ನವರಾತ್ರಿಯ ಒಂಬತ್ತು ದಿನಗಳು ದೇವಿಗೆ ನಮನ...

ನವರಾತ್ರಿಯ ಒಂಬತ್ತು ದಿನಗಳು ದೇವಿಗೆ ನಮನ...

ನವರಾತ್ರಿಯ  ಪ್ರಾರಂಭ - ಪಾಡ್ಯದಿಂದ ದೇವಿಗೆ ನಿತ್ಯ ನಮನ...

ನಮೋ ದೇವ್ಯೈ ಮಹಾದೇವ್ಯೈ ಶಿವಾಯೈ ಸತತಂ ನಮಃ |

ನಮಃ ಪ್ರಕೃತ್ಯೈ ಭದ್ರಾಯೈ ನಿಯತಾಃ ಪ್ರಣತಾಃ ಸ್ಮತಾಮ್ ||

 

ರೌದ್ರಾಯೈ ನಮೋ ನಿತ್ಯಾಯೈ ಗೌರ್ಯೈ ಧಾತ್ರೈ ನಮೋ ನಮಃ |

ಜ್ಯೋತ್ಸ್ನಾಯೈ ಚೇಂದುರರೂಪಿಣ್ಯೈ ಸುಖಾಯೈ ಸತತಂ ನಮಃ ||

 

ಕಲ್ಯಾಣ್ಯೈ ಪ್ರಣತಾ ವೃದ್ಧ್ಯೈ ಸಿದ್ಧ್ಯೈ ಕುರ್ಮೋ ನಮೋ ನಮಃ |

ನೈಋತ್ಯೈ ಭೂಭೃತಾಂ ಲಕ್ಷ್ಮ್ಯೈ ಶರ್ವಾಣ್ಯೈ ತೇ ನಮೋ ನಮಃ ||

 

ಮಹಾದೇವಿಯೇ, ಶಿವೆಯೆ, ಪ್ರಕೃತಿಯೇ, ಭದ್ರೆಯೇ ನಿಯತ ಚಿತ್ತರಾಗಿ ನಿನಗೆ ಇದೋ ನಮಿಸುತ್ತೇವೆ.

ರೌದ್ರ ರೂಪಿಯಾದ ದೇವಿಯೇ, ಗೌರಿಯೇ , ನಿತ್ಯಳೇ, ಜಗದ್ಧಾತ್ರಿಯೇ, ಬೆಳದಿಂಗಳ ಹಾಗೂ ಚಂದ್ರನ

ರೂಪಿಯಾದ, ಸುಖರೂಪಳಾದ ದೇವಿಯೇ ನಿನಗಿದೋ ನಮಿಸುತ್ತೇವೆ.

ಕಲ್ಯಾಣಿಯೇ ದೇವಿ, ಐಶ್ವರ್ಯರೂಪಿಯೇ ತಾಯೇ, ಸಿದ್ಧಿರೂಪಳೇ, ಅದೃಷ್ಟವನ್ನು ವೃದ್ಧಿಸುವವಳೇ,

ಶರ್ವಾಣಿಯೇ  ನಿನಗೆ ಪುನ: ಪುನ: ನಮಿಸುತ್ತೇವೆ....

 

ನವರಾತ್ರಿಯ ಎರಡನೆಯ ದಿನದಂದು  ಅಮ್ಮನಿಗೆ ನಮಸ್ಕಾರಗಳು...

ದುರ್ಗಾಯೈ ದುರ್ಗಪಾರಾಯೈಸಾರಾಯೈ ಸರ್ವಕಾರಿಣ್ಯೈ |

ಖ್ಯಾತ್ಯೈ ತಥೈವ ಕೃಷ್ಣಾಯೈ ಧೂಮ್ರಾಯೈ ಸತತಂ ನಮಃ ||

 

ಅತಿಸೌಮ್ಯಾತಿರೌದ್ರಾಯೈ ನತಾಸ್ತಸ್ಯೈ ನಮೋ ನಮಃ|

ನಮೋ ಜಗತ್ಪ್ರತಿಷ್ಠಾಯೈ ದೇವ್ಯೈ ಕೃತ್ಯೈ ನಮೋ ನಮಃ ||

 

ಯಾ ದೇವೀ ಸರ್ವಭೂತೇಷು, ವಿಷ್ಣುಮಾಯೇತಿ ಶಬ್ದಿತಾ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

 

ಕಷ್ಟಗಳಿಂದ ಪಾರುಮಾಡುವ  ದುರ್ಗೇ, ಸಾರರೂಪಳೂ, ಸರ್ವಕಾರಿಣಿಯೂ,

ವಿವೇಕಖ್ಯಾತಿಯೂ, ಕೃಷ್ಣವರ್ಣಳೂ, ಧೂಮ್ರವರ್ಣಳೂ ಆದ ದೇವಿಯೇ... ಅತಿಸೌಮ್ಯಳೂ

ಅತಿರೌದ್ರಳೂ, ಜಗತ್ತಿನ ಆಧಾರಳೂ ಆದ ದೇವಿಯೇ...ಕೃತಿರೂಪಳೇ ತಾಯೇ

ನಿನಗಿದೋ ನಮಸ್ಕಾರಗಳು...


ನವರಾತ್ರಿಯ ಮೂರನೆಯ ದಿನ :

ಯಾ ದೇವಿ ಸರ್ವಭೂತೇಷು, ಚೇತನೇತ್ಯಭಿಧೀಯತೇ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

 

ಯಾದೇವೀ ಸರ್ವಭೂತೇಷು, ಬುದ್ಧಿರೂಪೇಣ ಸಂಸ್ಥಿತಾ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

 

ಯಾ ದೇವೀ ಸರ್ವಭೂತೇಷು, ನಿದ್ರಾರೂಪೇಣ ಸಂಸ್ಥಿತಾ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾವ ದೇವಿಯು ಸರ್ವ ಪ್ರಾಣಿಗಳಲ್ಲೂ ಪ್ರತಿ ಜೀವಿಯಲ್ಲೂ ಬುದ್ಧಿರೂಪಿಣಿಯಾಗಿಯೂ,

ನಿದ್ರಾ ರೂಪಿಣಿಯೂ ಆಗಿದ್ದು, ಚೈತನ್ಯವಾಗಿದ್ದುಕೊಂಡು ಚೇತನಾ ಎಂದು ಕರೆಯಲ್ಪಡುವಳೋ,

ಆ ದೇವಿಗೆ ನಾನು ಪುನ: ಪುನ: ನಮಸ್ಕರಿಸುತ್ತೇನೆ...

Comments