ಮುಂಡಿಗೆ ಅಂದರೆ ಒಗಟಿನಂಥ ಮಾತು. ಕನಕ ದಾಸರ ಮುಂಡಿಗೆಗಳು ಪ್ರಸಿದ್ಧವಾಗಿವೆ. ಮೇಲು ನೋಟಕ್ಕೆ ಅಪಾರ್ಥ ಅಥವ ಅರ್ಥವಿಲ್ಲ ಅನ್ನಿಸುವ ಮಾತು ಯೋಚನೆ ಮಾಡಿದಂತೆ ಅರ್ಥಪೂರ್ಣ ಅನ್ನಿಸುವಂತೆ ಇರುವುದು ಮುಂಡಿಗೆ. "ಮನೆಯೊಳಗೆ ಒಬ್ಬ ಗಂಡ, ಹೊರಗೆ ಒಬ್ಬ ಮಿಂಡ" ಅನ್ನುವಂಥ ಮಾತನ್ನು ಅನೇಕ ಅನುಭಾವಿಗಳು ಹೇಳುತ್ತಾರೆ. ಶಿವನ ಕೂಡೆ ಹಾದರ ಮಾಡಿದೆ ಅನ್ನುವವರೂ ಇದ್ದಾರೆ. ಲೋಕದಲ್ಲಿ ಲೋಕದವರಂತೆ ಇದ್ದೂ ತಮ್ಮ ಆಧ್ಯಾತ್ಮಿಕ ಅನುಭವವನ್ನು ಬಿಡದೆ ಉಳಿಸಿಕೊಂಡಿರುವುದನ್ನು ಇಂಥ ಮಾತುಗಳು ಸೂಚಿಸುತ್ತವೆ. ಒಂದು ಕೈ ಚಪ್ಪಾಳೆ "ಮೌನ"ವನ್ನು ಕುರಿತದ್ದು, ಶಿಷ್ಯ "ಚಪ್ಪಾಳೆ"ಯನ್ನು ಮಾತ್ರ ಗಮನಿಸಿ ಆ ಸದ್ದನ್ನು ಹುಡುಕುತ್ತಾನೆ. ನಿಜವಾಗಿ ಮೌನವು ಗುರು ಹೇಳಿದ ಮಾತಿನ ಅರ್ಥ ಎಂದು ಅರಿವಾದಾಗ ಅವನಿಗೆ ಧ್ಯಾನದ ಸ್ಥಿತಿ ದೊರೆಯುತ್ತದೆ. ಈ ಕತೆಯ ಮುಂಡಿಗೆ ಇಂಟೆನ್ಸಿಟಿಯನ್ನು ಕುರಿತದ್ದು. ಸುಮ್ಮನೆ ಹುಡುಕುತ್ತೇವೆ ಎಂದುಕೊಳ್ಳುವುದು ಒಂದು ಬಗೆಯ ಪಲಾಯನ ವಾದ. ನನ್ನನ್ನು ಕಾಡುವ ಪ್ರಶ್ನೆ ಜೀವನ್ಮರಣದ ಪ್ರಶ್ನೆ ಎಂಬಂಥ ತೀವ್ರತೆ ಇದ್ದಾಗ ಆಧ್ಯಾತ್ಮದ ಸಾಧನೆಗೂ ಅರ್ಥ. ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಆಗದೆ ಇದ್ದರೆ ಸಾಯುವುದೇ ಒಳ್ಳೆಯದು ಎಂದಾಗ ಶಿಷ್ಯನಿಗೆ ಅನ್ವೇಷಣೆಗೆ ಬೇಕಾದ ಮೊನಚು ದೊರೆಯುತ್ತದೆ. ಝೆನ್ ಕತೆಗಳು ಮತ್ತು ವಡ್ಡಾರಾಧನೆ ಎಂಬ ಪ್ರಾಚೀನ ಕನ್ನಡದ ಕಥೆಗಳು ಸಾಕ್ಷಾತ್ಕಾರವು ತಟ್ಟನೆ ಆಗುವ ಸಂಗತಿ ಎಂಬುದನ್ನೇ ಹೇಳುತ್ತವೆ. ಸೂಕ್ತ ಮನೋಧರ್ಮ ಮೂಡಿದ ಕ್ಷಣದಲ್ಲಿ ತಟ್ಟನೆ ಅರಿವು ಹೊಳೆಯುತ್ತದೆ. ಗುರುವಿನ ಮಾತಿನ ಬಿಸಿ ಶಿಷ್ಯನ ಮನೋಧರ್ಮದಲ್ಲಿ ತರುವ ಪರಿವರ್ತನೆ ಮತ್ತು ಅದರಿಂದ ಪಡೆಯುವ ಅನುಭವ ಈ ಕಥೆಯ ಮುಖ್ಯ ಸಂಗತಿ. ಶಿಷ್ಯನ ಧ್ಯಾನದಲ್ಲಿ ತೀವ್ರತೆ ಇರದಿದ್ದುದರಿಂದಲೇ ಅವನಿಗೆ ಯಾವ ಅನುಭವವೂ ಅಗಿರಲಿಲ್ಲ. ಸಾಕ್ಷಾತ್ಕಾರವಾಗದಿದ್ದರೆ ಪ್ರಾಣ ಕಳೆದುಕೊಳ್ಳುವುದೇ ಉಳಿದ ದಾರಿ ಎಂದಾಗ ಆ ಆಘಾತವೇ ಸಾಕ್ಸಾತ್ಕಾರದ ಸಡನ್‌ನೆಸ್ ಗೆಕಾರಣವಾಗುತ್ತದೆ. "ಅಗುವ ಅನುಭವ ಈ ಕ್ಷಣವೇ ಅಗಬೇಕು, ಮುಂದೆ ಎಂದೋ ಅಲ್ಲ. ಹಾಗೆ ನಿಧಾನವಾಗಿ ಸಕ್ಷಾತ್ಕಾರ ಪಡೆಯುತ್ತೇನೆ ಅನ್ನುವುದಕ್ಕೆ ನೀವೇನು ಅಮರರೆ?" ಎಂದು ಕೆಲವು ವಚನಕಾರರು ಕೇಳಿರುವುದೂ ಉಂಟು. ಇಲ್ಲೇ, ಈಗಲೇ ಎಂಬುದು ಝನ್ ನ ಇನ್ನೊಂದು ತತ್ವ.
ಮುಂಡಿಗೆ ಅಂದರೆ ಒಗಟು