ಯೋಗಾಭ್ಯಾಸ

ಯೋಗಾಭ್ಯಾಸ

ಬೆಳಿಗ್ಗೆ 5 ಗಂಟೆಗೆ ಎದ್ದರೆ ಕನಿಷ್ಟಪಕ್ಷ 1 ಗಂಟೆಯ‌ಾದರೂ ಯೋಗ ಮಾಡುವುದರೊಂದಿಗೆ ನನ್ನ ದಿನಚರಿ ಆರಂಭವಾಗುತ್ತದೆ. ಒಂದು ದಿವಸ ಯೋಗ ಮಾಡಿಲ್ಲವೆಂದರೆ ಏನೋ ಆ ದಿನವೆಲ್ಲಾ ಯಾವುದೇ ಕೆಲಸ ಮಾಡಲು ಸಹ ಉತ್ಸಾಹವೇ ಇರುವುದಿಲ್ಲ. ಏಕೋ ಮಂಕು ಕವಿದಂತೆ ಇರುತ್ತದೆ.ಇವತ್ತು ಏನೋ ತಪ್ಪು ಮಾಡಿದ್ದೀನಿ ಅಂತ ಒಳಮನಸ್ಸು ನುಡೀತಾನೆ ಇರುತ್ತೆ. ಏನಪ್ಪಾ ಅಂಥ ತಪ್ಪು ಮಾಡಿದ್ದೀನಿ ಅಂತ ಯೋಚಿಸಿದ್ರೆ ಹೌದಲ್ವಾ ಇವತ್ತು ನಾನು ಯೋಗಾನೇ ಮಾಡಿಲ್ಲ ಅಂತ ಗೊತ್ತಾಗುತ್ತೆ. ಅಷ್ಟರಮಟ್ಟಿಗೆ ನಾನು ಯೋಗವನ್ನು ಇಷ್ಟ ಪಡ್ತೀನಿ ಹಾಗೂ ನನ್ನ ಜೀವನದಲ್ಲಿ ರೂಢಿಸಿಕೊಂಡಿದ್ದೀನಿ.

ಅನಾದಿ ಕಾಲದಿಂದ ದೇಹ ಹಾಗೂ ಮನಸ್ಸನ್ನು ಸಮತೋಲನದಲ್ಲಿರಿಸಿಕೊಂಡು ಬಂದಿರುವ ಈ ಯೋಗದಿಂದ ನಮ್ಮ ಅಂತರಂಗವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ.ಯೋಗ ಅನ್ನೋದು ಕೇವಲ ದೇಹಕ್ಕೆ ವ್ಯಾಯಾಮ ಮಾತ್ರವಲ್ಲದೆ ಮನಸ್ಸಿಗೆ ತರಬೇತಿ ನೀಡುವ ದೈವೀಕ ಶಕ್ತಿಯಾಗಿದೆ. ನಮ್ಮ ದೇಹ ಹಾಗೂ ಮನಸ್ಸಿನ ಆರೋಗ್ಯಕ್ಕೆ ಯೋಗ ಒಂದು ಉತ್ತಮ ಔಷಧವಾಗಿದೆ.

ಜನ ಆಸ್ತಿ ಪಾಸ್ತಿಗಳಿಗೆ ಜಗಳ ಮಾಡಿ ಆಯ್ತು. ಕೆಲಸ, ಹಣ,ಗೌರವ, ಮರ್ಯಾದೆಗಳಿಗಾಗಿ ಕಿತ್ತಾಡಿದ್ದು ಆಯ್ತು. ಹೆಣ್ಣು, ಪ್ರೀತಿ, ಪ್ರೇಮ, ಮದುವೆಗಳಿಗಾಗಿ ಕಚ್ಚಾಡಿದ್ದು ಆಯ್ತು. ಆ ಜಾತಿ ಈ ಜಾತಿ, ಆ ಧರ್ಮ ಈ ಧರ್ಮ ಅಂತ ಕಾದಾಟಗಳೂ ಆಯ್ತು. ಈಗ ಹೊಸದಾಗಿ ಒಂದು ಜಗಳ ಶುರು ಹಚ್ಚಿಕೊಂಡಿದ್ದಾರೆ. ಅದೇನೆಂದರೆ ಯೋಗಕ್ಕೂ ಒಂದು ಜಾತಿ ಧರ್ಮ ಇದೆ, ಅದನ್ನು ಅದೇ ಧರ್ಮದವರು ಮಾತ್ರ ಮಾಡಬೇಕು. ಬೇರೆ ಜಾತಿಯವರು ಯೋಗ ಮ‌ಾಡಬಾರದು ಅಂತ.

ಯೋಗದ ವಿರುದ್ದ ಹೋರಾಡುತ್ತಿರುವವರಿಗೆ ಯೋಗ ಮನುಷ್ಯನ ದೇಹ ಮತ್ತು ಮನಸ್ಸಿನ ಔಷಧಿಯೆಂಬ ಅರಿವೇ ಇಲ್ಲ.
ಯೋಗದ ಅಮೂಲ್ಯವಾದ ಬೆಲೆಯನ್ನು ಅರಿಯಲು ಅವರಿಗೆ ಯೋಗ್ಯತೆಯೂ ಇಲ್ಲ.ಇದರಿಂದ ಅವರಿಗೇ ನಷ್ಟ ಹೊರತು ಯೋಗ ಮಾಡುವವರಿಗಲ್ಲ.ಜಗತ್ತಿನ ಎಲ್ಲಾ ಧರ್ಮಮದವರೂ ಸಹ ಯೋಗಾಭ್ಯಾಸ ಮಾಡುತ್ತಿದ್ದಾರೆ.ಮುಸ್ಲಿಂ ಸಮುದಾಯದವರೂ ಸಹ ಯೋಗಾಭ್ಯಾಸ ಮಾಡುತ್ತಿದ್ದಾರೆ. ಹಿಂದೂಗಳು ಯೋಗ ಮಾಡುವಾಗ ಹಿಂದೂ ದೇವರನ್ನು ಪ್ರಾರ್ಥಿಸುತ್ತಾ ಅಭ್ಯಾಸ ಮಾಡಿದರೆ ಮುಸ್ಲಿಂ ಜನರು ಯೋಗ ಮಾಡುವಾಗ ತಮ್ಮ ದೇವರಾದ ಅಲ್ಲಾಹು ವನ್ನು ಪ್ರಾರ್ಥಿಸುತ್ತಾರಂತೆ.

ಜಗತ್ತಿನಾದ್ಯಂತ ಜೂನ್ 21ರಂದು ಯೋಗ ದಿನವನ್ನಾಗಿ ಆಚರಿಸಲು ನಿರ್ಧರಿಸಿದ್ದಾರೆ. ನಮ್ಮ ದೇಶದಲ್ಲೂ ಆಚರಿಸಲು ಸಿದ್ದವಾಗುತ್ತಿದ್ದಂತೆ ಕೆಲವರು ವಿರೋಧಿಸುತ್ತಿದ್ದಾರೆ. ನಮಗೆ ಒಳ್ಳೆಯದನ್ನು ಮಾಡುವ ಅಂಶಗಳು ಯಾವುದೇ ಧರ್ಮದಲ್ಲಿದ್ದರೂ ಅದನ್ನು ನಾವು ಮುಕ್ತವಾಗಿ ಸ್ವೀಕರಿಸಬೇಕು. ಜ್ಞಾನಿಗಳು ಸ್ವೀಕರಿಸುತ್ತಾರೆ, ಅಜ್ಞಾನಿಗಳು ಸ್ವೀಕರಿಸುವುದಿಲ್ಲ.

ಯೋಗವೆಂಬ ಅಮೂಲ್ಯವಾದ ವಿದ್ಯೆಯ ಬೆಲೆ ಗೊತ್ತಿಲ್ಲದವರಿಗೆ ಅದರ ಬಗ್ಗೆ ಮಾತಾಡುವ ಅಥವಾ ವಿರೋಧಿಸುವ ಯಾವ ಯೋಗ್ಯತೆಯೂ ಇರುವುದಿಲ್ಲ. ಅವರಿಗೆ ಇಷ್ಟವಿಲ್ಲದಿದ್ದರೆ ಬೇಡ, ಇನ್ನೊಬ್ಬರನ್ನು ತಡೆಯುವುದೇಕೆ..? ಕೋತಿ ತಾನು ಕೆಡುವುದಲ್ಲದೆ ವನವನ್ನೆಲ್ಲ ಕೆಡಿಸಿತು ಅನ್ನುವ ಹಾಗೆ

N....R....

Comments

Submitted by Nagaraj Bhadra Thu, 06/18/2015 - 22:40

ನೀವು ಹೇಳಿದು ನಿಜ ಮೇಡಂ. ಯೋಗ ಯಾವೊಂದು ಒಂದು ಧಮ೯ಕ್ಕೆ ಮಾತ್ರ ಸೀಮಿತವಾಗಿಲ್ಲ.ಅದು ಮನುಷ್ಯನ ಉತ್ತಮ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗೆ ತುಂಬಾ ಅವಶ್ಯಕತೆ ಇದೇ.

Submitted by ನಾಗೇಶ್ ಪೈ ಕುಂದಾಪುರ Fri, 06/19/2015 - 09:11

ಇಂದಿನ ಯುವಜನತೆ ನಮ್ಮ ಸಮಾಜ,ರಾಜ್ಯ ರಾಷ್ಟ್ರದ ಭವಿಷ್ಯ ನಾವು ಇ ವರ್ಗದ ಜನ ಉತ್ತೇಜನಕ್ಕೆ ಅವರ ವ್ಯಕ್ತಿತ್ವದ ಮಹತ್ವ ತಿಳಿದುಕೊಂಡು
ಭವ್ಯ ಭಾರತದ ನವನಿರ್ಮಾಣ ವೇದಿಕೆ ಮೈಸೂರು ಲೇಖನ ಪ್ರಾರಂಬಿಸಿದೆ ಪ್ರೋತ್ಸಾಹಿಸಲು ನಿವೇದನೆಮುಂಜಾನೆಯ ಶುಭಾಶಯಗಳು
ಕುಂದಾಪುರ ನಾಗೇಶ್ ಪೈ.