ಸೋತಿದ್ದೇನೆ ...

ಸೋತಿದ್ದೇನೆ ...

ಸಂಪದದಲ್ಲಿ ಆರಂಭಶೂರತನಕ್ಕೆ ಸ್ಪರ್ಧೆಯಿಟ್ಟಲ್ಲಿ ಮೊದಲಿಗ‌ ನಾನಾಗುವುದರಲ್ಲಿ ಸಂದೇಹವಿಲ್ಲ‌. ನಾನು ಶುರು ಮಾಡಿ, ಅಷ್ಟಕ್ಕೇ ಬಿಟ್ಟ‌ ಲೇಖನಗಳು, ಅದು_ಇದು_ಮತ್ತೊಂದು ಸಾಕಷ್ಟಿವೆ. ನಾನು ಅವುಗಳಲ್ಲಿ ಯಾವುದನ್ನೂ ಸದ್ಯಕ್ಕೆ ಮುಂದುವರಿಸುವ‌ ಸಾಧ್ಯತೆ ನನಗಂತೂ ಕಂಡುಬರುತ್ತಿಲ್ಲ‌. 

ಪಾರ್ಥರಾದಿಯಾಗಿ ಪ್ರೋತ್ಸಾಹಿಸಿದ‌ ಎಲ್ಲರಿಗೂ ಧನ್ಯವಾದಗಳು.

ಕ್ಷಮಿಸಿ, ನಾನು ಸೋತಿದ್ದೇನೆ.  

......................

ಕೊನೆ ಹನಿ ... ಹಲವಾರು ಸಂಕೀರ್ಣ ಸಮಸ್ಯೆಗಳಿಗೆ ನನ್ನ ಹತ್ತಿರ‌ ತುಂಬ‌ ಸುಲಭವಾದ ಉತ್ತರಗಳಿವೆ ‍(ನೀವು ನನ್ನ ದೂರವಾಣಿ ಸಂಖ್ಯೆಯನ್ನು ಕೇಳುವ‌ ಮುನ್ನ ಸೇರಿಸಿಬಿಡುತ್ತೇನೆ); ಆದರವು, ತಪ್ಪು ಉತ್ತರಗಳಾಗಿವೆ!

   

Rating
No votes yet

Comments

Submitted by partha1059 Wed, 04/16/2014 - 08:37

ಕ್ಷಮಿಸಿ ನಾನು ಸೋತಿದ್ದೇನೆ....
ಅನ್ನುವ ಮಾತಿಗಿಂತ
'ನಾನು ಇರುವುದೇ ಹೀಗೆ'
ಎನ್ನುವ ಭಂಡತನದ ಮಾತೆ ನನಗೆ ಪ್ರಿಯವೆನಿಸುತ್ತಿದೆ :-)

Submitted by kavinagaraj Wed, 04/16/2014 - 08:51

:) ಸೋಲುತ್ತಾ ಮುಂದುವರೆಯುವ ಹವಣಿಕೆ ಈ ಬರಹದಲ್ಲಿ ಇಣುಕಿದೆ. ಶುಭವಾಗಲಿ.

Submitted by bhalle Wed, 04/16/2014 - 16:55

ಸಾಹಿತ್ಯ ಕ್ಶೇತ್ರ ಯುದ್ದಭೂಮಿಯಲ್ಲ ... ಇಲ್ಲಿನ ಬರಹಗಾರರು ಕೂಡ ನಿಮ್ಮಂತೆಯೇ ... ಅರ್ಥಾತ್ ಬರೆಯುವುದಕ್ಕೆ ಸದಾ ಸಮಯ ಹೊಂದಿರುತ್ತಾರೆ ಎಂದಲ್ಲ, ಸಮಯ ಹೊಂದಿಸಿಕೊಳ್ಳುತ್ತಾರೆ. ಈ ಸಮಯ ನಿಮಗೆ ಹೊಂದಾಣಿಕೆಯಾಗುತ್ತಿಲ್ಲ ಅಷ್ಟೇ. ಕಾಲ ಬರುತ್ತದೆ. ನಾವೂ ಕಾಯ್ತೀವಿ :-)

Submitted by hpn Thu, 04/17/2014 - 17:06

In reply to by bhalle

ಭಲ್ಲೆಯವರು ಬರೆದದ್ದು ನನ್ನ ಅಭಿಪ್ರಾಯ ಕೂಡ. ಕೆಲವೊಮ್ಮೆ ಬರೆಯಲು ಸಾಧ್ಯವೇ ಆಗುವುದಿಲ್ಲ. ಹಾಗೆಂದು ಸೋತೆವೆಂದಲ್ಲ.
ಕಳೆದ ಎರಡು ಮೂರು ವರುಷಗಳಿಂದ ಆರೋಗ್ಯದ ಕಾರಣದಿಂದಾಗಿ, ಮನೆ ಹಾಗೂ ಕಂಪೆನಿಯಲ್ಲಿ ಹೆಚ್ಚಿದ ಜವಾಬ್ದಾರಿಗಳಿಂದಾಗಿ ನಾನು ಕೂಡ ಬರೆಯುವುದನ್ನು ಹೆಚ್ಚು ಕಡಿಮೆ ನಿಲ್ಲಿಸಿಬಿಟ್ಟಿದ್ದೆ. ಆದರೆ ಓದುವುದನ್ನು ನಿಲ್ಲಿಸಿರಲ್ಲ.
ಪ್ರತಿನಿತ್ಯ ಸಂಪದವನ್ನು ನೋಡುವಾಗ ಇದನ್ನು ನಡೆಸುವ ತಂತ್ರಾಂಶವನ್ನು ಉತ್ತಮಪಡಿಸುವುದರಲ್ಲೇ ನನ್ನ ಸಮಯ ಕಳೆದುಬಿಡುತ್ತದೆ. ಬರೆಯಲು ಸಾಧ್ಯವೇ ಆಗದು. ಕೆಲವೊಮ್ಮೆ ಪುಟ್ಟದಾದ ಒಂದು ಪ್ರತಿಕ್ರಿಯೆ ಬರೆಯುವುದೂ ಕಷ್ಟ ಎನಿಸಿಬಿಡುತ್ತದೆ. ಆದರೂ ಸಮಯ ಮಾಡಿಕೊಂಡು ಬರೆದರೆ ಅದು ತರುವ ಖುಷಿಯೇ ಬೇರೆಯ ರೀತಿಯದ್ದು.

Submitted by shivaram_shastri Fri, 04/18/2014 - 22:05

In reply to by hpn

ನಾನೂ ಸಂಪದ‌ ಓದುವುದನ್ನು ಬಿಟ್ಟಿಲ್ಲ‌ ...
ನನ್ನ‌ ಅಳಲೆಂದರೆ, ನನ್ನ‌ ಆಲಸ್ಯದಿಂದಾಗಿ ಸಮಯದ‌ ಸದುಪಯೋಗವಾಗುತ್ತಿಲ್ಲ‌.

Submitted by partha1059 Thu, 04/17/2014 - 19:55

ಬರೆಯುವದಸ್ಟೇ ಅಲ್ಲ ಓದುವುದು ಸಹ ಸಾಹಿತ್ಯ ಕೃಷಿಯೇ!
ಮತ್ತು ಸಾಹಿತ್ಯವಷ್ಟೆ ಜೀವನವಲ್ಲ !
ಜೀವನದ ವಿಸ್ತಾರ ರೂಪಗಳು ಬಹಳ !
ಸೋತಿದ್ದೇನೆ ಅನ್ನುವ ಮಾತಿಗೆ ಅರ್ಥವಿಲ್ಲ !

Submitted by nageshamysore Thu, 04/17/2014 - 20:43

'ಸೋತಿದ್ದೇನೆ ಇನ್ನು ಬರೆಯಲಾರೆ' ಎನ್ನುವುದನ್ನು 'ಬರೆದು' ಹೇಳಿದ್ದೆ "ಗೆದ್ದ" ಹಾಗೆ ಲೆಕ್ಕವಲ್ಲವೆ ? (ಅನ್ನುವುದು ನನ್ನ ಅನುಮಾನ) :-)
ಆಗೀಗೊಮ್ಮೆ
ಮೌನವಾಗುವುದು
ಮನದ ಇಚ್ಛೆ ;
ಭರಿಸಲಾಗದಾಗ
ಬರಹವಾಗಿಸುವುದು
ಮನಸಿನ ಸ್ವೇಚ್ಛೆ !

Submitted by shivaram_shastri Fri, 04/18/2014 - 22:09

In reply to by nageshamysore

ಹಾಗಲ್ಲ‌ ... ಬರೆಯುವೆ ಎಂದು ಹೇಳುತ್ತ‌ ಬಂದು ಬರೆಯಲೇ ಇಲ್ಲ‌. ಅದನ್ನು ಒಪ್ಪಿಕೊಂಡರೆ ಒಮ್ಮೆ ಮನಸ್ಸು ನಿರಾಳ‌.

Submitted by shivaram_shastri Fri, 04/18/2014 - 22:23

ಸಂತೈಸಿದ‌, ಪ್ರೊತ್ಸಾಹಿಸಿದ‌ (ಪ್ರತಿಕ್ರಿಯೆ ಬರೆದು; 376 ಹೊಡೆತ‌ (ಹಿಟ್ಸ್) ಹೊಡೆದು!) ಎಲ್ಲರಿಗೂ ಧನ್ಯವಾದಗಳು.
ನಿಮ್ಮೆಲ್ಲರ‌ ಪ್ರೋತ್ಸಾಹ‌ ನನ್ನನ್ನು ಹೀಗೆ ಹೇಳಲು ಹುರಿದುಂಬಿಸಿದೆ: ನಾನಿನ್ನೂ ಸೋತಿಲ್ಲ‌; ಸದ್ಯಕ್ಕೆ ಒಮ್ಮೆ ಕೆಳಗೆ ಬಿದ್ದಿರುವೆ ಅಷ್ಟೇ!
ನಿಮ್ಮವ‌
ಶಿವರಾಮ‌

Submitted by ಗಣೇಶ Sun, 04/20/2014 - 18:43

ಶಾಸ್ತ್ರಿಯವರೆ,
>>>ಹಲವಾರು ಸಂಕೀರ್ಣ ಸಮಸ್ಯೆಗಳಿಗೆ ನನ್ನ ಹತ್ತಿರ‌ ತುಂಬ‌ ಸುಲಭವಾದ ಉತ್ತರಗಳಿವೆ ‍(ನೀವು ನನ್ನ ದೂರವಾಣಿ ಸಂಖ್ಯೆಯನ್ನು ಕೇಳುವ‌ ಮುನ್ನ ಸೇರಿಸಿಬಿಡುತ್ತೇನೆ); ಆದರವು, ತಪ್ಪು ಉತ್ತರಗಳಾಗಿವೆ!
:) ತಪ್ಪೋ ಸರಿಯೋ...ಅಂತೂ ನಿಮ್ಮ ಬಳಿ ಸುಲಭವಾದ ಉತ್ತರಗಳಿವೆಯಲ್ಲಾ.. ಕೂಡಲೇ ದೂರವಾಣಿ ಸಂಖ್ಯೆ ನೀಡಿ..:)