ಶಾಲಾ ಮಕ್ಕಳ ತುತ್ತು, ಮರೆಯಲಾಗದ ಸ್ವತ್ತು!!

ಶಾಲಾ ಮಕ್ಕಳ ತುತ್ತು, ಮರೆಯಲಾಗದ ಸ್ವತ್ತು!!

ಕಾಲೇಜಿನಲ್ಲಿ ರೋಟರಿ ಕ್ಲಬ್ಬಿನ ವಿದ್ಯಾರ್ಥಿ ಶಾಖೆ. ಅದರಿಂದ ನಮಗಾದ ಅಳಿಲು ಸಮಾಜ ಸೇವೆ. ಈ ಬಾರಿ, ಸ್ವಾತಂತ್ರ್ಯ ದಿನದ ಪ್ರಯುಕ್ತ ನಮ್ಮಿಂದ ಏನಾದರು ಆಗಬೇಕೆಂಬ ಹಂಬಲವಾಯ್ತು. ಸರ್ಕಾರಿ ಶಾಲಾ ಮಕ್ಳಿಗೆ ಏನಾದ್ರು ಯಾಕ್ ಮಾಡ್ಬಾರ್ದು ಅಂತ ಅನಿಸ್ತು. ಇದೆ ಸರಿ ಅಂತ ನಿರ್ಧಾರಾನೂ ಆಯ್ತು. ೧ ರಿಂದ ೭ನೇ ತರಗತಿಯ ವರೆಗು ಚಿತ್ರರಚನೆಯ ಸ್ಪರ್ಧೆ ಮಾಡೋಣ ಅಂತ ತಯಾರಿ ಮಾಡಿದ್ವಿ. ಅದರ ಪೂರ್ವ ತಯಾರಿಗಳೂ ಮುಗಿದ್ವು. ಉತ್ತರಹಳ್ಳಿ(ಬೆಂಗಳೂರು), ಅಲ್ಲಿರುವ ಸರ್ಕಾರಿ ಶಾಲೆಗೆ ಹೋಗೋದಾಗಿ ಅನುಮತಿ ಪಡೆದ್ವು. 

೧೪ನೇ ತಾರೀಕಿನಂದು ಚಿತ್ರ ರಚನೆ ಸ್ಪರ್ಧೆ ಹಾಗು ೧೫ನೇ ತಾರೀಕಿಗೆ ಬಹುಮಾನ ವಿತರಣೆ ಎಂದು ಸಜ್ಜಿಸಿದೆವು. ೧೪ನೇ ತಾರೀಕಿನಂದು ೪೬ ಜನ ಈ ಕಾರ್ಯಕ್ಕೆಂದು ಹೊರಟೆವು. ಚಿತ್ರ ರಚನೆ ಆದ ನಂತರ ಅವರಿಗೆ ಆಟ ಆಡ್ಸಿದ್ವಿ, ಊಟ ಮಾಡ್ಸಿದ್ವಿ. ಅವ್ರು ನಮ್ಗೆ ತುತ್ತು ಕೊಟ್ಟಾಗ ಆದ ಸಂತೋಷ ಹೇಳಲು ಅಸಾಧ್ಯ. ಅಲ್ಲಿ ಹೋಗಿ ಆ ಮಕ್ಕಳೊಡನೆ ಬೆರೆತು ಬಹಳ ಸಂತೋಷ ಆಯ್ತು. ಆ ಮಕ್ಕಳು ಅಣ್ಣ, ಅಕ್ಕ ಹೋಗ್ಬೇಡಿ ಅಂದಾಗ ಅವರ ಮುಗ್ಧ ಪ್ರೀತಿಗೆ ಮಾತೆ ಬರಲಿಲ್ಲ. ಆ ಆನಂದ ಹೇಳಲಾಗದು, ಬಹಳ ಮನಸ್ಸನ್ನು ಮುಟ್ಟಿತು ಅವರ ಪ್ರೀತಿ, ಮುಗ್ಧ ರೀತಿ.

ಅಂದು ಮನಕೆ ಬಂದ ಸಾಲ್ಗಳಿವು..........

 

ಹೋದದ್ದು ಸರ್ಕಾರಿ ಶಾಲೆ, ಉತ್ತರಹಳ್ಳಿ.

ಅದಾಗಬೇಕು ಮಕ್ಕಳಿಂದ ಎತ್ತರ ಬಳ್ಳಿ.

ಮಕ್ಕಳ ಪ್ರೀತಿ ನಮಗಾಯಿತ ಖುಷಿಯ ಸರಪಳಿ

ಪ್ರತಿಯೊಬ್ಬರಿಗೂ ಅನಿಸಿತು ಬರಬೇಕೆಂದು ಮತ್ತೆ ಮರಳಿ.

 

ಹೋಗುವಾಗ ಇದ್ದದ್ದು ನಲವತ್ತಾರು ಜನ

ಬರುವಾಗ ಗೆದ್ದದ್ದು ನೂರಾರು ಮನ

ಮೊದಲಿಗೆ ನಮಗದು ಆನಂದದ ಸದನ

ಅವರನ್ನು ಬಿಟ್ಟು ಬರುವಾಗ ಹಲವರದ್ದು ಕಂಬನಿಯ ಕದನ.

 

ಮದಲಿಗೆ ಕೇಳಿದೆವು ಮಕ್ಕಳ ಪದ್ಯದ ಕಿರುಚಾಟ

ನಂತರ ನೋಡಿದೆವು ಅವರು ಮಾಡಿದ ಬಣ್ಣಗಳ ಮಾಟ

ಅದರ ಮಧ್ಯೆಯೇ ಕಲಿಸಿದೆವು ಕೊಂಚ ಪಾಠ

ಅದಾದ ನಂತರ ಆಟ, ಬಿಸಿ ಊಟ.

 

ಅವರ ಸ್ಥಿತಿಗಳಿಗೆ ಮನ ಮರುಗಿತು

ಅವರ ಕಷ್ಟ ನೋಡಿ ಮನ ಸೊರಗಿತು

ಮೊದಲೇ ನಾವಿಲ್ಲಿ ಬರಬೇಕೆತ್ತೆಂದು ಮನ ಕೊರಗಿತು

ಅವರ ಮುಗ್ಧ ಪ್ರೀತಿಗೆ ನಮ್ಮ ಸ್ತಬ್ಧ ಮನ ಕರಗಿತು.

 

ಅವರು ಕೊಟ್ಟ ಪ್ರೀತಿಯ ತುತ್ತು, ಮುತ್ತು

ಜೀವನದುದ್ದಕ್ಕೂ ಮರೆಯಲಾಗದ ಸ್ವತ್ತು

ನಮ್ಮ ಜೇವನ, ಆಧುನಿಕತೆಯ ತೋರ್ಪಡಿಕೆಯ ಮಿಥ್ಯ

ಇದು ತಿಳಿದದ್ದು, ನೋಡಿದಾಗ ಮಕ್ಕಳ ಮುಗ್ಧ ಖುಷಿಯ ಸತ್ಯ. 

 

ಇದು ನಮಗಾದ ಪುಟ್ಟ ಅನುಭವ, ಸಂತೋಷ, ಆನಂದ, ಖುಷಿ!!!!!

 

                                                                                                                                                                                                                                  

Rating
No votes yet