ಹಜಾರೆ ಉಪವಾಸ; ವ್ಯರ್ಥ ಪ್ರಯತ್ನ.

ಹಜಾರೆ ಉಪವಾಸ; ವ್ಯರ್ಥ ಪ್ರಯತ್ನ.

Comments

ಬರಹ

ದೇಶದಿಂದ Corruption ಹೊಡೆದಟ್ಟಲೇಬೇಕು. ಹಾಗಂತ ಹಜಾರೆ ಅಣ್ಣ ಉಪವಾಸ ಕೂಡುವುದು ಅತಾರ್ಕಿಕ; ನಿಷ್ಪ್ರಯೋಜಕ!
  ಸಚಿವರು ಹೇಳಿರುವುದು ತಾಂತ್ರಿಕವಾಗಿ ಸರಿಯಾದದ್ದೇ. ಸರಕಾರ ಈಗಾಗಲೇ ಈ ದಿಸೆಯಲ್ಲಿ ಮಸೂಯೆ ಪ್ರಕ್ರಿಯೆ ಆರಂಭಿಸಿದೆ. ಇದರಲ್ಲಿ ಚರ್ಚೆ-ತಿದ್ದುಪಡಿಗಳಿಗೆ ಪೂರ್ಣ ಅವಕಾಶವಿರುತ್ತದೆ. (ಉಪಯೋಗಿಸಿಕೊಳ್ಳದೆ ದೊಂಬಿ-ಗಲಭೆ, ಬಹಿಷ್ಕಾರದ ಹೀನ "ರಣತಣತ್ರ"ಕ್ಕೆ ಶರಣಾಗದಿದ್ದರೆ!)  ಸತ್ಯಶೀಲರು ಕೆಲವರು ಸದನದಲ್ಲಿ ಇರುವುದೇ ಆದರೆ ಅಂಥವರು ವಿವೇಕಶಾಲೀ ತಿದ್ದುಪಡಿಗೆ ಯತ್ನಿಸಿಯೇ ತೀರುತ್ತಾರೆ; ಅಂಥವರು ಬಹುಸಂಖ್ಯೆಯಲ್ಲಿದ್ದರೆ ಠರಾವು ಅನುಮೋದನೆಯೂ ಅಗಿಬಿಡಬಹುದು! ಅದಿಲ್ಲದ ಪ್ರಸ್ತುತ ಸಂದರ್ಭದಲ್ಲಿ ಮಸೂದೆ ತನ್ನ, ’ಅನುಕೂಲಸಿಂಧು’ ಸ್ವರೂಪದಲ್ಲಿ ಪಾಸಾಗಬಹುದೆನೋ? ಅದರೆ ಬಹುಶಹ ಆ ಗ್ಯಾರಂಟಿಯೂ ಇಲ್ಲ. ಅಲ್ಲಿರುವವರೆಲ್ಲ ಚಾಣಾಕ್ಷರೇ ಅಲ್ಲವೇ?! ಅಂಥವರ ಕೈಲಿದು,’ಹಾವೂ ಸಾಯದ, ಕೋಲೂ ಮುರಿಯದ’ ಅನಂತ ಕಾಲದವರೆಗೆ ನೆನೆಗುದಿಯಲ್ಲೇ ಇದ್ದುಕೊಂಡುಹೋಗುವ ಸಂಭವವೂ ಹೆಚ್ಚು!
ಉಪವಾಸ, ಆತ್ಮಪ್ರಚೊದನೆ, ಆಧ್ಯಾತ್ಮಿಕತೆಗಳೆಲ್ಲಾ Conscience ಎಂಬ ಅಂತಸ್ಸಾಕ್ಷಿಯುಳ್ಳವರಿಗೆ; ಸಾಮಾಜಿಕವಾಗಿ ನೀತಿವಂತಿಕೆ ಉಳ್ಳವರಿಗೆ. ಇದಾವುದೂ ಸಂಸತ್ ಅಥವಾ ಶಾಸನಸಭೆಯ ಚುನವಣಾ ಅಭ್ಯರ್ಥಿಗೆ ಕನಿಷ್ಠ ಸ್ಪಧಾರ್ಹತೆಯೇನೂ ಅಲ್ಲವಲ್ಲಾ?!

Corrupt - ಅಂದರೆ ನೀತಿಗೇಡೀ ವಿಧಾನದಿಂದಲೇ ಅರಿಸಿ ಬಂದವರಿಗೆ, Corruption - ಅಂದರೆ ಭ್ರಷ್ಟಾಚಾರ ನೀಗಬೇಕೆಂಬ ದರ್ದಾದರೂ ಏಕಿದ್ದೀತು? Corruption ಎಂದರೆ ಲಂಚಗುಳಿತನ ಎಂದಷ್ಟೇ ಅರ್ಥವಲ್ಲ. ಲಂಚ ಅದರ ಅಭಿವ್ಯಕ್ತಿ ಸ್ವರೂಪಗಳಲ್ಲಿ ಒಂದು, ಅಷ್ಟೆ. ’ಹದಗೆಟ್ಟಿದ್ದು’, ’ಸ್ವರೂಪಗೆಟ್ಟಿದ್ದು’ ಎನ್ನುವುದೇ ಇದರ ನಿಜಾರ್ಥ. ಇಂತಹ ಬಹುಸಂಖ್ಯಾತ ಸದಸ್ಯರಿರುವ ಸದನ, ತನ್ನದೇ ಸ್ವಭಾವ, ಸ್ವರೂಪಗಳನ್ನು ಬದಲಾಯಿಸಿಕೊಳ್ಳಬೇಕೆಂದು ’ಸಾವಿನ ತನಕ ಉಪವಾಸ’ ಕೈಗೊಳ್ಳುವುದು, ಕಲ್ಲುಕಟ್ಟಿಕೊಂಡು ಸಾಗರದಾಳಕ್ಕೆ ಧುಮುಕುವ ವಿವೇಕವೇ ಅಲ್ಲವೇ?

ಸಂಸತ್ತು ಮತ್ತು ಶಾಸನಸಭೆಗಳ ಸಭ್ಯತೆ ಮತ್ತು ನೈತಿಕ ಉತ್ತಮಿಕೆಯನ್ನು ಕಡ್ಡಾಯವಾಗಿ ಎತ್ತರಿಸುವ ಚಳುವಳಿ ಕೈಗೊಳ್ಳಿ. ಮಿಕ್ಕಿದ್ದು ತಂತಾನೇ ಸಭ್ಯವಾದೀತು!
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet