ಧಾರೆ ಎರೆಯಬೇಕಾದವರು ಯಾರು?

ಧಾರೆ ಎರೆಯಬೇಕಾದವರು ಯಾರು?

Comments

ಬರಹ

ನನಗೆ ಬಹಳ ದಿನಗಳಿಂದ ಒಂದು ವಿಷಯ ಕೊರೆಯುತ್ತಿದೆ. ಇತ್ತೀಚಿಗೆ ಒಂದು ಮದುವೆಗೆ ಹೋಗಿದ್ದಾಗ ಈ ಹುಳ ಮತ್ತೆ ಕೊರೆಯಲು ಶುರು ಮಾಡಿದೆ. ಸಹಜವಾಗಿ ಮದುವೆಯಲ್ಲಿ ಹೆಣ್ಣನ್ನು ಧಾರೆ ಎರೆದುಕೊಡುವುದು ಹುಡುಗಿಯ ಅಪ್ಪ ಅಮ್ಮ, ಬಿಟ್ಟರೆ ಅವರ ಮನೆ ಹಿರಿಯರು ಮಾತ್ರ. ನನ್ನ ಮದುವೆಯೂ ಹಾಗೆಯೇ ಆಗಿದ್ದು. ಆದರೆ ಸುಮಾರು ಮದುವೆಗಳಲ್ಲಿ ನೋಡಿದ್ದೇನೆ ಹುಡುಗಿಯ ಅಪ್ಪ ಅಮ್ಮ ಆದ ಮೇಲೆ ಹುಡುಗ ಹುಡುಗಿಯನ್ನು ಕುರ್ಚಿಗಳ ಮೇಲೆ ಕೂರಿಸಿ ಮದುವೆಗೆ ಬಂದವರ ಎಲ್ಲರ ಕೈಯಲ್ಲೂ ಧಾರೆ ಎರೆಸುತ್ತಾರೆ. ಚಿಕ್ಕ ಮಕ್ಕಳಿಂದ ಹಿಡಿದೂ ಎಲ್ಲರೂ ಬಂದು ಧಾರೆ ಎರೆದು ವಧೂ ವರರಿಗೆ ಅಕ್ಷತೆಯನ್ನು ಹಾಕುತ್ತಾರೆ.


ಇದರ ಹಿಂದಿರುವ ಕಾರಣ ಏನೆಂದು ಬಲ್ಲವರು ತಿಳಿಸುತ್ತೀರಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet