ಕರೆದರೆ ಬರಲಾರೆ ಏಕೆ ನೀನು

ಕರೆದರೆ ಬರಲಾರೆ ಏಕೆ ನೀನು

Comments

ಬರಹ

ಇಂದು ಸಂಜೆ ಸರಿ ಸುಮಾರು ಏಳುಗಂಟೆ ಹೊತ್ತಿಗೆ ನಮ್ಮೂರಿನಿಂದ ಬೆಂಗಳೂರಿನ ಸೆಟಲೈಟ್  ಬಸ್ ನಿಲ್ದಾಣಕ್ಕೆ ನಾನು ನಮ್ಮಮ್ಮ ಬಂದಿಳಿದೆವು. ಅಲ್ಲಿಂದ ನಾವು ಉಳಿದುಕೊಂಡಿರುವ ಬಡಾವಣೆಗೆ ಡೈರೆಕ್ಟ್ ಬಸ್ಸಿನ ವ್ಯವಸ್ತೆ ಇಲ್ಲದ ಕಾರಣ ನಾವಾಗ ಆಟೋಗೆ ಮೊರೆ ಹೋಗಬೇಕಾಯಿತು.
ನನಗೆ ಗೊತ್ತಿರುವ ಮಟ್ಟಿಗೆ ಅಲ್ಲಿ ಪ್ರೀಪೇಡ್ ಆಟೋ ವ್ಯವಸ್ತೆ ಇಲ್ಲ. ಅದೊಂದೆಡೆ ಇರಲಿ...

ನಿಲ್ದಾಣದಿಂದ ಹೊರಬಂದೆವು. ರಸ್ತೆಯ ಬದಿಯಲ್ಲಿ ಮತ್ತಸ್ಟು(ವಯಸ್ಸಾದ) ಪ್ರಯಾಣಿಕರು ನಿಂತಿತರುವುದು ನಮಗೆ ಗೋಚರಿಸಿತು. ನಾವು ಅಲ್ಲಿ ಸ್ವಲ್ಪವೇ ನಿಂತಿದ್ದ ಆಟೋದವರ ಬಳಿ ಕೇಳಿದಾಗ ಮೊದಲನೆಯವನು ನಿಗದಿ ಪಡಿಸಿದ ದರ ೧೫೦% ಹೆಚ್ಚಿಗೆ ಇತ್ತು!, ಮತ್ತೆ ಕೆಲವರು ಬರುವುದಿಲ್ಲವೆಂದರು, ಇನ್ನೊಬ್ಬ ೧೦೦% ಹೆಚ್ಚಿಗೆ ಹೇಳಿದ.

ಸರಿ ಇವರ ಸವಾಸ ಬೇಡ, ಸ್ವಲ್ಪ ದೂರ ನಡೆದು ಹೋಗಿ ಮುಂದೆ ನೋಡೋಣವೆಂದುಕೊಂಡು ನಡೆಯಲು ಪ್ರಾರಂಬಿಸಿದೆವು. ನಾನೊಬ್ಬನೇ ಇದ್ದಿದ್ದರೆ ಪೂರ್ತಿ ನಡೆದೇ ಕ್ರಮಿಸುತ್ತಿದೆ. ಅಮ್ಮನಿಗೆ ನಡೆಯಲು ಸಾದ್ಯವಾಗದ ಕಾರಣ ದಾರಿಯಲ್ಲಿ ಹೋಗಿಬರುವ ಆಟೋಗಳನ್ನು ಕೇಳುತ್ತಿದ್ದೆವು. ಒಬ್ಬನಾದರೂ ಬರಲಿಲ್ಲ...

ಸ್ವಲ್ಪ ಮುಂದೆ ಹೋದಾಗ ಸುಮಾರು ಹದಿನೈದಿಪ್ಪತ್ತು ಖಾಲಿ ಆಟೋಗಳು  ಸಾಲಾಗಿನಿಂತಿದ್ದವು. ಆದರೆ ಚಾಲಕರು ಮಾತ್ರ ಇರಲಿಲ್ಲ...!
ಎದುರಿಗೆ ತೀರ್ಥಕ್ಷೇತ್ರವಿತ್ತು... ಸರಿ ಇಲ್ಲೂ ಸಿಗುವುದಿಲ್ಲವೆಂದುಕೊಂಡು ಮತ್ತೆ ಮುಂದೆ ಸಾಗಿದೆವು.

ತಕ್ಕಮಟ್ಟಿಗೆ ಮುಖ್ಯರಸ್ತೆ ಎಂದು ಹೇಳಬಹುದಾದ ರಸ್ತೆಯ ವೃತ್ತ ತಲುಪಿದೆವು. ಅಲ್ಲಿ ನಿಂತು ಹೋಗೋ ಬರೋ ಆಟೋಗಳಿಗೆಲ್ಲಾ ಕೈ ನೀಡಿದ್ದೇ ನೀಡಿದ್ದು ಕೆಲವರು ಉತ್ತರ ನೀಡದೆ ಹಾಗೆಯೇ ಹೊರಟು ಹೋದರು. ಮತ್ತೆ ಕೆಲವರು ಎಲ್ಲಿಗೆಂದು ಕೇಳಿ ತಲೆ ಅಲ್ಲಾಡಿಸಿ ಹಾಗೆಯೇ ಹೊರಟು ಹೋದರು... ನನ್ ಮಕ್ಳು ಒಬ್ರಾದ್ರೂ ನಿಲ್ಲಿಸ್ಬಾರ್ದಾ.... ಸಮಯ ೭:೩೦ ದಾಟುತ್ತಾಬಂತು.
ಬರದೇ ಹೋದವರು, ಹೆಚ್ಚಿಗೆ ಕೇಳಿದವರನ್ನೆಲ್ಲಾ ಒಟ್ಟಿಗೆ ಆಟೋಗಳಲ್ಲಿ ಕಟ್ಟಿಹಾಕಿ ಸುಟ್ಟಿಹಾಕಬೇಕು ಎನ್ನುವಸ್ಟು ಕೋಪಬಂದಿತ್ತು.

ಇದನ್ನು ಹೋಲುವಂತಹ ಸನ್ನಿವೇಷವನ್ನು ಬಹಳಸ್ಟುಮಂದಿ ಅನುಭವಿಸಿಯೇ ಇರುತ್ತಾರೆಂದು ನನ್ನ ಅನಿಸಿಕೆ.

ಇದಕ್ಕೆ ಪರಿಹಾರವೇನು...?
* ಕರೆದೆಡೆ ಬರದಿರುವ ಆಟೋಗಳ ಪರವಾನಗಿ ರದ್ದು ಪಡಿಸುವುದಾ....?
* ಕೆಲವು ಆಟೋದವರು, ನಮ್ಮ ಸಮಯ ಮುಗಿದಿದೆ ಮನೆಗೆ ತೆರಳುತ್ತಿದ್ದೇವೆ ಎಂದೂ ಹೇಳುತ್ತಾರೆ. ಹಾಗಿದ್ದರೆ ಆಟೋ ಚಾಲನಾ ಸಮಯವನ್ನು ನಿಗದಿ ಪಡಿಸಿ, ಸಮಯ ಮೀರಿ ಓಡಿಸುವ ಆಟೋಗಳಿಗೆ ದಂಡ ವಿಧಿಸುವುದಾ...?
* ಬಸ್ ನಿಲ್ದಾಣಗಳಿಗುವಂತೆ ಪ್ರೀಪೇಡ್ ಆಟೋ ನಿಲ್ದಾಣವನ್ನು ಖಡ್ಡಾಯವಾಗಿ ನಿರ್ಮಿಸುವುದಾ...?
* ದೂರವಾಣಿ ಕರೆ / ಮೆಸೇಜ್  ಮೂಲಕಹತ್ತಿರದ ಆಟೋನಿಲ್ದಾಣಗಳಿಂದ ಆಟೋಗಳನ್ನು ಕರೆಸಿ ಕೊಳ್ಲುವ ವ್ಯವಸ್ತೆ ಕಲ್ಪಿಸುವುದಾ...?
* ಸಾರ್ವಜನಿಕರ ಉಪಯೋಗಕ್ಕೆ ಬಾರದಿರುವ ಆಟೋಗಳ ಸಂಖ್ಯೆಗಳನ್ನು ಕಳೆದಬಾರಿ ೪೦,೦೦೦ ಕ್ಕೆ ಹೆಚ್ಚಿಸಿದಂತೆ ಮತ್ತೆ ಮತ್ತೆ ಹೆಚಿಸಿ ವಾಹನ ದಟ್ಟಣೆಯನ್ನು ಅಭಿವೃದ್ದಿ ಪಡಿಸುವುದಾ...?

ಅನಿಸಿಕೆಗಳಿಗಿಂತ ಪರಿಹಾರವಿದ್ದರೆ ದಯವಿಟ್ಟು ತಿಳಿಸಿ.....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet