ಕನ್ನಡಿಗರಿಗೇಕೆ ಕೀಳೀರಿಮೆ/ ತಾತ್ಸಾರ / ನಿರಭಿಮಾನ‌

ಕನ್ನಡಿಗರಿಗೇಕೆ ಕೀಳೀರಿಮೆ/ ತಾತ್ಸಾರ / ನಿರಭಿಮಾನ‌

Comments

ಬರಹ

ಗೆಳೆಯರೆ,


ಮೊನ್ನೆ ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ಸರಣಿಗೆ ಭಾರತದ ತಂಡ ಪ್ರಕಟಿಸುವ ಸುದ್ದಿಯನ್ನು ಆಂಗ್ಲ ವಾಹಿನಿಯೊಂದರಲ್ಲಿ ವೀಕ್ಷಿಸುತ್ತಿದ್ದೆ. ತಂಡದ ಅಯ್ಕೆ ನಡೆದದ್ದು ಚೆನ್ನೈನಲ್ಲಿ. ಸಭೆಯ ನಂತರ ಹೊರಬಂದ ಕೆ.ಶ್ರೀಕಾಂತ್ ಮೊದಲು ಪ್ರಕಟಣೆಯನ್ನು ಕೊಟ್ಟಿದ್ದು ತಮಿಳಿನಲ್ಲಿ, ಅದು ನೇರಪ್ರಸಾರವಾದ್ದರಿಂದ ಆಂಗ್ಲವಾಹಿನಿಯು ಕೂಡ ಅದನ್ನ ಭಿತ್ತರಿಸಿತ್ತು. ಮೊದಲು ತಮಿಳು ಸುದ್ದಿಗಾರರಿಗೆ ತಮಿಳಿನಲ್ಲಿ ಪ್ರಕಟಣೆಯನ್ನ ಕೊಟ್ಟನಂತರ ಅಂಗ್ಲ ಭಾಷೆಯಲ್ಲಿ ಪ್ರಕಟಣೆಯನ್ನು ನೀಡಲಾಯಿತು. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ತಮಿಳಿನಲ್ಲಿ ಪ್ರಕಟಣೆಯನ್ನು ನೀಡುವಾಗ ಶ್ರೀಕಾಂತ್ ಮುಖದಲ್ಲಿದ್ದ ಹೆಮ್ಮೆ, ತಮಿಳನ್ನು ಬಿಂಬಿಸಲು ಅತ ಬಳಸಿಕೊಂಡ ರೀತಿ.  ಇದೇ ರೀತಿಯ ಹೆಮ್ಮೆ ಕನ್ನಡಿಗರಿಗೇಕೆ ಇಲ್ಲ? ಎಷ್ಟು ಭಾರಿ ನಮ್ಮ ಕುಂಬ್ಲೆ, ನಾರಾಯಣ ಮೂರ್ತಿ, ದೀಪಿಕ ಪಡುಕೋಣೆ ಮುಂತಾದವರು ರಾಷ್ಟ್ರೀಯ ವಾಹಿನಿಗಳ ಮುಂದೆ ಕನ್ನಡ ಮಾತನಾಡಿದ್ದಾರೆ? ಈ ಕೀಳೀರಿಮೆ ಬರಿ ಗಣ್ಯರಿಗೆ ಮಾತ್ರವಲ್ಲ ಬಹುಷಃ ಎಲ್ಲ ಕನ್ನಡಿಗರಿಗೂ ಇದೆ. ಏಕೆ ನಮಗೆ ನಮ್ಮ ಭಾಷೆಯಮೇಲೆ ಅಭಿಮಾನ ಇಲ್ಲ?  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet