ಮನಸ್ಸೆ೦ಬ ಮರ್ಕಟ....

ಮನಸ್ಸೆ೦ಬ ಮರ್ಕಟ....

   ಆ ದಿನ ಆಫೀಸ್  ಬರೋವಾಗಾ BMTC ಬಸ್ನಲ್ಲಿ ’ಮನಸೆ ಒ ಮನಸೆ ಎಂಥ ಮನಸೆ ಮನಸೆ..'ಹಾಡನ್ನ  FM ನಲ್ಲಿ ಕೇಳಿದ ನಾನು, ಎಷ್ಟೊಳ್ಳೆ ಹಾಡಲ್ವ, ಮನಸ್ಸಿನ ಬಗ್ಗೆ ತುಂಬಾ ಅದ್ಭುತವಾಗಿ ಹೇಳಿದ್ದಾರೆ ಅಂತ ಅನ್ಕೊಂಡು, ಆಫೀಸ್  ಸೇರಿದಾಗ ಎದುರಿಗೆ ಬಂದ ನನ್ನ  ಸಹುದ್ಯೋಗಿ 'ಹೈ' ಅಂದದ್ದನ್ನು ಗಮನಿಸದೆ ಹಾಗೆ ಹೊರಟಿದ್ದೆ.. ಮತ್ತೆ ನನ್ನ ಕರೆದ ಅವಳು,’ಹೇ ಮುಕ್ತಾ ಎಲ್ಲಿದೆ  ನಿನ್ನ ಮನಸ್ಸು.. ಹಾಗೆ  ಹೊಗ್ತಿದೀಯ’ ಅಂದಾಗಾ  'sorry i didn't hear you' ಅಂತ ಹೇಳಿ ಒಳ ನಡೆದಿದ್ದೆ..

   ನಿಜಾ.. ಕೈ,ಕಾಲು,ಕಣ್ಣು ಎಲ್ಲಿದೆ ಅಂದ್ರೆ ಹೇಳಬಹುದು ಮನಸ್ಸು ಎಲ್ಲಿದೆ ಅಂದ್ರೆ ಎನು ಹೇಳೋದು?? ಇದಕ್ಕೆ ನಾನು ನಿರುತ್ತರಳಾಗಿದ್ದೆ??!! ಸರಿ, ಅವತ್ತು ನಮ್ಮ  ಲಂಚ್ ಟೈಮ್ನಲ್ಲಿ ನನ್ನ ಲಂಚ್ ಮೇಟ್ಸ್ ಗಳ ಮುಂದೆ ಈ ಪ್ರಶ್ನೆ ಇಟ್ಟಾಗಾ ಅವರಿಂದ ಬಂದ ಉತ್ತರಗಳಂತೂ ನಿಜಕ್ಕೂ ಫನ್ನಿ.. ಒಬ್ಬರು, ’ಮನಸ್ಸು ನನ್ನ ಹ್ರುದಯದಲ್ಲಿದೆ’ ಅಂದ್ರೆ, ಮತ್ತೊಬ್ಬ್ರು ’ತಲೇಲಿದೆ’  ಅಂತ, ಇನ್ನೊಬ್ಬ್ರು’ನನ್ನೊಳಗೆ ಇದೆ. ಎಲ್ಲಿದೆ ಅಂತ ಹೇಳೋಕಾಗೊಲ್ಲ’ ಅಂದ್ದಿದ್ರು.. ಇನ್ನೊಬ್ಬ ನನ್ನ  ಫ್ರೆಂಡ್ ಅಂತು ’ಅಯ್ಯೊ ಇಲ್ಲೇ ಎಲ್ಲೋ ಇದೆ ಕಣೆ, ಸುಮ್ನೆ ತಲೆ ತಿನ್ಬೆಡ್ವೆ.. ಬಹುಶ: ನನ್ನ ಪಕ್ಕ ಕೂತ್ಕೊಳ್ಳೊ ಹುಡುಗಿ ಹತ್ರ ಇದೆ ಕಣೇ ನನ್ನ ಮನಸ್ಸು’ ಅಂದಾಗ, ನನಗೆ ನಗು ತಡೆಯಲಾಗಲಿಲ್ಲ :-) 

ದಿನಕ್ಕೆ ಸಾವಿರಾರು ಬಾರಿ ನಾವು ಮಾಡೊ ಎಲ್ಲಾ ಒಳ್ಳೆಯ/ಕೆಟ್ಟ ಕಾರ್ಯಗಳಿಗೆ  ಮನಸ್ಸೆ ಮೂಲ ಅಂತ ಹೇಳ್ತಾನೆ ಇರ್ತೀವಿ.. ’ಕೆಲ್ಸ ಮಾಡೋಕೆ ಮನಸ್ಸೆ ಇಲ್ಲ ಇವೊತ್ತು’,’ಅಯ್ಯೊ ಸಿಗರೇಟ್ ಸೇದೋದು ಬಿಡ್ಬೇಕು ಅಂತ ಎಷ್ಟೋ ಸಾರಿ ಅನ್ಕೊಳ್ತಿನ್ರೀ ಆದ್ರೆ, ಹಾಳಾದ ಈ ಮನಸ್ಸು  ಕೆಳೋದೇ ಇಲ್ಲ’,’ಮನಸ್ಸಿಟ್ಟು ಮಾಡು ಈ ಕೆಲ್ಸ. ಅಗುತ್ತೆ.. ಮನಸ್ಸಿದ್ದಲ್ಲಿ  ಮಾರ್ಗ’,’ನನ್ನ ಮನಸ್ಸಿಂದ ದೂರ ಹೋದ್ರಲ್ವೆ ಅವಳನ್ನ ನಾನು ಮರಿಯೋಕಾಗೋದು??’,'ಅವಳ ಮನಸ್ಸು ಮಗು ಥರ ಪಾಪ!!'... ಹೀಗೆ ದಿನಕ್ಕೆ ಬೇಕಾದಷ್ಟು ಸಾರಿ ನಾವು ಮನಸ್ಸಿನ  ಬಗ್ಗೆ ಹೇಳ್ತಾನೇ ಇರ್ತೀವಿ.. ಹಾಗಿದ್ರೆ ಎಲ್ಲಿದೆ ಈ ಮನಸ್ಸು?? ಅನ್ನೋದು ನನ್ನ  ಪ್ರಶ್ನೆ ಆಗಿತ್ತು..??!!

ಇದರ ಬಗ್ಗೆ ಬರಿಯೋವಾಗ, ನಮ್ಮಜ್ಜಿ ಮನಸಿನ ಬಗ್ಗೆ ಹೇಳಿದ ಒಂದು ಮಾತು  ನೆನಪಿಗೆ ಬಂತು..
   ಪ್ರತಿ ಸೋಮವಾರ ನಮ್ಮಜ್ಜಿ ಜೊತೆ ಈಶ್ವರ ದೇವಸ್ಥಾನಕ್ಕೆ ಹೋಗೋದು ಮೊದಲಿನಿಂದಲೂ ನನ್ನ ವಾಡಿಕೆಯಾಗಿತ್ತು.. ಅಂದೊಂದು  ದಿನ, ನಾನು ನಮ್ಮ ಅಜ್ಜಿಗೆ ’ಆಯಿ, ದೆವ್ರು ಎಲ್ಲಾ ಕಡೆ  ಇದ್ದಾನ ಅಂತ ಹೆಳ್ತಾರಲ್ಲ, ಮತ್ತ ಗುಡಿಗೆ ಯಾಕ್ ಕರ್ಕೊಂಡು ಬರ್ತಿ ನೀ ನನ್ನ??’  ಅಂತ ನನಗೆ ತಿಳಿಯದೇ ಕೇಳಿದ ಪ್ರಶ್ನೆಗೆ, ನಮ್ಮ ಅಜ್ಜಿ  ’ಖರೆ.. ದೇವರು  ನೆನೆದವರ ಮನಸ್ಸಿನಲ್ಲೆಲ್ಲ ಇದ್ದಾನ ಅವ್ವಿ’ ಅಂದಿದ್ಲು.. ಅದಕ್ಕೆ ಪ್ರತಿ ಪ್ರಶ್ನೆಯಾಗಿ ನಾನು ’ಮತ್ತ ಮನಸ್ಸೆಲ್ಲೆದ?’ ಅಂದಾಗ, ನಮ್ಮ ಅಜ್ಜಿ  ’ಹಗಲ್ನ್ಯಾಗೂ ಚಂದ್ರ ಮುಗಲ್ನ್ಯಾಗ ಇರ್ತಾನ. ಆದ್ರ, ಸೂರ್ಯನ  ಬೆಳಕಿಗೆ ಅವ ನಮಗ  ಕಾನ್ಸಾಂಗಿಲ್ಲ.. ಹಂಗ ಮನಸ್ಸು ನಮ್ಮಲ್ಲಿ ಅದ.. ಆದ್ರ ಅದು ನಮಗ  ಕಾನ್ಸಾಂಗಿಲ್ಲ’ ಅಂದಿದ್ಲು.. ಆಗ ಇದು ನನಗೆ ಅರ್ಥ ಆಗಿತ್ತೋ, ಬಿಟ್ಟಿತ್ತೋ.. ಈಗ ನೆನಪಿಸಿಕೊಂಡ್ರೆ, ನಮ್ಮ ಅಜ್ಜಿ ಹೇಳಿದ್ದು ತರ್ಕಬದ್ಧವಾಗಿತ್ತು. ಅಂತ  ಅನಿಸುತ್ತೆ..

  ಒಟ್ಟಿನಲ್ಲಿ ಹೇಳೋದಾದ್ರೆ, ಮನಸ್ಸಿಗೆ ಒಂದು ಅಸ್ತಿತ್ವ ಅಂತಾನೇ ಇಲ್ಲ.. ಆದರೂ ಅದು ನಮ್ಮನ್ನ ತನ್ನ ಕೈಗೊಂಬೆಯನ್ನಾಗಿ ಮಾಡಿಕೊಂಡು ಅದರಂತೆ ಆಡಿಸುತ್ತೆ. 'ಸಾವಿರ ಯೋಚನೆಗಳ ಹರಿಬಿಡುವ ಮಹಾನದಿ ಈ ಮನಸ್ಸೆಂಬ ಮಾಯೆ, ಮನಸ್ಸು ಒಮ್ಮೊಮ್ಮೆ ಮಗು, ಒಮ್ಮೊಮ್ಮೆ ಕ್ಷುದ್ರ ಪಶು, ಮಹಾ ಮರ್ಕಟ..ಮನಸ್ಸು ಸಾವಿರ ಸಾವಿರ ನೆನಪುಗಳ ಅದ್ಭುತ ಹಾರ್ಡಡಿಸ್ಕ ' ಅಂತಾ ಹೇಳಬಹುದು.. ’ತನ್ನ ಮನಸ್ಸನ್ನು ಗೆದ್ದೋನೆ ಮಹಾಯೋಗಿ’ ಅಂತಾ ತಿಳಿದವರು ಹೇಳಿದಂತೆ, ಅಸ್ತಿತ್ವಾನೆ ಇಲ್ಲದ ಮನಸ್ಸಿನ ಕೈ ಗೊಂಬೆಯಾಗಿ ಅದು, ಆಡಿಸಿದಂತೆ ಆಡುತ್ತಾ ಅದು ಕೊಂಡೊಯ್ಯುವ ತಪ್ಪು ದಾರಿಗೆ ನಾವು ಹೋಗದೇ,ನಾವು ಹೇಳಿದಂತೆ ಮನಸ್ಸನ್ನ ಕೇಳೋ ಹಾಗೆ ಮಾಡ್ಕೊಂಡು ಅದಕ್ಕೊಂದು ನಿಜವಾದ, ಒಳ್ಳೆಯ ಅಸ್ತಿತ್ವ ಕೊಡಬಹುದಲ್ವ?? ಅನ್ನೊ ಯೋಚನೆ ನನ್ನಲ್ಲಿ ಮೂಡಿದ್ದೆ ತಡ, ''Just chill mukta.. Dont think too much.. most of d time you never listen to me by the way..!!'' ಅಂತ ನನ್ನ ಬಗ್ಗೆ ನನಗೇ ಕಂಪ್ಲೆಂಟ್ ಹೇಳಿತ್ತು, ಮತ್ತೆ ನನ್ನೊಳಗಿರುವ, ಕಂಡೂ ಕಾಣದ ಅದೇ ನನ್ನ ಮನಸ್ಸು :-)

Rating
No votes yet