'ಮೈಸೂರು ಸಂಗೀತ ವಿದ್ಯಾಲಯ', ಡೊಂಬಿವಲಿ, ಮುಂಬೈ - ಬೆಳ್ಳಿ ಹಬ್ಬ ಆಚರಿಸುತ್ತಿದೆ !

'ಮೈಸೂರು ಸಂಗೀತ ವಿದ್ಯಾಲಯ', ಡೊಂಬಿವಲಿ, ಮುಂಬೈ - ಬೆಳ್ಳಿ ಹಬ್ಬ ಆಚರಿಸುತ್ತಿದೆ !

ಬೆಳ್ಳಿ ಹಬ್ಬ ದ ಉದ್ಘಾಟನೆ, ೨೧-೦೧-೨೦೦೭ ರಂದು, ಪ್ರಾರಂಭವಾಗಿ ವರ್ಷಪೂರ್ತಿಯಾಗಿ, ಸಂಗೀತೋತ್ಸವ, ವಿಚಾರ ಸಂಕಿರಣ, ಕಾರ್ಯಾಗಾರ, ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿದೆ.

ಮೈಸೂರು ಸಂಗೀತ ವಿದ್ಯಾಲಯದ ರುವಾರಿ ಶ್ರೀಮತಿ ಉಮಾ ನಾಗಭೂಷಣ ರವರು. ಶ್ರೀಮತಿ ಉಮಾ ನಾಗಭೂಷಣ ರವರು, ಮೈಸೂರು ವಿಶ್ವವಿದ್ಯಾಲಯದ ಬಿ.ಎ; ಯ 'ಕರ್ಣಾಟಕ ಸಂಗೀತ ಪರೀಕ್ಷಾಮಂಡಲಿ'ಯ ಸೀನಿಯರ್ ಗ್ರೇಡ್ ನಲ್ಲಿ ಪ್ರಥಮ Rank ಹಾಗೂ 'ವಿದ್ವತ್ ಪದವಿ' ಪಡೆದ ಅವರು ತಮ್ಮ ವಿವಾಹದ ನಂತರ 'ಡೊಂಬಿವಲಿ'ಯಲ್ಲೇ ನೆಲಸಿ, ಮಕ್ಕಳಿಗೆ ಸಂಗೀತ ಶಿಕ್ಷಣವನ್ನು ಕೊಡಲಾರಂಭಿಸಿದರು.೧೬೫ ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ, ಕರ್ಣಾಟಕ ಸಂಗೀತ, ಹಿಂದೂಸ್ತಾನಿ ಶೈಲಿಯ ಹಾಡುಗಾರಿಕೆ, ಮತ್ತು ವಾದ್ಯಗಳಾದ ಹಾರ್ಮೊನಿಯಮ್, ತಬಲ, ಮೃದಂಗ, ಮ್ಯಾಂಡೊಲಿನ್ ಗಳಲ್ಲಿಯೂ ತರಪೇತಿ ಕೊಡಲಾಗುತ್ತಿದೆ.
ಪ್ರತಿವರ್ಷವೂ, ಈ ಸಂಸ್ಥೆಯ ಬಹು ಮುಖ್ಯ ಕಾರ್ಯಕ್ರಮಗಳೆಂದರೆ, ಗಣೇಶೊತ್ಸವ, ಪುರುಂದರದಾಸರ ಮತ್ತು ತ್ಯಾಗರಾಜರ ಉತ್ಸವಗಳು. ನವರಾತ್ರಿಯಲ್ಲಿ ಶ್ರೀ. ಶಾರದಾ ಪೂಜೆ ಮತ್ತು ರಾಷ್ಟ್ರೀಯ ಭಾವೈಕ್ಯತೆ ಯ ಅಂಗವಾಗಿ 'ಸಂತವಾಣಿ ಗಾಯನ ಸ್ಪರ್ಧೆ'ಗಳನ್ನು ಸತತವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇವೆಲ್ಲರ ಹಿಂದೆ ಎಲೆಮರೆಯ ಕಾಯಿಯಂತೆ, ಅವರ ಪತಿ, ಶ್ರೀ ನಾಗಭೂಷಣರ ಸೇವೆಯೂ ಇದೆ. ಅವರು ವಾಣಿಜ್ಯ ಸಂಸ್ಥೆಯೊಂದರಲ್ಲಿ 'ಅಕೌಂಟೆಂಟ್ 'ಆಗಿದ್ದಾರೆ. ಭೂಷಣ್, ಮುಂಬೈ ಕನ್ನಡ ಸಂಘ, ಮೈಸೂರ್ ಅಸೊಸಿಯೇಷನ್, ಶ್ರೀ. ಶ್ರೀ, ಶಂಕರಾಚಾರ್ಯ ಸೇವಾ ಸಮಿತಿ, ಕಲಾಕ್ಷೇತ್ರ, ಮುಂತಾದ ಅನೇಕ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಡೊಂಬಿವಲಿಯ ಜೈಂಟ್ಸ್ ಗ್ರೂಪ್ ಗೆ ಕಾರ್ಯ ನಿರ್ವಾಹಕರಾಗಿ ಸೇವೆ ಸಲ್ಲಿಸಿದ ಅವರಿಗೆ ಉತ್ತಮ ಕಾರ್ಯನಿರ್ವಾಹಕ,(Out Standing Director of Administration, by Nana Chudasama, President, Giants International ) ಲಭಿಸಿದೆ. ಶ್ರೀಮತಿ. ಉಮಾ, ರವರಿಗೂ ಡೊಂಬಿವಲಿ ರೋಟರಿ ಕ್ಲಬ್, ಜೈಂಟ್ಸ್ ಗ್ರೂಪ್, ಬೆಂಗಳೂರಿನ 'ಉಲುಚುಕಮ್ಮೆ ಬ್ರಾಹ್ಮಣ ಮಹಾಸಭೆ', 'ಭಾರತೀಯ ಎಜುಕೇಷನ್ ಸೊ. ದೊಂಬಿವಲಿ', ಗಳು ಸನ್ಮಾನಿಸಿ ಗೌರವಿಸಿವೆ.

ಈ 'ರಜತಮಹೋತ್ಸವ'ದ ಎಲ್ಲಾ ಕಾರ್ಯಕ್ರಮಗಳಿಗೂ ತಮ್ಮೆಲ್ಲರಿಗೆ ಆದರದ ಸ್ವಾಗತ.