ಸತ್ಯ‌ ಮೇವ‌ ಜಯತೇ

ಸತ್ಯ‌ ಮೇವ‌ ಜಯತೇ

"it is luck of the patient to get good doctor" ಹಲವು ದಶಕಳಿಂದ ಚಾಲ್ತಿ ಯಲ್ಲಿರುವ ಮಾತಿದು . ವೈದ್ಯರೇ ಅಪರೂಪ ವಾಗಿದ್ದ ಕಾಲದಲ್ಲಿ , ಅನುಭವಿ ವೈದ್ಯರು ಸುಲಬದಿ ಸಿಗದೇ ಇರುವ ಕಾಲದಲ್ಲಿ ರೂಢಿ ಗೆ ಬಂದ  ಮಾತು , ಕಾರ್ಖಾನೆ ಗಳ ರೀತಿ  ವೈದ್ಯರನ್ನು ತಯಾರಿಸುವ ಮೆಡಿಕಲ್ ಕಾಲೇಜುಗಳ ಕಾಲದಲ್ಲೂ, ಅಂಗಾಂಗಕೊಬ್ಬರು ತಜ್ಞರಿರುವ ಕಾಲದಲ್ಲೂ  ಒಪ್ಪುತ್ತದೆ . ಆದರೆ ಸ್ವಲ್ಪ ಬದಲಾದ ಅರ್ಥದಲ್ಲಿ  ಅಷ್ಟೇ . 

ಕಾಲ ಬದಲಾದಂತೆ  ಸಂಭಂದಗಳ ಅರ್ಥಗಳೂ ಬದಲಾಗುತ್ತಿವೆ . ಈಗಿನ ಕಾಲದ ಮುಂದುವರೆದ ಜನ 'ವೈದ್ಯೋ ನಾರಾಯಣೋ ಹರಿ ' ಅಂದರೆ ' ವೈದ್ಯ ನಾರಾಯಣನಿಗೆ ಸಮಾನ ' ಎಂಬ ಅರ್ಥವನ್ನು ಒಪ್ಪದೇ  'ನಾರಾಯಣನೇ ನಿಜ್ಯವಾದ ವೈದ್ಯ' ಎಂಬ ಅರ್ಥವೂ ಇರಬಹುದು ಎಂದು ವಾಕ್ಯನಿಸುತ್ತಾರೆ . ಒಂದು ಕ್ಷಣ ಇವರ ಮಾತು ನಿಜವಿರಬಹುದು ಎನಿಸುತ್ತದೆ . ಸುಲಭವಾಗಿ  ಇವರ  ವಿತಂಡ ವಾದವನ್ನು ತಳ್ಳಿ ಹಾಕುವುದು ಕಷ್ಟ . 
ಹಾಗೆ ನೋಡಿದರೆ  ವೈದ್ಯನಿಗೆ ನಾರಾಯಣನೇ ನಿತ್ಯ   ಶತ್ರು . ದೇವನ ಉದ್ದೇಶದ ವಿರುದ್ದ , ಜನರ ಜೀವವನ್ನು ಸುಲಭವಾಗಿ ಶಿವನ ಪಾದ ಸೇರದಂತೆ ದಿನನಿತ್ಯವೂ ಹೋರಾಡುವ ಕಾಯಕ ವೈದ್ಯನದು . ಒಂದು ರೀತಿ ಸತಿ ಸಾವಿತ್ರಿ ಯಮನ ಎದಿರು ದೈವೇಚ್ಛೆ ವಿರುದ್ದ ಹೋರಾಡಿದ ಹಾಗೆ  .   ಈ ಕಾರ್ಯದಲ್ಲಿ ವೈದ್ಯರು ಕೆಲವೊಮ್ಮೆ ಯಶಶ್ವಿ , ಕೆಲವೊಮ್ಮೆ ಸೋಲು . ಮೊದಲಾಗಿದ್ದರೆ ವೈದ್ಯರ ಹೋರಾಟ ಗೆದ್ದಾಗ , ರೋಗಿಗಳ ಕೃತಜ್ಞತೆ ಯಾದರು ಸಿಗುತಿತ್ತು . ಈಗ  'ಕಾಸು ಕೊಟ್ರೆ ಇವನಿಲ್ಲದಿದ್ರೆ ಇನ್ನೊಬ್ಬ ಕೆಲಸ ಮಾ ಡ್ಕೊಡ್ತಾನೆ '  ಅನ್ನೂ ಮನೋಭಾವ ಸಾಮಾನ್ಯ ವಾಗುತ್ತಿದೆ . ವೈದ್ಯರು ತಮ್ಮ ಕೆಲಸದಲ್ಲಿ ಸೋತ ರಂತೂ ಮುಗಿಯಿತು, ಹಣವಿರಲಿ , ರೋಗಿಯ ಕಡೆಯವರು ತಮ್ಮ ಜೀವ ತೆಗೆಯದಿದ್ದರೆ ಸಾಕು ಎನ್ನು ವಂತ ಪರಿಸ್ತಿತಿ ಆಪರೂಪವೇನಲ್ಲ .  ಒಟ್ಟಿನಲ್ಲಿ ವೈದ್ಯರು ಗೆದ್ದಾಗ ಸೋಲುತ್ತಿದ್ದಾರೆ , ಸೋತಾಗ ಸಾಯುತ್ತಿದ್ದಾರೆ . 
ಬಹಳ ಹಿಂದಿನ ಮಾತೇನಲ್ಲ . ವೈದ್ಯರು ಕುಟುಂಬದ ಭಾಗದಂತೆ ಇದ್ದರು. ವೈದ್ಯರು ಮನೆಗಳಿಗೆ ಬೇಟಿ ನೇದುತ್ತಿದ್ದರು. . ಕುಟುಂಬದ ಸದಸ್ಯರಿಗೆ ಗೊತ್ತಿಲ್ಲದ ಗುಟ್ಟುಗಳು ವೈದ್ಯರಿಗೆ ಗೊತ್ತಿರುತ್ತಿದ್ದವು . ಲಾಭ ನಷ್ಟಗಳ ಲೆಕ್ಕಾಚಾರ ವನ್ನು ಮೀರಿದ ಸಂಬಂದ ವಿತ್ತು. ಬಹಳ ವಿಶಾಲ ವಾಗಿದ್ದ ವೈದ್ಯ -ರೋಗಿಗಳ ಸಂಬಂದ , ಇಂದು ಕುಗ್ಗಿ ಗ್ರಾಹಕ- ಸೇವೆ  ಅಷ್ಟೇ ಸೀಮಿತವಾಗುತ್ತಿದೆ . ವೈದ್ಯ -ರೋಗಿಗಳ ಮನಸ್ತಾಪ ಕೋರ್ಟಿನ ಮೆಟ್ಟಿ ಲೇರುತ್ತಿದೆ . ಎಲ್ಲಾ ಕೌಟುಂಬಿಕ ಸಮಸ್ಯೇಗಳಿಗೆ ಹೇಗೆ  ನ್ಯಾಯಾಲಯ ಉತ್ತವಿಲ್ಲವೋ , ಹಾಗೆ ಈ ಅಪರೋಪದ ಸಂಬಂದಕ್ಕೆ  ಕಾನೂನಿನ ಪರಿಹಾರ ಸಾದ್ಯವೇ ?  ಇಷ್ಟ ಕ್ಕೆಲ್ಲ ಕಾರಣ ಬದಲಾದ ವೈದ್ಯರಾ ? ರೋಗಿಗಳ ? ಅಥವಾ ಆಧುನೀಕರಣ ವಾ ? ಈ ಬದಲಾವಣೆ ಯಿಂದ  ಯಾರಿಗೆ ಲಾಭವಾಗಿದೆ , ಯಾರಿಗೆ ನಷ್ಟವಾಗಿದೆ ?. ಉತ್ತರಕ್ಕಾಗಿ 'ಸತ್ಯ ಮೇವ ಜಯತೇ ' ಕಾದಂಬರಿ ಓದಬೇಕು 
ಹಳ್ಳಿಗಳ ತಲ್ಲಣಗಳ ಪರಿಚಯಿಸುತ್ತಾ , ಕನ್ನಡ ಭಾಷೆಯ ಪ್ರಸ್ತುತ ಸ್ತಿತಿ ಯನ್ನು ತೋರಿಸುತ್ತಾ ಸಾಗುವ ಕಾದಂಬರಿ ವೈದ್ಯ ಲೋಕದ ಪ್ರಪಂಚವನ್ನು ತೆರೆದಿಡುತ್ತದೆ . ವೈದ್ಯರ ಸಂಕೀರ್ಣ ಮನಸ್ತಿತಿ ,ದ್ವಂದ್ವ ಗಳನ್ನೂ ಎಳೆ ಎಳೆಯಾಗಿ ಬಿಚ್ಚಿಡುತ್ತಾ ಹೋಗುತ್ತದೆ . ಕಾದಂಬರಿಯ ಆರಂಭದಲ್ಲಿ ಇದು ವೈದ್ಯನೋಬ್ಬನ ಸ್ವಗತ ವಿರಬಹುದು ಎಂದುಕೊಳ್ಳುವ ಓದುಗ, ಕತೆಯ ಮಧ್ಯಭಾಗ ಬರುವಷ್ಟರಲ್ಲಿ ತನ್ನನ್ನು ತಾನು ಯಾವುದಾದರು ಪಾತ್ರದಲ್ಲಿ ಗುರುತಿಸಿಕೊಳ್ಳುವಷ್ಟು ನೈಜತೆ ಇದೆ . ಇನ್ನೂ ಮುಂದೆ ಓದುಗರು, ಸತ್ಯ ಕಥೆ ಎಂದುಕೊಂಡು  ಬೇರೆಪಾತ್ರಗಳನ್ನು ಸುತ್ತ ಮುತ್ತಲಿನ ಜನರಲ್ಲಿ ಹುಡುಕುವುದಕ್ಕೆ ಪ್ರೇರೆಪಿಸುವಷ್ಟು ಗಾಢ ವಾಗಿ ಕಾಡುತ್ತ  ಹೋಗುತ್ತದೆ .. 
ಬಾಲಿಹುಡ್ ನಟ ಅಮೀರ್ ನ 'ಸತ್ಯ ಮೇವ ಜಯತೇ ' ಕಾರ್ಯಕ್ರಮದಿಂದ ಸ್ಪೂರ್ತಿ ಪಡೆದ  ಕಾದಂಬರಿ , ಅಂತಹದೇ ರಿಯಾಲಿಟಿ ಶೋ ನೊಂದಿಗೆ ಕೊನೆಯ ಹಂತ ತಲುಪುತ್ತದೆ . ಕನ್ನಡ ಮಟ್ಟಿಗೆ ,( ಭಾರತದ ಸಾಹಿತ್ಯ ಮಟ್ಟಿಗೆ ಎಂದರೂ ಅಡಿಯಿಲ್ಲ ) ಇದುವರೆಗೂ ಯಾವ  ಲೇಖಕರೂ ಮುಟ್ಟದ ವಿಷಯನ್ನು ಇಟ್ಟುಕೊಂಡು ಬರೆದ ಕಾದಂಬರಿ ಎಂದರೆ  ತಪ್ಪಾಗುವುದಿಲ್ಲ . ಮನೋರಂಜನೆ , ಜ್ಞಾನ , ಭಾಷೆ , ಸಂದೇಶ ಎಲ್ಲವನ್ನು ಒಟ್ಟಿಗೆ ಸಾಧಿಸಿರುವ ಶೈಲಿ , ಈ ಪುಸ್ತಕವನ್ನು ಎಲ್ಲರೂ ಓದಲೇ ಬೇಕಾದ ಪುಸ್ತಕವಾ ಗಿಸುತ್ತದೆ ಎಂದರೆ ತಪ್ಪಾಗುವುದಿಲ್ಲ
 

Comments