ಇಬ್ಬರು ಹೆಂಡಿರು

ಇಬ್ಬರು ಹೆಂಡಿರು

Comments

ಬರಹ

 


ಪ್ರಿಯ ಸಮಾಜದ ಹಿತ ಚಿಂತಕರೇ,


ಪ್ರಸ್ತುತ ನಾನು ಗಮನಿಸಿರುವಂತೆ, ಇಂದಿನ ಎಲ್ಲಾ ಪ್ರಮುಖ ಟಿ.ವ್ಹಿ. ಸೀರಿಯಲ್ಲು, ಸಿನೇಮಾ ಎಲ್ಲೆಡೆ ಬಹುಪತ್ನಿತ್ವ ಪದ್ಧತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವದು ಕಂಡು ಬರುತ್ತಿದೆ. ಇದರಿಂದ ಸಮಾಜದ ಮೇಲೆ ಯಾವ ರೀತಿಯ ಪರಿಣಾಮ (ದುಷ್ಪರಿಣಾಮ) ಉಂಟಾಗುತ್ತಿದೆ ಎಂಬುದನ್ನು ನಾವೆಲ್ಲ ಗಮನಿಸಬೇಕಾಗಿದೆ.


ಇಂದು ಪ್ರಸಾರವಾಗುತ್ತಿರುವ ಬಹುತೇಕ ಸೀರಿಯಲ್ಲು (ಧಾರಾವಾಹಿ)ಗಳಲ್ಲಿ ನೋಡಲಾಗಿ ಎಲ್ಲೆಡೆ ನಾಯಕನಾದವನು ಅಥವಾ ಆ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿರುವ ವ್ಯಕ್ತಿಗೆ ಇಬ್ಬರು ಹೆಂಡಿರುಗಳನ್ನು ಸೃಷ್ಠಿಸಿರಲಾಗಿರುವದು ಕಂಡುಬರುತ್ತಿದೆ.


ಹಾಗಾದರೆ ನಿಜವಾಗಿಯೂ ಸಮಾಜದ ಎಲ್ಲಾ ವ್ಯಕ್ತಿಗಳೂ ಇಂದು ಬಹುಪತ್ನಿತ್ವ ಪದ್ಧತಿಯನ್ನು ಅನುಸರಿಸುತ್ತಿದ್ಧಾರೆಯೇ? ಹೀಗೆ ಬಹುಪತ್ನಿತ್ವ ಪದ್ಧತಿ ಅನುಸರಿಸಲು ನಮ್ಮ ದೇಶದ ಕಾನೂನು ಅವಕಾಶ ನೀಡಿ ತನ್ನಲ್ಲಿ ಮಾರ್ಪಾಟು ಮಾಡಿಕೊಂಡಿದೆಯೇ? ಈ ಎಲ್ಲಾ ಧಾರಾವಾಹಿಗಳು, ಸಿನೇಮಾಗಳು ರಾಜಾರೋಷವಾಗಿ ಈ ರೀತಿಯ ಅನುಮಾನಗಳನ್ನು ಸೃಷ್ಟಿಸುತ್ತಿರುವಾಗ ಅದನ್ನು ನೋಡಿಕೊಂಡು ಚಲನಚಿತ್ರ ಮಂಡಳಿಯಾಗಲೀ, ಸಮಾಜದ ಮುಖಂಡರಾಗಲೀ ಪ್ರತಿಭಟಿಸದೇ ಇರುವದು ನಿಜಕ್ಕೂ ವಿಷಾದವೇ ಸರಿ..


ಎತ್ತ ಸಾಗುತ್ತಿದೆ ನಮ್ಮ ಸಮಾಜ? ಹೀಗೆಯೇ ಮುಂದುವರೆದರೆ ಭಾರತೀಯ ಸಂಸ್ಕೃತಿಯ ಗತಿ ಏನು? ಪತಿ ಪತ್ನಿಯ ಸಂಬಂಧ  ಅಷ್ಟೊಂದು ಕಳಾಹೀನವಾಗಿದೆಯೇ.....?????

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet