ಮೈಮೇಲೆ ಬಂದ ದೇವರು!

ಮೈಮೇಲೆ ಬಂದ ದೇವರು!

ಆ ಊರಲ್ಲಿ ಪ್ರತಿವರ್ಷವೂ ಊರ ಹಬ್ಬ ನಡೆಯುತ್ತಿತ್ತು. ಬರಗಾಲವಾದ್ದರಿಂದ ಈ ವರ್ಷವೂ ನಡೆಸಬೇಕೋ ಬೇಡವೋ ಎಂದು ನಿರ್ಧರಿಸಲು ದೇವಸ್ಥಾನದಲ್ಲಿ ಪಂಚಾಯಿತಿ ಹಾಕಿದ್ದರು. ದಲಿತರ ಕೇರಿಯ ಭೈರನ ಅಪ್ಪನಿಗೆ ಯಾವಾಗಲೂ ಹಬ್ಬದ ಸಮಯದಲ್ಲಿ ಗಣ (ದೇವರು) ಬರುತ್ತಿತ್ತು, ಅಪ್ಪ ಹೋದ ಮೇಲೆ ಮಗನಿಗೆ ಬರುತ್ತಿತ್ತು. ಅವನಿಗೇನೂ ಬರುತ್ತಿರಲಿಲ್ಲ, ವರ್ಷ ವರ್ಷ ಹಬ್ಬದ ಸಮಯದಲ್ಲಿ ಅಪ್ಪನಿಗೆ ಬರುತ್ತಿದ್ದ ದುಡ್ಡು ಹಣ್ಣು ಹಂಪಲುಗಳು ಅಪ್ಪ ಇಲ್ಲದಿದ್ದಾಗ ಬರಲಿಲ್ಲವಾದ್ದರಿಂದ ತನ್ನ ಮೈಮೇಲೆ ಪ್ರತಿವರ್ಷವೂ ದೇವರನ್ನು ಬರಿಸಿಕೊಳ್ಳುತ್ತಿದ್ದನು. ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದವನಿಗೆ ಪಂಚಾಯಿತಿಯಲ್ಲಿದ್ದ ಯಾರೋ ಕಾಲ್ ಮಾಡಿ ಈ ವರ್ಷ ಹಬ್ಬ ಮಾಡುವುದಿಲ್ಲವಂತೆ ಎಂದಾಗ . . . . . . . . . . . . . . . . . . . . . . . . . . . ಅಲ್ಲಿಂದಲೇ ಮೈಮೇಲೆ ಬಂದಂತೆ ಪಂಚಾಯಿತಿ ನಡೆಯುತ್ತಿದ್ದಲ್ಲಿಗೆ ಓಡಿಬಂದು 'ಮಾರಮ್ಮನ ಹಬ್ಬ ವರ್ಷಕೊಮ್ಮೆ ಮಾಡದಿದ್ದರೆ ಈ ಊರಿಗೆ ಊರಿನ ಜನಕ್ಕೆ ಒಳ್ಳೆಯದಾಗುವುದಿಲ್ಲ' ಅಂದಾಗ ಊರಿನವರು ವಿಧಿಯಿಲ್ಲದ ಹಬ್ಬ ಮಾಡುವ ನಿರ್ಧಾರಕ್ಕೆ ಬಂದರು.
Rating
No votes yet

Comments