ರಥಯಾತ್ರೆ ಗಿಮ್ಮಿಕ್ ಈಗ ’ಕ್ಲಿಕ್ಕೀ’ತೇ...?!

ರಥಯಾತ್ರೆ ಗಿಮ್ಮಿಕ್ ಈಗ ’ಕ್ಲಿಕ್ಕೀ’ತೇ...?!

Comments

ಬರಹ

 ಬಹುಶಃ ಇಲ್ಲವೆಂದು ನಾನೆನ್ನುತ್ತೇನೆ. ತಾವೋ?
 ಭಾರತೀಯ ಜನತಾ ಪಾರ್ಟಿಯ ಮಹಾರಥಿ ಮತ್ತೊಮ್ಮೆ ರಥಯೇರಿ ಹೊರಡಲಿದ್ದಾರಂಬ ಸುದ್ದಿ. ಈ ಬಾರಿಯ ಅವರ ’ರಣಯಾತ್ರೆ’ ಭ್ರಷ್ಟಾಚಾರದ ವಿರುದ್ಧವಂತೆ!
 ಯಾತ್ರೆ-ಪಾತ್ರೋದ್ದೇಶಗಳೊಂದೂ ಇಲ್ಲದೆ ಹಜ಼ಾರೆ ಅಣ್ಣ ಈಗಾಗಲೇ ಜನಮಾನದವನ್ನು ಗೆದ್ದಾಗಿದೆ. ದೇಶನಾಶವಾಗಿತ್ತಿರುವ ಬಗ್ಗೆ ಅವರ ಸಾತ್ವಿಕ ಆದರೆ ನಿರಪೇಕ್ಷ ಸಿಟ್ಟು, ದೇಶದ ಉದ್ದಗಲಕ್ಕೆ ಜನಜಾಗೃತಿಯನ್ನು ಬಡಿದೆಬ್ಬಿಸಿದೆ. ಅದನ್ನು ಭೇದಿಸಿಕೊಂಡುಹೋಗಬೇಕಾದರೆ ’ರಾಜಕಾರಣಿ’ಯ ಈ ರಥ, ವಿಶೇಷ ಆಂಬ್ಯುಲೆನ್ಸ್ ಸೈರನ್ ಹಾಕಿಕೊಳ್ಳಬೇಕಾದೀತೇನೋ!
  ಜನತೆಯ ರೊಚ್ಚು, ಕೇಂದ್ರದಲ್ಲಿ ಯುಪಿಎ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ವಿರುದ್ಧವಷ್ಟೇ ಅಲ್ಲ. ’ರಾಜಕೀಯ’ ಎನ್ನುವುದೇ ಸುಳ್ಳು-ತಟವಟಗಳ ಭ್ರಷ್ಟತೆ ಎನ್ನುವ ಸ್ಪೃಹೆಯೂ ಜನಕ್ಕೆ ಬಂದಿದೆ. ಶತಕೋಟಿ, ಸಹಸ್ರಕೋಟಿ ಕರೆನ್ಸಿ ಕಟ್ಟುಗಳ ಬ್ರೀಫ್‌ಕೇಸ್, ಸೂಟ್‌ಕೇಸ್‌ಗಳು ಕೈ ಬದಲಾಗುವ ಚಮತ್ಕಾರವನ್ನು (ಅದು ಉತ್ಪ್ರೇಕ್ಷೆಯೇ ಇರಬಹುದು!) ಜನ, ಮಾಧ್ಯಮಗಳಲ್ಲಿ ನೋಡಿದ್ದಾರೆ. ರೇಡಿಯೊ ಒಂದೇ ಕಾಂಗ್ರೆಸ್ ತುತ್ತೂರಿ ಊದುತ್ತಿದ್ದ ’ಆ ಗಾಂಧಿ’ಯ ಕಾಲ ಈಗ ಮುಗಿದುಹೋಗಿದೆ. ಆದ್ದರಿಂದ ಈಗ ದೇಶದ ಉದ್ದಗಲಕ್ಕೆ, ಹೊರಗೆ, ಲಾರಿ ಓಡಿಸುತ್ತಾ ’ರೈಲ್ ಬಿಡುವುದಕ್ಕೆ’ ಮುಂಚೆ ಒಳಗಿನ ಅತ್ಮಸಾಕ್ಷಿಯನ್ನೂ ಒಮ್ಮೆ ಪ್ರಶ್ನಿಸಿಕೊಳ್ಳಬೇಕಾದ ಕಾಲ ಈಗ ಬಂದಿದೆ!
 ಜನ ಮಾನಸವನ್ನು ದಲಿತರು, ದುರ್ಬಲರು, ಅಲ್ಪಸಂಖ್ಯಾತರು ಎಂದು ಮೂಗಿಗೆ ತುಪ್ಪ ಸವರಿ ತೇರೆಳೆಸಿಕೊಳ್ಳುತ್ತಿದ್ದ ಓಲೈಕೆ ರಾಜಕೀಯದಿಂದ ಜನತೆ ಬೇಸತ್ತಿದ್ದರು, ನಿಜ. ಪ್ರಜಾಸತ್ತೆಯ ಅತ್ಯಂತ ಸಹಜ ಪ್ರಕ್ರಿಯೆಯಾದ ಬಹುಮತ ಆಡಳಿತಕ್ಕೆ ಆ ರಣತಂತ್ರದಿಂದ ಕ್ರಿಯಾಲೋಪವಾಗುತ್ತಿದ್ದುದನ್ನು ಕಂಡು, ಆಗ, ಜೆಪಿಯಂತಹ ನಿಸ್ಪೃಹರೂ ಮರುಗಿ, ಬಹುಮತವೆಂಬ ಮಾತನ್ನು ಪರೋಕ್ಷವಾಗಿ ಹರೆಸಿದ್ದಿರಬಹುದು. ಆದರೆ ’ಜನ ಬಹುಮತ’ ಎಂದು ಹೊರೆಟಿದ್ದ ಚಳುವಳಿ ಕ್ರಮೇಣ ’ಹಿಂದೂಬಹುಮತ’ವೆಂಬ ರಾಜಕೀಯವಾಗಿಹೋದದ್ದಕ್ಕೆ, ಬಹುಶಃ ಚಿಂತಶೀಲ ಜನತೆಯಾದರೂ ವಿಷಾದಿಸುತ್ತಿರಬಹುದು.
  ಆದರೂ ಭ್ರಷ್ಟಾಚಾರದ ವಿರುದ್ಧದ ಈ ಬುಲ್ಡೋಜರ್ ಪಂಕ್ಚರ್ ಆಗದೆ ಮುಂಸಾಗಲಿ ಎಂದು ಹಾರೈಸೋಣವೇ?!        
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet