ಪುಸ್ತಕನಿಧಿ - ಕಲ್ಯಾಣ ಡೈಜೆಸ್ಟ್ ಜನವರಿ 1962ರ ಸಂಚಿಕೆಯಲ್ಲಿ

ಪುಸ್ತಕನಿಧಿ - ಕಲ್ಯಾಣ ಡೈಜೆಸ್ಟ್ ಜನವರಿ 1962ರ ಸಂಚಿಕೆಯಲ್ಲಿ

ನನ್ನ ಹಿಂದಿನ post ನಲ್ಲಿ ಈ ಮಾಸಪತ್ರಿಕೆಯ ಬಗ್ಗೆ ಬರೆದಿದ್ದೇನೆ.

ಅದರ ಜನವರಿ 1962ರ ಸಂಚಿಕೆಯೂ ಅಂತರ್ಜಾಲದಲ್ಲಿ ಇದೆ. ಅಲ್ಲಿ ನನಗೆ ಇಷ್ಟವಾದ ಐದು ವಾಕ್ಯಗಳು -

ನಿತ್ಯವೂ ಬೆಳಗಿನಲ್ಲಿ ಎದ್ದ ಕೂಡಲೇ ಮುಖ ತೊಳೆದುಕೊಳ್ಳು ವಂತೆ ಮನಸ್ಸನ್ನು ಸ್ವಚ್ಛಮಾಡಿ ಕೊಳ್ಳುವುದೂ ನಿನ್ನ ಕರ್ತವ್ಯವಲ್ಲವೇ?

ನೀನು ನಿನ್ನ ಸ್ಥಿತಿ ಸುಧಾರಿಸಿ ಕೊಳ್ಳುವ ಪ್ರಯತ್ನ ಮಾಡದೇ ಕೃತಿ ಸುಧಾರಿಸುವ ಪ್ರಯತ್ನ ಮಾತು. ಕೃತಿ ಸುಧಾರಿಸಿದಾಗ ಪರಿ ಸ್ಥಿತಿ ತಾನೇ ಸುಧಾರಿಸುತ್ತಿದೆ.

ಮಹತ್ವದ ಹೊಣೆಗಾರಿಕೆ ಕಾರ್ಯದಲ್ಲಿ ಯಶಸ್ವಿಯಾಗಬೇಕಾಗಿದ್ದರೆ ವ್ಯವಹಾರದ ಒರೆಗಲ್ಲಿಗೆ ಕಲ್ಪನೆಯನ್ನು ತಿಕ್ಕಿ ಕೃತಿಗಿಳಿಸಬೇಕು.

ಸಜ್ಜನರು ಸಮಾಜದೊಂದಿಗೆ ಹೊಂದಿಕೊಂಡು ಹೋಗುತ್ತಾರೆ ಆದರೆ ಅಹಂಕಾರಿ ಹಟವಾದಿ ತನಗೆ ಸಮಾಜವನ್ನು ಹೊಂದಿಸಿಕೊಳ್ಳುವದಕ್ಕಾಗಿ ಪ್ರಯತ್ನಿಸುತ್ತಾನೆ. ಅಂತೆಯೇ ಸಮಾಜದ ಪ್ರಗತಿ ಹಟವಾದಿಯನ್ನವಲಂಬಿಸಿರುತ್ತದೆ.

ಗುಡ್ಡದಷ್ಟು ಎತ್ತರ ಕೆಲಸವನ್ನು ಹೇಗೆ ಮಾಡಲಿ ಎಂದು ಚಿಂತಿಸುತ್ತ ಕುಳಿತುಕೊಳ್ಳಬೇಡ ಮೊದಲು ಎದ್ದು ಕೆಲಸ ಆರಂಭಿಸು ಅಂದರೆ ಗುಡ್ಡ ಕರಗಿ ನೆಲಸಮವಾಗುವದು.

 

 

 

Rating
Average: 4 (1 vote)