ಶ್ರೇಷ್ಠ ಗುಣ

ಶ್ರೇಷ್ಠ ಗುಣ

ನಾವು ಯಾವಾಗಲೂ ಮಹಾನ್ ಕಾರ್ಯಗಳನ್ನೇ ಮಾಡಬೇಕಿಲ್ಲ. ಮಾಡುವ ಯಾವ ಕೆಲಸವನ್ನೇ ಆಗಲಿ ಪ್ರೀತಿಯಿಂದ ಶ್ರದ್ಧೆಯಿಂದ ಮಾಡಿದರೆ ಸಾಕು, ಬದುಕು ಸಾರ್ಥಕವಾಗುತ್ತದೆ.

ಪ್ರತಿಯೊಬ್ಬ ಮನುಷ್ಯನು ಬದುಕಿನಲ್ಲಿ ಮೈಗೂಡಿಸಿಕೊಳ್ಳಬೇಕಾದ ಅತ್ಯಂತ ಶ್ರೇಷ್ಠ ಗುಣವೆಂದರೆ ಮತ್ತೊಬ್ಬರಲ್ಲಿ ಸಹಾನುಭೂತಿ ವ್ಯಕ್ತಪಡಿಸುವುದು.ಸಹಾನುಭೂತಿಯೆಂದರೆ ಒಬ್ಬ ವ್ಯಕ್ತಿ ಅನುಭವಿಸುವ ಸುಖ, ದುಃಖ ಮತ್ತು ನೋವಿನಲ್ಲಿ ನಾವೂ ಭಾಗಿಯಾಗುವ ಪ್ರವೃತ್ತಿ.ಮತ್ತೊಬ್ಬರ ನೋವನ್ನು ನಮ್ಮದೇ ಎಂದು ಭಾವಿಸಿ ಸಹಾಯಹಸ್ತ ಚಾಚುವ ಗುಣ.ಸಹಾನುಭೂತಿಯು ನಮ್ಮಲ್ಲಿ ನಾವೇ ಬೆಳಸಿಕೊಳ್ಳಬಹುದಾದ ಗುಣವಾಗಿದೆ.ಸದಾ ಸಣ್ಣ ಸಣ್ಣ ವಿಚಾರಗಳ ಬಗ್ಗೆ ತಲೆಕೆಡಸಿಕೊಳ್ಳುವವರು ಇಂತಹ ಉದಾತ್ತ ಗುಣಗಳನ್ನು ಮೈಗೂಡಿಸಿಕೊಂಡರೆ ಬದುಕಿನ ನಿಜವಾದ ಅರ್ಥ ಗೋಚರಿಸುತ್ತವೆ.

ಸಹಾನುಭೂತಿಯಲ್ಲಿ ಎರಡು ಅಂಶಗಳಿವೆ.ಒಂದು ನೋವಿಗೆ ಸ್ಪಂದಿಸುವುದು, ಅಂದರೆ ಹೃದಯ ತುಂಬಿ ತೋರುವ ನಿಜವಾದ ಅನುಕಂಪವಾದರೆ ಮತ್ತೊಂದು ಒಬ್ಬರು ಕಷ್ಟದಲ್ಲಿರುವಾಗ ನಾವು ಅವರಿಗೆ ಏನು ಮಾಡಲು ಸಾಧ್ಯ ಎನ್ನುವುದು.ಅದು ತನು, ಮನ, ಧನ ಸಹಾಯವಿರಬಹುದು. ಅಂತಹವರಿಗೆ ನೀಡುವ ಅಮೂಲ್ಯ ಸಮಯ, ಭರವಸೆ, ಉತ್ಸಾಹ ತುಂಬುವ ಮಾತುಗಳಿರಬಹುದು, ಇದರಲ್ಲಿ ಯಾವುದಾದರೂ ಒಂದನ್ನು ಮಾಡಿದರೂ ಸಾಕು, ನೊಂದ ಜೀವಿಗೆ ತಂಪನ್ನು ಈಯುವುದು ನಿಜವಾದ ಮಾನವ ಧರ್ಮವಾಗಿದೆ.

N....R....

Comments

Submitted by Nagaraj Bhadra Sun, 06/07/2015 - 22:23

ಬೇರೆಯವರ ಸುಖ,ದುಖಃದಲ್ಲಿ ಪಾಲಾಗಿ ಆದರೆ ಅವರಿಂದಲ್ಲೂ ಅದನ್ನೇ ನಿರೀಕ್ಷಿಸ ಬೇಡರೀ. ಯಾಕದರೆ ಅವರು ಸಹಾಯ ಮಾಡಲಿಲ್ಲ. ಅಂದರೆ ತುಂಬಾ ನೋವಾಗುತ್ತೆ.