~
ಉ: ರಾಹು-ಕೇತು ಕಾಟ, ಮತ್ತು ನವಗ್ರಹ ಸ್ತೋತ್ರ
- ಉ: ರಾಹು-ಕೇತು ಕಾಟ, ಮತ್ತು ನವಗ್ರಹ ಸ್ತೋತ್ರ By: Sunil Jayaprakash (Jul 8 2008 - 10:29pm)
- ಉ: ರಾಹು-ಕೇತು ಕಾಟ, ಮತ್ತು ನವಗ್ರಹ ಸ್ತೋತ್ರ By: aniljoshi (Jun 19 2008 - 8:39am)
- ಉ: ರಾಹು-ಕೇತು ಕಾಟ, ಮತ್ತು ನವಗ್ರಹ ಸ್ತೋತ್ರ By: kannadakanda (Jun 18 2008 - 4:43pm)
- ಉ: ರಾಹು-ಕೇತು ಕಾಟ, ಮತ್ತು ನವಗ್ರಹ ಸ್ತೋತ್ರ By: madhava (Jun 18 2008 - 4:17pm)
- ಉ: ರಾಹು-ಕೇತು ಕಾಟ, ಮತ್ತು ನವಗ್ರಹ ಸ್ತೋತ್ರ By: ನೇಸರ (Jun 18 2008 - 2:23pm)
- ಉ: ರಾಹು-ಕೇತು ಕಾಟ, ಮತ್ತು ನವಗ್ರಹ ಸ್ತೋತ್ರ By: hamsanandi (Jun 18 2008 - 11:26pm)
- ಉ: ರಾಹು-ಕೇತು ಕಾಟ, ಮತ್ತು ನವಗ್ರಹ ಸ್ತೋತ್ರ By: ಶ್ರೀನಿಧಿ (Jun 18 2008 - 8:06am)

RSS:
ಉ: ರಾಹು-ಕೇತು ಕಾಟ, ಮತ್ತು ನವಗ್ರಹ ಸ್ತೋತ್ರ
ಹಂಸಾನಂದಿ ಅವರೆ ತುಂಬ ಉತ್ತಮವಾದ ಲೇಖನ. ನಾನು ಚಿಕ್ಕವನು ಆಗಿದ್ದಾಗ ನಮ್ಮ ದೇಶದಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ಪೂರ್ಣ ಸೂರ್ಯ ಗ್ರಹಣ ಆಗಿತ್ತು. ಆಗ ದೂರದರ್ಶನದಲ್ಲಿ ಒಬ್ಬ ವಿಜ್ಞಾನಿ ಹೀಗೆ ಹೇಳಿದ್ದರು "ಒಂದು ಪುರಾಣ(ವೇದ) ದ ಪ್ರಕಾರ (ನನಿಗೆ ಅದು ಪುರಾಣವೋ ಅಥವ ವೇದವೋ ಮರೆತು ಹೋಗಿದೆ) ಒಬ್ಬ ರಾಕ್ಷಸ (ಅವನು ರಾಹು ಅಲ್ಲ ಅಥವ ಕೇತು ಕೂಡ ಅಲ್ಲ) ಬಂದು ಸೂರ್ಯನನ್ನ ನುಂಗಿದಾಗ ಗ್ರಹಣ ಆಗತ್ತೆ ಅನ್ನೋ ಉಲ್ಲೇಖ ಇದೆ. ಇದಾದ ನಂತರ ಇನ್ನೊಂದು ಪುರಾಣ(ವೇದ) ದಲ್ಲಿ ಗ್ರಹಣ ಆಗೋದಕ್ಕೆ ರಾಹು ಹಾಗು ಕೇತು ಅನ್ನೋ ರಾಕ್ಷಸರು ಕಾರಣ ಅನ್ನೋ ಉಲ್ಲೇಖ ಬರತ್ತೆ ಅಂತೆ, ಆದ್ರೆ ಸೋಜಿಗವೆಂದರೆ ಈ ಎರಡು ಗ್ರಂಥಗಳ ಮಧ್ಯೆ ಆರ್ಯಭಟ ಜೀವಿಸಿದ್ದು ಹಾಗು ಅವರ ಪ್ರಕಾರ ಭೂಮಿ, ಸೂರ್ಯ ಹಾಗು ಚಂದ್ರ ಒಂದು ರೇಖೆ ಅಲ್ಲಿ ಬಂದರೆ ಗ್ರಹಣ ಆಗತ್ತೆ ಅಂತ ಬರೆದಿದ್ದಾರೆ ಅಂತೆ ಆದರೆ ಅವರು ಈ ರೇಖೆಯನ್ನ ಮೂಡಿಸೋ ಎರಡು ಚುಕ್ಕಿ(ಬಿಂದು)ಗಳನ್ನ ನಮ್ಮ ಥರ 'ಎ' 'ಬಿ' ಅಥವ 'ಪಿ' 'ಕ್ಯು' ಅನ್ನದೆ 'ರಾಹು' ಮತ್ತು 'ಕೇತು' ಎಂದರಂತೆ". ದಯವಿಟ್ಟು ನೀವು ಇದರ ಬಗ್ಗೆ ಇನ್ನು ಹೆಚ್ಚಾಗಿ ಬರೆಯ ಬೇಕು ಅಂತ ನನ್ನ ವಿನಂತಿ.