ಲಂಚಕೋರ ನ್ಯಾಯಾಧೀಶರ ವಿರುದ್ಧ ಮಮತಾ ಪ್ರಕೋಪ

ಲಂಚಕೋರ ನ್ಯಾಯಾಧೀಶರ ವಿರುದ್ಧ ಮಮತಾ ಪ್ರಕೋಪ

ಬರಹ

 ದೇಶದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಮಮತಾಜೀ ಪ್ರಕೋಪ ಸರಿಯೂ ಹೌದು; ತಪ್ಪೂ ಹೌದು! ರಾಜಕಾರಣಿಯೊಬ್ಬರು, ಬೇರೆ ಕ್ಷೇತ್ರದಲ್ಲಿನ ಲಂಚಕುಳಿತನದ ಬಗ್ಗೆ ಬಾಯಿ ತೆರೆದಾಗ, ’ಭ್ರಷ್ಟಾಚಾರ ತಮ್ಮ ಜನ್ಮಸಿದ್ಧ ಹಕ್ಕು; ಅದರಲ್ಲಿ ಬೇರೆಯವರಿಗೆ ಪ್ರವೇಶವಿಲ್ಲ’ ಎಂದು ಕೂಗಿದಂತೆಯೇ ಕೇಳಿಸುವುದು ಸಹಜ! ಆದರೆ ಸಂಸದೀಯ ಪ್ರಜಾಸತ್ತೆಯಲ್ಲಿ ಸಂಸತ್ತು ಮತ್ತು ಶಾಸಕಾಂಗಗಳು ಇತರ ಮಿಕ್ಕೆರಡಕ್ಕಿಂತಾ ಪರಮಾಧಿಕಾರ ಹೊಂದಿರಬೇಕಾದ್ದು ಪರಮ ಅಗತ್ಯ. ಆದರೆ  ಅಸಭ್ಯ ರಾಜಕರಣಿಗಳೇ ಸಂಸತ್ತೂ, ಸಾಸಕಾಂಗವೂ ಆಗಿ, ಈ ಸತ್ಯಕ್ಕೆ ಮಸಿಬಳಿದುಬಿಟ್ಟಿದ್ದಾರೆ! ನ್ಯಾಯಾಂಗದ ತೀರ್ಪನ್ನು ನಾವು ಗೌರವಿಸಬೇಕಾದ್ದು, ಅದು ನೆಲದ ಕಾನೂನು ಮತ್ತು ಸಂವಿಧಾನದ ಉನ್ನತ ವ್ಯಾಖ್ಯಾನವೆಂದೇ ಹೊರತು, ರಾಷ್ಟ್ರ ಸಮುದಾಯದ ನೀತಿ ಮತ್ತು ಆತ್ಮಸಾಕ್ಷಿಯೆಂದಲ್ಲ. ಒಬ್ಬ ಭ್ರಷ್ಟರಾಜಕಾರಣಿಗೆ ಏನೆಲ್ಲಾ ಶಿಕ್ಷೆಯಾಗಬೇಕೆಂದು ನಾವು ಬಯಸುತ್ತೇವೆಯೋ, ಅಂತಹ ನ್ಯಾಯಾಧಿಕಾರಿಗೂ ಅದೇ ಆಗಬೇಕು. ಆದರೆ ಜಾರಿಗೊಳಿಸುವ ಕಾರ್ಯಾಂಗ ಮತ್ತು ಅದಕ್ಕೆ ಕಾರಣಕರ್ತವಾದ ಶಾಸಕಾಂಗಕ್ಕೆ ಆ ನೈತಿಕ ಸ್ಥೈರ್ಯವಿಲ್ಲದೇಹೋದಾಗ, ನ್ಯಾಯಾಂಗವಲ್ಲ, ಮಿಲಿಟರಿ, ಆಡಳಿತಾಧಿಕಾರ ಕೈಗೆತ್ತಿಕೊಳ್ಳುತ್ತದೆ; ಅದೂ ನಮ್ಮದೇಶದ್ದೇ ಆಗಿಲ್ಲದೆಯೂ ಇರಬಹುದು, ಜೋಕೆ! 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet