ಆತ್ಮೀಯರೇ ಮತ್ತೊಮ್ಮೆ ಆಘಾತ

ಆತ್ಮೀಯರೇ ಮತ್ತೊಮ್ಮೆ ಆಘಾತ

Comments

ಬರಹ

ಕಳೆದ ಒಂದು ವರ್ಷದಲ್ಲಿ ಇದು ಐದನೇ ಬಾರಿ ಆಘಾತ. ಏನೆಂದು ಆಲೋಚಿಸುತ್ತಿದ್ದೀರಾ. ಹೌದು ಇಂದಿನಿಂದ ಮತ್ತೆ ಪೆಟ್ರೋಲ್ ಬೆಲೆ ೧.೮೨ ಜಾಸ್ತಿ ಆಗುತ್ತಿದೆ. ಅಂದರೆ ಇಂದಿನಿಂದ ಪೆಟ್ರೋಲ್ ಬೆಲೆ ೭೬.೬೪. ಕಳೆದ ವರ್ಷದಿಂದ ಸುಮಾರು ಹನ್ನೆರಡು ರೂಪಾಯಿಗಳಷ್ಟು ಜಾಸ್ತಿ ಆಗಿದೆ. ಅಸಲಿಗೆ ಏನಾಗುತ್ತಿದೆ. ಮಾತೆತ್ತಿದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಜಾಸ್ತಿ ಆಗಿದೆ ಹಾಗಾಗಿ ಜಾಸ್ತಿ ಮಾಡಬೇಕು ಎನ್ನುತ್ತಿದ್ದಾರೆ.
ಸರ್ಕಾರದ ಕೈಯಲ್ಲಿ ಬೆಲೆ ನಿರ್ಧರಿಸುವ ಅಧಿಕಾರ ಇದ್ದಾಗ ಈ ರೀತಿ ಆಗದಿದ್ದ ಅಂತರಾಷ್ಟ್ರೀಯ ಮಾರುಕಟ್ಟೆ ಬೆಲೆ ತೈಲ ಕಂಪನಿಗಳಿಗೆ ಬೆಲೆ ನಿರ್ಧರಿಸುವ ಅಧಿಕಾರ ಕೊಟ್ಟ ಮೇಲೆ ಈ ರೀತಿ ಆಗುತ್ತಿರುವುದರ ಹಿಂದೆ ಇರುವ ಮರ್ಮ ಏನು?
ಇದರ ವಿರುದ್ಧ ದನಿ ಎತ್ತುವವರು ಯಾರು ಇಲ್ಲವೇ?
ಐಶ್ವರ್ಯ ರೈಗೆ ಯಾವ ಮಗು ಆಗುತ್ತದೆ ಎಂದು ಬೆಟ್ಟಿಂಗ್ ಕಟ್ಟುವ ಜನ, ರಜನಿಕಾಂತ್ ಯಾವಾಗ ಆಸ್ಪತ್ರೆಯಿಂದ ಹೊರಬರುತ್ತಾರೆ ಎಂದು ಪರದಾಡುವ ಜನ ಇಂಥಹ ವಿಷಯದ ಬಗ್ಗೆ ಎಂದು ಎಚ್ಚೆತ್ತುಕೊಳ್ಳುತ್ತಾರೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet