ಚಪ್ಪಲಿ ಶಬ್ದಕ್ಕೆ ಕನ್ನಡದಲ್ಲಿ ಎಷ್ಟು ಪರ್ಯಾಯ ಪದಗಳಿವೆ? ನಿಮ್ಮ ಪ್ರಾಂತದಲ್ಲಿ ಬಳಕೆಯಲ್ಲಿರುವುದನ್ನು ತಿಳಿಸಿ.

ಚಪ್ಪಲಿ ಶಬ್ದಕ್ಕೆ ಕನ್ನಡದಲ್ಲಿ ಎಷ್ಟು ಪರ್ಯಾಯ ಪದಗಳಿವೆ? ನಿಮ್ಮ ಪ್ರಾಂತದಲ್ಲಿ ಬಳಕೆಯಲ್ಲಿರುವುದನ್ನು ತಿಳಿಸಿ.

Comments

ಬರಹ

ಮೊನ್ನೆ ಹೀಗೆ ನಮ್ಮ ಕಕ್ಷಿದಾರನೊಬ್ಬನೊಡನೆ ಮಾತನಾಡುತ್ತಿದ್ದಾಗ ಮಾತಿನ ಮಧ್ಯದಲ್ಲಿ ತಲೆ ಎತ್ತಿದ್ದು ಈ ವಿಷಯ. ಕನ್ನಡದಲ್ಲಿ ಚಪ್ಪಲಿಗೆ ಎಷ್ಟು ಶಬ್ದಗಳಿವೆ ಎಂದು. ಆಗ ನಾವಿಬ್ಬರೂ ಕುಳಿತು ಪಟ್ಟಿ ಮಾಡಿದ ಪದಗಳು ಈ ರೀತಿ ಇವೆ:

ಚಪ್ಪಲಿ - ಕರ್ನಾಟಕದ ಎಲ್ಲಾ ಪ್ರಾಂತಗಳು (ಬಹುಶಃ ಹಿಂದಿಯ ಚಪ್ಪಲ್ ಪದದಿಂದ ಬಂದಿರಬಹುದು)
ಎಕ್ಕಡ- ಹಳೇ ಮೈಸೂರು ಪ್ರಾಂತ
ಮೆಟ್ಟು - ಮಧ್ಯ ಕರ್ನಾಟಕದ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳು.
ಕಾಲುಮರಿ - ಬಳ್ಳಾರಿ ಜಿಲ್ಲೆಯ ಕೆಲವೊಂದು ತಾಲೂಕುಗಳು ಮತ್ತು ಚಿತ್ರದುರ್ಗ ಜಿಲ್ಲೆಯ ಕೆಲವು ಭಾಗಗಳು
ಮಚ್ಚಿ - ಧಾರವಾಡ ಜಿಲ್ಲೆಯ ಕೆಲವು ಭಾಗಗಳು
ಪಾದರಕ್ಷೆ - ಪತ್ರಿಕೆಯಲ್ಲಿ ಬಳಸುವ ಪದ
ಪಾದುಕೆ - ಸ್ವಾಮಿಗಳ/ದೇವರುಗಳ ಚಪ್ಪಲಿಯ ವಿಷಯದಲ್ಲಿ ಉಪಯೋಗಿಸುವ ಪದ
ಆವುಗೆ - ಹಳೆಗನ್ನಡ - ಬಹುಶಃ ಆವು (ದನ)ಗಳ ಚರ್ಮದಿಂದ ಮಾಡಿದ್ದು.
ಹಾವುಗೆ - ಎಂಬ ಶಬ್ದವೂ ಬಳಕೆಯಲ್ಲಿದೆ - ಕೆಲವೊಂದು ಸ್ವಾಮಿಗಳು ಮುಳ್ಳು ಹಾವುಗೆಯ ಮೇಲೆ ನಡೆಯುತ್ತಾರೆ!

ನಿಮ್ಮ ಪ್ರಾಂತದಲ್ಲೂ ಪಾದರಕ್ಷೆಗೆ ಪರ್ಯಾಯ ಪದವಿರಬಹುದು! ಏಕೆಂದರೆ ಕನ್ನಡದಲ್ಲಿ ಮಾತ್ರ ನಾವು ಈ ವೈವಿಧ್ಯವನ್ನು ಕಾಣಬಲ್ಲೆವು ಎನಿಸುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet