ಪುಸ್ತಕನಿಧಿ - 'ಕಲ್ಯಾಣ' ಡೈಜೆಸ್ಟ್‌ನ 1962 ರ ಏಪ್ರಿಲ್ ಸಂಚಿಕೆ

ಪುಸ್ತಕನಿಧಿ - 'ಕಲ್ಯಾಣ' ಡೈಜೆಸ್ಟ್‌ನ 1962 ರ ಏಪ್ರಿಲ್ ಸಂಚಿಕೆ

ಇದು ಕೂಡ archive.org ತಾಣದಲ್ಲಿದೆ.

ಇದರಲ್ಲಿ ನಾನು ಗಮನಿಸಿದ ವಿಷಯಗಳು ಮೂರು .. 

೧) ಗಂಗಾ ನದಿಯನ್ನು ಸ್ವರ್ಗದಿಂದ ಭಗೀರಥನು ಭೂಮಿಗೆ ಇಳಿಸಿದ ಬಗ್ಗೆ ಪುರಾಣಗಳಲ್ಲಿ ಕೇಳಿದ್ದೇವೆ. ಆದರೆ ಈ ಗಂಗಾ ನದಿಯ ಉಗಮ ಸ್ಥಾನದಲ್ಲಿ ಹುಟ್ಟಿದ ಅನೇಕ ನದಿಗಳು ಭಾರತದತ್ತ ಹರಿಯದೆ ಇತರ ದೇಶಗಳಲ್ಲಿ ಹರಿಯುತ್ತವಂತೆ,  ಆದರೆ ಒಂದು ನದಿಯು ಭಾರತದತ್ತ ಹರಿದು ಗಂಗಾ ನದಿ ಆಗಿ ಉತ್ತರ ಭಾರತದ ಜೀವ ನಾಡಿಯಾಗಿದೆ. ಆ ನದಿಯು ಭಾರತದ ಕಡೆ ಹರಿಯಲು ಮಾನವ ಪ್ರಯತ್ನವೇ ಕಾರಣ ಎಂಬುದು ಆ ಸ್ಥಳವನ್ನು ನೋಡಿದರೆ ಗೊತ್ತಾಗುತ್ತದೆ. ಸಗರನಿಂದ ಆರಂಭಿಸಿ ಭಗೀರಥನವರೆಗಿನ ಮೂರು ತಲೆಮಾರುಗಳ ಪ್ರಯತ್ನ ಕಾರಣ ಇರಬಹುದು ಎಂದು ಎಲ್ಲೋ, ಬಹುಶಃ ಕಸ್ತೂರಿ ಮಾಸಪತ್ರಿಕೆಯಲ್ಲಿ ಓದಿದ್ದೆ.  ಆಸಂಗತಿಯ ಒಂದು ಲೇಖನವೂ ಇದರಲ್ಲಿದೆ.

 

೨) ಪುಸ್ತಕ ವಿಭಾಗದಲ್ಲಿ ಚಂದ್ರ ತಾರೆಯರ ಕುರಿತಾದ ಕಥೆಯ ಅನುವಾದ ಓದಬಹುದು. ಮೂಲ ಕತೆ ಯಾರದು ಎಂಬ ಮಾಹಿತಿ ಇಲ್ಲ. 

ದೇವತೆಗಳ ಗುರು ಬೃಹಸ್ಪತಿ. ಅವನ ಹೆಂಡತಿ ಈ ತಾರೆ. ಸ್ವರ್ಗದಲ್ಲಿಯೇ ಇದ್ದ ಚಂದ್ರನ ಲಾಲಸೆಗೆ ಅವಳು ಬಲಿಯಾಗಿ ಒಂದು ಮಗುವನ್ನು ಪಡೆಯುತ್ತಾಳೆ. ಬೃಹಸ್ಪತಿಯು ಇಂದ್ರ ಈಶ್ವರ ಮುಂತಾದವರಿಗೆ ದೂರು ಕೊಡುತ್ತಾರೆ. ಇತ್ತ ಚಂದ್ರನು ದಾನವರ ಮೊರೆ ಹೋಗಿರುತ್ತಾನೆ.  

ಈ ಸಮಸ್ಯೆಯನ್ನು ನಿಭಾಯಿಸಿರುವ ರೀತಿ ಭಾರತದ ಸದ್ಯದ ರಾಜಕಾರಣ  ಪದ್ಧತಿಯನ್ನು ಹೋಲುತ್ತದೆ. ತಾರೆಯನ್ನು ಮಗುವಿನೊಂದಿಗೆ ಸ್ವರ್ಗಕ್ಕೆ ಮರಳಿ ತರುವಲ್ಲಿ ಸಫಲರಾದರೂ ಕೂಡ ಚಂದ್ರನ ಬಗ್ಗೆ ಯಾವುದೇ ಕ್ರಮವನ್ನು ಕೈಗೊಳ್ಳಲು ಆಗುವುದಿಲ್ಲ. 

ಈ ಅನ್ಯಾಯವನ್ನು ಸಹಿಸದ ಸಾತ್ವಿಕರು ಚಂದ್ರನಿಗೆ ಶಾಪವಿತ್ರ ಕಾರಣದಿಂದ ಅವನಿಗೆ ಕ್ಷಯ ರೋಗ ಬಂದಿದೆಯಂತೆ.

೩) ಮೊಗಲ್ ಚಕ್ರವರ್ತಿ ಜಹಾಂಗೀರ್ ನ ಮಗಳು ಜಹಾ ನಾರಾ ಕುರಿತ ಒಂದು ಲೇಖನವೂ ಇಲ್ಲಿದೆ. 

ಮೊಗಲ್ ಸಾಮ್ರಾಜ್ಯದಲ್ಲಿ ರಾಜಕುಮಾರಿಯಾಗಿ ಹುಟ್ಟುವುದು ತುಂಬಾ ನತದೃಷ್ಟಕರ ವಿಚಾರವಂತೆ. ಅವರ ಸಮಾನರಾರೂ ಸಿಕ್ಕದ್ದರಿಂದ ಅವರಿಗೆ ಮದುವೆ ಆಗುವುದಿಲ್ಲವಂತೆ .  ಒಂದು ವೇಳೆ ಅವರ ಮದುವೆ ಮಾಡಿದರೂ ಅವರ ಗಂಡಂದಿರು ಅಧಿಕಾರಕ್ಕಾಗಿ ಸಂಚು ಮಾಡುತ್ತಾರಂತೆ. 

ಇಲ್ಲಿ ಜಹಾಂಗೀರ್ನ ಹಿರಿಯ ಮಗಳು ಜಹಾನಾರಾ. ಅವಳಿಗೆ ಔರಂಗಜೇಬ , ದಾರಾಶಿಕೋ ಸೇರಿದಂತೆ 5 ಮಂದಿ ತಮ್ಮಂದಿರು. ಔರಂಗಜೇಬನು ಅಧಿಕಾರಕ್ಕಾಗಿ ತಂದೆಯನ್ನು ಜೈಲಿನಲ್ಲಿ ಇಡುತ್ತಾನೆ. ತಾಯಿಯನ್ನು ಈಗಾಗಲೇ ಕಳೆದುಕೊಂಡಿದ್ದ ಜಹಾನಾರಾ ತಂದೆಯನ್ನು  ತುಂಬಾ ಪ್ರೀತಿಸುತ್ತಿದ್ದು ಅವನನ್ನು ನೋಡಿಕೊಳ್ಳುವುದಕ್ಕಾಗಿ ಜೈಲಿಗೇ ಹೋಗಿ ಇರುತ್ತಾಳೆ. ಔರಂಗಜೇಬನು ಅರಮನೆಗೆ ಬಂದು ಇರುವಂತೆ ಎಷ್ಟು ಹೇಳಿದರೂ ಕೇಳುವುದಿಲ್ಲ. ತಂದೆಯ ಮರಣದ ನಂತರವೇ ಅರಮನೆಗೆ ಬಂದು ಇದ್ದು 16 ವರ್ಷಗಳ ನಂತರ ತೀರಿಕೊಳ್ಳುತ್ತಾಳೆ.

ಕೆಲವು ಕುಟಿಲ ಇತಿಹಾಸಕಾರರು ತಂದೆ ಮತ್ತು ಮಗಳ ನಡುವೆ ಅನೈತಿಕ ದೈಹಿಕ ಸಂಬಂಧವನ್ನು ಆರೋಪಿಸಿದ್ದರು ಅದು ಶುದ್ಧ ಸುಳ್ಳು ಎಂದು ಈ ಲೇಖನದಲ್ಲಿ ಹೇಳಿದ್ದಾರೆ.

 

 

 

Rating
Average: 4 (1 vote)