ತುಮಕೂರಿನಲ್ಲಿ ಈ ಭಾನುವಾರ "ನೀರ ನಿಶ್ಚಿಂತೆ" ಕಾರ್ಯಕ್ರಮ

ತುಮಕೂರಿನಲ್ಲಿ ಈ ಭಾನುವಾರ "ನೀರ ನಿಶ್ಚಿಂತೆ" ಕಾರ್ಯಕ್ರಮ

ನೀರ ನಿಶ್ಚಿಂತೆ!

ಬರುವ ಭಾನುವಾರ, ಮಾರ್ಚ್ ೧೫, ೨೦೦೯ ರಂದು ತುಮಕೂರಿನಲ್ಲಿ "ನೀರ ನಿಶ್ಚಿಂತೆ" ಕಾರ್ಯಕ್ರಮದ ಮೂರನೇ ಆವೃತ್ತಿ ಆಯೋಜಿಸಲಾಗಿದೆ. ಕಾರ್ಯಕ್ರಮ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮದ ವಿವರ ಕೆಳಗಿನಂತೆ:

೧೦.೩೦ - ೧೧.೩೦ - ಸ್ಥಳೀಯ ಸಮುದಾಯದ ಪರಿಚಯ

೧೧.೩೦ - ೧೨.೩೦ - ಕಂಪ್ಯೂಟರಿನಲ್ಲಿ ಕನ್ನಡ: ಕನ್ನಡದಲ್ಲಿ ಬರೆಯಲು ತಂತ್ರಜ್ಞಾನ

೧೨.೩೦ - ೧.೩೦ - "ನೀರ ನಿಶ್ಚಿಂತೆ"ಯೆಡೆಗೆ ಅರಿವು ಮೂಡಿಸಲು ಅಂತರ್ಜಾಲದ ಬಳಕೆ, ಹೇಗೆ?

೨.೩೦ - ೪.೩೦ - ಕಿರುಚಿತ್ರ - "ಕಾಲಿ ಬೇಯ್ನ್".

೪.೩೦ - ೫.೩೦ - ಪ್ರಶ್ನೋತ್ತರ, ಮಾತುಕತೆ.

ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಕಂಪ್ಯೂಟರಿನಲ್ಲಿ ಕನ್ನಡ ಟೈಪಿಸಲು, ಬಳಸಲು ಬೇಕಿರುವ ತಂತ್ರಾಂಶಗಳನ್ನೊಳಗೊಂಡ ಸಿ.ಡಿಯೊಂದನ್ನು ಸಹ ನೀಡಲಾಗುವುದು.

ಆ ದಿನ, ನಮ್ಮೊಂದಿಗೆ: ತುಮಕೂರಿನ ಮಿತ್ರರು, ಬೆಂಗಳೂರ ತಂತ್ರಜ್ಞರ ಬಳಗ (ಸಂಪದ) ಹಾಗು ಆಸಕ್ತರು. 

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವವರು ದಯವಿಟ್ಟು ಭೂಷಣ್ ಮಿಡಿಗೇಶಿಯವರನ್ನು ಸಂಪರ್ಕಿಸಿ ಅಥವ ನಮಗೊಂದು ಇ-ಮೇಯ್ಲ್ ಹಾಕಿ ಅಥವ ಇಲ್ಲಿ ಕ್ಲಿಕ್ ಮಾಡಿ ನೋಂದಾಯಿಸಿಕೊಳ್ಳಿ:

9480690620

events-kn@indiawaterportal.org

ನೀರ ನಿಶ್ಚಿಂತೆ!
ಕಾರ್ಯಕ್ರಮ ಅರ್ಘ್ಯಂ ಸಂಸ್ಥೆ, ಧಾನ್ಯ ಸಂಸ್ಥೆ ಹಾಗೂ ಸಂಪದದ ಸಹಯೋಗದಲ್ಲಿ ಮೂಡಿಬರಲಿದೆ.  ಕಾರ್ಯಕ್ರಮದ ದಿನದಂದು ಕೂಡ ನೋಂದಾಯಿಸಿಕೊಳ್ಳಬಹುದು.