ಭಗವದ್ಗೀತೆಯ ರಚನೆಗೆ ಕಾರಣನಾದ ಒಬ್ಬ ಸಾಮಾನ್ಯ ರೈತ

ಭಗವದ್ಗೀತೆಯ ರಚನೆಗೆ ಕಾರಣನಾದ ಒಬ್ಬ ಸಾಮಾನ್ಯ ರೈತ

ನಿಮಗೆಲ್ಲ ತಿಳಿದ ಹಾಗೆ ಭಗವದ್ಗೀತೆಯನ್ನು ಜಗತ್ತಿಗೆ ಭೋದಿಸಿದ್ದು ಶ್ರೀಕೃಷ್ಣ, ಅದಕ್ಕೆ ಭಾಷ್ಯಾ ಬರೆದದ್ದು ಆಧಿ ಶಂಕರಚಾರ್ಯರು. ಅವರು ಆ ಭಾಷ್ಯಾ ಬರೆಯಲು ಕಾರಣವಾದ ಒಂದು ಕುತೂಹಲದ ಸನ್ನಿವೇಶವನ್ನು ಹೇಳುತ್ತೆನೆ.

15 ವರ್ಷದ ಶಂಕರಚಾರ್ಯರು ಬ್ರಹ್ಮಗ್ರಂಥ, ಉಪನಿಷತ್ತುಗಳಿಗೆ ಭಾಷ್ಯಾ ಬರೆಯಲು ಬದರೀಯಲ್ಲಿನ ವ್ಯಾಸರ ಗುಹೆಯಲ್ಲಿ ನೆಲೆಯೂರಿದ್ದರು.
ಶಂಕರರು ಸಂಜೆ ಹೊತ್ತಿನಲ್ಲಿ ತಮ್ಮ ನಾಲ್ಕು ಶಿಷ್ಯರಿಗೆ ಮತ್ತು ಅಲ್ಲಿನ ಜನರಿಗೆ ಪ್ರವಚನ ನೀಡುತ್ತಿದ್ದರು. ಇವರ ಪ್ರವಚನ ಕೆಳಲು ಅಲ್ಲಿನ ಬ್ರಾಹ್ಮಣರೆಲ್ಲರೂ ಭಾರೀ ಸಂಖ್ಯೆಯಲ್ಲಿ ಬರತೊಡಗಿದರು, ಅವರ ಜೊತೆಗೆ ಅಲ್ಲಿನ ಒಬ್ಬ ಸಾಮಾನ್ಯ ರೈತನೂ ಬರತೊಡಗಿದ. ಕೆಲವೊಂದು ಬಾರಿ ಪ್ರವಚನದ ಮಧ್ಯೆ ಶಂಕರರು ಕಣ್ಣು ಬಿಟ್ಟು ನೋಡುವಾಗ, ಎಲ್ಲರೂ ಗಮನವಿಟ್ಟು ಕೇಳುತ್ತಿದ್ದರೆ, ಈ ರೈತ ಮಾತ್ರ ತನ್ನನ್ನೆ ಮರೆತು ಕುಳಿತು ಬಿಡುತ್ತಿದ್ದ. ಒಂದು ದಿನ ಪ್ರವಚನ ಮುಗಿದು ಜನರೆಲ್ಲ ಹೊರಟೋದಾಗಲು ಈತ ಕೂತೆ ಇದ್ದ. ತನ್ನನ್ನೆ ಮರೆತು ಈ ಭಾರಿ ಶ್ರದ್ದೆಯಿಂದ ಕೇಳುವ ಭಾಗ್ಯ ತನಗಿಲ್ಲವಲ್ಲವೆಂದು ಶಂಕರರ ಶಿಷ್ಯ ವಿಷ್ಣು ಗುಪ್ತ ಶಂಕರರ ಪ್ರವಚನದ ಬಗ್ಗೆ ರೈತನ ಬಳಿ ಮಾತನಾಡಲು ಶುರುಮಾಡುತ್ತಾನೆ, ಆಗ ರೈತ ತನಗೆ ಅವರು ಹೇಳುವುದು ಯಾವುದು ತಿಳಿಯುವುದಿಲ್ಲ, ನಾನು ಅವಿಧ್ಯವಂತ, ರೈತ ಆದರೇ ಶಂಕರರ ಕಣ್ಣು ನೋಡಿದರೆ ಸಾಕು ನನ್ನನ್ನೆ ಮರೆತು ಬಿಡುತ್ತೆನೆಂದು ಆತ ನುಡಿದಾಗ, ವಿಷ್ಣು ಗುಪ್ತ ಈ ವಿಷಯ ಗುರುಗಳಿಗೆ ತಿಳಿಸಿದ, ಶಂಕರರು ಸ್ವಲ್ಪ ಸಮಯ ಚಿಂತಿಸಿದರು. ಬ್ರಾಹ್ಮಣರೆನೊ ಶ್ಲೊಕ, ಮಂತ್ರಗಳನ್ನೆಲ್ಲ ಗುರುಕುಲದಲ್ಲಿ ಕಲಿಯುತ್ತಾರೆ.
ಆದರೇ ಕ್ಷತ್ರಿಯ ವೈಷ್ಯರು ಮತ್ತು ಸಾಮಾನ್ಯರಿಗೆ ಇದು ಲಭ್ಯವಿಲ್ಲ, ಆದ್ದರಿಂದ ಪ್ರತಿ ಸಾಮಾನ್ಯನಿಗೂ ತಿಳಿಯುವ ಮಹಾನ್ ಗ್ರಂಥವೊಂದಕ್ಕೆ ಭಾಷ್ಯಾ ಬರೆಯಲು ನಿಶ್ಚಿಸುತ್ತಾರೆ. ಆ ಗ್ರಂಥವೇ ಭಗವದ್ಗೀತೆ.

ಭಗವದ್ಗೀತೆ ಬರೆದು ಮುಗಿಸುವ ವೇಳೆಗಾಗಲೇ ಶಂಕರಚಾರ್ಯರಿಗೆ ವ್ಯಾಸರ ದರ್ಶನವಾಗುತ್ತದೆ. ಅವರ ಕೊರಿಕೆಯ ಮೇರೆಗೆ ಭಗವದ್ಗೀತೆಯನ್ನು ಈಡೀ ಭಾರತದುದ್ದಕ್ಕು ಪ್ರಚಾರ ಮಾಡಲು ಹೊರಡುತ್ತಾರೆ.

ಇಂದು ಸುಲಭವಾಗಿ ಅರ್ಥವಾಗುವ, ಜೀವನದ ಅರ್ಥವನ್ನ ಸಾರುವ ಗ್ರಂಥ ನಮ್ಮ ಮುಂದೆ ಇರಲು ಕಾರಣ ಆ ಸಾಮಾನ್ಯ ರೈತನೆ.

- ಮುರಳಿ

Comments