...ಮುಚ್ಚುವ ಮನಸ್ಥಿತಿಗೆ ಅಚ್ಚರಿ ಬೇಕಿಲ್ಲ!

...ಮುಚ್ಚುವ ಮನಸ್ಥಿತಿಗೆ ಅಚ್ಚರಿ ಬೇಕಿಲ್ಲ!

ಬರಹ

 ರಾಜ್ಯ ಸರಕಾರ, ಕರ್ನಾಟಕ ಲೋಕಪಾಲ ವ್ಯವಸ್ಥೆಯನ್ನು ಇತಿಶ್ರೀಗೊಳಿಸುವ ಹುನ್ನಾರ ನಡೆಸಿದೆ ಎಂದು ಪುಕಾರು. ಮುಚ್ಚಲಿ! ಅದರಿಂದಾಗುವ ವಿಶೇಷ ಹಾನಿಯಾದರೂ ಏನು?
 ಪ್ರಸ್ತುತದ ದೇಶವ್ಯಾಪೀ ರಾಜಕೀಯ ಸಂದರ್ಭದಲ್ಲಿ, ಲೊಕಾಯುಕ್ತವಾಗಲೀ, ಲೋಕಪಾಲವಗಲೀ ಕಿಸಿಯುವುದು ಏನೂ ಇಲ್ಲ. ಸನ್ಮಾನ್ಯ ನ್ಯಾಯಾಂಗದ Procedural ಸಂಕೀರ್ಣತೆಯ ದುರ್ಲಾಭಪಡೆಯುವ ಕಲೆಯೂ ನಮ್ಮ ರಾಜಕಾರಣಿಗಳಿಗೆ ಕರತಲಾಮಲಕ. ಅಂಥದರಲ್ಲಿ ಅಳುವುದಕ್ಕೇನುಳಿದಿರುತ್ತದೆ?!
 ಸ್ವಘೋಷಿತ ಸಮಾಜಸೇವಕರೆಂಬ ನಿರುತ್ಪಾದಕ, ಅಪ್ರಯೋಜಕ ರಾಜಕೀಯ ನರಿಗಳು (ಅದರ Cousinಗಳು ಎನ್ನಿ, ಬೇಕಾದರೆ!) ಸಾರ್ವಜನಿಕ ಜೀವನ ಕ್ಷೇತ್ರವನ್ನೇ ಒಟ್ಟಾಗಿ ಒತ್ತೆ ಹಿಡಿದಿರುವ ತುಂಬು ಪ್ರವಾಹದ ಈ ಸಂದರ್ಭದಲ್ಲಿ, ಭ್ರಷ್ಟಾಚಾರರಹಿತ ನಡುಗಡ್ಡೆಗಳನ್ನು ಹುಡುಕುವುದರೂ ಎಲ್ಲಿ? ಲೋಕಾಯುಕ್ತವಾಗಲೀ, ನ್ಯಾಯಾಂಗವಾಗಲೀ, ಕಾನೂನು ಪರಿಪಾಲನೆಯ ಮೇಲೆ ಕಣ್ಣಿಡುವ ವ್ಯವಸ್ಥೆ. ಆದರೆ ನೆಲದಲ್ಲಿ ಕಾನೂನು ಎನ್ನುವುದು ಇದ್ದರೆ ತಾನೇ ಅದನ್ನು ಪರಿಪಾಲಿಸುವುದು?! ನಮ್ಮ ಚುನಾವಣಾ ವ್ಯವಸ್ಥೆಯೇ ಭ್ರಷ್ಟ; ಭ್ರಷ್ಟತೆಯ ಪೈಪೋಟಿಯಲ್ಲಿ ಗೆಲ್ಲುವ ಭ್ರಷ್ಟಾತಿಭ್ರಷ್ಟರಿಗೇ ಕಾನೂನು ಕೈವಶವಾಗುತ್ತದೆ! ಪ್ರವಾಹದ ವಿರುದ್ಧ ಈಜುವ ಕೆಚ್ಚು - Sportive spirit - ಒಬ್ಬಿಬ್ಬರಿಗಿರಬಹುದಾದರೂ ಇಡೀ ನ್ಯಾಯಾಂಗ-ಕಾರ‍್ಯಾಂಗಗಳು ಆ Risk ಏಕೆ ತೆಗೆದುಕೊಂಡಾವು?
 ಭ್ರಷ್ಟಾಚಾರದ ವಿರುದ್ಧ ಅಣ್ಣಾ ಮಾದರಿ ಚಳುವಳಿಗಳು ಬೇಕಾಗಿಲ್ಲ, ಪ್ರಜಾಪ್ರತಿನಿಧಿ ಕಾಯ್ದೆಯ ಒಂದೇ ಒಂದು ತಿದ್ದುಪಡಿಗಾಗಿ ಅದಾದರೆ ಸಾಕು. ಚುನಾಯಿತ ಸದನಗಳು ಶೇ. 50+ ಮತದಾರರನ್ನು ಕಡ್ಡಾಯವಾಗಿ ಪ್ರತಿನಿಧಿವಂತಾದರೆ ಯಾವ ರಾಜಕೀಯ ದುರಂತವೂ ಇಲ್ಲವಾಗುತ್ತದೆ. ಅಂತಹ ಮುಕ್ತಿ ನಮ್ಮ ಪ್ರಜಾಪ್ರಭುತ್ವದ ಹಣೆಯಲ್ಲಿ ಬರೆದಿರಬೇಕಲ್ಲಾ?!      
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet