಲು ನೀಡಿದೆ.
ಲೇಖಕರು: vinayudupa
ವಿಧ: ಚರ್ಚೆಯ ವಿಷಯ
March 03, 2008
ಯಾರಿಗದ್ರೂ ಇದರ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಾ? http://thatskannada.oneindia.in/news/2008/03/03/poem-to-ridicule-kannadigas-by-lee.html