ನೀವು ಕುಟುಂಬ ದೊಡನೆ /ಅಥವಾ ಸ್ನೇಹಿತರೊಡನೆ ರಿಲಾಕ್ಸ್ ಮಾಡಲು ಏನುಅನುಕೂಲತೆ ಬೇಕು ????

ನೀವು ಕುಟುಂಬ ದೊಡನೆ /ಅಥವಾ ಸ್ನೇಹಿತರೊಡನೆ ರಿಲಾಕ್ಸ್ ಮಾಡಲು ಏನುಅನುಕೂಲತೆ ಬೇಕು ????

Comments

ಬರಹ

ಹೌದಲ್ವಾ ಇದೆ ಪ್ರಶ್ನೆ ನನ್ನನ್ನು ಹಲವಾರು ಸರಿ  ಕಾಡುತ್ತಿದೆ. ಎಲ್ಲರಿಗೂ ಗೊತ್ತು ಮನುಷ್ಯನ ಮನಸ್ಸುಹಾಗು ದೇಹ  ದೈನಂದಿನ ದಿನಚರಿ ಯಿಂದ, ಕೆಲಸ ಕಾರ್ಯಗಳ ಒತ್ತಡದಿಂದ , ಪಟ್ಟಣದ ಗದ್ದಲದ ಜಂಜಾಟದ  ವಾತಾವರಣದಿಂದ , ಬಿಡುವಿಲ್ಲದ ದಣಿವಿನಿಂದ  ಮುಕ್ತಿ  ಪಡೆಯಲು  ವಿಶ್ರಾಂತಿ ಪಡೆಯಲು ಬಯಸುತ್ತದೆ. ಸ್ವಲ್ಪ ದಿನ ಈ ಜಂಜಾಟ ಗಳನ್ನು ಮರೆತು ಹಾಯಾಗಿ  ಹೊರಗಡೆ ಎಲ್ಲಾದ್ರೂ ಕುಟುಂಬದೊಡನೆ / ಸ್ನೇಹಿತರೊಡನೆ / ಅಥವಾ ಒಬ್ಬರೇ  ನೆಮ್ಮದಿಯಾಗಿ ಹೋಗಬೇಕೆನ್ನಿಸುತ್ತದೆ. ಈ ರೀತಿಯ ಮಾತುಗಳನ್ನು ನಾವು ಪಡೆ ಪಡೆ ಆಡುತ್ತೇವೆ. "ನನಗಂತೂ ಸಾಕಾಗಿ ಹೋಗಿದೆ  ಎಲ್ಲಾದ್ರೂ ಆಚೆ ಹೋಗಿ ರಿಫ್ರೆಶ್ ಆಗಬೇಕೂ ರೀ "  ಎನ್ನುವ ಮಾತುಗಳು ನಮ್ಮ ಬಾಯಿಂದ ಬರುತ್ತದೆ. ಆದರೆ ಹಲವು ಸಾರಿ ಈ ನಿರೀಕ್ಷೆ ತಪ್ಪಾಗಿ  ಯಾಕಾದ್ರೂ ಹೊರಗೆ ಹೊಫಿದ್ವೋ ಅನ್ನಿಸುತ್ತದೆ. ಇದಕ್ಕೆ ಉತ್ತರ ಕಂಡು ಹಿಡಿಯುವ ಒಂದು ಪ್ರಯತ್ನ ಮಾಡೋಣ ಬನ್ನಿ. ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.
೧] ನೀವುಹೊರಗಡೆ ಕುಟುಂಬ ದೊಡನೆ / ಸ್ನೇಹಿತರೊಡನೆ/ ಒಬ್ಬರೇ ಯಾವ ಜಾಗದಲ್ಲಿ ರಿಲಾಕ್ಸ್ ಮಾಡಲು ಬಯಸುತ್ತೀರಿ?
೨] ನೀವು ಉಳಿಯುವ ಸ್ಥಳದಲ್ಲಿ ನೀವು ನಿರೀಕ್ಷಿಸುವ ಸೌಲಭ್ಯ ಗಳೇನು ??
3] ನಿಮ್ಮ ಕಲ್ಪನೆಯ ಪ್ರದೇಶ ಹೇಗಿರ ಬೇಕು ??
೪] ಯಾವ ಚಟುವಟಿಕೆಯಿಂದ ನಿಮ್ಮ ಮನಸ್ಸು  ಉಲ್ಲಾಸವಾಗಿ ಆ ಜಾಗಕ್ಕೆ ಮತ್ತೊಮ್ಮೆ ಕುಟುಂಬ ದೊಡನೆ / ಸ್ನೇಹಿತರೊಡನ / ಒಬ್ಬರೇ ಹೋಗಬೇಕು ಎನ್ನಿಸುತ್ತದೆ??
 ೫]  ಈ ಗಿನ ರೆಸಾರ್ಟ್/ ಹೋಂ ಸ್ಟೇ  ಸಂಸ್ಕೃತಿ ನಿಮಗೆ  ಒಪ್ಪಿಗೆಯಾಗಿದೆಯೇ ??  ನಿಮ್ಮ ಕಲ್ಪನೆಯ ರೆಸಾರ್ಟ್ / ಹೋಂ ಸ್ಟೇ ಹೇಗಿರ ಬೇಕು ?? ಇವುಗಳ ಬಗ್ಗೆ ನಿಮ್ಮ ಅನಿಸಿಕೆ ಹಂಚಿಕೊಳ್ಳಿ .

 ಬನ್ನಿ ಒಂದು ಪ್ರಯತ್ನ ಮಾಡೋಣ!!!

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet