ದೇವರು, ಧರ್ಮ ಇತ್ತ ನೋಡೀತೇ?!

ದೇವರು, ಧರ್ಮ ಇತ್ತ ನೋಡೀತೇ?!

Comments

ಬರಹ

 ತಡವಾಗಿರಬಹುದು, ನಿಜ. ಅಂತೂ ಕಾನೂನು ಎಚ್ಚರಗೊಂಡಿದೆ. ಕೇಂದ್ರ ತನಿಖೆ ಸಂಸ್ಥೆ - ಸಿಬಿಐ - ಕರ್ನಾಟಕದ ಮಾಜಿ ಮಂತ್ರಿ, ಮತ್ತಿತರ ಮಹೋದಯರುಗಳನ್ನು ಹಿಡಿದುಹಾಕಿದೆ. ಅವರನ್ನು ಹದಿನಾಲ್ಕು ದಿನದವರೆಗೆ ನ್ಯಾಯಾಂಗ ಬಂಧನದಲ್ಲರಿಸಲು ಕೋರ್ಟ್ ಸೂಚಿಸಿದೆ. ಅಲ್ಲಿ ಅವರಿಗೆ ಗೌರವಾನ್ವಿತ ರಾಜಭೋಗವೇ ಏರ್ಪಾಪಾಡಾಗಗುರುವುದರಲ್ಲಿ ಅನುಮಾನವಿಲ್ಲ. ಆದರೂ ಕಾನೂನಿನ ಪ್ರಕಾರ ಅವರು ಸಹ ಇತರೆಲ್ಲಾ ಜೈಲಿಗರಂತೆ ಸೆಲ್ಲುಗಳಿಗೆ ಸೀಮಿತರೇ. ಕರುಣಾಜನಕ ಸಂಗತಿಯೆಂದರೆ, ಈ ಸೆಲ್ಲುಗಳಲ್ಲಿ ಸಹ ಅವರು ತಮ್ಮ ತಮ್ಮ ಗೌರವಾನ್ವಿತ ಮತಕ್ಷೇತ್ರಗಳನ್ನು ಪ್ರತಿನಿಧಿಸುವವರೇ! ಆದರೆ ಇಂತಹ ವಿದ್ಯಮಾನದಿಂದ ಆ ಕ್ಷೇತ್ರಗಳ ಮತದಾರರಿಗೆ ಎಗ್ಗು-ಸಿಗ್ಗಿನ ಮುಜುಗರ ಉಂಟಾಗುವುದೇ ಇಲ್ಲ! ಇಂದಿನ ಸಾರ್ವಜನಿಕ ಜೀವನದ ಧ್ಯೇಯ ವಾಕ್ಯವೇ, ’ಪಾಪ ಮಾಡು, ಪರವಾಗಿಲ್ಲ; ಸಿಕ್ಕಿಹಾಕಿಕೊಳ್ಳದ ಚಾಣಾಕ್ಷತನವನ್ನು ಮಾತ್ರಾ ಮರೆಯಬೇಡ’, ಎನ್ನುವಂತಾಗಿದೆ!
 ಇದಕ್ಕೆ ಬಹುಶಃ ದೈವಾನುಮತಿಯೂ ಇದೆಯೇನೋ?! ಶತಕೋಟಿ ನುಂಗಿದ ಆರೋಪದಲ್ಲಿ ಈಗ ಪೊಲಿಸ್ ಅತಿಥಿಗಳಾಗಿರುವ ಈ ಕುಳಗಳು ಇತ್ತೀಚೆಗಷ್ಟೇ ತಿರುಪತಿ-ತಿರುಮಲದ ಪರದೈವ ಬಾಲಾಜಿಗೆ ಮೌಲ್ಯಾತೀತ ವಜ್ರಖಚಿತ ಕಿರೀಟವನ್ನು ಕಾಣಿಕೆಯಿತ್ತಿದ್ದರು. ಆ ಸಂದರ್ಭದಲ್ಲಿ ಅವರನ್ನು ಇನ್ನಿಲ್ಲದಂತೆ ಮೆರೆಸಿ ಗೌರವಿಸಲಾಗಿತ್ತು. ಆ ದೈವಕ್ಕೆ, ಅರ್ಥಾತ್ ಅದನ್ನು ಪ್ರತಿನಿಧಿಸುವ ಮ್ಯಾನೇಜ್‌ಮೆಂಟ್ ಮತ್ತು ಢಾಳನಾಮ-ಪಟ್ಟೆಕಚ್ಚೆಗಳ ಆಢ್ಯ ಅರ್ಚಕವರ್ಗ, ಆ ಆಭರಣವನ್ನು ಸರಕಾರಕ್ಕೆ ಒಪ್ಪಿಸಿ, ದಾನಿಗಳಿಗೆ ನೀಡಿದ್ದ ಘನ-ಗೌರವಗಳನ್ನೆಲ್ಲಾ ಹಿಂಪಡೆಯುವ  ನೀತಿ, ಪ್ರಾಮಾಣಿಕತೆ ಮತ್ತು ಧರ್ಮಪ್ರಜ್ಞೆ ಮೆರೆದೀತೇ?!   
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet