ಎಲ್ಲ ಪುಟಗಳು

ಲೇಖಕರು: bvatsa
ವಿಧ: Basic page
February 24, 2008
ತಾರೆಗಳಿಗೇಕಿಂತ ನಾಚಿಕೆ.. ಮುಖ ಮುಚ್ಚಿ, ಬೆರಳ ಸಂದುಗಳಲ್ಲಿ ನೋಡಿ.. ನಗುತ್ತಿರುವುದಾದರೂ.. ಏತಕೆ ?? ಮುದಿ ಚಂದಿರನಿಗೇಕೋ, ಏನೋ ಹುಸಿನಗು.. ಅಣಕಿಸಿ ಅಂದಂತೆ..ಇದೆಲ್ಲಾ ನಾ ವಯಸ್ಸಲ್ಲಿ ಮಾಡಿ.. ಬಿಟ್ಟಿದ್ದಲ್ಲವೇ.. ಮಗು.. ಅವಳ ಬೆಚ್ಚಗಿನ ಸಾನಿಧ್ಯವ ಸವಿಯಲು ಬಿಡದೆ.. ತರಿಸುವುದು ಚಳಿ.. ಸುಳಿಸುಳಿದು ಸುಮ್ಮನೆ ಮೂಗು ತೂರಿಸುವ ಅಧಿಕಪ್ರಸಂಗಿ ತಂಗಾಳಿ.. ಅದೆಷ್ಟೆ..ನಿರ್ಜನ ಜಾಗಕ್ಕೇ.. ಹೋಗಲಿ..ಈ ಮೂವರದ್ದೆ.. ಕಿರಿಕಿರಿ. ನನ್ನವಳ ಹೇಗೆ ಮುದ್ದಿಸಲಿ, ಇವರನ್ನೆಲ್ಲಾ ವಂಚಿಸಿ ?…
ಲೇಖಕರು: narendra
ವಿಧ: ಬ್ಲಾಗ್ ಬರಹ
February 24, 2008
ಕತ್ತಲು ಅಭ್ಯಾಸವಾದವರಿಗೆ, ಕತ್ತಲಲ್ಲೇ ಹಿತ ಕಂಡುಕೊಂಡವರಿಗೆ ಸೂರ್ಯ ಶತ್ರು. ಕಣ್ಣಿದ್ದೂ ಕುರುಡರಾಗಿರುವುದು ಇವರಿಗೆ ಸುಖವೆನಿಸುತ್ತದೆ. ತಮ್ಮ ನಂಬುಗೆಗಳಿಗೆ ಹೊಂದದ ಹೊಸ ಯೋಚನೆ, ತತ್ವಗಳನ್ನು ಸಹಿಸುವುದು ಕೂಡ ಕಣ್ಣು ಕುಕ್ಕುವ ಬೆಳಕಿನಷ್ಟೇ ಕಷ್ಟವಾಗುತ್ತದೆ. ಆ ಅಸಹನೆಯ ಕಿಡಿಯನ್ನು ಗುರುತಿಸುವುದು ಬಹಳ ಸುಲಭ. ಅದು ಕಟಕಿ, ನಿಂದೆ, ವ್ಯಂಗ್ಯ, ಪರೋಕ್ಷವಾದ ಚುಚ್ಚುಮಾತು, ನೋಯಿಸಿ ಖುಶಿ ಪಡುವ ಸಣ್ಣತನಗಳ ರೂಪದಲ್ಲಿ ಹೊರಗೆ ಒಸರುತ್ತದೆ. ಇಂಥದ್ದನ್ನು ಇವತ್ತೂ ಕಣ್ತುಂಬ ಕಾಣುವುದು ಸಾಧ್ಯ.…
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
February 24, 2008
ನಿಜಕ್ಕೂ!.. ಒಂದು ಫೋಟೋ ತೆಗೆಯಲು ಬಹಳ ಪ್ರಯತ್ನಿಸಿದೆ. ಮಧ್ಯರಾತ್ರಿ,ಮುಂಜಾನೆ,ಸಂಜೆ.. .ಊಹೂಂ.. ಅದು ಬಂದು ಹೋಗುವ ಸಮಯವೇ ಗೊತ್ತಾಗುವುದಿಲ್ಲ. ಹೆಂಗಸರ ಕಿವಿ ಬಹಳ ಸೂಕ್ಷ್ಮ.ನಿನ್ನೆ ಮಧ್ಯರಾತ್ರಿ ನನ್ನಾಕೆ ಎಬ್ಬಿಸಿದಳು.. ದೂರದಿಂದ ಕೇಳಿಸುತಿತ್ತು..ಢಂ..ಢಂ. ..ಢಂ.. .. ಕುರ್ಚಿ,ಮೇಜು,ಕಪಾಟು,ಲೋಟಗಳು ನಡುಗಲು ಸುರು. ನನ್ನ ಹೃದಯ,ಮೆದುಳು ಸಹ ನಡುಗುತ್ತಿತ್ತು.ಲಬ್..ಢಂ.. ..ಲಬ್..ಢಂ.. ಭಯವಾದರೂ ಟಾರ್ಚ್,ಕ್ಯಾಮರಾದೊಂದಿಗೆ ಹೊರಬಂದೆ. ಕಿವಿಗಪ್ಪಳಿಸಿತು ಶಬ್ದ.. ಐತಲಕಡಿ...; ಕ್ಯಾಮರ,…
ಲೇಖಕರು: ravikreddy
ವಿಧ: ಬ್ಲಾಗ್ ಬರಹ
February 23, 2008
ಆನ್‍ಲೈನ್‌ನಲ್ಲಿ ಇಲ್ಲದಿರುವ ನನ್ನ ಇತರೆ ಲೇಖನಗಳನ್ನೆಲ್ಲ ಬ್ಲಾಗಿನಲ್ಲಿ ಇಲ್ಲವೆ ವೆಬ್‌ಸೈಟಿನಲ್ಲಿ ಹಾಕಬೇಕು ಎಂದು ಒಂದಷ್ಟು ದಿನಗಳಿಂದ ಅಂದುಕೊಳ್ಳುತ್ತಿದ್ದೆ. ಆ ಪಟ್ಟಿಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚಿನ ಲೇಖನಗಳಿದ್ದವು. ನನ್ನ ಸುಮಾರು ಒಂದು ಒಂದು ವರ್ಷದ ಚಿಂತನೆ ಮತ್ತು ಚಿಂತೆಗಳ ಮೂರ್ತರೂಪ ಅವು. ಎಂದಿನಂತೆ ಯಾವುದೆ ಒಂದು ವಿಷಯಕ್ಕೆ ಸೀಮಿತಗೊಳಿಸಿಕೊಳ್ಳದೆ ಬರೆದಿರುವವು. 2006 ರ ಆಗಸ್ಟ್ ‍ನಿಂದ ಡಿಸೆಂಬರ್ 30 ರವರೆಗೆ ಬರೆದಿರುವ 21 ಲೇಖನಗಳನ್ನು ಈಗ ಬ್ಲಾಗಿಗೆ ಸೇರಿಸಿದ್ದೇನೆ.…
ಲೇಖಕರು: rohithsh007
ವಿಧ: ಬ್ಲಾಗ್ ಬರಹ
February 23, 2008
ಕನ್ನಡದಲ್ಲಿ ಮಾತ್ರವಲ್ಲ, ನನ್ನ ಜೀವನದಲ್ಲೇ ಮೊದಲ ಬ್ಲಾಗ್ ಇದು..!! ಈ ’ಸಂಪದ’ ಕನ್ನಡ ಸಮುದಾಯದ ಉಪಯುಕ್ತತೆ, ವಿಶಾಲತೆ ನೆನೆಸಿಕೊಂಡರೆ ಭಯಂಕರ ಖುಷಿಯಾಗುತ್ತೆ..!! ಕೈಗೆ ಸಿಗುವ ಕನ್ನಡ ಬರಹಗಳನ್ನೆಲ್ಲ ಓದುವ ಅಭ್ಯಾಸವಿದೆ, ಆಗೊಮ್ಮೆ, ಈಗೊಮ್ಮೆ ಮನಸ್ಸಿಗೆ ಅನ್ನಿಸಿದನ್ನ ಬರೆಯೋ ಹವ್ಯಾಸವಿದೆ, ಆಧ್ಯಾತ್ಮ, ಕನ್ನಡ ಸಾಹಿತ್ಯ, ಸಿನಿಮಾ, ನನ್ನ ಇತರೆ ಆಸಕ್ತಿಯ ವಿಷಯಗಳು. ’ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಎಂದು ನಂಬಿರುವ ಕನ್ನಡಿಗ. ಭಾರತೀಯ ಎಂದು ಹೇಳಿಕೊಳ್ಳಲು ಹೆಮ್ಮೆಯೆನಿಸುವಂತೆ,…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 22, 2008
ಪುರಂದರದಾಸರು "ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ, ಇನ್ನಾದರೂ ಎನ್ನ ಸಲಹೋ" ಎಂದು ಒಂದು ದೇವರನಾಮದಲ್ಲಿ ಹಾಡಿದ್ದಾರೆ. ಹಿಂದಿನ ದುಷ್ಕರ್ಮದಿಂದ ಬಳಲುತ್ತೇವೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ತೊಂದರೆಗೊಳಗಾಗಿದ್ದಾಗ,ಎಲ್ಲಿಂದಲೋ ಬಂದ ನೆರವಿನಿಂದ ಆ ತೊಂದರೆಯಿಂದ ಪಾರಾಗುವ ಘಟನೆಗಳ ಅನುಭವ ಎಲ್ಲರಿಗೂ ಆಗಿರುವುದೇ! ಇದನ್ನೇ ಪುಣ್ಯದ ಫಲ ಎನ್ನುವುದೇ? ಇದರ ಬಗ್ಗೆ ಒಂದು ಸಂಸ್ಕೃತ ಸುಭಾಷಿತ ಏನು ಹೇಳುತ್ತೆ ನೋಡಿ - ಅನುವಾದ ನನ್ನದು: ಕಾಡಿನಲಿ ಕಾಳಗದಿ ವೈರಿಗಳ ನಡುವಲ್ಲಿ ನೀರಿನಲಿ ಕಿಚ್ಚಿನಲಿ…

ಲೇಖಕರು: poornimas
ವಿಧ: ಬ್ಲಾಗ್ ಬರಹ
February 22, 2008
ಹೇಗೆ ತೊರೆಯಲಿ ...?  ಹೇಗೆ ಒಡೆಯಲಿ ಕೈಯ ಬಳೆಯನು ? ನಿನ್ನ ಸವಿನುಡಿ ಇಂಪು ದನಿಯನು ಕಿಣಿಕಿಣಿ ಸದ್ದಲಿ ನೆನಪಿಸಿದೆ.   ಹೇಗೆ ತರಿಯಲಿ ಹೆರಳ ಹೂವನು? ನಿನ್ನ ಉಸಿರೇ ತೇಲಿ ಬರುತಿದೆ, ನನ್ನ ಉಸಿರಲಿ ನೆಲಸಿದೆ.   ಹೇಗೆ ಅಳಿಸಲಿ ಹಣೆಯ ಕುಂಕುಮ? ನಿನ್ನ ಮುತ್ತಿನ ಹಚ್ಚೆ ಗುರುತಾಗಿ ಶಾಶ್ವತ ಸಂಭ್ರಮ ಶೋಭಿಸಿದೆ.   ಹೇಗೆ ಬಿಸುಡಲಿ ಬಣ್ಣದುಡುಗೆಯ? ನಿನ್ನ ಸನಿಹದ ಸಂಜೆಗನಸಿನ ಸಪ್ತವರ್ಣಗಳು ಮೆರೆಯುತಿವೆ.   ಹೇಗೆ ತೊರೆಯಲಿ ಹೇಳು ನಲ್ಲನೆ? ನಿನ್ನ ಸೇರಲು ಕಾಯುತಿರುವೆನು, ಸ್ವರ್ಗದ ಲಗ್ನಕೆ…
ಲೇಖಕರು: vbamaranath
ವಿಧ: ಬ್ಲಾಗ್ ಬರಹ
February 22, 2008
ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ ದಾವಣಗೆರೆ ವತಿಯಿಂದ ದಿನಾಂಕ ೨೩,೨೪ ರಂದು ದಾವಣಗೆರೆ ಜಿಲ್ಲಾ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹರಪನಹಳ್ಳಿಯಲ್ಲಿ ಹಮ್ಮಿ ಕೊಳ್ಳಲಾಗಿದೆ. ಸ್ಥಳ: ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣ ದಿನಾಂಕ: ೨೩-೦೨-೨೦೦೮ ರಂದು ಬೆಳಿಗ್ಗೆ ೭:೩೦ಕ್ಕೆ ಧ್ವಜಾರೋಹಣ ಕಾರ್ಯಕ್ರಮ ಬೆಳಿಗ್ಗೆ ೮:೦೦ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಬೆಳಿಗ್ಗೆ ೧೦:೩೦ಕ್ಕೆ ಸಮ್ಮೇಳನದ ಉದ್ಘಾಟನೆ ಮಾನ್ಯ ಶ್ರೀ ಎಂ.ಪಿ. ಪ್ರಕಾಶ್ ಅವರಿಂದ ಸ್ಮರಣ ಸಂಚಿಕೆ ಬಿಡುಗಡೆ: ಶ್ರೀ ಪಿ…