ಕನ್ನಡ - ಒಂದು ಆತ್ಮಾವಲೋಕನ

ಕನ್ನಡ - ಒಂದು ಆತ್ಮಾವಲೋಕನ

Comments

ಬರಹ

 


ಇಂಟರ್ನೆಟ್ ಪ್ರಪಂಚದಲ್ಲಿ ಸಂಪದ ಕನ್ನಡಕ್ಕೆ ಸಲ್ಲಿಸುತ್ತಿರುವ ಸೇವೆ ಬೆಲೆ ಕಟ್ಟಲಾಗದ್ದು. ಇದರಲ್ಲಿ ಚರ್ಚೆಗೆ ಬಾರದ ವಿಷಯಗಳೇ ಇಲ್ಲ...........ಹೌದೇ? .....ಇಲ್ಲ, ಒಂದು ವಿಷಯದ ಬಗ್ಗೆ ಇಲ್ಲಿ ಅಂತ ಚಟುವಟಿಕೆ ನಡೆದೇ ಇಲ್ಲ. ಯಾವುದದು?..

ಕನ್ನಡ ಭಾಷೆಯನ್ನು ಉಳಿಸುವುದು, ಬೆಳೆಸುವುದು ಇವುಗಳ ಬಗ್ಗೆ ಎಷ್ಟೋ ವೇಳೆ ಪ್ರಾಮಾಣಿಕ ಕಳಕಳಿಯನ್ನು ಸಂಪದದಲ್ಲಿನ ಬಹಳಷ್ಟು ಚಟುವಟಿಕೆಗಳಲ್ಲಿ, ಪ್ರತಿಕ್ರಿಯೆಗಳಲ್ಲಿ ಕಾಣಬಹುದು. ಆದರೆ ಈ ಕಳಕಳಿ ಬಹುತೇಕ ನಿರುಪಯೋಗಿ ಎಂದು ನನಗೆ ಅನ್ನಿಸುತ್ತದೆ. ಕನ್ನಡಕ್ಕಾಗಿ ಅದು ಮಾಡಬೇಕು, ಇದು ಮಾಡಬೇಕು, ಕನ್ನಡದ ಅನ್ನ, ಮಣ್ಣು, ನೆಲ, ನೀರು ಎಂದೆಲ್ಲ ಭಾಷಣ ಬಿಗಿಯುತ್ತೇವೆ. ಕನ್ನಡ ಮಾಧ್ಯಮದಶಾಲೆಗಳ ಅಗತ್ಯದ ಬಗ್ಗೆ ಪುಟಗಟ್ಟಳೆ ಬರೆಯುತ್ತೇವೆ. ಆದರೆ ವೈಯುಕ್ತಿಕವಾಗಿ ನಾವು ಎಷ್ಟರ ಮಟ್ಟಿಗೆ ಕನ್ನಡಕ್ಕಾಗಿ ಮಿಡಿಯುತ್ತೇವೆ? ಇದು ಕಷ್ಟಕರವಾದ, ಸಂಪದದಂತಹ ಮುಕ್ತ ತಾಣದಲ್ಲಿ ಬಹಿರಂಗವಾಗಿ ಹೇಳಿಕೊಳ್ಳಲು ಇರುಸು ಮುರುಸಾಗುವ ಪ್ರಶ್ನೆ ಇರಬಹುದು. ಆದರೆ ಅಂತಹ ಒಂದು ಅತ್ಮಾವಲೋಕನ ಇಲ್ಲಿ ನಡೆಯಬೇಕಲ್ಲವೇ? ಹಾಗಾದರೆ ಇದೊಂದು ಅಪ್ರಿಯವಾದ ಕೆಲಸವಾದರೂ ಶುರು ಮಾಡಿಯೆಬಿಡೋಣ!

ಉದ್ದೇಶ: ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೂವುದು


) ಕನ್ನಡದ ವಿಷಯದಲ್ಲಿ ನಾವು ಸರಿಯಿದ್ದೇವೆಯೇ?

) ಕನ್ನಡದ ಇಂದಿನ ಸ್ಥಿತಿಗೆ (ಅದು ಹೇಗೇ ಇರಲಿ) ನಮ್ಮ ಕೊಡುಗೆ ಇದೆಯೇ?

) ಒಂದು ವೇಳೆ ನಮ್ಮ ತಪ್ಪಿದ್ದಲ್ಲಿ ನಾವು ವ್ಯವಸ್ಥೆಯನ್ನು ದೂರಬಹುದೇ?

ಉದ್ದೇಶವಲ್ಲದ್ದು:

) ಇದು ಯವೊಬ್ಬ ವ್ಯಕ್ತಿಯನ್ನು ಅಳೆಯುವುದಕ್ಕಲ್ಲ.

) ಇದು ಯಾವೊಬ್ಬ ವ್ಯಕ್ತಿಯನ್ನು ಹಳಿಯುವುದಕ್ಕೂ ಅಲ್ಲ.

) ಕನ್ನಡಕ್ಕೆ ನಮ್ಮದೇನಾದರೂ ಧನಾತ್ಮಕ ಕೊಡುಗೆ ಇದ್ದರೆ ನಾವು ಮಿಕ್ಕವರಿಗಿಂತ (ಈ ವಿಷಯದಲ್ಲಿ) ದೊಡ್ಡವರೆಂದು ಬೀಗುವುದಕ್ಕೂ ಅಲ್ಲ.

ಕನ್ನಡ - ಒಂದು ಆತ್ಮಾವಲೋಕನ


೧. ಇಲ್ಲಿ ಕೆಳಗೆ ಹತ್ತು ಪ್ರಶ್ನೆಗಳಿವೆ ಮತ್ತು ಅವಕ್ಕೆ ಒಂದಕ್ಕಿಂತ ಹೆಚ್ಚು (, , ಕ ಮತ್ತು ಡ) ಉತ್ತರಗಳಿವೆ. ಉತ್ತರಿಸಲು ಪ್ರಶ್ನೆಯ ಸಂಖ್ಯೆ ಮತ್ತು ಉತ್ತರದ ಆಯ್ಕೆ ಇವಿಷ್ಟು ಕೊಟ್ಟರೆ ಸಾಕು. ಉದಾಹರಣೆಗೆ:ನಿಮ್ಮ ಉತ್ತರ ಹೀಗಿದ್ದರೆ ಸಾಕು - ) .

೨. ಈ ಹತ್ತೂ ಪ್ರಶ್ನೆಗಳಿಗೆ ಉತ್ತರಿಸುವವರು ಮಾತ್ರ ಈ ಕ್ರಿಯೆಯಲ್ಲಿ ಭಾಗವಹಿಸಬಹುದು.

೩. ಪ್ರಶ್ನೆಗಳಿಗೆ ಉತ್ತರಿಸುವುದಕ್ಕೆ ಆತ್ಮ ಸಾಕ್ಷಿ ಎನ್ನುವುದೊಂದಿದ್ದರೆ ಸಾಕು. ಸಂಪದಕ್ಕೆ ಕಾಲಿಡುವ ಪ್ರತಿಯೊಬ್ಬರೂ ನೀವು ಕೊಟ್ಟ ಉತ್ತರಗಳನ್ನು ಓದುತ್ತೇವೆ ಮತ್ತು ಅವು ನಿಸ್ಸಂದೇಹವಾಗಿ ಪ್ರಾಮಾಣಿಕವಾಗಿವೆ ಎಂದು ನಂಬಬಹುದು.


೪.ಈ ಚಟುವಟಿಕೆಯ ಫಲಿತಾಂಶಗಳನ್ನು ಸಂಪದದ ಓದುಗರೇ ಅರ್ಥೈಸಿಕೊಳ್ಳಬೇಕು.

೫. ಇಷ್ಟವಿಲ್ಲದಿದ್ದರೆ ಅದು ನಿಮ್ಮ ಆಯ್ಕೆ. ಬೇರೆ ಯಾವ ರೀತಿಯ ಪ್ರತಿಕ್ರಿಯೆಗಳೂ ಅತಿಜಾಣತನದ ಉತ್ತರಗಳೂ ಇಲ್ಲಿ ಅವಶ್ಯವಿಲ್ಲ. ಏಕೆಂದರೆ ಇಲ್ಲಿನ ಉದ್ದೇಶ ಸರಳವಾದದ್ದು.


ಪ್ರಶ್ನೆಗಳು:


) ೧ರಿಂದ ೭ನೇ ತರಗತಿಯವರೆಗಿನ ನಿಮ್ಮ ವಿದ್ಯಾಭ್ಯಾಸ ಕನ್ನಡವಾಗಿತ್ತು.

) ಹೌದು ಬ) ಇಲ್ಲ.

) ೮ರಿಂದ ೧೦ನೇ ತರಗತಿಯವರೆಗಿನ ನಿಮ್ಮ ವಿದ್ಯಾಭ್ಯಾಸ ಕನ್ನಡವಾಗಿತ್ತು.

) ಹೌದು ಬ) ಇಲ್ಲ. ) ನೀವಿರುವಲ್ಲಿ ಕನ್ನಡ ಶಾಲೆಗಳಿಲ್ಲ ಸಿಗುವುದಿಲ್ಲ. ) ನಿಮ್ಮ ಉದ್ಯೋಗ ಕರ್ನಾಟಕದಿಂದಾಚೆಗೂ ವರ್ಗಾವಣೆಗಳಿರುವಂತಹದ್ದು.

) ನಿಮ್ಮ ಮಕ್ಕಳ ೧ರಿಂದ ೧೦ನೇ ತರಗತಿಯವರೆಗಿನ ವಿದ್ಯಾಭ್ಯಾಸ ಕನ್ನಡದಲ್ಲಿತ್ತೇ? (ನಡೆಯುತ್ತಿದೆಯೇ?)

) ಹೌದು ಬ) ಇಲ್ಲ.

) ನಿಮ್ಮ ಮನೆಯಲ್ಲಿ ನೀವು ಕನ್ನಡ ಪ್ರಮುಖವಾಗಿ ತರಿಸುವ ದಿನ ಪತ್ರಿಕೆ ಕನ್ನಡವೇ? (ಸೂ: ಬೇರೆ ಯಾವ ಪತ್ರಿಕೆಯೂ ತರಿಸದಿದ್ದಲ್ಲಿ ಕನ್ನಡದ ಸಂಜೆ ಪತ್ರಿಕೆಗಳೂ, ಟ್ಯಾಬ್ಲಾಯ್ಡ್ ಗಳನ್ನು ಗಣನೆಗೆ ತಂದುಕೊಳ್ಳಬಹುದು; ಆದರೆ ಉದಾಹರಣೆಗೆ ನೀವು ಡೆಕ್ಕನ್ ಹೆರಾಲ್ಡ್ ಮತ್ತು ಹಾಯ್ ಬೆಂಗಳೂರು ತರಿಸುತ್ತಿದ್ದರೆ ನಿಮ್ಮ ಉತ್ತರ ೪) ಬ ಎಂದೇ ಆಗಬೇಕು.

) ಹೌದು ಬ) ಇಲ್ಲ.) ನೀವು ವಿದೇಶದಲ್ಲಿದ್ದೀರ ಡ) ಭಾರತದಲ್ಲಿ ನೀವಿರುವಲ್ಲಿ ಕನ್ನಡ ಪತ್ರಿಕೆ ಸಿಗುವುದಿಲ್ಲ.

) ನೀವು ಮನೆಯಲ್ಲಿ ಕೊಂಡುತಂದು ಅಥವಾ ಎರವಲಾಗಿ ತಂದು ಓದುವ ನಿಯತಕಾಲಿಕ(ಮ್ಯಾಗಝೀನ್)ಗಳ ಸಂಖ್ಯೆ ಎಷ್ಟು?

) ಕನ್ನಡ --- ) ಆಂಗ್ಲ --- (ಸಂಕ್ಯೆಗಳನ್ನು ತುಂಬಿದರೆ ಸಾಕು) ) ನೀವು ವಿದೇಶದಲ್ಲಿದ್ದೀರ ಡ) ಭಾರತದಲ್ಲಿ ನೀವಿರುವಲ್ಲಿ ಕನ್ನಡ ನಿಯತಕಾಲಿಕ ಸಿಗುವುದಿಲ್ಲ.

)ಮನೆಯಲ್ಲಿ ನೀವು ಮಿಕ್ಕೆಲ್ಲಾ ಸದಸ್ಯರೊಂದಿಗೆ ಮಾತನಾಡುವ ಭಾಷೆಯಲ್ಲಿ ಕನ್ನಡದ ಉಪಯೋಗವೆಷ್ಟು(ಸೂಚ್ಯವಾಗಿ - ಪ್ರತಿಶತದಲ್ಲಿ) ?

) ೧೦೦-೯೦ ಬ) ೮೦-೭೦ ಕ) ೬೦-೫೦ ಡ) ೪೦-೩೦


) ಮನೆಯಲ್ಲಿ ನಿಮ್ಮ ಮಕ್ಕಳು (ಇದ್ದರೆ) ಸಂಬಂಧ-ಸೂಚಕ ಪದಗಳಾಗಿ ಇವನ್ನು ಉಪಯೋಗಿಸುತ್ತಾರೆ?

) ಅಮ್ಮ-ಅಪ್ಪ-ಅತ್ತೆ- ಮಾವ-ಚಿಕ್ಕಪ್ಪ- ಇತ್ಯಾದಿ) ) ಮಮ್ಮಿ-ಡ್ಯಾಡಿ-ಆಂಟಿ-ಅಂಕಲ್ (ಮತ್ತು ಇವುಗಳ ಬಹುರೂಪಗಳು) ) ನಿಮಗೆ ಅನ್ವಯಿಸುವುದಿಲ್ಲ.

) ನೀವು ಒಂದು ವರ್ಷದಲ್ಲಿ ನೋಡುವ ಸಿನಿಮಾದಲ್ಲಿ ಕನ್ನಡದ ಸಂಖ್ಯೆ ಎಷ್ಟು (ಸೂಚ್ಯವಾಗಿ - ಪ್ರತಿಶತದಲ್ಲಿ) ?

) ೧೦೦-೯೦ ಬ) ೮೦-೭೦ ಕ) ೬೦-೫೦ ಡ) ನೀವಿರುವಲ್ಲಿ ಕನ್ನಡ ಸಿನಿಮಾಗಳ ಸಿ.ಡಿ ಗಳೂ ಸಿಗುವುದಿಲ್ಲ.

) ಮನಸ್ಸಿನಲ್ಲಿ ನೀವು ಸಾಮಾನ್ಯ ವಿಷಯಗಳನ್ನು (ಅಂದರೆ ವಿದ್ಯಾಭ್ಯಾಸದ ವಿಷಯಗಳನ್ನು ಹೊರತುಪಡಿಸಿ) ಯೋಚಿಸುವ ಭಾಷೆ ಕನ್ನಡ.

) ಹೌದು ಬ) ಇಲ್ಲ. ) ಗೊತ್ತಿಲ್ಲ


೧೦) ಇದು ಕಾಲ್ಪನಿಕ ಪ್ರಶ್ನೆ - ನೀವಿರುವಲ್ಲಿ ೧ರಿಂದ ೧೦ನೇ ತರಗತಿವರೆಗಿನ ಒಂದು ಕನ್ನಡ ಮತ್ತು ಒಂದು ಇಂಗ್ಲಿಷ್ ಮಾಧ್ಯಮದ ಸಮನಾಗಿ ಉತ್ತಮ ಮಟ್ಟದ ಅನುದಾನರಹಿತ (ಹಾಗಾಗಿ ಹೆಚ್ಚು ಖರ್ಚಿನ) ಶಾಲೆಗಳಿವೆ. ನಿಮಗೆ ಆ ಖರ್ಚನ್ನು ಭರಿಸುವ ಶಕ್ತಿಯಿದ್ದಲ್ಲಿ ನೀವು ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದ ಶಾಲೆಗೆ ಸೇರಿಸುತ್ತೀರಾ? (ಮಿಕ್ಕೆಲ್ಲಾ ವಿಷಯಗಳು ಅಂದರೆ ನಿಮ್ಮ ಕೆಲಸಲ್ಲಿನ ವರ್ಗಾವಣೆ, ನಿಮ್ಮ ವಾಸಸ್ಥಳಾಂತರ ಇವೆಲ್ಲವೂ ಸೊನ್ನೆ ಎಂದು ಪರಿಗಣಿಸಿ...)

) ಹೌದು ಬ) ಇಲ್ಲ ಕ) ಯೋಚಿಸುತ್ತೀರ.ಸೂಚನೆ: ಇದೊಂದು ಸಮೀಕ್ಷೆ ಎಂದು ಪರಿಗಣಿಸಿದರೆ ಅಥವಾ ಇದು ಸಂಪದದ ನೀತಿಸಂಹಿತೆಗೆ ವಿರುದ್ಧವಾಗಿ ಕಂಡುಬಂದರೆ ಅಥವಾ ಇದೊಂದು ನಿರರ್ಥಕ / ಬಾಲಿಶ ಚಟುವಟಿಕೆ ಎಂದು ಎನಿಸಿದಲ್ಲಿ ಇದನ್ನು ಪ್ರಕಟಣೆಯಿಂದ ತೆಗೆದುಹಾಕಲು ಸೂಚಿಸಬಹುದು.)

೧೦ ಪ್ರಶ್ನೆಗಳಿಗೆ ನನ್ನ ಉತ್ತರ


) , ) , ) , ) , ) , ) , ) , ) , ) ಅ ಮತ್ತು ೧೦) .ಕೇಶವ ಮೈಸೂರು


-



(






























‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet