ಅಂಥಾ ತಾಖತ್‌ದಾರ ಸರ್ಕಾರದ ಸೃಷ್ಟಿ ನಮಗೆ ಸಧ್ಯವೇ?

ಅಂಥಾ ತಾಖತ್‌ದಾರ ಸರ್ಕಾರದ ಸೃಷ್ಟಿ ನಮಗೆ ಸಧ್ಯವೇ?

ಬರಹ

  ಜ್ಞಾನಪೀಠಾಧಿಪತಿಗಳಿಂದ ಹಿಡಿದು ಶಿಕ್ಷಣದ ಸಾಮಾನ್ಯಜ್ಞಾನವುಳ್ಳವರವರೆಗೆ ಎಲ್ಲರೂ ಹೇಳುವುದು ಇದನ್ನೇ, ನಾಡಿನ ಮಕ್ಕಳಿಗೆ ಶಾಲಾಶಿಕ್ಷಣ ಕನ್ನಡದಲ್ಲಯೇ ಇರಬೇಕೆಂದು. ಇತ್ತೀಚಿನ ಜ್ಞಾನಪೀಠ ಪುರಸ್ಕೃತ ಸಾಹಿತಿ, ಚಂದ್ರಶೇಖರ ಕಂಬಾರರ ಕಳಕಳಿ ಕೂಡಾ ಅದೇ ಆಗಿದೆ. ಆದರೆ ಕನ್ನಡ ಮಾಧ್ಯಮ ಕಡ್ಡಾಯವಾಗಿಲ್ಲ; ಆಗುವುದೂ ಇಲ್ಲ! ಮೂಢ ತಾಯ್ತಂದೆಗಳೂ, ಬೇಜವಾಬ್ದಾರೀ ಶಿಕ್ಷಣ ಇಲಾಖೆ ಮತ್ತು 'ಶಿಕ್ಷಣೋದ್ಯಮ'ದ ಷಾರ್ಕ್‌ಗಳು ಇದಕ್ಕೆ ಅವಕಾಶ ಕೊಡುವುದಿಲ್ಲ.
 ಹಲ್ಕಾ ರಾಜಕಾರಣದಿಂದುಂಟಾಗುವ ನಮ್ಮ ಸರ್ಕಾರದ ಪರಂಪರೆಗೆ ಇದನ್ನು ಮೆಟ್ಟಿನಿಲ್ಲುವ ಇಚ್ಛಾಶಕ್ತಿಯೂ ಇರುವುದಿಲ್ಲ; ತಾಖತ್ತೂ ಇರುವುದಿಲ್ಲ!
 ರಾಜಕೀಯ ವ್ಯವಸ್ಥೆ, ಇಂದು ಸಮಾಜವನ್ನು ಒಡೆದು ಬಾಡಿನ ತುಂಡಿನಂತೆ ಬಾಚಿಕೊಳ್ಳುವತ್ತ ನೊಡುತ್ತದೆಯೇ ಹೊರತು ಒಗ್ಗೂಡಿಸುವ ಪ್ರಯತ್ನ ಎಂದಿಗೂ ನಡೆಯುವುದಿಲ್ಲ. ಉತ್ತರ-ದಕ್ಷಿಣ, ಕರಾವಳಿ, ಬಯಲು ಕರ್ನಾಟಕವೆಂದೂ, ಗೌಡ-ವಕ್ಕಲಿಗ, ವೀರಶೈವ-ಲಿಂಗಾಯತ, ಕುರುಬಾದಿ ಹಿಂದುಳಿದ ವರ್ಗ, ಕಣ್ಮಣಿಗಳಂತೆ ದಲಿತ, ಅಲ್ಪಸಂಖ್ಯಾತ ಇತ್ಯಾದಿ ಬೇಲಿ ಹಾಕಿ, ವೋಟಿಗರನ್ನು ಕುರಿಗಳಂತೆ ಕಾಯ್ದುಕೊಳ್ಳುವುದರಲ್ಲೇ ಅದಕ್ಕೆ ಗೆಲ್ಲುವ ಮರ್ಜಿನ್‌ನ ಲಾಭ. ಆದ್ದರಿಂದ ಸಮಾನ ಭಾಷೆ, ಸಂಸ್ಕೃತಿ, ಪರಂಪರೆಗಳನ್ನು ಹಂಚಿಕೊಳ್ಳಲು ಜನತೆಗೆ ಅವಕಾಶವೇ ಇರುವುದಿಲ್ಲ; ಅಂತಹ ವಾತಾವರಣವೂ ಸೃಷ್ಟಿಯಗುವುದಿಲ್ಲ.
 ಕನ್ನಡದ ಮಣ್ಣಿನಿಂದ ಅನ್ನ ಹುಟ್ಟಿಸಿಕೊಳ್ಳುವವರು, ಅಲ್ಲಿನ ಅಂತರ್ಜಲ ಕುಡಿಯುವವರೆಲ್ಲಾ ಅವಶ್ಯವಾಗಿ ಕನ್ನಡಿಗರೇ. ಎಲ್ಲರಿಗೆ ಶಿಕ್ಷಣದ ಭಾಷೆ ಅನಿವಾರ್ಯವಾಗಿ, ಸಮಾನವಾಗಿ ಕನ್ನಡವಾಗಬೇಕು. ಈ ಕ್ಷುದ್ರ-ಛಿದ್ರ ರಾಜಕಾರಣದಲ್ಲಿ ಅಂತಹ ಸರಕಾರವೊಂದನ್ನು ಸೃಷ್ಟಿಸುವುದು ನಮಗೆ ಸಾಧ್ಯವಾದೀತೇ?! 
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet