ಪೆಟ್ರೋಲ್ ದರ ಮತ್ತು ರಾಜಕೀಯ ನಿಷ್ಕಾಳಜಿ

ಪೆಟ್ರೋಲ್ ದರ ಮತ್ತು ರಾಜಕೀಯ ನಿಷ್ಕಾಳಜಿ

Comments

ಬರಹ

 ಪೆಟ್ರೋಲ್ ದರ ಹಚ್ಚಳದ ಪ್ರಮಾಣ, ಕರ್ತಕ್ಕೆ ಮೀರಿದ ಅತಿರೇಕ. ಅಂತಾರಷ್ಟ್ರೀಯ ಮಾರುಕಟ್ಟಯಲ್ಲಿ ಕಚ್ಚಾ ತೈಲ ಮುಗಿಲು ಮುಟ್ಟಿದ್ದು ಪೆಟ್ರೋಲ್ ಕಂಪನಿಗಳು ಅಗಾಧ ನಷ್ಟ ಎದುರಿಸುತ್ತಿರುವುದೇನೋ ಸುಳ್ಳಲ್ಲ. ಹಾಗಂತ ಈಗ ಹಗಲು ದರೋಡೆ ಪ್ರಮಾಣದಲ್ಲಿ ದರ ಹೆಚ್ಚಿಸಿರುವುದಕ್ಕೆ ಕಾರಣವಾದರೂ ಏನು? ಅದು ರಾಜಕೀಯದ ಕುಹಕ! ಕಚ್ಚಾ ಬೆಲೆ ಹೆಚ್ಚಾದಂತೆ ಆಗಾಗಲೇ ಸ್ವಲ್ಪ-ಸ್ವಲ್ವಾಗಿ ದರ ಹೆಚ್ಚಿಸಿದ್ದರೆ ಜನ ಸ್ವಲ್ಪವಾದರೂ ಸಹಿಸಿಕೊಳ್ಳಬಹುದಾಗಿತ್ತು. ಆದರೆ ಆಗೆಲ್ಲಾ ಚುನಾವಣೆ, ಸಮ್ಮಿಶ್ರ ಸರಕರದ ಗಂಡಂತರ ಇತ್ಯಾದಿ ರಾಜಕೀಯ ಮುತ್ಸದ್ದಿತನದಿಂದ ಸುಮ್ಮನಿದ್ದು ಈಗ ಎಕಾಏಕಿ ಯರ್ರಾ-ಬಿರ್ರಿಯಾಗಿ ದರ ಏರಿಸಿರುವುದು, ಸಾಮಾನ್ಯರೆಂಬ ಜನರ ಬಗ್ಗೆ ಸರಕಾರದ ನಿಷ್ಕಾಳಜಿಯನ್ನು ನಿಚ್ಚಳವಾಗಿ ತೋರುತ್ತದೆ!
 ರಾಜಕೀಯ ಅಸ್ತಿತ್ವಕ್ಕಾಗಿ, ಅಧಿಕಾರಿಗಳನ್ನೂ, ಸಾಧ್ಯವಾದರೆ ನ್ಯಾಯವನ್ನೂ ಖರೀದಿಸುವುದಕ್ಕೆ ಕಂತೆಗಟ್ಟಲೆ, ಮೂಟೆಗಟ್ಟಲೆ ಕರೆನ್ಸಿ ಕದ್ದು ಸಾಗಿಸುವುದೂ ಬೆಲೆ ಏರಿಕೆಗೆ ಪರೋಕ್ಷವಾಗಿ ಕಾರಣವಾಗುತ್ತದೆ. ಏಕೆಂದರೆ ಅಷ್ಟರ ಮಟ್ಟಿಗೆ ಸಾಚಾ ಹಣ ಚಲಾವಣೆಯಿಂದ ಕಣ್ಮರೆಯಾಗುತ್ತದಲ್ಲಾ?! ಇದು ಕಪ್ಪು ಹಣವಾಗಿ ತನ್ನ ಕರಾಳ ರಾಜಕೀಯ ನಿರ್ವಹಿಸುತ್ತದೆ; ಮಕ್ಕಿದ್ದನ್ನು, ಫಲಾನುಭವಿಗಳು, ಪರಿವರ್ತಿಸಿಕೊಂಡು ವಿದೇಶೀ ಖಾತೆಗಳಲ್ಲಿ ಭದ್ರವಾಗಿಡುತ್ತರೆ. ರುಪಾಯಿ ಬೆಲೆ ಬಿತ್ತು ಎಂದರೆ ಈ ದ್ರೋಹಿಗಳಿಗೆ ಖುಷಿಯೊ ಖುಷಿ. ಅಷ್ಟುಮಟ್ಟಿಗೆ ಅವರ ಕಳ್ಳಹಣದ ಬೆಲೆ ಏರುತ್ತದಲ್ಲಾ! ಇದನ್ನು ಹಣದುಬ್ಬರ ಎಂದು ವರದಿ ಬರೆದು ತಜ್ಞರು ಕೈತೊಳೆದುಕೊಳ್ಳ್ಳುತ್ತಾರೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet