ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಢ(7)

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಢ(7)

ಚಿತ್ರ

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ  ನಿಗೂಢ(7)

 

 

 

ಬಿಸಿಲಿನಲಿ ಬೀದಿ  ಅಲೆದಲೆದು

ಹಾದಿ ಬೀದಿಯಲಿ ತಿರುದು ತಿಂದು

ಬಯಲಿನಲ್ಲಿ ರಾತ್ರಿ ಮಲಗಿದರೂ

ಒಲಿದು  ಅಪ್ಪುವ  ಸುಖ ನಿದ್ರೆ

 

ವಾತಾನುಕೂಲಿಯಲ್ಲಿ  ತಲೆಯನಿಟ್ಟು

ಮಧುರವಾದುದನೆ  ಸವಿದು ತಿಂದು

ನವಿಲುಗರಿಯ ಮೆತ್ತೆಯಲ್ಲಿ ಮಲಗಿದವನಿಗೆ

ಹತ್ತಿರ ಸುಳಿಯದಲ್ಲ ಅದೆ  ನಿದ್ರೆ

 

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಢ

ಪ್ರಕೃತಿ ಒಳ್ಳೆಯ ವ್ಯಾಪಾರಿ

ಅದು ಒಂದನ್ನು ‘ಕೊ’ ಎಂದು ಕೊಟ್ಟರೆ

ಮತ್ತೊಂದನ್ನು ತಾ ಎಂದು ಪಡೆದುಬಿಡುವುದು 

 

 

 ಚಿತ್ರ ಮೂಲ :  sleepless nights

Rating
No votes yet

Comments

Submitted by makara Thu, 08/15/2013 - 22:44

In reply to by partha1059

ಪಾರ್ಥ ಸರ್,
ಇದರಲ್ಲಿ ಸರಿಯಾಗಿಯೇ ಇದೆ. ಒಟ್ಟಾರೆಯಾಗಿ ಅದು ಪದ್ಯವೋ ಗದ್ಯವೋ ಯಾವುದಾದರೇನು, ಹೇಳುವವನ ಭಾವನೆ ಕೇಳುಗನಿಗೆ ಮುಟ್ಟಬೇಕು. ಅದು ಇದರಲ್ಲಿ ಆಗಿದೆ ಬಿಡಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ