ಲೋಕಾಯುಕ್ತ ಮುಚ್ಚಲೇಳಿ!

ಲೋಕಾಯುಕ್ತ ಮುಚ್ಚಲೇಳಿ!

Comments

ಬರಹ

      ಮುಖ್ಯಮಂತ್ರಿಯನ್ನು ಹಿಡಿದು ಕಂಬಿ ಎಣಿಸಿಸಿದ ಲೋಕಾಯುಕ್ತ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ, ಆಡಳಿತಾರೂಢರಿಂದ ನಡೆದಿರುವ ಪುಕಾರೆದ್ದಿದೆ. ಅಂತಹ ಸಂಸ್ಥೆಗೆ ಈ ಸರಕಾರ ಸೂಕ್ತ 'ಫಿಲ್ಟರ್' ಕಂಡುಹಿಡಿದಿದ್ದೇ ಆದರೆ, ಮುಂದೆ ಬರುವ ಸರಕಾರವೂ ಅದನ್ನು ಯಶಸ್ವಿಯಾಗಿ ಬಳಸಿಕೊಂಡೀತು. ಅದರ ಬದಲು ಲೋಕಾಯುಕ್ತ ವ್ಯವಸ್ಥೆ ಮುಚ್ಚಿಹೋಗುವುದೇ ಒಳ್ಳೆಯದಲ್ಲವೇ?
      ಪ್ರಸ್ತುತದ ದೇಶವ್ಯಾಪೀ ರಾಜಕೀಯ ಸಂದರ್ಭದಲ್ಲಿ, ಲೊಕಾಯುಕ್ತವಾಗಲೀ, ಲೋಕಪಾಲವಗಲೀ ಒಂದೆರಡು ತಿಗಣೆಗಳನ್ನು ಹಿಡಿದು, ಎರಡಾರು ದಿನದ ಮಟ್ಟಿಗೆ ಜೈಲಿಗೆ ಕಳಿಸಿರಬಹುದು. ಇದರಿಂದ ತಿಗಣೆ ಗೂಡೇ ನಾಶವಾಗಿಹೋಯಿತೇ?!  ಜತೆಗೆ, ಸನ್ಮಾನ್ಯ ನ್ಯಾಯಾಂಗದ Procedural ಸಂಕೀರ್ಣತೆಯ ದುರ್ಲಾಭಪಡೆಯುವ ಕಲೆಯೂ ನಮ್ಮ ರಾಜಕಾರಣಿಗಳು ಕರಗತ ಮಾಡಿಕೊಂಡಿದ್ದಾರಲ್ಲಾ, ಮಾನಗೇಡಿಗರಿಗೆ ಇನ್ನೇನು ಅಡ್ಡಿ?
      ಸ್ವಘೋಷಿತ ಸಮಾಜಸೇವಕರೆಂಬ ನಿರುತ್ಪಾದಕ, ಅಪ್ರಯೋಜಕರಾಜಕೀಯ ನರಿಗಳು (ಅದರ Cousinಗಳು ಎನ್ನಿ, ಬೇಕಾದರೆ!) ಸಾರ್ವಜನಿಕ ಜೀವನ ಕ್ಷೇತ್ರವನ್ನೇ ಒಟ್ಟಾಗಿ ಒತ್ತೆ ಹಿಡಿದು, ಈ ನೆಲದ ಚುನಾವಣಾ ವ್ಯವಸ್ಥೆಯನ್ನೇ ಭ್ರಷ್ಟಗೊಳಿಸಿಟ್ಟಿವೆ. ಕಾನೂನು, ಭ್ರಷ್ಟತೆಯ ಪೈಪೋಟಿಯಲ್ಲಿ ಗೆಲ್ಲುವ ಭ್ರಷ್ಟಾತಿಭ್ರಷ್ಟರ ಕೈವಶವಾಗುವ ವ್ಯವಸ್ಥೆ, ಇದು. ಅಣ್ಣಾ ಮಾದರಿ, ನಾಮ್ಕೇವಾಸ್ತೆ ಭ್ರಷ್ಟಾಚಾರ ವಿರೋಧೀ ಚಳುವಳಿಗಳು ನಿಜವಾಗಿ. ಪ್ರಜಾಪ್ರತಿನಿಧಿ ಕಾಯ್ದೆಯ ಒಂದೇ ಒಂದು ತಿದ್ದುಪಡಿಗಾಗಿ ನಡೆದರೆ ಸಾಕು; ಚುನಾಯಿತ ಸದನಗಳು ಶೇ. 50+ಮತದಾರರನ್ನು ಕಡ್ಡಾಯವಾಗಿ ಪ್ರತಿನಿಧಿವಂತಾದರೆ ದೇಶ ನೈತಿಕವಾಗಿ ಸುಭಿಕ್ಷವಾಗುತ್ತದೆ
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet