ಕೋಡುವಳ್ಳಿಯ ಕರೆ (ಕಡೆಯ ಭಾಗ)

ಕೋಡುವಳ್ಳಿಯ ಕರೆ (ಕಡೆಯ ಭಾಗ)

ಎರಡನೆ ಬಾಗ : ಚಂದ್ರಾ ಚಂದ್ರಾ...
ಮೂರನೆ ಬಾಗ : ತೋಟದ ಬಾವಿ
 
 ಚಿತ್ರಾಳ ಚಿಕ್ಕಪ್ಪ ತಮಗೆ ಹಾಸನದಲ್ಲಿ ಕೋರ್ಟಿನ ಕೆಲಸವಿದೆ ಎಂದು  ಹೊರಟು ಹೋದಂತೆ, ಶಾಲಿನಿ, ಮನೆಯಲ್ಲಿದ್ದ ಚಿತ್ರಾಳ ಚಿಕ್ಕಮ್ಮನಿಗೆ , ಮನೆಯಲ್ಲಿ ಒಬ್ಬಳೆ ಇರುವುದು ಬೇಸರ, ಸುಮ್ಮನೆ ಹೊರಗೆ ಹಳ್ಳಿಯಲ್ಲಿ ಕಾಲಾಡಿಸಿ ಬರುವೆನೆಂದು ತಿಳಿಸಿದಳು, ಆಕೆ ಸ್ವಲ್ಪ ಅನುಮಾನದಿಂದಲೆ
 
"ಎಚ್ಚರವಮ್ಮ ಹಳ್ಳಿ ಬಿಟ್ಟು ತೋಟದ ಕಡೆಗೆ ಹೋಗಬೇಡ, ಕಾಫಿ ತೋಟಗಳಲ್ಲಿ ಒಬ್ಬರೆ ಓಡಾಡುವುದು ಅಷ್ಟೊಂದು ಕ್ಷೇಮವಲ್ಲ, ನನಗೆ ಕೆಲಸವಿದೆ ಇಲ್ಲದಿದ್ದರೆ ನಾನೆ ನಿನ್ನಜೊತೆ ಬರುತ್ತಿದ್ದೆ " ಎಂದರು. 
 
 ಒಬ್ಬಳೆ ಹೊರಟ ಶಾಲಿನಿ, ನಡೆಯುತ್ತ ಹಳ್ಳಿಯಿಂದ ಕಾಲುದಾರಿ ಹಿಡಿದ ನೇರ ತೋಟದ ಮನೆಯತ್ತ ಅವಳಿಗೆ ಯಾರು ಎದುರಿಗು ಬರಲಿಲ್ಲ, ಅವಳು ಅತ್ತ ನಡೆಯುವದನ್ನು ಯಾರು ಗಮನಿಸುವ ಅವಕಾಶವು ಇರಲಿಲ್ಲ. ಆಗಲೆ ಸುಮಾರು ಹತ್ತು ಗಂಟೆ, ತೋಟದ ಮನೆಯ ಹತ್ತಿರ ತಲುಪಿದಳು.
 
 
ಹೊರಗಿನಿಂದ ಬೀಗ ಹಾಕಿತ್ತು.  ಹೊರಗೆ ಒಂದು ಸುತ್ತು ಹಾಕಿ, ಮರದ ಕೆಳಗಿದ್ದ ಕಲ್ಲುಬಂಡೆಯ ಮೇಲೆ ಕುಳಿತಳು. 
 
ಇದ್ಯಾವ ಅನುಬಂಧ ನನಗು ಈ ಜಾಗಕ್ಕು ಏನು ನಂಟಿರಬಹುದು. ಬಂಡೆಯ ಮೇಲೆ ಕುಳಿತು, ಕಣ್ಣಳತೆಯ ದೂರದಲ್ಲಿದ್ದ , ಕಲ್ಲಿನ ಮಂಟಪದ ಆಕಾರವನ್ನು ಗಮನಿಸಿದಳು, ಆ ಮಂಟಪದಲ್ಲಿಂದ ಬಗ್ಗಿ ನೋಡಿದರೆ ಸಾಕು, ಕೆಳಗೆ ಅರವತ್ತು ಎಪ್ಪತ್ತು ಅಡಿಗಳ ಕೆಳಗೆ ನೀರಿನ ಬಾವಿ ಕಾಣುತ್ತದೆ, ಈಗಲಾದರೆ ಅದು ಹೂಳು ಕೆಸರಿನಿಂದ ತುಂಬಿದೆ. ಆ ಮಂಟಪವನ್ನು ನೋಡುವಾಗಲೆ, ಅವಳ ಮನಸಿನ ಮೇಲೆ ಯಾವುದೋ ಹಳೆಯ ದೃಶ್ಯವೊಂದು ಕಾಣುತ್ತಿತ್ತು, 
.
  ಆಕೆ ಯಾರೊ ಕಲ್ಲಿನ ಮಂಟಪದಲ್ಲಿ ನಿಂತು, ಗಂಡಸಿನ ಜೋತೆ ಹೋರಾಡುತ್ತಿದ್ದಾಳೆ, ಅವಳು  ಬಿಡಲಿಲ್ಲ ಸೀದ ಕುತ್ತಿಗೆಗೆ ಕೈ ಹಾಕಿದ ಅವಳು ಅವನನ್ನು ದೂರನೂಕುವ ಪ್ರಯತ್ನದಲ್ಲಿದ್ದಾಳೆ, ಅವಳು ಕೂಗುತ್ತಿರುವ ಶಬ್ದ ಕೇಳುತ್ತಿದೆ,  ಇದ್ದಕ್ಕಿದಂತೆ ಅವನು ಅವಳತ್ತ  ದೊಡ್ಡ ಮರದ ತುಂಡಿನಿಂದ ಬೀಸಿದ,  ಅವಳ ತಲೆ ಕಲ್ಲಿಗೆ ಅಪ್ಪಳಿಸಿತು, ಕಣ್ಣುಗಳಲ್ಲಿ ಭಯ, ಹೌದು ಕಾಣುತ್ತಿದೆ, ತನ್ನದು ಭ್ರಮೆಯಲ್ಲ, ಅವಳು ಚಿತ್ರಾಳ ತಾಯಿ, ಜಾನಕಿ, ಜೋಲಿಹೊಡೆದಂತೆ ಒಮ್ಮೆಲೆ ಹಿಂದೆ ಬಿದ್ದುಹೋದಳು. ಅವಳ ಕೂಗು, ಕಾಫಿತೋಟದ ಸುತ್ತ ಮುತ್ತಲಿನ ಗುಡ್ಡಗಳಲ್ಲಿ ಕರಗಿ ಹೋಯಿತು.
"ಅಕ್ಕಾ,,,,," ಶಾಲಿನಿಗೆ ಅರಿವಿಲ್ಲದೆ ದ್ವನಿ ಗಂಟಲಿನಿಂದ ಹೊರಟಿತು, ಅವಳು ಬೆವರುತ್ತಿದ್ದಳು,  ಜಾನಕಿ ಕೆಳಗೆ ಬಿದ್ದ ಜಾಗವನ್ನೆ ಒಂದು ಕ್ಷಣ ನೋಡುತ್ತಿದ್ದ ಆತ ಹಿಂದೆ ತಿರುಗಿದ, ಈಗವನು ಶಾಲಿನಿ ಕಡೆಗೆ ನೋಡುತ್ತಿದ್ದ, ನಿದಾನವಾಗಿ ಅವಳ ಕಡೆಗೆ ಬರುತ್ತಿದ್ದ, 
"ಅಕ್ಕಾ, ಅಕ್ಕಾ....." ಕಿರುಚುತ್ತ , ಕಣ್ಣು ಮುಚ್ಚಿಕೊಂಡಳು, ಶಾಲಿನಿ. 
.
.
ಒಂದೆರಡು ಕ್ಷಣ ಕಳೆಯಿತು ಎಲ್ಲ ಮೌನ. ನಿದಾನವಾಗಿ ಕಣ್ಣು ಬಿಟ್ಟಳು. ಏನಾಗಿದೆ ತನಗೆ. ಇದೇಕೆ ಹೀಗೆ, ಜಾನಕಿ ಚಿತ್ರಾಳ ಅಮ್ಮ, ಅವಳನ್ನು ಅವಳ ಚಿಕ್ಕಪ್ಪ ಕೊಂದಂತೆ ಏಕೆ ತನಗೆ ಬಾಸವಾಗುತ್ತಿದೆ, ತನಗು ಇಲ್ಲಿಗು ಏನು ಸಂಬಂಧ, ತಾನು ಯಾರು.... ತಾನು ಯಾರು.....   ಅವಳ ಮನಸನ್ನು ತುಂಬಿ ಹೋಯಿತು..... 
ಹೌದು ... ಜಾನಕಿ ತನ್ನ ಅಕ್ಕ..... ತನ್ನ ಅಕ್ಕ.... ತಾನು ಯಾರು ಜಾನಕಿಯ ತಂಗಿ ತಾನು ...ಹೌದು... ತಾನು ಚಂದ್ರಕಲ !  ಹೌದು ತಾನು ಚಂದ್ರ,   ಚಂದ್ರಕಲ ! 
 
ಹಾಗಾದರೆ ಶಾಲಿನಿ ಸಹ ನಾನೆ ಅಲ್ಲವೆ ? ಹೌದು .... ತಾನು ಹಿಂದೆ ಚಂದ್ರ ಆಗಿದ್ದವಳು ,,,, ಈಗ ಶಾಲಿನಿ,,, ಅಂದರೆ ತನ್ನ ಹಿಂದಿನ ಜನ್ಮದ ನೆನಪೆ ತನ್ನನ್ನು ಕಾಡುತ್ತಿರುವುದು... ಅಥವ ತನ್ನದು ಭ್ರಮೆಯೊ  ? .... ಇಲ್ಲ ಅದು ಸಾದ್ಯವಿಲ್ಲ..... ಹಾಗಿದ್ದಲ್ಲಿ ತನಗೆ ಎರಡು ವ್ಯಕ್ತಿತ್ವಗಳು ಹೇಗೆ ನೆನಪಿರಳು ಸಾದ್ಯ..... ಪುನರ್ಜನ್ಮ .... ಹೌದು ಚಂದ್ರ ಆಗಿದ್ದ ತಾನು ಶಾಲಿನಿ ಆಗಿ ಜನ್ಮ ತಾಳಿದ್ದೇನೆ ಅದೆ ಸತ್ಯ. 
 
ಕಣ್ಣು ಮುಚ್ಚಿ ಬಂಡೆಗೆ ಒರಗಿದ್ದ ಅವಳಿಗೆ ತನ್ನೆದುರು ಯಾರೊ ನಿಂತಂತ ಬಾಸವಾಯಿತು. ನಿದಾನವಾಗಿ ಕಣ್ತೆರದಳು.... ಚಿತ್ರಾಳ ಚಿಕ್ಕಪ್ಪ ... ಹೌದು ಕೊಲೆಗಡುಕ... ಚಿತ್ರಾಳ ತಾಯಿಯನ್ನು ಕೊಂದವನು..
"ಕೊಲೆಗಾರ.... ನೀನು ಕೊಲೆಗಾರ.... ಅಕ್ಕನನ್ನು ಕೊಂದುಬಿಟ್ಟೆ... ಚಿತ್ರಾಳ ಅಮ್ಮನನ್ನು ಕೊಂದುಬಿಟ್ಟೆ.... ನಿಜತಾನೆ.... ನೀನು ಕೊಲೆಗಾರ ನಿಜ ತಾನೆ"  
 
ಶಾಲಿನಿಯ ಮಾತುಗಳಿಗೆ, ಆಶ್ಚರ್ಯ, ಹಾಗು ಎಂತದೊ ಭಯ ತುಂಬಿ ನಿಂತಿದ್ದ ಚಿತ್ರಾಳ ಚಿಕ್ಕಪ್ಪ ತಮ್ಮಯ್ಯಪ್ಪ. ಅವನು ಭಯದಿಂದ ಕೇಳಿದ
"ನೀನು ಯಾರು... ಇದೆಲ್ಲ ಏಕೆ ಹೇಳುತ್ತಿದ್ದಿ . ನಿನಗು ಕೋಡುವಳ್ಳಿಯ ಈ ತೋಟಕ್ಕು ಯಾವ ನಂಟು?"  ಅವನ ದ್ವನಿ ಕೋಪದಲ್ಲಿತ್ತು. 
ಶಾಲಿನಿ ಈಗ ಕೋಪದಿಂದ ನಡುಗುತ್ತಿದ್ದಳು 
"ನಾನು ಅದೆ ಚಂದ್ರ , ನೀನು ನನ್ನ ಅಕ್ಕನನ್ನು ಕೊಂದೆಯಲ್ಲ ಅದನ್ನು ನೋಡಿದೆ ಎಂದು ನನ್ನನ್ನು ಕೊಲ್ಲ ಬಂದೆಯಲ್ಲ ಅದೆ ಚಂದ್ರ"
 
ಒಂದು ಕ್ಷಣ ಅಚ್ಚರಿಯಿಂದ ನಿಂತಿದ್ದ ಚಿತ್ರಾಳ ಚಿಕ್ಕಪ್ಪ ನುಡಿದರು
"ನೋಡು ಶಾಲಿನಿ, ನೀನು ಬೆಳಗ್ಗೆ  ಎಲ್ಲರ ಜೊತೆ ಹೊರಡಲಿಲ್ಲ. ನೀನು ಏಕೊ ಸಹಜವಾಗಿಲ್ಲ ಅನ್ನಿಸಿತು. ನಾನು ಹಾಸನಕ್ಕೆ ಎಂದು ಹೊರಟಿದ್ದೆ, ನೀನು ತೋಟದ ಕಡೆ ನಡೆದು ಬರುವದನ್ನು ಕಾರಿನಿಂದಲೆ ನೋಡಿದೆ. ಏಕೊ ಆತಂಕವೆನಿಸಿತ್ತು. ಎದ್ದೇಳು ಒಬ್ಬಳೆ ಹೀಗೆ ಇಲ್ಲೆಲ್ಲ ಬಂದು ಕುಳಿತುಕೊಳ್ಳುವುದು ಅಪಾಯ. ನೀನು ಏನೇನೊ ಕಲ್ಪಿಸಿಕೊಂಡು ಇಲ್ಲಿಗೆ ಬಂದಿದ್ದಿಯ ಅನ್ನಿಸುತ್ತೆ. ಏಳಮ್ಮ, ಬಾ ನಿನ್ನನ್ನು ಮನೆಗೆ ಬಿಟ್ಟು ನಾನು ಹಾಸನಕ್ಕೆ ಹೋಗುವೆ ಬಾ" ಎಂದು ಪ್ರೀತಿಯ ದ್ವನಿಯಲ್ಲಿ ಕರೆದರು.  
ಶಾಲಿನಿ ಚಿತ್ರಾಳ ಚಿಕ್ಕಪ್ಪ ತಮ್ಮಯಪ್ಪನನ್ನು ಕ್ರೂರವಾಗಿ ನೋಡಿದಳು, 
"ಇದೆಲ್ಲ ನಾಟಕ ಬೇಡ, ನಿಜ ಹೇಳು, ನೀನೆ ತಾನೆ ಜಾನಕಿ ಅಕ್ಕನನ್ನ ಕೊಂದಿದ್ದು, ನನಗೆ ಎಲ್ಲವು ತಿಳಿಯುತ್ತಿದೆ"  
 
ಆತ ಅವಳ ಪಕ್ಕ ನಿದಾನಕ್ಕೆ ಕುಳಿತರು
"ನೋಡು ಶಾಲಿನಿ, ನಿನಗೆ ಇವತ್ತೆಲ್ಲ ಇಪ್ಪತ್ತು ವರುಷವಿರಬಹುದು, ನೀನು ಎಂದೊ ಸತ್ತಿರುವ ನನ್ನ ಅತ್ತಿಗೆಯ ಸಾವನ್ನು ಕೊಲೆ ಎಂದು ಈಗ ಹೇಳಿ ಎಲ್ಲರಲ್ಲು ಗಲಿಬಿಲಿ ಹುಟ್ಟಿಸಬೇಡ, ಅಷ್ಟಕ್ಕು ನಾನು ಅವರನ್ನು ಏಕೆ ಕೊಲ್ಲಲ್ಲಿ. ನೀನು ಅದನ್ನೆಲ್ಲ ನೋಡಿರುವೆ ಅನ್ನುವದೆಲ್ಲ ಹಾಸ್ಯಾಸ್ಪದವಲ್ಲವೆ. ನೀನೆ ಯೋಚಿಸಿ ನೋಡು, ನೀನು ಇದೆ ಮೊದಲ ಬಾರಿ ಕೋಡುವಳ್ಳಿಗೆ ಬರುತ್ತಿರುವುದು, ನೀನು ಇದನ್ನೆಲ್ಲ ಹೇಳಿದರೆ ಯಾರು ನಂಬುವರು" 
 
ಶಾಲಿನಿ, ಕಣ್ಣು ಮುಚ್ಚಿದಳು, ಎರಡು ಕೈಲಿ ತಲೆಯನ್ನು ಅದುಮಿಕೊಂಡಳು, ಎಂತದೋ ಹಿಂಸೆ ಅವಳಿಗೆ. 
 
"ಇಲ್ಲ ಇದೆಲ್ಲ ಹೇಗೆ ಸಾದ್ಯ, ನನಗೆ ಎಲ್ಲ ನಿಚ್ಚಳವಾಗಿ ಕಾಣುತ್ತಿದೆ, ನಾನು ಏನು ಮಾಡಲಿ   ಆದರೆ ಇದೆಲ್ಲ ಸತ್ಯ, ನಾನು ಚಂದ್ರಕಲ ಅನ್ನುವುದು ಸತ್ಯ, ನನಗೆ ಆ ದಿನವೆಲ್ಲ ನೆನಪಿಗೆ ಬರುತ್ತಿದೆ. ಆಗಲು ನನ್ನನ್ನು ಹೀಗೆ ನೀವು ಬೇಲುರು ಹಳೆಯಬೀಡು ಎಂದು ಸುತ್ತಿಸಿದ್ದಿರಿ, ಅಕ್ಕ , ಭಾವ ಎಲ್ಲ ಜೊತೆಯಲ್ಲಿದ್ದರು. ನಿಮ್ಮನ್ನು ಭಾವ ಎಂದು ಕರೆಯುತ್ತಿದ್ದೆ, ಹೌದು ಭಾವ. ನೀವಾಗ ಉದ್ದ ಕೂದಲು ಬಿಡುತ್ತಿದ್ದೀರಿ, ನಾನು ನಿಮ್ಮ ಜೊತೆ ಬ್ಯಾಟ್ ಮಿಟನ್ ಆಡಿದ್ದೆ, ನನಗೆ ಎಲ್ಲ ನೆನಪಿಗೆ ಬರುತ್ತಿದೆ. ಕೆಂಚನ ಹತ್ತಿರ ಕರಿಯ ಎನ್ನುವ ಕಪ್ಪು ನಾಯಿ ಇತ್ತು,  ಆದರೆ ಇದೆಲ್ಲ ಸಾದ್ಯವ? ಇಷ್ಟು ವರ್ಷಗಳಾದ ನಂತರ ಹೇಗೆ ನೆನಪು ಮರಳಿತು. ಈ ಜಾಗಕ್ಕೆ ಬಂದ  ಕಾರಣ ಗೊತ್ತಿಲ್ಲ. ಹೇಳಿ ನೀವು ನನ್ನ ಅಕ್ಕನನ್ನು ಏಕೆ ಕೊಂದಿರಿ, ನಾನು ಕಣ್ಣಾರೆ ನೋಡಿರುವೆ, ಆಮೇಲೆ ನನಗೇನಾಯಿತು"  
 
ತಮ್ಮಯ್ಯಪ್ಪ ಸುಮ್ಮನೆ ಕುಳಿತರು.
 
"ಹೇಳಿ ಎಲ್ಲ ಹೇಳಿ ನನಗೆ ಬೇಕು, ನಾನು ಎಲ್ಲರ ಹತ್ತಿರ ಹೇಳುವೆ ನೀವೆ ಜಾನಕಿಯ ಕೊಲೆ ಮಾಡಿರುವಿರಿ ಎಂದು, ಚಿತ್ರಾಗು ಹೇಳುವೆ" ದ್ವನಿ ಎತ್ತಿ ಕೂಗುತ್ತಿದ್ದಳು ಶಾಲಿನಿ. 
 
ಚಿತ್ರಾಳ ಚಿಕ್ಕಪ್ಪ ತಮ್ಮಯ್ಯಪ್ಪನವರ ಮುಖ ಗಂಭೀರವಾಗುತ್ತಿತ್ತು, ಅಲ್ಲಿ ಎಂತದೋ ನಿರ್ದಾರ ಮೂಡುತ್ತಿತ್ತು. 
 
"ಹೌದು ಶಾಲಿನಿ, ನಿಜ, ಜಾನಕಿಯನ್ನು ನಾನು ಕೊಂದಿದ್ದು ನಿಜ, ಆದರೆ ಅದು ಉದ್ದೇಶ ಪೂರ್ವಕವಾಗಿರಲಿಲ್ಲ.  ಜಾನಕಿ ನನಗೆ ಕಾಲೇಜಿನ ಸಹಪಾಠಿ ಎಂಬ ವಿಷಯ ಯಾರಿಗು ತಿಳಿಯದು. ಅದೆಲ್ಲ ಹೇಗೊ ಆಯಿತು ನನಗೆ ತಿಳಿಯುತ್ತಿಲ್ಲ.   ನಾನು ಜಾನಕಿ ಒಂದೆ ಕಾಲೇಜಿನಲ್ಲಿ ಒಟ್ಟಿಗೆ ಓದಿದವರು, , ನನಗೆ ಅವಳನ್ನು ಕಂಡರೆ ಮನಸಿನಲ್ಲೆ  ತುಂಬು ಪ್ರೀತಿ, ಆದರೆ ಓದುವ ದಿನಗಳಲ್ಲಿ ಅದನ್ನು ಅವಳ ಎದುರಿಗೆ ಹೇಳುವ ದೈರ್ಯ ಎಂದಿಗು ಬರಲಿಲ್ಲ. ನಮ್ಮ ಕಾಲೇಜಿನ ಕಡೆಯ ವರ್ಷದ ಪರೀಕ್ಷೆಗಳೆಲ್ಲ ಮುಗಿದು , ಒಬ್ಬರೊನ್ನೊಬ್ಬರು ಅಗಲುವ ದಿನ, ನಾನು ಇನ್ನು ಹೇಳದಿದ್ದರೆ ಅವಳು ಮತ್ತೆ ಸಿಗುವದಿಲ್ಲ ಅನ್ನುವ ದೈರ್ಯ ಮಾಡಿ ನನ್ನ ಪ್ರೀತಿ ತಿಳಿಸಿದೆ. ಅವಳನ್ನೆ ಮದುವೆ ಆಗುವನೆಂದು ತಿಳಿಸಿದೆ. ಆದರೆ ಅವಳು ಕೋಪಮಾಡಿಕೊಂಡಳು, ತನಗೆ ಎಂದು ಆ ಭಾವ ಇರಲಿಲ್ಲವೆಂದು, ತನಗೆ ಪ್ರೀತಿ  ಇಂತದರಲ್ಲೆಲ್ಲ ನಂಭಿಕೆ ಇಲ್ಲ, ಏನಿದ್ದರು, ತಂದೆ ತಾಯಿ ನೋಡಿದ ಹುಡುಗನನ್ನೆ ಮದುವೆ ಆಗುವದಾಗಿ ತಿಳಿಸಿದ ಅವಳು, ತನಗೆ ಆಗಲೆ ಅಪ್ಪ ಹುಡುಗನನ್ನು ನೋಡುತ್ತಿರುವದಾಗಿ ತಿಳಿಸಿ ನನ್ನ ಎಲ್ಲ ಆಸೆಗಳಿಗು ತಣ್ಣೀರು ಎರಚಿದಳು. ನಾನು ಎಷ್ಟೋ ಬೇಡಿಕೊಂಡರು ಕರಗದೆ ನನ್ನ ಪ್ರೀತಿಯನ್ನು ನಿರಾಕರಿಸಿಬಿಟ್ಟಳು.
 
 ಅವಳ ಮನಸನ್ನು ಅರಿಯದೆ ಒಳಗೊಳಗೆ ಪ್ರೀತಿಸಿ ನಾನು ತಪ್ಪು ಮಾಡಿದ್ದೆ. ಆ  ಅಘಾತದಿಂದ ಚೇತರಿಸಿಕೊಳ್ಲಲು ಕಷ್ಟವೆನಿಸಿತು, ಆ ಸಮಯದಲ್ಲಿ  ಸೌತ್ ಇಂಡಿಯಾ ಟೂರ್ಗೆ ನನ್ನ ಗೆಳೆಯರೆಲ್ಲ ಹೊರಟಾಗ ನಾನು ಅವರ ಜೊತೆ ಹೊರಟುಬಿಟ್ಟೆ, ಅಲ್ಲಿಂದ ಬರುವಾಗ ನನ್ನ ಅಣ್ಣನ ಮದುವೆ ಗೊತ್ತಾಗಿತ್ತು. ಮದುವೆ ಮನೆಯಲ್ಲಿ ನನಗೆ ಆಶ್ಚರ್ಯ ಕಾದಿತ್ತು, ನಾನು ಪ್ರೀತಿಸಿ ನನ್ನನ್ನು ನಿರಾಕರಿಸಿದ ಹುಡುಗಿ ಜಾನಕಿಯೆ ನನ್ನ ಅಣ್ಣನಿಗೆ ಪತ್ನಿಯಾಗಿ ಬರುತ್ತಿದ್ದಳು. ಅದು ನನಗೆ ಹೇಗೆ ಅನಿರೀಕ್ಷಿತವೊ ಅಷ್ಟೆ ಅವಳಿಗು ಅನಿರೀಕ್ಷಿತ, ಅವಳಿಗು ತಿಳಿದಿರಲಿಲ್ಲ, ನಾನೆ ಅವಳ ಮೈದುನನಾಗುವನೆಂದು" 
 
ಆತ ಕತೆ ನಿಲ್ಲಿದರು, ಶಾಲಿನಿ ಕುತೂಹಲದಿಂದ ಅವರನ್ನೆ ನೋಡುತ್ತಿದ್ದಳು
 
"ಅಣ್ಣನ ಮದುವೆಯ ನಂತರ ನನ್ನೊಳಗಿನ ರಾಕ್ಷಸ ಕೆರಳಿದ್ದ, ನನ್ನನ್ನು ತಿರಸ್ಕರಿಸಿ ಅವಳು ನನಗೆ ಅವಮಾನ ಮಾಡಿದಳೆಂದೆ ನನ್ನಮನಸ್ಸು ಭಾವಿಸಿತ್ತು, ಹಾಗಾಗಿ ಅವಳಿಗೆ ಒಳಗೊಳಿಗೆ ಕಿರುಕುಳ ಕೊಡುತ್ತಿದ್ದೆ. ಅವಳಾದರು ಅದೇನು ಕಾರಣವೊ ಯಾರಿಗು ನಾನು ಅವಳ ಸಹಪಾಠಿ ಎಂದು ತಿಳಿಸಿರಲೆ ಇಲ್ಲ,  ನಾನು ಅದೇ ಕಾರಣದಿಂದ ಅವಳನ್ನು ಗೋಳಾಡಿಸಿದೆ. ಒಬ್ಬಳೆ ಸಿಕ್ಕಾಗಲೆಲ್ಲ ಅಸಬ್ಯವಾಗಿ ವರ್ತಿಸಿದ್ದೆ. ನನಗು ಒಮ್ಮೊಮ್ಮೆ ನಾನು ಮಾಡುತ್ತಿರುವುದು ತಪ್ಪೆಂದು ಅನ್ನಿಸಿತ್ತಿತ್ತು. ಹಾಗೆ ಎರಡು ವರ್ಷ ಕಳೆಯಿತೇನೊ ಅವಳಿಗು ನನ್ನ ಬಗ್ಗೆ ರೋಸಿ ಹೋಗಿತ್ತು ಅನ್ನಿಸುತ್ತೆ. ಆ ವೇಳೆಗೆ ಅವಳಿಗೆ ಒಂದು ಮಗುವು ಆಗಿತ್ತು. ಬಾಣಂತನಕ್ಕೆ ಅಮ್ಮನ ಮನೆಗೆ ಹೋದವಳು ಹಿಂದೆ ಬರುವಾಗ ಅವಳ ತಂಗಿ ಚಂದ್ರಕಲಾಳನ್ನು ಕರೆತಂದಿದ್ದಳು ಸದಾ ತನ್ನ ಜೊತೆಗೆ ಇರಲು. ಅವಳಿನ್ನು ಎಂಟು ವರ್ಷದ ಮಗು. ನಾನು ಒಮ್ಮೆ ಸಮಯನೋಡಿ ಜಾನಕಿಗೆ ತಿಳಿಸಿದೆ , ಮದ್ಯಾನ್ಹ ತೋಟದ ಬಾವಿಯ ಹತ್ತಿರ ಬಾ ಎಂದು .ಅವಳನ್ನು ಕರೆದ ಉದ್ದೇಶ ಬೇರೆ ಇದ್ದಿತು,  ನನ್ನ ಮನಸನ್ನು ತಿಳಿಸಿ ಅವಳ ಬಳಿ ತಪ್ಪು ಒಪ್ಪಿ ಕ್ಷಮೆ ಕೇಳಿ ಮುಂದೆ ಎಂದು ತೊಂದರೆ ಕೊಡುವದಿಲ್ಲ ಎಂದು ಹೇಳುವ ಎಂದು ಕರೆದಿದ್ದೆ. ಅವಳು ನನ್ನ ಅತ್ತಿಗೆ, ಅಲ್ಲದೆ ನನ್ನ ಅಣ್ಣನ ಮಗುವಿಗೆ ತಾಯಿಯಾಗಿರುವಳು ಎಂಬ ಭಾವ ನನ್ನಲ್ಲಿ ತುಂಬಿತ್ತು. 
ಅದಕ್ಕಿಂತ ಹೆಚ್ಚಿಗೆ ನನ್ನಗು ಆಗಲೆ ಹುಡುಗಿ ನೋಡಿದ್ದರು, ಹಾಗಿರುವಾಗ ಜಾನಕಿಯ ಮೇಲೆ ನಾನು ಇನ್ನು ಹಗೆ ಸಾದಿಸಿದರೆ ನನ್ನ ಅವಳ ಇಬ್ಬರ ಜೀವನವು ನರಕವಾಗುವುದು ಎನ್ನುವ ಅರಿವು ಮೂಡಿತ್ತು, ಜೊತೆಗೆ ಸ್ವಲ್ಪ ಪಶ್ಚತಾಪವು ಮೂಡಿತ್ತು, ಹಾಗಾಗಿ ಅದನ್ನು ತಿಳಿಸಲೆಂದು ಜಾನಕಿಯನ್ನು ಕರೆದಿದ್ದೆ,
ಆದರೆ ಅವಳು ಬೇರೆಯದೆ ಅರ್ಥಮಾಡಿಕೊಂಡಿದ್ದಳು, ಬರುವಾಗ ಮನೆಯಲ್ಲಿದ್ದ ಪಿಸ್ತೂಲ್ ತಂದಿದ್ದಳು."
 
ಶಾಲಿನಿ ಚಿತ್ರಾಳ ಚಿಕ್ಕಪ್ಪ ಹೇಳುತ್ತಿದ್ದ ಕತೆಯನ್ನು ಕೇಳುತ್ತಿದ್ದಳು 
 
"ಅವಳು ನಾನು ಮಾತನಾಡಲು ಅವಕಾಶವೆ ಕೊಡಲಿಲ್ಲ, ನನ್ನನ್ನು ಕಾಣುತ್ತಲೆ ಸೀಳು ನಾಯಿಯಂತೆ ಮೇಲೆ ಬಿದ್ದಳು, ನನ್ನನ್ನು ಮುಗಿಸಿಬಿಡುವದಾಗಿ ಪಿಸ್ತೂಲ್ ತೆಗೆದು ನಿಂತಳು, ಅವಳ ಕೈ ಮೈ ನಡುಗುತ್ತಿತ್ತು ಕೋಪದಿಂದ ಯಾವುದೆ ಕ್ಷಣದಲ್ಲಿ ಅವಳು ಪಿಸ್ತೂಲ್ ಹಾರಿಸಬಹುದಿತ್ತು, ನನ್ನ ಸಮಾದಾನದ ಮಾತು ಕೇಳುವ ಪರಿಸ್ಥಿಥಿಯಲ್ಲಿ ಅವಳಿರಲಿಲ್ಲ. ನಾನು ಹೇಗಾದರು ತಪ್ಪಿಸಿಕೊಳ್ಳಬೇಕೆಂದು ಪಕ್ಕದಲ್ಲಿ ಬಿದ್ದಿದ್ದ, ಕಾಪಿ ಗಿಡದ ಬೇರಿನ ಕೊಂಬೆಯನ್ನು ಅವಳತ್ತ ಬೀಸಿದೆ, ಅದರೆ ದುರಾದೃಷ್ಟ ಅವಳ ಕೈಗೆ ನಾನು ಇಟ್ಟಿದ್ದ ಗುರಿ ತಪ್ಪಿತ್ತು, ಅವಳು ತಪ್ಪಿಸಿಕೊಳ್ಳುವಂತೆ ಬಗ್ಗಿದಳು, ತಲೆಗೆ ಏಟು ಬಿದ್ದು, ತಲೆ ಒಡೆದಿತ್ತು, ಅನೀರಿಕ್ಷಿತವಾಗಿ ಕೊಲೆಯಾಗಿತ್ತು, ಅವಳು ಚೀರಿಕೊಳ್ಳೂತ್ತ ಮಂಟಪದ ಹಿಂದಿದ್ದ, ಬಾವಿಗೆ ಬಿದ್ದು ಹೋದಳು. ಅಲ್ಲಿಂದ ನೆಗೆದು ನಾನು ಅವಳನ್ನು ಕಾಪಾಡುವ ಯಾವುದೆ ಅವಕಾಶವಿರಲಿಲ್ಲ, ನಾನೇನು ಈಜುಗಾರನು ಅಲ್ಲ" 
 
"ನಾನು ಕೊಂಬೆಯನ್ನು ಎಸೆದು , ತಿರುಗಿ ನೋಡಿದೆ, ಎದುರಿಗೆ ಅವಳ ತಂಗಿ ಚಂದ್ರಕಲಾ ಇದ್ದಳು, ಅವಳು ನನ್ನನ್ನೆ ಕೋಪದಿಂದ ನೋಡುತ್ತಿದ್ದಳು , ಚೀರಾಡಿದಳು
 
"ನಾನು ಎಲ್ಲ ನೋಡಿದೆ, ನನ್ನ ಅಕ್ಕನನ್ನು ಕೊಂದಿದ್ದು ನೀನೆ, ಮನೆಗೆ ಹೋಗಿ, ಎಲ್ಲರಿಗು ಹೇಳುವೆ ಎಂದು" 
ಅವಳ ಬಾಯಿ ಮುಚ್ಚಿಸಲು ಎಷ್ಟೊ  ಪ್ರಯತ್ನಿಸಿದೆ,  ಆ ಹುಡುಗಿ ನನ್ನಮಾತು ಕೇಳುವ ಸ್ಥಿಥಿಯಲ್ಲಿರಲಿಲ್ಲ, ಅಕ್ಕನಂತೆಯೆ ಅವಳು ಸಹ ಕೂಗಾಡುತ್ತಿದ್ದಳು, ಅಳುತ್ತಿದ್ದಳು, ನನಗೆ ಬೇರೆ ದಾರಿಯೆ ಕಾಣಲಿಲ್ಲ, ಕಲ್ಲಿನ ಮಂಟಪಕ್ಕೆ ಒರಗಿಸಿ ಅವಳ ಕುತ್ತಿದೆ ಅದುಮಿದೆ ದ್ವನಿ ನಿಲ್ಲಲ್ಲಿ ಎಂದು ಆದರೆ ಅವಳು ಸಹ ಸತ್ತು ಹೋದಳು, 
 
ನಾನು ದಿಗ್ಬ್ರಾಂತನಾಗಿದ್ದೆ, ನನ್ನ ಕೈಲೆ ಎರಡು ಕೊಲೆ ನಡೆದುಹೋಗಿತ್ತು, ಬೇರೆ ದಾರಿ ಇರಲಿಲ್ಲ, ಅದೇ ಬಾವಿಗೆ ಅವಳನ್ನು ಸಹ ಎಸೆದೆ. ಅಲ್ಲಿ ಬಿದ್ದಿದ್ದ ಪಿಸ್ತೂಲನ್ನು   ಒರೆಸಿ, ಜೋಬಿನಲ್ಲಿರಿಸಿದೆ, ಅಲ್ಲಿಂದ ಹೊರಟುಹೋದೆ" 
 
ಚಿಕ್ಕಪ್ಪ ಕತೆ ನಿಲ್ಲಿಸಿದರು, ಅಲ್ಲೆಲ್ಲ ಒಂದು ಸ್ಮಶಾನ ಮೌನ ನೆಲೆಸಿತ್ತು. ಶಾಲಿನಿ ಯೋಚಿಸುತ್ತ ಇದ್ದಳು, ಅದಕ್ಕಾಗಿಯೆ ನನಗೆ ಜಾನಕಿ ಸತ್ತ ನಂತರ ಏನಾಯಿತು ಎಂದು ಗೊತ್ತಾಗಲಿಲ್ಲ ಅಂದುಕೊಂಡಳು. ಅವಳ ಕಣ್ಣು ಕೆಂಪಾಗುತ್ತಿತ್ತು. ಇಂತ ದ್ರೋಹಿಯನ್ನು ಬಿಡಬಾರದು, ಒಂದಲ್ಲ ಎರಡು ಕೊಲೆ ಮಾಡಿರುವ ಇವನನ್ನು ಹಿಡಿದು ಪೋಲಿಸಿಗೆ ಒಪ್ಪಿಸಬೇಕು. ಎಂದ ಅವಳ ಮನ ಹೇಳುತ್ತಿತ್ತು. ಒಮ್ಮೆಲೆ ಎದ್ದು ನಿಂತಳು
 
"ಪಾಪಿ ನನ್ನ ಅಕ್ಕನನ್ನು ಕೊಂದೆಯಲ್ಲದೆ, ನನ್ನನ್ನು ಸಾಯಿಸಿದೆ. ಎಲ್ಲವು ನನಗೆ ಅರ್ಥವಾಗಿದೆ, ನಾನು ಇದನ್ನು ಬಿಡುವದಿಲ್ಲ, ಎಲ್ಲರಿಗು ತಿಳಿಸುವೆ, ಚಿತ್ರಾಳಿಗು ಹೇಳುವೆ ನಿನ್ನ ಅಮ್ಮನನ್ನು ಕೊಂದವನು ನಿನ್ನ ಚಿಕ್ಕಪ್ಪ ಎಂದು, ನಾನು ಆಗಿನ ಎಲ್ಲ ಘಟನೆ ವಿವರಿಸುವೆ,ಎಲ್ಲರು ನಂಬುವುದು ಖಂಡಿತ, ನಿನ್ನ ತಪ್ಪಿಗೆ ಶಿಕ್ಷೆ ಕೊಡಿಸದೆ ನಾನು ಇಲ್ಲಿಂದ ,ಕೋಡುವಳ್ಳಿಯಿಂದ ಕದಲುವದಿಲ್ಲ"  
 
ಶಾಲಿನಿಯ ದ್ವನಿ ತಾರಕ್ಕಕ್ಕೆ ಏರಿತು. ಅದು ಶಾಲಿನಿಯ ಮನವೊ ಚಂದ್ರಕಲಾ ಎಂಬುವಳದೊ ಯಾರು ಅರಿಯರು.
 
ಚಿತ್ರಾಳ ಚಿಕ್ಕಪ್ಪ, ತಮ್ಮಯ್ಯಪ್ಪ ಅಸಹಾಯಕನಾಗಿದ್ದ, ಅವನು ಮತ್ತೆ ಹೇಳಿದ
"ಇಲ್ಲಿ ಕೇಳು ಶಾಲಿನಿ, ನನಗೀಗಲೆ ಮದುವೆಯಾಗಿ ಎರಡು ಮಕ್ಕಳಿವೆ,  ತೋಟವಿದೆ, ಮನೆಯಿದೆ ಈ ಎಲ್ಲವನ್ನು ಬಿಟ್ಟು ಹೋಗಿ ಜೈಲಿನಲ್ಲಿ ಕುಳಿತುಕೊಳ್ಳಲು ಆಗಲ್ಲ, ನನ್ನ ಮಕ್ಕಳನ್ನು ನೋಡುವರು ಯಾರು, ನಿನ್ನ ಸ್ನೇಹಿತೆ ಚಿತ್ರಾಳನ್ನು ನೋಡು , ಅವಳಿಗೆ ಮದುವೆ ಮಾಡುವ ಜವಾಬ್ದಾರಿ ಹೊರುವರು ಯಾರು ನಮ್ಮ ಅಣ್ಣ ಯಾವುದಕ್ಕು ಬರುವನಲ್ಲ ವಿರಕ್ತನಂತೆ ಇದ್ದಾನೆ. ನನ್ನ ಮಾತು ಕೇಳಮ್ಮ ಅಂದು ಆಗಿದ್ದು ಆಕಸ್ಮಿಕ , ನನಗೆ ಯಾರ ಕೊಲೆಯು ಮಾಡುವ ಉದ್ದೇಶವಿರಲಿಲ್ಲ ಈ ವಿಷಯ ಇಲ್ಲಿಗೆ ಬಿಟ್ಟುಬಿಡು,  ಎಲ್ಲರು ಶೃಂಗೇರಿಯಿಂದ ಬಂದಮೇಲೆ ನಿನ್ನ ಪಾಡಿಗೆ ಬೆಂಗಳೂರಿಗೆ ಹೊರಡು, ನಿನ್ನ ಜೀವನ ಹಾಗು ನನ್ನ ಜೀವನ , ನಿನ್ನ ಸ್ನೇಹಿತೆಯ ಜೀವನ ಎಲ್ಲವು ನೆಮ್ಮದಿಯಿಂದ ಇರುತ್ತದೆ"  
 
ಅವಳನ್ನು    ಓಲೈಸಿದ, ಅವಳು ಓಡಿಹೋಗದಂತೆ ಬಿಗಿಯಾಗಿ ಅವಳ ಕೈ ಹಿಡಿದಿದ್ದ. ಆದರೆ ಶಾಲಿನಿಯ ಕೂಗಾಟ ನಿಲ್ಲಲಿಲ್ಲ. 
"ನಾನು ನಿನ್ನ ಜೀವನ ಉಳಿಸುವದಿಲ್ಲ, ನನ್ನ ಹಾಗು ಅಕ್ಕ ಜಾನಕಿಯ ಬಾಳು ಹಾಳುಮಾಡಿದ ನೀನು ಪೋಲಿಸ್ ಹತ್ತಿರ ಹೋಗಲೆ ಬೇಕು ಹಾಗೆ ಮಾಡುವೆ" ಹುಚ್ಚುಹಿಡಿದಂತೆ ಕೂಗಾಡುತ್ತಿದ್ದಳು, 
ತಮ್ಮಯ್ಯಪ್ಪ ಅವಳ ಬಾಯಿ ಒತ್ತಿ ಹಿಡಿದ ಕೂಗಾಡದಂತೆ, ಅವಳು ನಾಗಿಣಿಯಂತೆ ಸೆಣಸುತ್ತಿದ್ದಳು, ಬಿಡಿಸಿಕೊಳ್ಳಲು ಹೋರಾಡುತ್ತಿದ್ದಳು. ಅವನು ವಿದಿಯಿಲ್ಲ ಎಂಬಂತೆ ಅವಳ ಕುತ್ತಿಗೆಗೆ ಕೈ ಹಾಕಿದ,  ಎರಡು ಮೂರು ನಿಮಿಷಗಳು , ಅವಳ ಕೂಗಾಟ ನಿಂತಿತು,  ಅವಳ ಉಸಿರು ನಿಂತ ಪಕ್ಕಕ್ಕೆ ಒರಗಿದಳು, 
 
ಅವಳತ್ತ ವಿಷಾದದಿಂದ ನೋಡಿದ ತಮ್ಮಯ್ಯಪ್ಪ,
"ಶಾಲಿನಿ ನಿನ್ನದು ಪುನರ್ಜಮವೊ ಇಲ್ಲ , ಚಂದ್ರಳ ಆತ್ಮದ ಅವಾಹನೆಯೊ ನನಗೆ ತಿಳಿಯದು, ಆದರೆ ನನಗೆ ನನ್ನ ಸುರಕ್ಷತೆ ಮುಖ್ಯ, ನಿನ್ನನ್ನು ಕೊಲ್ಲುವ ಬಯಕೆ ನನಗೇನು ಇರಲಿಲ್ಲ, ಆದರೆ ಆ ಸಂದರ್ಭವನ್ನು ನೀನೆ ಸೃಷ್ಟಿಸಿದೆ, ಚಂದ್ರಳಾಗಿ ಬಂದಾಗಲು ನನ್ನಮಾತು ಕೇಳಲಿಲ್ಲ, ಮತ್ತೆ ಶಾಲಿನಿಯಾಗಿ ಬಂದರು ನನ್ನಮಾತು ಕೇಳಲಿಲ್ಲ.  ನನ್ನನ್ನು ಅಸಹಯಾಕನನ್ನಾಗಿಸಿದೆ,    ನಾನು ಮಾಡಿದ ಒಂದು ಕೊಲೆಗೆ ಎರಡು ಬಾರಿ ಸಾಕ್ಷಿಯಾಗಿ ಬಂದು ನನ್ನನ್ನ ಇಕ್ಕಟ್ಟಿಗೆ ಸಿಕ್ಕಿಸಿದೆ. ನನ್ನನ್ನು ಕ್ಷಮಿಸಿಬಿಡು, ಮಗು " 
ಅಂದವನು ಶಾಲಿನೆಯ ಮೃತದೇಹವನ್ನು ಎತ್ತಿ ನಿದಾನಕ್ಕೆ ಮಂಟಪದ ಹತ್ತಿರ ನಡೆದು , ಹಿಂದಿದ್ದ ಹಾಳು ಬಾವಿಗೆ ಜಾರಿಬಿಟ್ಟ . 
ಒಂದು ಕ್ಷಣ ಮೌನವಾಗಿ ನಿಂತು, ನಂತರ ರಸ್ತೆಯಲ್ಲಿ ನಿಲ್ಲಿಸಿದ ಕಾರಿನ ಕಡೆಗೆ ನಡೆಯಲು ಪ್ರಾರಂಬಿಸಿದ. ಅವನಿಗೆ ಗೊತ್ತಿತ್ತು ಕಾಫಿಕಾರ್ಮಿಕರೆಲ್ಲ ತಮಿಳುನಾಡಿಗೆ ಹಬ್ಬಕ್ಕೆ ಹೋಗಿದ್ದಾರೆ, ಸುತ್ತಮುತ್ತ ತೋಟಗಳಲ್ಲಿ ಸಹ ಯಾರು ಇಲ್ಲ. ಕಡೆ ಪಕ್ಷ ಎರಡುಮೂರು ಮೈಲು ಸುತ್ತಳತೆಯಲ್ಲಿ  ಯಾರು ಇಲ್ಲ ಎಂದು. ರಸ್ತೆ ತಲುಪಿ , ತನ್ನ ಕಾರನ್ನು ಹತ್ತಿ ನಿದಾನಕ್ಕೆ ಮೂಡಿಗೆರೆ ರಸ್ತೆಯ ಕಡೆ ಕಾರು ತಿರುಗಿಸಿದ, ಅಲ್ಲಿಂದ ಹಾಸನಕ್ಕೆ ಹೋಗುವ ಕಾರ್ಯಕ್ರಮವಿತ್ತು.
 
ಶೃಂಗೇರಿಯಿಂದ ಬಂದ ಗೆಳತಿಯರಿಗೆ ಅಘಾತ ಕಾದಿತ್ತು, ಶಾಲಿನಿ ಕಣ್ಮರೆಯಾಗಿದ್ದಳು. ಬೆಂಗಳೂರಿನಿಂದ ಅವರ ಅಪ್ಪ ಅಮ್ಮ ಬಂದರು. ಹಳ್ಳಿಯ ಜನರೆಲ್ಲ ಹುಡುಕಿದರು, ಕಡೆಗು ಅವಳು ತೋಟದ ಭಾವಿಯಲ್ಲಿ ಬಿದ್ದಿರುವುದು ಪತ್ತೆಯಾಯಿತು. ಪೋಲಿಸರು ಬಂದರು, ಅಕಸ್ಮಿಕವಾಗಿ ಬಾವಿಗೆ ಬಿದ್ದಿರಬಹುದೆಂದೆ ಎಲ್ಲರು ಭಾವಿಸಿದರು.  ಶಾಲಿನಿಯ ಅಪ್ಪ ಅಮ್ಮನೆ ಪೋಲಿಸರನ್ನು ಇದೊಂದು ಆಕಸ್ಮಿಕದಂತೆ ಕಾಣುತ್ತಿದೆ ತಮಗೆ ಯಾವುದೆ ಅನುಮಾನವಿಲ್ಲ ಎಂದು ತಿಳಿಸಿ ಒಪ್ಪಿಸಿದರು. ಊರಿನ ದೊಡ್ಡಕುಳಗಳು ತಮ್ಮಯ್ಯಪ್ಪನವರು ಅವರ ಪ್ರಭಾವವು ಇದ್ದಿತು.  ಗೆಳತಿಯರೆಲ್ಲ ತಮ್ಮಿಂದ ದೂರವಾದ ಶಾಲಿನಿಗಾಗಿ ವ್ಯಥೆ ಪಡುತ್ತಲೆ ಬೆಂಗಳೂರಿಗೆ ಹೊರಟರು. 
 
ಚಿತ್ರಾಳ ಮನದಲ್ಲಂತು ಎಂತದೊ ಒಂದು ಚಿಂತೆ ಕಾಡುತ್ತಿತ್ತು, ಶಾಲಿನಿ ತಮ್ಮ ಮನೆಗೆ ಬಂದಾಗಲಿಂದಲು ಅದೇಕೆ ವಿಚಿತ್ರವಾಗಿ ವರ್ತಿಸುತ್ತಿದ್ದಳು, ಮತ್ತು ಅದೇಕೆ ಭಾವಿಯ ಹತ್ತಿರ ಹೋಗಿ ಬಿದ್ದಳು ಎನ್ನುವುದು. ಅದು ಅವಳ ಯೋಚನೆಗಳಿಗೆ ನಿಲುಕದ ವಿಚಾರವಾಗಿತ್ತು.
 
ಮುಗಿಯಿತು.
 
ಚಿತ್ರ ಕೃಪೆ : ತೋಟದ ಮನೆ     ತೋಟದ ಬಾವಿ 
 
Rating
No votes yet

Comments

Submitted by kavinagaraj Thu, 03/28/2013 - 15:50

ಚೆನ್ನಾಗಿ ಓದಿಸಿಕೊಂಡು ಹೋದ ಕಥಾಸರಣಿಗೆ ಧನ್ಯವಾದ, ಪಾರ್ಥರೇ. ಅಂತ್ಯ ಮಾತ್ರ ನನಗೆ ಇಷ್ಟವಾದುದಾಗಿರಲಿಲ್ಲ. ಪರಿಸ್ಥಿತಿ ಅರ್ಥ ಮಾಡಿಕೊಂಡು ಚಂದ್ರಾ/ಶಾಲಿನಿ ಕ್ಷಮಿಸುವಂತೆ ತೋರಿಸಬಹುದಿತ್ತು. ಅಥವಾ ಬೇರೊಂದು ರೀತಿಯ ಅಂತ್ಯ ಕಾಣಿಸಬಹುದಿತ್ತು. ಆದರೆ ಅಂತ್ಯ ನಮಗೆ ಇಷ್ಟವಾಗುವುದೇ ಆಗಬೇಕಿಲ್ಲ ಅನ್ನುವುದೂ ಸರಿಯೇ!

Submitted by partha1059 Sat, 03/30/2013 - 21:48

In reply to by kavinagaraj

ಕವಿನಾಗರಾಜರೆ ನಮಸ್ಕಾರಗಳು
ನನ್ನ ಕತೆಯ ಪ್ರಾರಂಬಕ್ಕೆ ಇದ್ದ ಒಂದೆ ಒಂದು ಸಾಲು "ಒಂದೆ ಕೊಲೆಗೆ ಒಬ್ಬಳೆ ಎರಡು ಬಾರಿ ಸಾಕ್ಷಿಯಾಗಿ ಬಂದು ಎರಡನೆ ಸಾರಿಯು ಪೆದ್ದು ಪೆದ್ದಾಗಿ ಸಾಯುತ್ತಾಳೆ" ಎನ್ನುವುದು ಹಾಗಿರುವಲ್ಲಿ ನೀವು ಹೇಳಿರುವ ಅಂತ್ಯ ನನಗೆ ಹೊಳೆಯಲು ಹೇಗೆ ಸಾದ್ಯ. ಅಲ್ಲದೆ ಒಂದು ವೇಳೆ ನೀವು ಹೇಳಿದಂತೆ ಎಲ್ಲರು ಬದುಕಿದ್ದರೆ ಶಾಲಿನಿಯ ಗತಿ ಎನು, ಜೀವನ ಪೂರ್ತಿ ಹಿಂದಿನ ಜನುಮದ ನೆನಪಲ್ಲಿ ಬದುಕಲು ಸಾದ್ಯವೆ . ಹಾಗಾಗಿ ಸಾಮಾನ್ಯವಾಗಿ ಮರುಜನ್ಮದ ಕತೆಗಳು ಸಾವಿನಲ್ಲಿಯೆ ಕೊನೆಗಾಣುತ್ತವೆ
-ಪಾರ್ಥಸಾರಥಿ

Submitted by ಗಣೇಶ Thu, 03/28/2013 - 23:47

ಪಾರ್ಥರೆ, ಕತೆ ಸೂಪರ್. ಅದಕ್ಕೆ ತಕ್ಕ ಹಾಗೇ ಚಿತ್ರಗಳನ್ನೂ ಸೇರಿಸಿದ್ದೀರಿ. ಕವಿನಾಗರಾಜರೆ, ಕತೆಗೆ ೩ ಅಂತ್ಯ ಕೊಡಬಹುದು. ಒಂದು ನೀವು ಹೇಳಿದಂತೆ ಕ್ಷಮಿಸುವುದು. ಎರಡನೆಯದು ಶಾಲಿನಿಯೇ ಚಿಕ್ಕಪ್ಪನನ್ನ ಬಾವಿಗೆ ತಳ್ಳುವುದು. ಮೂರನೆಯದು ಪಾರ್ಥರು ಈಗ ಬರೆದಿರುವುದು. ಕತೆಯ ಅಂತ್ಯಕ್ಕೆ ಬರುತ್ತಿದ್ದಂತೆ, ಚಿಕ್ಕಪ್ಪನ ವಿವರಣೆ ಕೇಳುತ್ತಿದ್ದಂತೆ ಕ್ಷಮೆಗೆ ಯೋಗ್ಯ ಅನಿಸುವುದು. ಕೊಲೆಯಾದವಳು(ಹಿಂದಿನ ಜನ್ಮದಲ್ಲಿ) ಆತನ ಈ ವಿವರಣೆ ನಂಬಲು ಸಾಧ್ಯವಿಲ್ಲ. ಆತನನ್ನೇ ಕೆರೆಗೆ ತಳ್ಳಿ ಕೊಲ್ಲಬಹುದು. ಅದು ನಿರೀಕ್ಷಿತ ಕೊನೆಯಾಗುವುದು. ಈಗ ಪಾರ್ಥರು ಕೊಟ್ಟಿರುವ ಅಂತ್ಯನೇ ಬೇಸರವಾದರೂ ಸರಿಯಾಗಿದೆ. ಉತ್ತಮ ಕತೆಗಾಗಿ ಪಾರ್ಥರಿಗೆ ಧನ್ಯವಾದಗಳು.

Submitted by partha1059 Sat, 03/30/2013 - 21:54

In reply to by ಗಣೇಶ

ಗಣೇಶರೆ ನಮಸ್ಕಾರ. ಮೆಚ್ಚುಗೆಗೆ ವಂದನೆಗಳು. ಎಷ್ಟು ದೊಡ್ಡ ಕತೆ ಬರೆದರು ಒಂದು ಪ್ರತಿಕ್ರಿಯೆ ಸಹ ಬರಲಿಲ್ಲ ಎಂದು ಯೋಚಿಸುವಾಗಲೆ ನಿಮ್ಮ ಹಾಗ ನಾಗರಾಜ ಪ್ರತಿಕ್ರಿಯೆ ಬಂದಿತು. ಚಿಕ್ಕಪ್ಪನಂತ ದೊಡ್ಡ ಗಂಡಸನ್ನು ಶಾಲಿನಿಯಂತ ಹುಡುಗಿ ನೀರಿನಲ್ಲಿ ನೂಕಲು ಕಷ್ಟವೆ. ಅಲ್ಲದೆ ಅವನು ಮೊದಲೆ ಸಿದ್ದನಾಗಿ ಬಂದಿದ್ದ ಅಲ್ಲವೆ. ಚಂದ್ರಳ ಮನಸ್ಸು ಅತೀವ ಒತ್ತಡದಲ್ಲಿತ್ತು, ಹಾಗಾಗಿ ನಾನು ಕೊಟ್ಟ ಅಂತ್ಯ.
ಮತ್ತೆ ನಿಮ್ಮ ಪಕ್ಕದ ಫ್ಲಾಟ್ ನಿರ್ಮಾಣ ಎಲ್ಲಿಯವರೆಗು ಬಂದಿತು, ಸಾದ್ಯವಾದಲ್ಲಿ ನಮಗೂ ಒಂದು ಫ್ಲಾಟ್ ಅದರಲ್ಲಿ ನೋಡಿ, ...................................... ನನಗೆ ಬೆಳಗಿನ ಪೇಪರ್ ಖರ್ಚು ಉಳಿಯುತ್ತದೆ

Submitted by ಗಣೇಶ Sat, 03/30/2013 - 23:11

In reply to by partha1059

ಪಾರ್ಥರೆ, ಜನ್ಮಜನ್ಮಾಂತರದ ಕತೆಯಲ್ಲೂ ಪ್ರತೀ ಬಾರಿ ಸ್ತ್ರೀಯನ್ನು ಕೊಲೆ ಮಾಡಿಸಿ, ತಾವು ಪುರುಷಪಕ್ಷಪಾತಿ ಅಂತ ತೋರಿಸಿದಿರಿ. :) ನಮ್ಮ ಫ್ಲಾಟ್‌ನ ಹೆಂಗಸರನ್ನೆಲ್ಲಾ ಕರಕೊಂಡು ಬಂದು ನಿಮ್ಮ ಮನೆಯೆದುರು ಧರಣಿ ಕುಳಿತುಕೊಳ್ಳಬೇಕು ಅಂತ ಇದ್ದೇನೆ.:)>>>ಸಾದ್ಯವಾದಲ್ಲಿ ನಮಗೂ ಒಂದು ಫ್ಲಾಟ್ ಅದರಲ್ಲಿ ನೋಡಿ,-ನೋಡುವುದಾ...ನಿಮಗೆ ಬೇಕು ಅಂತ ಹೇಳಿ ಖಾಲಿ ಮಾಡಿಸಿ ಕೊಡುತ್ತೇನೆ.(ನನ್ನ ಫ್ರೆಂಡ್‌ಗೆ ನಿಮ್ಮ ಫ್ಲಾಟ್ ಬೇಕಂತೆ, ಈಗಾಗಲೇ ೩ ಕೊಲೆ ಮಾಡಿದ್ದಾರೆ. ಅಂದರೆ ಸಾಕು :) ) >>>ನನಗೆ ಬೆಳಗಿನ ಪೇಪರ್ ಖರ್ಚು ಉಳಿಯುತ್ತದೆ...-ಸಾರಿ ಸಾರಿ ಹೇಳಿದ ಮೇಲೂ ಪೇಪರ್‌ಗಾಗಿ ಇನ್ನೂ ಖರ್ಚು ಮಾಡುತ್ತಿದ್ದೀರಾ? ಸಪ್ತಗಿರಿನೇ ವಾಸಿ-ಬೀಡಾ ಅಂಗಡಿಯಲ್ಲಿ ಓದುತ್ತಾರೆ.:)

Submitted by venkatb83 Mon, 04/01/2013 - 13:40

;())) ಈಗ‌ ನಾ ಪು‍. ಸ‌.ವಾ....!! ಪುಸ್ತಕ‌ ಓದೋ ಸ‌ ವಾ ಅಲ್ಲ‌...!! ಪುಕ್ಸಟ್ಟೆ ಓದೋ ಸ‌.ವಾ... ಹಹ್ಹ್ಹಹಹಾಅ...

ಶ್ಹುಭವಾಗಲಿ..

\|

Submitted by Shreekar Thu, 04/11/2013 - 11:23

In reply to by ಗಣೇಶ

"" ಶೆಟ್ರೆ...ಓಳುಳ್ಳರ್ಯೇ ... "

ಗಣೇಶಣ್ಣಾ,

"ತುಲು" ಭಾಷೆಯ ಮುಖ್ಯ ಪ್ರಬೇಧದಲ್ಲಿ ಳ ಕಾರ ವರ್ಜ್ಯ ಎಂದು ಸಂಪದದ ಈ ಹಳೆಯ ಒಂದು ಪುಟದಲ್ಲಿ ( http://sampada.net/comment/104735 ) ಮಾನ್ಯ ಉಉನಾಶೆಯವರು ಈ ರೀತಿಯಾಗಿ ಉಲಿದಿದ್ದಾರೆ - " ಸಾಮಾನ್ಯವಾಗಿ ಬಳಕೆಯಲ್ಲಿರುವ ತುಳುವಿನಲ್ಲಿ "ಳ"ಕಾರ ಇಲ್ಲ. ಯಾವುದೊ ಒಂದು ಒಳನುಡಿಯಲ್ಲಿದೆ ಅಂತ ಕೇಳಿದ ನೆನಪು...."

ಈ ಹಿನ್ನೆಲೆಯಲ್ಲಿ ನೀವು ಬಳಸಿದ "ಓಳುಳ್ಳರ್ಯೆ" ಮೂರು ಳಕಾರ ಉಲ್ಲ ಪದ ಯಾವ ಸೀಮೆಯದ್ದು?

ತುಳು ಎನ್ನುವ ಪದದಲ್ಲೇ ಳ ಕಾರವಿದೆ. ಹಾಗೆಯೇ ತುಲುನಾಡ ಒಂದು ಪ್ರಸಿದ್ದ ಮನೆತನದ ಹೆಸರು ಆಳ್ವ ಎನ್ನುವಲ್ಲಿಯೂ ಳಕಾರವಿದೆ.

Submitted by ಗಣೇಶ Thu, 04/11/2013 - 23:33

In reply to by Shreekar

>>> "ತುಲು" ಭಾಷೆಯ ಮುಖ್ಯ ಪ್ರಬೇಧದಲ್ಲಿ ಳ ಕಾರ ವರ್ಜ್ಯ ....--ಒಂದೆರಡು ವಾಕ್ಯದಿಂದಲೇ ಈ ಜನ ಎಲ್ಲಿಯವರು..ಯಾವ ಜಾತಿ ಎಲ್ಲಾ ತುಳು ಜನ ಅಂದಾಜು ಮಾಡುವರು.:) ಹೆಚ್ಚಿನ ಜನ ಓಲುಲ್ಲರ್ಯೆ ಎಂದು ಹೇಳುವರು. ಕೆಲ ಭಟ್ರುಗಳು ಮಾತ್ರ ನಾಲಗೆಯನ್ನು ಕಷ್ಟಪಟ್ಟು ಹೊರಳಿಸಿ ಓಳುಳ್ಳರ್ಯೆ ಅನ್ನುವರು. ಳಕಾರ ಬಳಕೆಯಲ್ಲಿದೆ.

Submitted by Shreekar Fri, 04/12/2013 - 17:41

In reply to by ಗಣೇಶ

ಸಪ್ತಗಿರಿವಾಸಿಯವರೇ, ಗಣೇಶರ ಹೆಸರ ಮುಂದೆ... ಭಟ್ ಸೇರಿಸಿ ಅವರ ಐಡೆಂಟಿಟಿ ಪತ್ತೆ ಹಚ್ಚುವಲ್ಲಿ ಇನ್ನೊಂದು ಕುರುಹು ಗುರುತುಮಾಡಿಕೊಳ್ಳಿ.

ಇದಕ್ಕೆ ಇಲ್ಲಿದೆ ಪುರಾವೆ: "... ಹೆಚ್ಚಿನ ಜನ ಓಲುಲ್ಲರ್ಯೆ ಎಂದು ಹೇಳುವರು. ಕೆಲ ಭಟ್ರುಗಳು ಮಾತ್ರ ನಾಲಗೆಯನ್ನು ಕಷ್ಟಪಟ್ಟು ಹೊರಳಿಸಿ ಓಳುಳ್ಳರ್ಯೆ ಅನ್ನುವರು." ಗಣೇಶಣ್ಣರು ಓಳುಳ್ಳರ್ಯೆ ಎಂದು ತಮಗರಿವಿಲ್ಲದೆ ಬಳಸಿ ತಮ್ಮ ಗುಟ್ಟು ಬಿಟ್ಟುಕೊಟ್ಟಿದ್ದಾರೆ. :-)))

Submitted by venkatb83 Fri, 04/12/2013 - 18:05

In reply to by Shreekar

"ಗಣೇಶಣ್ಣರು ಓಳುಳ್ಳರ್ಯೆ ಎಂದು ತಮಗರಿವಿಲ್ಲದೆ ಬಳಸಿ ತಮ್ಮ ಗುಟ್ಟು ಬಿಟ್ಟುಕೊಟ್ಟಿದ್ದಾರೆ. :-)))"

ಶ್ರೀಕರ್ ಜೀ ಗಣೇಶ್ ಅಣ್ಣ ಅವರು ಇವರಲ್ಲಿ ಒಬ್ರ ?

ಗಣೇಶ್ ಭಟ್ , ಗಣೇಶ್ ಕಾಮತ್ , ಗಣೇಶ್ ಆಚಾರ್ಯ , ಗಣೇಶ್ ಪಂಡಿತ್ , ಗಣೇಶ್ ರಾವ್ ಈ ಹೆಸರುಗಳಲ್ಲಿ ಯಾವ್ದಾರ ಒಂದು ಆಗಿರಬಹುದ ಎಂದು ಬಹು ದಿನಗಳ ಹಿಂದೆಯೇ ನನಗೆ ಅನ್ನಿಸಿತ್ತು ....!!
ಆದರೆ ಒಂದೊಂದು ತಿಂಗಳಲ್ಲಿ ಅವರೆ ಹೇಳಿದ ಹಾಗೆ ಅವರ ಬಗೆಗಿನ ವಿಶಿಸ್ತ ವಿಸ್ಯಗಳು ಆಚೆ ಬರುತ್ತಿವೆ ,ಈಗ ನೋಡಿ ಅವರು ಹುಬ್ಳೀ ಯವರು ..!!
ಆಪರೇಶನ್ ಗಣೇಶ್ ಹಂಟ್- ೨ ಅತಿ ಶೀಘ್ರದಲ್ಲಿ ಆರಂಭವಾಗಲಿದೆ

ರೋಚಕ ಸುದ್ಧಿ ಮಾಹಿತಿಗಾಗಿ ಕಾಯ್ತಿರಿ ...

ಶುಭವಾಗಲಿ..
\।