ಸೇವೆಯೋ ಅಥವಾ ವ್ಯಾಪಾರವೋ

ಸೇವೆಯೋ ಅಥವಾ ವ್ಯಾಪಾರವೋ

ಮೊನೆ  ನಾನು ಬೆಳ್ಳಗೆ  ಎದ್ದು  ಸ್ನಾನ ಮಾಡಿ ಹಾಗೆ ದಿನ ಪ್ರತಿಕೆ ಓದ್ದುತ್ತಾಯಿದೆ.ಅದರಲ್ಲಿ  ನಮ್ಮ ರಾಜ್ಯದ ಒಂದು ವಿಶ್ವವಿದ್ಯಾಲಯದ ಕುಲಸಚಿವರ ಹೇಳಿಕೆ  ಮುದ್ರಣಗೊಂಡಿತ್ತು.ಏನೆಂದರೆ  "ನಮ್ಮ ವಿಶ್ವವಿದ್ಯಾಲಯವು ನಷ್ಟದಲ್ಲಿಯಿದೆ ಆದ್ದರಿಂದ ಶುಲ್ಕವನ್ನು  ಹೆಚ್ಚಿಸಲಾಗದೆ   ". ಅಂತ ನನಗೆ  ಅದನ್ನು  ಓದಿದ್ದ ಒಂದು  ಕ್ಷಣದಲ್ಲಿ  ಆಶ್ಚರ್ಯವಾಯಿತು  !. ಇನ್ನೊಂಮೆ ಅದನ್ನು  ಪೂತಿ೯ಯಾಗಿ ಓದೆ. ವಿಶ್ವವಿದ್ಯಾಲಯವು ನಷ್ಟದಲ್ಲಿ ಇರುವುದರಿಂದ ಶುಲ್ಕ ಹೆಚ್ವಿಸಲಾಗಿತ್ತು ಆದ್ದರಿಂದ ವಿದ್ಯಾರ್ಥಿಗಳು  ಅದನ್ನ ವಿರೋಧಿಸಿ ಹೋರಾಟ ಮಾಡುತ್ತಿದ್ದರು.  ನನ್ನ ಮನಸ್ಸಿನಲ್ಲಿ ಒಂದು  ಪ್ರಶ್ನೆ ಹುಟ್ಟಿಕೊಂಡಿತು.ವಿಶ್ವವಿದ್ಯಾಲಯಗಳಲ್ಲಿ ಸರಕಾರವು  ಮಾರಾಟ ಮಾಡುತ್ತಿರುವ ವಸ್ತು ಆದರೂ  ಯಾವದು ಅಂತ?
ಯಾಕೆಂದರೆ   ಲಾಭ,  ನಷ್ಟದ ಪ್ರಶ್ನೆ  ಬರುವುದು  ಏನಾದರೂ  ವ್ಯವಹಾರ ಮಾಡುವಾಗ ಮಾತ್ರ.  ಹಾಗಾದರೆ  ನಮ್ಮ ಸರಕಾರವು  ವಿಶ್ವವಿದ್ಯಾಲಯಗಳಲ್ಲಿ ವಿದ್ಯೆಯನ್ನು  ಮಾರಾಟ ಮಾಡುತ್ತಿದೆಯೋ?  ವಿದ್ಯಾರ್ಥಿಗಳು  ದುಡ್ಡು  ಕೊಟ್ಟಿ  ವಿದ್ಯೆಯನ್ನು  ಕೊಂಡುಕೊಳ್ಳುತ್ತಿದ್ದಾರೇಯೋ?. ಅವರ ಹೇಳಿಕೆ ಹೇಗಿತ್ತು  ಅಂದರೆ  ಸರಕಾರಿ ಶಾಲೆಯು ನಷ್ಟದಲ್ಲಿಯಿದೆ ಅನೋ ಹಾಗಿತ್ತು .   ಅವರ ಹೇಳಿಕೆಗೆ ನಗಬೇಕೋ,ಅಳಬೇಕೋ ಅಥ೯ವಾಗಲ್ಲಿಲ. ಸರಕಾರಿ ಶಾಲೆಗಳು,ಕಾಲೇಜುಗಳು,ವಿಶ್ವವಿದ್ಯಾಲಯಗಳು,ಆಸ್ಪತ್ರೆಗಳು ಸರಕಾರವು   ತನ್ನ ಜನತೆಗೆ ಉಚಿತವಾಗಿ ನೀಡುತ್ತಿರುವ ಸೇವೆಗಳು. ಈ ಸೇವೆಗಳನ್ನು  ನಾವು ನೀಡುತ್ತಿರುವ Tax ಯಲ್ಲಿ ಕೊಡುತ್ತದೆ.  ಈ ಉಚಿತ ಸೇವೆಗಳಲ್ಲಿ  ಲಾಭ,ನಷ್ಟದ ವಿಷಯ ಎಲ್ಲಿಂದ ಬಂತು?.  ಸರಕಾರವು  ವಿಶ್ವವಿದ್ಯಾಲಯಗಳಿಂದ ಲಾಭವನ್ನು  ನಿರೀಕ್ಷೆ  ಮಾಡುತ್ತಿದ್ದಿಯೋ? ವಿಶ್ವವಿದ್ಯಾಲಯಗಳಲ್ಲಿ  ಸರಕಾರವು  ವಿದ್ಯಾರ್ಥಿಗಳಿಂದ  ಕನಿಷ್ಠ ಶುಲ್ಕವನ್ನು  ತೆಗೆದುಕೊಂಡು ವಿದ್ಯೆಯನ್ನು  ನೀಡುತ್ತದೆ. ಕೆಲವೊಂದು ಬಡ ವಿದ್ಯಾರ್ಥಿಗಳಿಗೆ ಆ ಕನಿಷ್ಟ ಶುಲ್ಕವನ್ನು  ಕಟ್ಟೊಕೆ ಆಗೋದಿಲ್ಲ. ಆ ಬಡ ವಿದ್ಯಾರ್ಥಿಗಳು ಹೆಚ್ಚುವರಿ  ಶುಲ್ಕವನ್ನು  ಎಲ್ಲಿಂದ ಕಟ್ಟಬೇಕು. ವಿಶ್ವವಿದ್ಯಾಲಯಗಳಿಗೆ ಹೆಚ್ಚುವರಿ ಅನುದಾನ ಬೇಕಾಗಿದ್ದರೆ  ಸರಕಾರಕ್ಕೆ ಮನವಿ  ಮಾಡಿ ಪಡೆದುಕೊಳ್ಳಬೇಕು.

ಲಕ್ಷಾಂತರ ರೂಪಾಯಿ ಸಂಬಳವನ್ನು  ಪಡೆಯುವ ವಿಶ್ವವಿದ್ಯಾಲಯದ ಪ್ರೊಫೆಸರಗಳು ವಿಶ್ವವಿದ್ಯಾಲಯು ನಷ್ಟದಲ್ಲಿಯಿದ್ದರೆ ತಮ್ಮ ಒಂದು ತಿಂಗಳ ಸಂಬಳವನ್ನು  ದೇಣಿಗೆಯಾಗಿ ನೀಡಬಹುದಲ್ಲ.  ಆ ವಿಶ್ವವಿದ್ಯಾಲಯ ಇರುವದರಿಂದಲೇ ಅವರು ಅಷ್ಟೊಂದು ಸಂಬಳವನ್ನು  ಪಡೆಯುತ್ತಿದ್ದಾರೆ ಅಲ್ಲ?.ಅವರಿಗೂ  ಒಂದಿಷ್ಟೂ  Responsibility ಯಿದೆ ಅಲ್ಲ?. ಪ್ರೊಫೆಸರ ಗಳು    ದೇಣಿಗೆ  ನೀಡಿದರೆ ಅವರ ಸಮಾಜಸೇವೆ,ಮಾನವೀಯತೆ  ವಿದ್ಯಾರ್ಥಿಗಳಿಗೆ ಆದ೯ಶವಾಗಬಹುವುದು.  ಅದೆಲ್ಲವೋ   ಬಿಟ್ಟು  ಬಡ ವಿದ್ಯಾರ್ಥಿಗಳಿಂದ ಹೆಚ್ಚು  ಶುಲ್ಕವನ್ನು  ವಸುಲಿ ಮಾಡೊಂದು ಎಷ್ಟು  ಸರೀ ಸಾಮ್ವಿ. ಒಂದು  ಸಾರಿ   ನೀವೇ ಯೋಚನೆ ಮಾಡಿ. ಇನ್ನೂ 
ಸರಕಾರದ ಜನ ಪ್ರತಿನಿಧಿಗಳು ತಮ್ಮ ಕಛೇರಿಗಳನ್ನು ನವೀಕರಿಸಲು ಮತ್ತು Fuel bills ಗಳಿಗೆ ಸಿಕ್ಕಾ ಪಟ್ಟೆ   ದುಂದು ವೆಚ್ಚವನ್ನು ಮಾಡುತ್ತಾರೆ.ಸರಕಾರವು ತಮ್ಮ  ಸಮಾವೇಶಗಳಿಗೆ, ಸರಕಾರೀ ಜಾಹೀರಾತುಗಳಿಗೆ ಎಷ್ಟೋಂದು ದುಂದು ವೆಚ್ಚ ಮಾಡುತ್ತದೆ.  ಹೀಗೆಯೇ  ನೂರಾರು ರೀತಿಯಲ್ಲಿ  ಜನರ ದುಡ್ಡನ್ನು ಹಾಳು ಮಾಡುತ್ತದೆ.   ಅದನ್ನು  ವಿಶ್ವವಿದ್ಯಾಲಯಗಳಿಗೆ  ನೀಡಬಹುದಲ್ಲ.ಖಾಸಿಗೆ ಸಂಸ್ಥೆಗಳು  ಶಿಕ್ಷಣವನ್ನು ವ್ಯಾಪಾರಿಕರಣ ಮಾಡುತ್ತಿರುವ ಸಮಯದಲ್ಲಿ  ಅದರ ಮೇಲೆ ಲಗಾಮು  ಹಾಕಬೇಕಾದ ಸರಕಾರವೇ ತನ್ನ ವಿದ್ಯಾ ಸಂಸ್ಥೆಗಳಲ್ಲಿ  ಲಾಭ,ನಷ್ಡದ ಬಗ್ಗೆ  ಯೋಚನೆ ಮಾಡುತ್ತಿರುವುದು ವಿಪರ್ಯಾಸ.  ನಮ್ಮ ರಾಜ್ಯದ ಘನತೆಯುತ ರಾಜ್ಯಪಾಲರು ರಾಜ್ಯ ಭವನವನ್ನು ನವೀಕರಿಸಲು  ಸುಮಾರು  4 ಕೋಟಿ ದುಡ್ಡು ವೆಚ್ಚ ಮಾಡಿದ್ದಾರೆಂತೆ.ಅದರ ಅವಶ್ಯಕತೆ  ಇತ್ತಾ. ಆ ದುಡ್ಡನ್ನು ನಷ್ಟದಲ್ಲಿರು ವಿಶ್ವವಿದ್ಯಾಲಯಗಳಿಗೆ ನೀಡಬಹುದಿತ್ತಲ್ಲ.  
ನಮ್ಮ ರಾಜ್ಯದ ರಾಜ್ಯಪಾಲರು,ಮುಖ್ಯ ಮಂತ್ರಿಗಳು,ಉನ್ನತ ಶಿಕ್ಷಣ ಸಚಿವರು ವಿಶ್ವವಿದ್ಯಾಲಯಗಳ ಲಾಭ,ನಷ್ಟದ ಬಗ್ಗೆ  ಯೋಚನೆ ಮಾಡೊಂದ್ದನು ಬಿಟ್ಟು ಬಡ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ತಡೆದು,ಅವರಿಗೆ ನ್ಯಾಯ ಒದಗಿಸಲ್ಲಿ ಎಂದು  ಆಶಿಸೋನ...

Comments

Submitted by Nagaraj Bhadra Tue, 06/09/2015 - 00:03

ಪ್ರಿಯ ಓದುಗರೆ ವಿಶ್ವವಿದ್ಯಾಲಯಗಳಿಂದ ಲಾಭ,ನಷ್ಟ ನೀರಿಕ್ಷಿಸುತ್ತಿರುವ ಸರಕಾರದ ನಡೆಯು ಸರಿಯೋ ಅಥವಾ ತಪ್ಪುವೋ. ನೀವೇ ಪ್ರತಿಕಿಯಿಸಿ.

Submitted by Nagaraj Bhadra Tue, 06/09/2015 - 00:03

ಪ್ರಿಯ ಓದುಗರೆ ವಿಶ್ವವಿದ್ಯಾಲಯಗಳಿಂದ ಲಾಭ,ನಷ್ಟ ನೀರಿಕ್ಷಿಸುತ್ತಿರುವ ಸರಕಾರದ ನಡೆಯು ಸರಿಯೋ ಅಥವಾ ತಪ್ಪುವೋ. ನೀವೇ ಪ್ರತಿಕಿಯಿಸಿ.

Submitted by Nagaraj Bhadra Thu, 06/11/2015 - 22:51

In reply to by kavinagaraj

ನೀವು ಹೇಳಿದು ನಿಜ ಸರ್. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್.ಶಿಕ್ಷಣದ ವ್ಯಾಪಾರಿಕರಣವನ್ಮು ತಡೆಯಬೇಕಾದ ಸರಕಾರವೇ ಹೀಗೆ ಮಾಡಿದರೆ ಹೇಗೆ.ಅಧಿಕಾರಿಗಳು ಸರಕಾರಕ್ಕೆ ದಿಕ್ಕು ತಪಿಸುತ್ತಿದ್ದಾವೆ ಸರ್.

Submitted by venkatb83 Fri, 06/12/2015 - 16:34

In reply to by kavinagaraj

+1

ಕೆ ಎಸ್ ಓ ಯು-ಮೈಸೂರು ಇವರು ಈ ಫೀ ಹೆಚ್ಚಳದಲ್ಲಿ ಅಗ್ರ ಪಂಕ್ತಿಯಲ್ಲಿರುವವ್ರು.!!
ಇದೊಂದೇ ಅಲ್ಲ - ಬಿ ಎಂ ಟಿಸಿ ಕೆ ಅಸ್ಸಾರ್ಟಿಸಿ ಹೀಗೆ ಸರಕಾರಿ ನಿಗಮ ಸಂಸ್ಥೆಗಳು ಸಹಾ ಈಗೀಗ ಬರೀ ಲಾಭದ ಕಡೆಗೆ ಗಮನ ಹರಿಸಿವೆ- ಮೂಲ ಸೌಕರ್ಯ -ಗುಣಮಟ್ಟ . ಉಹೂ ಕೇಳಲೇಬೇಡಿ ...ಕುಲಪತಿ-ಅದ್ಯಾಪಕರ ಮೇಲೆಯೇ ಹಲವು ಹಗರಣಗಳ ಸರ್ಮಾಲೆ .... ಶಿಕ್ಷಣ -ವ್ಯಾಪಾರೀಕರಣ ಆಗಿರೋದು ಕಹಿ ಸತ್ಯ .
ಇರುವ ಸರ್ಕಾರಿ ಶಾಲೆ ಕಾಲೇಜು ವಿಶ್ವ ವಿದ್ಯಾನಿಲಯಗಳಲ್ಲಿ ಓದೋಣವೆಂದರೆ ಅವರೂ ಖಾಸಗಿಯವರಂತೆ ಫೀಸು ಹೆಚ್ಚು ಮಾಡುವರು :((( ಅಂಕ ಪಟ್ಟಿ -ಫಲಿತಾಂಶ -ವಿದ್ಯಾರ್ಥಿ ವೇತನ??
ಬರುತ್ತೆ -ಹಲವು ತಪ್ಪುಗಳು,ಕೆಲವೇ ಸ್ಕಾಲರ್ ಶಿಪ್ಪು..:((
ಅದೂ ಮೊದಲ್ ಸಾರಿ ಉತ್ತೀರ್ಣ ಆಗಿರೋರ್ಗೆ ಮಾತ್ರ ...!! ಮದ್ಯಮ ವರ್ಗ -ಬಡವರು ಶಿಕ್ಷಣ ಪಡೆಯಲು ಸರಕಾರಗಳು ಏನೇನೋ ಕಸರತ್ತು ಮಾಡಿದರೂ ಇನ್ನೂ ಹಲ್ವರಿಗೆ ಅದು ಕೈಗೆಟುಕುತ್ತಿಲ್ಲ...
ಸಕಾಲಿಕ ಲೇಖನ-ಬಹುಶ ಮುಂದೆಯೂ ಇದು ಪ್ರಸ್ತುತ ಆಗಬಹುದು..

ನನ್ನಿ

ಶುಭವಾಗಲಿ
\|/