ಮಧ್ಯಮ ನಿಯಂತ್ರಣ

ಮಧ್ಯಮ ನಿಯಂತ್ರಣ

Comments

ಬರಹ

ಟಿವಿ ಮಾಧ್ಯಮವನ್ನು ನಿಯಂತ್ರಿಸುವ ಅಗತ್ಯ ಇಂದು ಇದೆ.  ಇಂದು ನಮ್ಮ ಖಾಸಗಿ ಟಿವಿ ವಾಹಿನಿಗಳನ್ನು ನಿಯಂತ್ರಿಸುತ್ತಿರುವುದು ಮಾರುಕಟ್ಟೆ ಶಕ್ತಿಗಳಾಗಿರುವ  ಕಾರಣ ಟಿವಿ ಮಧ್ಯಮ ಸಾಮಾಜಿಕ ಜವಾಬ್ದಾರಿ ಹಾಗೂ ರಾಷ್ಟ್ರೀಯ ಜವಾಬ್ದಾರಿ ಎರಡನ್ನೂ ಧಿಕ್ಕರಿಸಿ ನಡೆಯುತ್ತಿದೆ.  ಇಂಥ ಸಂದರ್ಭದಲ್ಲಿ ಇವುಗಳು ಸ್ವಯಂ ನಿಯಂತ್ರಣ ಹಾಕಿಕೊಂಡು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವ ಸಾಧ್ಯತೆ ಕಂಡುಬರುತ್ತಿಲ್ಲ.   ಮೂಢನಂಬಿಕೆಗಳನ್ನು ಪಸರಿಸುವ ಕಾರ್ಯಕ್ರಮಗಳು ಇಂದು ಎಲ್ಲ ಟಿವಿ ವಾಹಿನಿಗಳಲ್ಲೂ ಪ್ರಸಾರವಾಗುತ್ತಿವೆ.  ಇದನ್ನು ನಿಯಂತ್ರಿಸಲು ಸದ್ಯಕ್ಕೆ ಯಾವುದೇ ದಾರಿ ಇಲ್ಲ.  ಟಿವಿ ವಾಹಿನಿಗಳು ತಾವಾಗಿಯೇ ಇಂಥ ನಿಯಂತ್ರಣ ಹಾಕಿಕೊಳ್ಳುತ್ತಿಲ್ಲ.  ಇಂಥ ಹಿನ್ನೆಲೆಯಲ್ಲಿ ಖಾಸಗಿ ಟಿವಿ ವಾಹಿನಿಗಳಿಗೆ ಕೆಲವು ಬದ್ಧತೆಗಳನ್ನು ವಿಧಿಸುವುದು ಸಮಂಜಸವೆಂದು ಕಾಣುತ್ತದೆ.  ಇಲ್ಲದಿದ್ದರೆ ಮಾರುಕಟ್ಟೆ ಶಕ್ತಿಗಳಿಂದ ನಿಯಂತ್ರಿತವಾಗಿರುವ ಅವು ಸರಿ ದಾರಿಯಲ್ಲಿ ನಡೆಯುವ ಸಾಧ್ಯತೆ ಇಲ್ಲ.  ಇದಕ್ಕೆ ಸರಕಾರದ ಹಸ್ತಕ್ಷೇಪದಿಂದ ಮುಕ್ತವಾಗಿರುವ ಸ್ವಾಯತ್ತ ಸಂಸ್ಥೆಯೊಂದರ ಅವಶ್ಯಕತೆ ಇದೆ.  ಇಂಥ ಸ್ವಾಯತ್ತ ಸಂಸ್ಥೆ ದಾರಿ ತಪ್ಪಿ ನಡೆಯುವ ಟಿವಿ ವಾಹಿನಿಗಳಿಗೆ ಎಚ್ಚರಿಕೆ ಕೊಡುವ, ಪದೇ ಪದೇ ಎಚ್ಚರಿಕೆ ಉಲ್ಲಂಘಿಸಿದರೆ ಅವುಗಳ ಪರವಾನಗಿ ರದ್ದು ಮಾಡುವ ಅಧಿಕಾರ ಇರಬೇಕು.  ಯಾವ ರೀತಿ ಪೋಲೀಸು ಇಲಾಖೆ ಇಲ್ಲದಿದ್ದರೆ ಅರಾಜಕತೆ ಹೆಚ್ಚಾಗುತ್ತದೆಯೋ ಅದೇ ರೀತಿ ಇಂದು ಖಾಸಗಿ ಟಿವಿ ವಾಹಿನಿಗಳಿಗೆ ಯಾವುದೇ ನಿಯಂತ್ರಣ ಇಲ್ಲದಿರುವುದರಿಂದ ಅವುಗಳು ಸಾಮಾಜಿಕ ಹಾಗೂ ರಾಷ್ಟ್ರೀಯ ಹಿತಾಸಕ್ತಿಗಳನ್ನು ಮರೆತು ಮನ ಬಂದಂತೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದು ಹೇಳುವವರು, ಕೇಳುವವರು ಇಲ್ಲದಂತಾಗಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet