ಈಶ್ವರನ ಕರುಣೆ
- ಪತಂಜಲಿಯೋ ಪತಾಂಜಲಿಯೋ? By: pavanaja (Aug 20 2005 - 7:54pm)
- ಪತಂಜಲಿಯ ಯೋಗ By: R M Rao (Aug 21 2005 - 6:18pm)
- ಈಶ್ವರನ ಕರುಣೆ By: muralihr (Aug 20 2005 - 6:29pm)
- ಈಶ್ವರನ ಕರುಣೆ By: R M Rao (Aug 21 2005 - 6:21pm)
- ಈಶ್ವರನ ಕರುಣೆ By: tvsrinivas41 (Aug 19 2005 - 6:57pm)
- ಈಶ್ವರನ ಕರುಣೆ By: R M Rao (Aug 20 2005 - 6:52am)

RSS:
ಈಶ್ವರನ ಕರುಣೆ
ಯೋಗದ ಬಗ್ಗೆ ನಾವು ಇಂದು ಓದುತ್ತಿದ್ದರೆ ಅದು ಪತಂಜಲಿಯ ಕೃಪೆ/ಕರುಣೆಯಿಂದ ಎಂದೆನ್ನುವದು ಸೂಕ್ತ. ಏಕೆಂದರೆ ಯೋಗದ ಬಗ್ಗೆ ಇದ್ದ ಜ್ಞಾನವನ್ನೆಲ್ಲಾ ಸಂಗ್ರಹಿಸಿ ಸೂತ್ರಗಳಲ್ಲಿ ಹೇಳಿರದಿದ್ದರೆ ನಮಗೆ ಇಂದು ಇರುವ ಮಾಹಿತಿ ಇರುತ್ತಿತ್ತೋ ಇಲ್ಲವೋ ಯಾರಿಗೆ ಗೊತ್ತು?. ಯೋಗದಲ್ಲಿ ಆಚರಣೆ ಮುಖ್ಯ.
ಸಿಧ್ಧಾಂತವಲ್ಲ. ನನಗೆ ತಿಳಿದಂತೆ ಇಷ್ಟು ಕರಾರುವಾಕ್ಕಾಗಿ ಹೆಜ್ಜೆಹೆಜ್ಜೆಗೂ ಹೀಗೆ ಮಾಡಿದರೆ ಹೀಗಾಗುತ್ತದೆ ಎಂಬ ಆತ್ಮದ ಬಗ್ಗೆ ವಿವರೆಣೆಯುಳ್ಳ
ಜ್ಞಾನಭಂಡಾರ ಇದೂಂದೇ.
ಈಶ್ವರನ ಕರುಣೆ ಎಂಬುದು ಬೇರಾವುದರಿಂದಲೂ ಹೇಳಲಾಗದ/ವಿವರಿಸಲಾಗದ ಘಟನೆ/ಸ್ಥಿತಿಗೆ ಹೆಸರು. ಒಂದು ಸಣ್ಣ ಉದಾಹರಣೆ. ಯೋಗ
ಮಾಡುವವರಿಗೆಲ್ಲಾ ಮುಂದಿನ ಸ್ಥಿತಿ ಸಿಕ್ಕೇಸಿಗುತ್ತದೆ ಎಂದು ಹೇಳಲಾಗದು. ಒಬ್ಬ ಯೋಗಿ ಜೀವಮಾನವೆಲ್ಲಾ ಯೋಗದಲ್ಲಿ ತಲ್ಲೀನನಾಗಿದ್ದರೂ ಸಬೀಜ/ನಿರ್ಬೀಜ ಸಮಾಧಿ ಸ್ಥಿತಿಯನ್ನು ಸೇರದಿರಬಹುದು. ಮತ್ತೊಬ್ಬನಿಗೆ ಅದು ಸುಲಭವಾಗಿ ೭ ವರ್ಷಕ್ಕೇ ಸಿಗಬಹುದು.
ಈಶ್ವರನ ಕರುಣೆ ಇದ್ದರೆ ಮಾತ್ರ ಯೋಗದಲ್ಲಿ ಮುಂದುವರೆಯಲು ಸಾಧ್ಯ;ಇಲ್ಲದಿದ್ದರೆ ಇಲ್ಲ. ಇದೂ ಯೋಗದ (ಹೇಳದ) ನಿಯಮ.
ರಾವ್