ಆನೆ ಬಂತು ಆನೆ - 2

ಆನೆ ಬಂತು ಆನೆ - 2

~~
" ರೀ ಬನ್ರಿ ಏನು ಅಂತ ನೋಡೋಣ , ಯಾವನಾದರೂ ಚಿರತೆ ನೋ ಇಲ್ಲ ಹುಲಿನೊ ವಿಷ ಹಾಕಿ ಶಿವನ ಪಾದ ಸೇರಿಸಿ ಬಿಟ್ಟವನೋ ಹೆಂಗೋ " ಅಂತ ಹೇಳುತ್ತಾ ಹದ್ದುಗಳು ಹಾರಾಡುತ್ತ ಇದ ಪೋದ್ದೆಗಳ ಕಡೆ ಹೆಜ್ಜೆ ಹಾಕಿದರು. ಪೊದೆ ಸಮಿಪಿಸುತ್ತ ಇದ ಹಾಗೆ ಯಾವುದೋ ಮೃತ ದೇಹದ ಕೆಟ್ಟ ವಾಸನೆ ಬರುತ್ತಾ ಇತ್ತು , ಎಲ್ಲರು ಕರವಸ್ತ್ರ ದಿಂದ ಮೂಗು ಮುಚ್ಚಿಕೊಂಡು ನಡೆಯ ತೊಡಗಿದರು . ಲಂಟಾನದ ಜಿಗುಗಳ ಮಧ್ಯ ನಡೆಯುವಾಗ ಎಲ್ಲರಿಗು ತರಚಿದ ಗಾಯಗಳು ಆದವು.ಪೊದೆ ಹತ್ತಿರ ಭೀಕರ ದೃಶ್ಯ ಕಂಡು ಎಲ್ಲರು ಮುಖಗಳನ ಸಿಂಡರಿಸಿಕೊಂಡರು .

ಪೊದೆಯ ಮಧ್ಯದಲ್ಲಿ ಯಾರೋ ಒಬ್ಬ ಹುಡುಗನ ಮೃತ ದೇಹ ಕಾಣಿಸಿತ್ತು . ದೇಹದ ಕೆಲವು ಭಾಗಗಳನೆಲ್ಲ ಹದ್ದುಗಳು ಹೊರಗೆ ಎಳೆದು ಬಿಟ್ಟಿದವು . ಆ ಭೀಬತ್ಸ ದೃಶ್ಯ ವಾಕರಿಕೆ ಬರುವಂತೆ ಇತ್ತು . ಶಂಕರಪ್ಪ ಆ ದೇಹ ಬಿದಿದ ನಾಲ್ಕು ಅಡಿ ದೂರದಲ್ಲಿ ಯಾವುದೊ ಪ್ರಾಣಿ ಹೆಜ್ಜೆ ಗುರುತು ನೋಡಿ " ಸಾರ್ ಇಲ್ಲಿ ನೋಡಿ ಆನೆ ಹೆಜ್ಜೆ ಗುರುತು ಇದ್ದ ಹಾಗೆ ಇದೆ" ಅಂತ ಮಂಡಿ ಊರಿ ಕುಳಿತು ಕೊಳ್ಳುತ್ತಾ ಹೇಳಿದ . ಆಫೀಸರ್ ಶಂಕರಪ್ಪ ಕೂತ್ತಿದ ಕಡೆ ಬಂದರು. ಶಂಕರಪ್ಪ ತೋರಿಸಿದ ಹೆಜ್ಜೆ ಗುರುತು ನೋಡಿ " ಹೌದು ರೀ , ಪಾಪ ಯಾರೋ ಇನ್ನು ಸಣ್ಣ ಹುಡುಗ , ಏನೋ ೨೦ - ೨೫ ವಯಸಿನವನು ಇರಬೇಕು , ಇಲ್ಲಿ ಬಂದು ಹೀಗೆ ಸತ್ತವನೆ ನೋಡಿ " ಅಂತ ತಮ್ಮ ಎಡ ಕೈ ಅಲ್ಲಿ ಮೂಗು ಮುಚ್ಚಿಕೊಂಡು , ಬಲ ಕೈ ಇಂದ ತಮ್ಮ ಪ್ಯಾಂಟ್ ಜೆಬ್ಬಿನಿಂದ ಮೊಬೈಲ್ ತೆಗೆದುಕೊಂಡರು. ಯಾರಿಗೂ ಕರೆ ಮಾಡಲು ಅನುವಾದರು.

" ಹಲೋ ಪೋಲಿಸ್ ಸ್ಟೇಷನ್ , ರೀ ನಾನು ಗೆಣಿಕೊಪ್ಪಲಿನ ರೇಂಜ್ ಆಫೀಸರ್ ಮಾತು ಆಡುತ್ತ ಇರೋದು , ಇಲ್ಲಿ ಜೇನಿನ ಹೊಳೆ ಹತ್ತಿರ ಕಾಡಿನ ಒಳ್ಳಗೆ ಯಾವುದೊ ಹುಡುಗನ ದೇಹ ಸಿಕ್ಕಿದೆ , ಬೇಗ ಬನ್ನಿ " ಅಂತ ಹೇಳಿ ಮಾತು ಮುಗಿಸಿ ಫೋನ್ ತಮ್ಮ ಪ್ಯಾಂಟ್ ಜೆಬ್ಬಿಗೆ ಇಡುತ್ತ " ರೀ ಶಂಕರಪ್ಪ ಪೋಲಿಸೆನವರು ಬರೋವರೆಗೂ ಆ ದೇಹ ನ ಯಾರು ಮುಟ್ಟ ಬೇಡಿ , ಅವರು ಬರೋವರೆಗೂ ನಾವು ಇಲ್ಲೇ ಇರೋಣ . ಬನ್ನಿ ವಾಸನೆ ತಡಿಯೋಕ್ಕೆ ಆಗುತ್ತಾ ಇಲ್ಲ , ಸ್ವಲ್ಪ ದೂರ ಹೋಗಿ ನಿಂತು ಕೊಳ್ಳೋಣ " ಅಂತ ಹೇಳುತ್ತಾ ಸ್ವಲ್ಪ ಮುಂದೆ ಸಾಗಿದರು.

ದೇಹ ಇದ್ದ ಜಾಗದಿಂದ ಸ್ವಲ್ಪ ದೂರ ಬಂದು ಯಾವುದೊ ಮರದ ಕೆಳ್ಳಗೆ ನಿಂತರು ಆಫೀಸರ್ . ಶಂಕರಪ್ಪ ಮತು ಇನ್ನೊಬ್ಬ ಕಾನ್ಸ್ಟೇಬಲ್ ಅಲ್ಲಿಗೆ ಬಂದು ನಿಂತರು .

ಹದ್ದುಗಳು ತಮ್ಮ ಊಟ ಮುಂದುವರೆಸಲು ದೇಹದ ಬಳಿ ಬಂದವು . ಅದನ ಕಂಡ ಆಫೀಸರ್ " ರೀ ನಾಯಕ್ ಆ ಹದ್ದುಗಳನ ಓಡಿಸಿ , ಇಲ್ಲ ಅಂದರೆ ಆ ಹುಡುಗನ ಬಾಡಿ ಒಂದು ಚೂರು ಸಿಗದ ಹಾಗೆ ತಿಂದು ಮುಗಿಸುತಾವೆ , ಹಾಳಾದವು " ಅಂತ ಹೇಳಿದರು . ಪಕ್ಕದಲ್ಲಿ ನಿಂತಿದ ನಾಯಕ್ ಹದ್ದುಗಳಿಗೆ ಕಲ್ಲು ಹೊಡೆಯುತ್ತ ಓಡಿಸುತ್ತಾ ನಿಂತರು. ಸಾಹೇಬರ ಕಿವಿ ಹತ್ತಿರ ಯಾವುದೊ ನೊಣ ಜಾತಿಯ ಕೀಟ ಹಾರಾಡಲು ಶುರು ಮಾಡಿತು . ಆಫೀಸರ್ ತಮ್ಮ ಕೈ ಇಂದ ಅದನ ಹೊಡೆಯುತ್ತ " ರೀ ಶಂಕರಪ್ಪ , ಎಲ್ಲಿ ಇದ್ದೀರಾ " ಅಂತ ಕೂಗಿದರು . ನೋಡು ನೋಡುತ್ತಾ ಇದ ಹಾಗೆ ಜೇನಿನ ಗುಂಪೊಂದು ಮೂರ ಜನರ ಮೇಲೆ ಏಕ ಎಕಿ ದಾಳಿ ಮಾಡಿದವು . ರಪ್ ರಪ್ ಅಂತ ಕುಟ್ಟುಕಲು ಶುರು ಮಾಡಿದವು . ಎಲ್ಲರು ಆ ಜೇನಿನ ಹೊಡೆತ್ತ ತಾಳಲಾರದೆ ಅಲ್ಲಿಂದ ಓಡಿ ಹೋದರು .

ದೇಹ ಇದ್ದ ಸ್ವಲ್ಪ ದೂರದಲ್ಲಿ ಮೌ ಮೌ ಬೀ ಗಳು ಗೂಡು ಕಟ್ಟಿತು. ಮೌ ಮೌ ಬೀ ಗಳು ಮುಂಜಾಗೃತ ಕ್ರಮವಾಗಿ ಆ ಮೂವರ ಮೇಲೆ ದಾಳಿ ಮಾಡಿದವು. ಅವುಗಳ ಹೊಡೆತ್ತ ತಾಳಲಾರೆ ಮೂವರು ಅಲ್ಲಿಂದ ಕಾಲು ಕಿತ್ತಿದರು.

ಸ್ವಲ್ಪ ದೂರ ಓಡಿ ಸುಸ್ತಾಗಿ ಏದು ಉಸಿರು ಬಿಡುತ್ತ ಜೇನು ಕಚ್ಚಿದ ಜಾಗಗಳಿಗೆ ಎಂಜಲನು ವರೆಸುತ್ತ ,  ಉರಿ ತಾಳಲಾರದೆ ಉಜ್ಜಿ ಕೊಳುತ್ತ ಇದ್ದರು. ಶಂಕರಪ್ಪ ಮತು ನಾಯಕರು ಹಾಗೆ ಮಾಡುತ್ತಾ ಇದ್ದರು . ಆಫೀಸರ್ ಮುಖ ಆಂಜನೇಯನ ಮುಖದಂತೆ ಆಗಿತು . ಶಂಕರಪ್ಪನ ಕಣ್ಣು ಟಿಬೇಟಿಯಾರಂತೆ ಸಣ್ಣಗೆ ಹಾಗಿತು. ನಾಯಕರ ಹಣೆ ಬಲೂನಿನಂತೆ ಊದಿತ್ತು.

ನಾಯಕರನ ನೋಡುತ್ತಾ ಆಫೀಸರ್ " ರೀ ನಾಯಕ್ ಏನ್ ರೀ ಹದ್ದುಗಳಿಗೆ ಕಲ್ಲು ಹೊಡಿ ರೀ ಅಂದರೆ ಜೇನಿನ ಗೂಡಿಗೆ ಹೊಡೆಯೋದ , ನೋಡಿ ಮೈ ಎಲ್ಲ ಉರಿತ್ತ ಇದೆ , ಈ ಆಫೀಸರ್ ಕೆಲಸನು ಬೇಡ , ಈ ಜೇನಿನ ಸಹವಾಸನು ಬೇಡ , ಹುಶಪ್ಪ " ಅಂತ ಹುಲ್ಲು ಹಾಸಿನ ಮೇಲೆ ತಮ್ಮ ಕಾಲು ಮುಂದಕ್ಕೆ ಚಾಚುತ್ತ ಕೂತರು.

"ನಾನು ಹೊಡಿಲ್ಲಿಲ ಸಾರ್ , ಈ ಮೌ ಮೌ ಬೀ ಗಳೇ ಹಿಂಗೆ , ತಮ್ಮಗೆ ಎಲ್ಲಿ ತೊಂದರೆ ಆಗುತ್ತೋ ಅಂತ ಮೊದಲೇ ದಾಳಿ ಮಾಡಿ ಬಿಡುತ್ತವೆ , ಎಲ್ಲ ಆ ಹುಡುಗನ ಬಾಡಿ ಹತ್ತಿರ ಅದರ ಗೂಡು ಇತ್ತು ಅಂತ ಕಾಣಿಸುತ್ತೆ " ಅಂತ ಹೇಳುತ್ತಾ ಮಂಡಿ ಊರಿ ನಾಯಕರು ಆಫೀಸರ್ ಎದುರಿಗೆ ಕೂತರು .

"ನಾವು ನೋಡಿದ ಹುಡುಗ ಯಾರು ಇರಬಹುದು , ಅವನೇನು ಇಲ್ಲೇ ಬಂದು ಸತ್ತನೋ ಇಲ್ಲ ಯಾರಾದರು ಮರ್ಡರ್ ಮಾಡಿ ಇಲ್ಲಿ ತಂದು ಹಾಕಿದರೋ ಗೊತ್ತು ಆಗುತ್ತಾ ಇಲ್ಲವಲ್ಲ ಸಾರ್ "

" ನಾಯಕರೆ , ಆ ಹುಡುಗ ಮೋಸ್ಟಲಿ ಆನೆ ಕೈ ಅಲ್ಲಿ ಸಿಕ್ಕಿ ಸತ್ತಿರ ಬೇಕು , ಅವನು ನಾವು ನೋಡಿದ ಹುಡುಗರ ಗುಂಪಿನವನೇ ಇರಬೇಕು , ಆನೆ ನೋಡಿ ಗಾಬರಿ ಆಗಿ ಆ ಹುಡುಗರು ಓಡಿ ಬಂದಿರ ಬೇಕು , ಆ ವೇಳೆಗೆ ಆನೆ ಈ ಹುಡುಗನ... , ಅಂತ ಅನಿಸುತ್ತೆ , ಪೋಲಿಸೆನವರು ಬರುತ್ತಾರಲ್ಲ , ಅವರು ಅದನ ನೋಡಿ ಕೊಳುತ್ತಾರೆ ಬಿಡಿ , ಆದರು ಈ ಹುಡುಗರಿಗೆ ವಯಸಿನ ಉತ್ಸಾಹದಲ್ಲಿ ಎಂತ ಅಪಾಯಕೆ ಸಿಕ್ಕಿ ಹಾಕಿ ಕೊಳುತಿವಿ ಅಂತ ಗೊತ್ತಿರಲ್ಲೋ , ಇವಾಗ ನೋಡಿ ಎಂತ ಅವಗಡ ಸಂಭವಿಸಿದೆ . ಸುಂದರತೆ ಒಳ್ಳಗೆ ಬೀಕರತೆ ಇರುತೆ ಅನ್ನೋ ಸತ್ಯ ಇವರಿಗೆ ಗೊತ್ತಿರೋಲ್ಲ , ವಯಸಿನ ಹುಡುಗಾಟಕೆ ಕಾಡಿಗೆ ಬಂದು ಈ ರೀತಿ ಜೀವ ತೆತ್ತುತಾರೆ , ಎಲ್ಲ ಅವರ ಹಣೆ ಬರಹ , ನನಗೆ ಒಂದು ಅರ್ಥ ಆಗುತ್ತಾ ಇಲ್ಲ , ಇವರು ಕಾಡಿಗೆ ಹೇಗೆ ಬಂದರು ಅಂತ "

"ಅಯ್ಯೋ ಸಾರ್ , ಇವೆಲ್ಲ ನಮ್ಮ ಡಿಪಾರ್ಟ್ಮೆಂಟ್ ನವರ ಸಹಕಾರ , ಅದು ನಿಮ್ಮಗೂ ಗೊತ್ತು , ಎಲ್ಲರಿಗು ಗೊತ್ತು "

"ಅದು ಸರಿ ಅನ್ನಿ ನಾಯಕರೆ " ಅಂತ ಶಂಕರಪ್ಪ ಹೇಳಿದ.

"ಅದು ಸರಿ ಸಾರ್ , ಆನೆ ಆ ಹುಡುಗನ ... ಅಂತ ನೀವು ಹೇಗೆ ಹೇಳಿದಿರಿ " ಅಂತ ಜೇನು ಕಚ್ಚಿದ ಹಣೆನ  ಉಜ್ಜಿ ಕೊಳುತ್ತ ನಾಯಕರು ಕೇಳಿದರು.

" ರೀ ನಾಯಕ್ , ಅಲ್ಲೇ ಆ ಹುಡುಗನ ದೇಹದ ಪಕ್ಕ ಆನೆ ಹೆಜ್ಜೆ ಗುರುತು ಇದುದನ ಶಂಕರಪ್ಪ ತೊರಿಸಲ್ಲಿಲವೆನ್ರಿ "

"ಒಹ್ ಹಾಗೆ "

"ಆಗು ಇಲ್ಲ ಈಗೂ ಇಲ್ಲ , ನಾವು ಇವಾಗ ಎಷ್ಟು ದೂರು ಓಡಿ ಬಂದಿದಿವೋ ಏನೋ ಗೊತ್ತಿಲ " ಅಂತ ಹೇಳುತ್ತಾ ಆಕಾಶದ ಕಡೆ ಸುತ್ತ ಕಣ್ಣು ಆಡಿಸಿದರು. ಸ್ವಲ್ಪ ದೂರದಲ್ಲಿ ಹದ್ದುಗಳ ಗುಂಪು ಕಾಣಿಸಿತು. ಅದನ ನೋಡಿ ಆಫೀಸರ್ ಮೇಲೆ ಏಳುತ್ತಾ , " ರೀ ಬನ್ರಿ ಆ ಪೊದೆ ಹತ್ತಿರ ಹೋಗೋಣ , ಅಂದರೆ ಸ್ವಲ್ಪ ದೂರದಲ್ಲೇ ಇರೋಣ , ಮತ್ತೆ ಆ ಜೇನು ಬಂದರೆ ಕಷ್ಟ " ಹೇಳಿದರು . ಶಂಕರಪ್ಪ , ನಾಯಕರು , ಆಫೀಸರ್ ಎಲ್ಲರು ಹುಡುಗನ ದೇಹ ಇದ್ದ ಪೊದೆ ಕಡೆ ಹೆಜ್ಜೆ ಹಾಕಿದರು .
ರೇಂಜ್ ಆಫೀಸರ್ ಮತ್ತು ಇತ್ತರರು ದೇಹ ಇದ್ದ ಜಾಗಕ್ಕೆ ಬರುವ ವೇಳೆಗೆ ಇನ್ಸ್ಪೆಕ್ಟರ್ ಪ್ರತಾಪ್ ಮತ್ತು ನಾಲಕ್ಕು ಜನ ಕಾನ್ಸ್ಟೇಬಲ್ ಅಲ್ಲಿಗೆ ಬಂದರು . ಪೋಲಿಸ್ ನವರು ದೇಹ ಬಿದ್ದ ಜಾಗದ ಮಾರ್ಜರ್ ಮಾಡಿದ್ದರು. ದೇಹವನ ಪೋಸ್ಟ್ ಮಾರ್ಟಂ ಗೆ ಲ್ಯಾಬ್ ಗೆ ಕಳಿಸಿದರು . ಸುತ್ತಲು ಯಾವುದಾದರು ಸುಳಿವು ಸಿಗಬಹುದೆಂದು ಹುಡಿಕ್ಕಿದರು. ಪೋಲಿಸ್ ನವರಿಗೆ ಒಬ್ಬ ಹುಡುಗನ ಕೈ ಗೆ ಹಾಕುವಂತ ಬ್ರೇಸ್ ಲೈಟ್ ಸಿಕ್ಕಿತು ಮತ್ತು ಎರಡು ID ಕಾರ್ಡ್ ಸಿಕ್ಕಿದವು , ಅದನು ಸಿಜ ಮಾಡಿದ್ದರು . ರೇಂಜ್ ಆಫೀಸರ್ ಜೊತೆ ಸ್ವಲ್ಪ ಹೊತ್ತು ಮಾತನಾಡಿ ಅಲ್ಲಿಂದ ಹೊರಟ್ಟು ಹೋದರು.
ರೇಂಜ್ ಆಫೀಸರ್ " ರೀ ಶಂಕರಪ್ಪ , ಹೊಟ್ಟೆ ಬೇರೆ ತುಂಬಾ ಹಸಿತ್ತಿದೆ , ಇಲ್ಲಿ ಯಾವ ಹೊಟ್ಟೇಲ್ ಕೂಡ ಇಲ್ಲ , ಟೈಮ್ ಅಲ್ಲೇ ೪ (PM ) ಆಗಿದೆ , ಆ ಸಾಬಿಗೆ ಫೋನ್ ಮಾಡಿ ಏನಾದರು ತರೋಕೆ ಹೇಳಿ , ನಾನು ಇಲ್ಲೇ ಕಟ್ಟೆ ಕಡೆ ಹೋಗಿ ಬರುತ್ತೀನಿ , ನೀವು ಹೋಗೋ ಹಾಗಿದ್ರೆ ಹೋಗಿ ಬನ್ನಿ " ಅಂತ ಹೇಳುತ್ತಾ ಕಟ್ಟೆ ಕಡೆ ಹೊರಟ್ಟರು.
ಎಲ್ಲರು ತಮ್ಮ ತಮ್ಮ ದೇಹದ ಕಾರ್ಯ ಗಳ್ಳನೆಲ್ಲ ಮುಗಿಸಿಕೊಂಡು , ಜೀಪ್ ಹತ್ತಿ ಜೇನಿನ ಹೊಳೆ ಕಡೆ ನಡೆದರು. ಜೇನಿನ ಹೊಳೆ ಒಂದು ಸುಂದರ , ಭಯಂಕರ ಕಾಡು. ಅಲ್ಲಿ ವಿವಿದ ಬಗೆಯ ಜೀವ ಸಂಪನ್ಮೂಲ ಇದೆ . ಅಲ್ಲಿಗೆ ಮಾಮೂಲಿ ಮನುಷ್ಯನಿಗೆ ಹೋಗಲು ಅವಕಾಶ ಇಲ್ಲ. ಆದರೆ ಕೆಲವು ಫಾರೆಸ್ಟ್ ಡಿಪಾರ್ಟ್ಮೆಂಟ್ ನವರ ಸಹಾಯದಿಂದ ಒಳ್ಳಗೆ ಬಂದು ಕಷ್ಟಕ್ಕೆ ಸಿಕ್ಕಿ ಜೇವ ತೆತ್ತವರು ಅನೇಕ ಮಂದಿ. ಜೇನಿನ ಹೊಳೆಗೆ ಒಳ್ಳೆಯ ರಸ್ತೆ ಇಲ್ಲ , ದೂರವಾಣಿ ಸಂಪರ್ಕವು ಇಲ್ಲ , ಎಲ್ಲದಕು gprs ಸಹಾಯ ಬೇಕು . ಮನು ಕುಲದ ವಿಕಾಸ ಇದೆ.
ಜೇನಿನ ಹೊಳೆಗೆ ಹೋಗುವ ಎನ್ತ್ರನ್ಸೆ ನಲ್ಲಿ ರಹಿಮ ತಮ್ಮ ಮುಂದಿನ ಪಯಣಕೆ ಬೇಕ್ಕಾದ ಎಲ್ಲ ವಸ್ತುಗಳ ಜೊತೆ , ತನ್ನ ಲಗೇಜ್ ಆಟೋ ದೊಂದಿಗೆ ಬಂದಿದ. ಅವನ ಜೊತೆ ಅವನ ಸಿಸಿಯ ಕೂಡ ಬಂದಿದ. ರಹಿಮ ಶರ್ಟ್ ಜೆಬ್ಬಿನಿಂದ ಒಂದು ಮೊಟ್ಟು ಬೀಡಿ ತೆಗೆದು ಬಾಯಿ ಗೆ ಇಟ್ಟು ಕೊಂಡು , ಬೆಂಕಿ ಪೊಟ್ಟಣ ಕ್ಕೆ ಪೈಜಾಮದ ಜೆಬ್ಬಿಗೆ ಕೈ ಹಾಕಿ ಹುಡುಕುತ್ತ ಇದ್ದ , ಅವಾಗ ಯಾವುದೊ ಜೀಪಿನ ಶಬ್ದ ಆಯಿತು . ಜೀಪ್ ಇವನು ನಿಂತಿದ ಕಡೆ ಬಂದು ನಿಂತ್ತಿತು. ಜೀಪ್ ಇಂದ ರೇಂಜ್ ಆಫೀಸರ್ ಕೆಳಗೆ ಇಳಿದು ಬಂದರು. ಆಫೀಸರ್ ನ ನೋಡಿ ರಹಿಮ ಬೀಡಿ ತೆಗೆದು ಬಿಸಾಕ್ಕಿದ , ಮುಗುಳು ನಗೆ ಯೊಂದಿಗೆ
" ಏನ್ ಸಾಬ್ , ಇಷ್ಟು ಹೊತ್ತು ಮಾಡಿ ಬಿಟ್ಟಿರಿ ನೀವು , ನಾನು ಇಲ್ಲಿ ೨ ಗಂಟೆ ಇಂದ ಕಾಯುತ್ತ ಇದೆ "  ,
" ಲೇ ಸಾಬಿ ನೀನು ಕಾಯುತ್ತ ಇದೆ ಅಂತ ನಾನು ನೀನು ಹೇಳಿದ ಟೈಮ್ ಗೆ ಬರ ಬೇಕ್ಕಿತ್ತ , ಏನೋ ಮಧ್ಯ ಬೇರೆ ಕೆಲಸ ಆಯಿತು ಅದಕ್ಕೆ ಲೇಟ್ " ,
" ಯಾಕ ಸಾಬ್ ಎಲ್ಲ ಟಿಕ್ ಇದೆ ತಾನೇ , ನಿಮ್ಮಗೆ ಏನು ತೊಂದರೆ ಆಗಿಲ್ಲ ತಾನೆ , ಮೊದಲೇ ಶೈತನ ಇರೋ ಜಾಗ ಇವು ",
" ಏನಯ್ಯ ಅದು ಶೈತಾನ್ , ಪ್ರಾಣಿಗಳು ನಿನ್ನಗೆ ಶೈತಾನ್ ಆಗಿ ಕಾಣಿಸುತಾವ , ಸರಿ ಎಲ್ಲ ಬೇಕ್ಕಾದ ವಸ್ತು ತಂದ್ದಿದಿಯ ತಾನೆ "
" ಮಾ ಕಿ  ಕಸಂ ಎಲ್ಲ ತಂದ್ದಿದಿನಿ ಸಾಬ್ " ಅಂತ ತನ್ನ ಕೈ ನ ಗಾಡಿ ಹತ್ತಿರ ತೋರಿಸಿದ.
" ಎ ಸಾಬಿ ನಾವು ಹೋಗುತ್ತಾ ಇರೋದು ಆನೆ ಹಿಡಿಯೋಕ್ಕೆ , ಇನ್ನು ಆ ಆನೆ ಕ್ಯಾಂಪ್ ಗೆ ಫೋನ್ ಮಾಡಿಲ್ಲ , ಇವಾಗ ನಾನು ಫೋನ್ ಮಾಡಿದರು , ಅವರು ಬರೋಕ್ಕೆ ಇನ್ನು ಒಂದು ದಿನ ಆಗಬಹುದು , ಅಲ್ಲಿವರೆಗೂ ನಾವು ಅದರ ಹಿಂದೆ ಹೋಗ ಬೇಕು , ಮೊದಲೇ ಇಲ್ಲಿ ತಿನ್ನೋಕ್ಕೆ ಆಗಲಿ ಕುಡಿಯೋಕ್ಕೆ ಆಗಲಿ ಏನು ಸಿಗೋಲ್ಲ , ಜೊತೆಗೆ ಪ್ರಾಣ ತೆಗೆಯೋ ಅಂತ ಜೀವಿಗಳು ಇವೆ , ಅದಕ್ಕೆ ಬೇಕಾದ ಅಡುಗೆ ಮಾಡೋ ಸ್ಟವ್ , ಸಿಲಿಂಡರ್ , ನೀರು , ಟೆಂಟ್ ಹಾಕೋಕೆ ಬೇಕಾದ ಶಾಮಿಯಾನ ಎಲ್ಲ ತಂದಿದಿಯ "
" ಎಲ್ಲ ಇದೆ ಸಾಬ್ , ಅರೆ ಅಲ್ಲ ಏನು ಬಂತು ಮಲ್ಮತ್ ಗ್ರಹಚಾರ "
"ಸರಿ ನಡಿ ಹೊರಡೋಣ " ಅಂತ ಆಫೀಸರ್ ಜೀಪ್ ಹತ್ತಿರಕ್ಕೆ ಹೆಜ್ಜೆ ಹಾಕಿದರು , ಮತ್ತೆ ಹಿಂದೆ ತಿರುಗಿ "ಸಾಬಿ ಜೀಪ್ ಹಿಂದೆ ಬಂದು ಕೂತ್ತಿಕೊ , ನಿಮ್ಮ ಹುಡುಗನಿಗೆ ಗಾಡಿ ಫಾಲೋ ಮಾಡೋಕೆ ಹೇಳು " ಅಂತ ಹೇಳಿ ಜೀಪ್ ಹತ್ತಿದರು. ರಹಿಮ ಆಫೀಸರ್ ಆರ್ಡರ್ ಅಂತೆ ಜೀಪ್ ಹತ್ತಿದ . ರಹಿಮ ಸಿಸಿಯ ಜೀಪ್ ಫಾಲೋ ಮಾಡಲು ಅನುವಾದ. ಜೀಪ್ , ಲಗೇಜ್ ಆಟೋ ಜೇನಿನ ಹೊಳೆ ಒಳ್ಳಗೆ ಹೊರಟ್ಟಿತು.
ಜೀಪ್ ಸ್ವಲ್ಪ ದೂರ ಆ ಕೆಟ್ಟ ರಸ್ತೆ ಲ್ಲಿ ಹೋಗುತ್ತಾ ಇದ್ದ ಹಾಗೆ ಆನೆಯ ಜೋರು ಗಂಟಲಿನ ಶಬ್ದ ಕೇಳಿಸಿತ್ತು. ರೇಂಜ್ ಆಫೀಸರ್ " ರೀ ಶಂಕರಪ್ಪ , ಆನೆ ಇಲ್ಲೇ ಎಲ್ಲೋ ಇರೋ ಹಾಗೆ ಇದೆ " ಜೀಪ್ ನಿಲ್ಲಿಸಿ.
" ಅಯ್ಯೋ ಸಾರ್ , ಆನೆ ಗಂಟಲು ದೊಡ್ಡದು , ದೂರದಿಂದ ಕೇಳಿಸುತ್ತ ಇದೆ ಅನ್ನಿಸುತ್ತೆ "
" ಏನಯ್ಯ ಸಾಬಿ , ನಿನಗೂ ಹೀಗೆ ಅನಿಸುತ್ತಾ ಹೆಂಗೆ "
"ಹೂ ಸಾರ್ "
"ಸರಿ ನಡೀರಿ ಇನ್ನು ಸ್ವಲ್ಪ ಮುಂದೆ ಹೋಗಿ ನೋಡೋಣ" ಅಂತ ಹೇಳುತ್ತಾ ಆಫೀಸರ್ ತಮ್ಮ ಪ್ಯಾಂಟ್ ಜೆಬ್ಬಿನಿಂದ ಸಂಸುಂಗ್ ಗ್ಯಾಲಕ್ಸಿ ನೋಟ್ ೨ ಮೊಬೈಲ್ ತೆಗೆದು ಕೊಂಡು GPRS ಆನ್ ಮಾಡಿದರು. ಆನೆ ಕ್ಯಾಂಪ್ ಗೆ ಫೋನ್ ಮಾಡಿದರು . " ಎ ಸಾಬಿ ಗಜೇಂದ್ರ ಆನೆ ಕ್ಯಾಂಪ್ naale ಬರುತ್ತೆ , ಅವರಿಗೂ ಊಟದ ವ್ಯವಸ್ತೆ ಆಗಲ್ಲಿ "
"ಅರೆ ಇಸ್ಕಿ , "
" ಲೇ ಸಾಬಿ , ಆ ಕಾಡು ಕುರಿ ಆಗಲ್ಲೆ ನಿನ್ನ ಕಣ್ಣಿಗೆ ಬಿತ್ತಾ"
ರಹಿಮ ತಲೆ ಕೆಳಕ್ಕೆ ಹಾಕಿದ.
ಜೀಪ್ ಸ್ವಲ್ಪ ದೂರ ಸಾಗಿತು. ಆಫೀಸರ್ " ರೀ ಶಂಕರಪ್ಪ , ಏನ್ ರೀ ನಾವು ಅಲ್ಲೇ ತಮಿಳ್ ನಾಡಿನ ಕಡೆ ಹೋಗಿದಿವಿ ಅನಿಸುತ್ತೆ , ಗಾಡಿ ನಿಲಿಸಿ " ಅಂತ ಹೇಳಿದರು.
ರೇಂಜ್ ಆಫೀಸರ್ ಆದೇಶದ ಮೇಲೆ ಶಂಕರಪ್ಪ ಜೀಪ್ ನಿಲಿಸಿದರು. ಆಫೀಸರ್ ತಮ್ಮ ಪ್ಯಾಂಟ್ ಜೇಬ್ಬ್ನಿಂದ ತಮ್ಮ ಗ್ಯಾಲಕ್ಸಿ ನೋಟ್ ೨ ಮೊಬೈಲ್ ತೆಗೆದು gps ಆನ್ ಮಾಡಿ , ಗೂಗಲ್ ಮ್ಯಾಪ್ ನೋಡಿದರು . ನೋಡಿ " ರೀ ಶಂಕರಪ್ಪ ಹಿಂದೆ ಒಂದು ರೈಟ್ ಸೈಡ್ ಗೆ ಹೋಗಕ್ಕೆ ರೋಡ್ ಇತ್ತಲ ಅಲ್ಲಿ ಹೋಗ ಬೇಕಿತು ನಾವು , ನೋಡಿ ಮ್ಯಾಪ್" ಅಂತ ಮೊಬೈಲ್ ಶಂಕರಪ್ಪ ನ ಕೈ ಕೊಟ್ಟರು. " ಏನ್ ಸರ್ ಮನು ಕುಲದ ವಿಕಾಸ , ಎಲ್ಲೋ ಇದು ಕೊಂದು ಎಲ್ಲಿಯದೋ ಅಡ್ರೆಸ್ ಅದು ಮೊಬೈಲ್ ನಲ್ಲಿ ಹುಡುಕ್ಕಿ ಕೊಳುವ ಹಾಗೆ ಆಗಿದೆ , ಇದ್ದಪ್ಪ ವರಸೆ , ಹೌದು ಸಾರ್ ಅಲ್ಲೇ ಹೋಗ ಬೇಕು " ಅಂತ ಹೇಳುತ್ತಾ ಮೊಬೈಲ್ ಆಫೀಸರ್ ಕೈ ಗೆ ವಾಪಸು ಕೊಟ್ಟರು .
" ಸರಿ ರೆವೆರ್ಸೆ ತಗೊಳ್ಳಿ , ಹೋಗೋಣ "
ಜೀಪ್ ರೆವೆರ್ಸೆ ಆಗಿ ಸ್ವಲ್ಪ ದೂರ ಸಾಗಿತು , ಮತ್ತೆ ಆನೆ ಘೀಳು ಇಟ್ಟಿದು ಕೇಳಿಸಿತು. " ಶಂಕರಪ್ಪ ಆನೆ ಇಲ್ಲೇ ಎಲ್ಲೋ ಇರೋ ಹಾಗೆ ಇದೆ ಕಣ್ರೀ " ಅಂತ ಹೇಳುತ್ತಾ ಸಾಹೇಬರು ತಲೆ ಆಚ್ಚೆ ಹಾಕಿ ಸುತ್ತ ಕಣ್ಣು ಆಡಿಸ ತೊಡಗಿದರು. ರಹಿಮ , ಮತ್ತೆ ನಾಯಕರು ಕೂಡ ಸುತ್ತ ಕಣ್ಣು ಆಡಿಸ ತೊಡಗಿದರು. ರಹಿಮನ ಡಕೋಟಾ ಎಕ್ಸ್ಪ್ರೆಸ್ ಜೀಪ್ ಹಿಂದೆ ನಿಧಾನವಾಗಿ ಬರುತ್ತಾ ಇತ್ತು.
ನೋಡು ನೋಡುತ್ತಾ ಇದ್ದ ಹಾಗೆ ಮರಗಳ ಮಧ್ಯ ಇಂದ ಯಾವುದೊ ಒಂದು ಆಕೃತಿ ಇವರತ ಬರುವಂತೆ ಶಬ್ದ ವಾಗ ತೊಡಗಿತು. ಗಿಡಗಳು ಅಲುಗಾಡು ತಿರುವಂತೆ ಕಂಡಿತು. " ಶಂಕರಪ್ಪ ಏನೋ ನಮ್ಮ ಕಡೆಗೆ ಬರುತ್ತಾ ಇರೋ ಹಾಗೆ ಇದೆ" ಅಂತ ಸಾಹೇಬರು ಕೂಲಿಂಗ್ ಗ್ಲಾಸ್ ಇಳಿಸುತ್ತಾ ಹೇಳುತ್ತಾ ಇರುವಾಗಲೇ , ಜೀಪಿನ ಮಧ್ಯಕ್ಕೆ ಯಾವುದೊ ದೊಡ್ಡ ಆಕೃತಿ ಬಂದು ಜೋರ್ ಆಗಿ ಗುದ್ದಿತು , ಆಕೃತಿ ಗುದ್ದ ರಭಸಕ್ಕೆ ಜೀಪ್ ಊರುಳಿ ಪಲ್ಟಿ ಹೊಡೆದು ಯಾವುದೊ ಗಿಡಗಳ ಮಧ್ಯ ಬಿದಿತು , ಜೀಪಿಗೆ ಗುದ್ದ ಆಕೃತಿ ತನ್ನ ದೊಡ್ಡ ಗಂಟಲಿನ ಶಬ್ದ ಮಾಡುತ ಕಾಡಿನ ಒಳ್ಳಗೆ ಓಡಿ ಹೋಯಿತು.
ಜೀಪ್ ಹಿಂದೆ ಬರುತ ಇದ್ದ ರಹಿಮ ನ ಶಿಷ್ಯ ಸಯೇದ್  " ಅರೆ ಸೈತಾನ ಆನೆ , ಇಸ್ಕ್ಕಿ ಮಾದರ್ ಚೊದ್" ಅಂತ ಬಯುತ್ತ ಗಾಡಿ ನಿಲಿಸಿದನು. ಅವನ ಕೈ ಕಾಲು ನಡುಗಲು ಶುರುವಾಯಿತು. ಗಾಡಿ ಇಂದ ಕೆಳಗೆ ಇಳಿಯಲು ಹಿಂಜರಿಕೆ ಆಯಿತು , ಆದರು ವಿಧಿ ಇಲ್ಲದೇ ಬೆಂಕಿಯ ಪಂಜು ವಂದನು ಹಚ್ಚಿ ಕೊಂಡು ಧೈರಿಯ ಮಾಡಿ ಕೆಳಗೆ ಇಳಿದನು.
ಕಾಡಿನ ಒಳ್ಳಗೆ ದಾರಿ ಗೊತ್ತು ಇದ್ದರು ಯಾರನಾದರೂ ಹುಡುಕುವುದು ಕಷ್ಟದ ಕೆಲಸ. ಸಯೇದ್ ಜೋರಾಗಿ " ರಹಿಮ ಅಣ್ಣ ಎಲ್ಲಿ ಇದ್ದೀರಾ , ನಾನು ಕೂಗುತ್ತ ಇರೋದು ಕೇಳಿಸುತ್ತ ಇದಿಯ " ಅಂತ ನಡುಗುತ್ತ ಒಂದು ಒಂದೇ ಹೆಜ್ಜೆ ಮೇಲಗೆ ಹಾಕುತ್ತ ಮುಂದೆ ನಡಿಯ ತೊಡಗಿದನು. ಘೋರ ಕಾಡಿನ ಮಧ್ಯ, ಯಾರು ಇಲ್ಲದ ಕಟ್ಟು ಪ್ರಾಣಿಗಳಿಂದ ತುಂಬಿದ ಕಾಡಿನಲ್ಲಿ ಈ ರೀತಿ ಆದಾಗ ಮನುಷ್ಯನಿಗೆ ಆಗುವ ಭಯ ಹೇಳ ತೀರದು. ಸಯೇದ್ ಪರಿಸ್ತಿತಿ ಹಾಗೆ ಇತ್ತು.
ಸಯೇದ್ ಸ್ವಲ್ಪ ದೂರ ನಡೆದ ಮೇಲೆ ಅವನಿಗೆ ಯಾರೋ ತನ್ನ ಕರೆಯುವಂತೆ ಕೇಳಿಸಿತು. ಧ್ವನಿ ತಮ್ಮ ಧಣಿ ರಹಿಮ ಅವರದು ಅಂತ ಗುರುತು ಹಿಡಿದನು. ಧ್ವನಿ ಗುರುತು ಹಿಡಿಯುತ್ತ ಯಾವುದೊ ಗಿಡಗಳ ಪೊದೆ ಬಳಿ ಬಂದು ನಿಂತನು. ಆ ಪೋದ್ದೆಗಳ ಮಧ್ಯ ಜೀಪ್ ಪಲ್ಟಿ ಹೊಡೆದು ಬಿದ್ದಿರುವುದು ಕಾಣಿಸಿತು. ಜೀಪ್ ಒಳ್ಳಗಿಂದ ಎಲ್ಲರು ಹೊರಬರಲು ಪ್ರಯತ್ನ ಮಾಡುತ್ತಾ ಇರುವುದು ಕಾಣಿಸಿತು . ಜೀಪ್ ಬಿದ್ದ ರಭಸಕ್ಕೆ ಅದರ ಬಾಗಿಲುಗಳು ಜಖಂ ಆಗಿದವು, ಹಾಗಾಗಿ ಯಾರಿಗೂ ಸುಲಬವಾಗಿ ಆಚ್ಚೆ ಬರಲು ಆಗುತ್ತಾ ಇರಲ್ಲಿಲ. ಜೀಪ್ ತಲೆ ಕೆಳಕ್ಕೆ ಹಾಗಿ ಬಿದ್ದಿತು. ಸಯೇದ್ ತನ್ನ ಗಾಡಿ ಹತ್ತಿರಕ್ಕೆ ಹೋಗಿ ಸುತ್ತಿಗೆ ಮತು ಇತ್ತರೆ ವಸ್ತುಗಳನು ತಂದು ಜೀಪಿನ ಬಾಗಿಲು ಮುರಿದು , ಎಲ್ಲರನು ಆಚ್ಚೆ ಬರುವಂತೆ ಮಾಡಿದನು.
ಎಲ್ಲರಿಗು ಸಣ್ಣ ಪುಟ್ಟ ಗಾಯಗಳು ಆಗಿದ್ದವು. ನಾಯಕರಿಗೆ ಮಾತ್ತಿರ ಸ್ವಲ್ಪ ಜಾಸ್ತಿ ಪೆಟ್ಟು ಬಿದ್ದಿತು. ಜೀಪ್ ಇಂದ ಹೊರಬಂದ ಸಾಹೇಬರು ಗಾಯವಾದ ಹಣೆ ಉಜ್ಜಿಕೊಳುತ್ತ " ರೀ ಶಂಕರಪ್ಪ ಇವಾಗ ಏನ್ ರೀ ಮಾಡೋದು , ಆ ಆನೆ ಮತ್ತೆ ದಾಳಿ ಮಾಡಿದರೆ ಹೆಂಗೆ ರೀ , ನಡೆಯೋಕ್ಕೆ ಆಗದ ಹಾಗೆ ಪೆಟ್ಟು ಬೇರೆ ಬಿದ್ದಿದೆ ಎಲ್ಲರಿಗು , ಹೇಯ್ ಸಯೇದ್ ನಿಮ್ಮ ಗಾಡಿ ನ ಇಲ್ಲಿಗೆ ತಗೊಂಡು ಬಾರಪ್ಪ , ನೀರು ಆದರು ಕುಡಿಯೋಣ " ಅಂತ ಬೆನ್ನು ಮಂಡಿಯವರೆಗೂ ಬಗಿಸುತ್ತ ಹೇಳಿದರು. ಎಲ್ಲರು ನೆಲದ ಮೇಲೆ ತಮ್ಮ ಕಾಲುಗಳನ ಚಾಚ್ಚಿ ಕುಳ್ಳಿತು ಕೊಂಡರು.ಎಲ್ಲರು ತಮ್ಮ ಅಂಗಾಂಗ ಗಳಿಗೆ ಗಾಯವಾದ ಜಾಗ ಗಳನ ನೋಡಿಕೊಳುತ್ತ ಇದ್ದರು.
" ಅರೆ ಸಾಬ್ , ನಾಳೆ ಆನೆ ಕ್ಯಾಂಪ್ ಬರೋವರೆಗೂ ನಾವು ಇಲ್ಲಿ ಟೆಂಟ್ ಹಾಕಿದರೆ ಆಯಿತು , ಊಟಕ್ಕೆ ಬೇಕಾದ ಎಲ್ಲ ಸಾಮಾನು ತಂದಿದೀನಿ ಏನೋ ಮಾಡಿಕೊಂಡು ತಿಂದರೆ ಆಯಿತು , ಅರೆ ಅಲ್ಲ ಮತ್ತೆ ಯಾವ ಸೈತಾನ ಬರದ ಹಾಗೆ ನೋಡಿಕೊಳಪ್ಪ" ಅಂತ ರಹಿಮ ಸಾಹೇಬರು ಕಡೆ ನೋಡುತ್ತಾ ಹೇಳಿದನು.
"ಅದು ಸರಿ ಸಾಬಿ , ಆದರೆ ಆನೆ ಕ್ಯಾಂಪ್ನವರಿಗೆ ನಾವು ಇಲ್ಲಿ ಇರೋದು ಹೇಗೆ ಗೊತ್ತು ಆಗುತ್ತೆ , ಮತ್ತೆ ನಮ್ಮ ಡಿಪಾರ್ಟ್ಮೆಂಟ್ ನವರಿಗೆ ಹೇಗೆ ತಿಳಿಸೋದು , ಅಲ್ಲದೆ ರಾತ್ರಿ ಪೂರ್ತಿ ಇಲ್ಲಿ ಕಳೆಯೋದು ಅಷ್ಟು ಸುಲಭ ಅಲ್ಲ "
" ಸಾರ್ , ರಹಿಮ ಹೇಳಿದ ಹಾಗೆ ಮಾಡೋಣ , ಡಿಪಾರ್ಟ್ಮೆಂಟ್ ಗೆ ಫೋನ್ ಮಾಡಿದರೆ ಆಯಿತು , ರಾತ್ರಿ ಯಾರಾದರು ಬರುತ್ತಾರೆ , ನಾವು ಹೋಗಬಹುದು " ಅಂತ ನಾಯಕರು ತಮ್ಮ ಬಲ ಕೈನ ನೆಲದ ಮೇಲೆ ಊರಿ ಕಾಲು ಚಾಚ್ಚಿ ಕೊಂಡು ಕುಂತು ಹೇಳಿದರು.
"ಆ ಸೈತಾನ ಆನೆ ಇರೋದು ಗೊತ್ತೇ ಹಾಗಲ್ಲಿಲವಲ್ಲ ಸಾಬ್ , ಹಾಳದು ಹೀಗೆ ಮಾಡಿ ಬಿಟ್ಟಿತು , ನಮ್ಮ ಗ್ರಹಚಾರ ಚೆನ್ನಾಗಿ ಇತ್ತು ಬದುಕಿದಿವಿ , ಇಲ್ಲ ಅಂದಿದಾರೆ ".
"ಸರಿ ನಾಯಕರೆ ಸಾಬಿ ಹೇಳಿದ ಹಾಗೆ ಮಾಡೋಣ " ಅಂತ ರೇಂಜ್ ಆಫೀಸರ್ ತಮ್ಮ ಮೊಬೈಲ್ ಸ್ವಿಚ್ ಆನ್ ಮಾಡಿದರು. ಜಿಪಿಎಸ್ ಆನ್ ಮಾಡಿದರು. ಅವರ ಮೊಬೈಲ್ ರಿಂಗ್ ಆಗಲು ಶುರುಮಾಡಿತು. ಆಫೀಸರ್ ಕಾಲ್ ರಿಸೀವ್ ಮಾಡಿದರು .

"ಹಲೋ ಯಾರು"
"ನಾನು ಬುದ್ದಿ ಗೇಣಿ ಕೊಪ್ಪಲಿನ ಛೇರ್ಮನ್"
"ಹೇಳಿ ಛೇರ್ಮನ್ ಸಾಹೇಬರೇ "
"ಆರಾಮ ಸಾಹೇಬರೇ "
"ಏನೋ ಇದ್ದೀನಿ , ಏನು ಫೋನ್ ಮಾಡಿದು , ಹೇಳಿ ಬೇಗ "
"ಏನಿಲ್ಲ ಸಾಹೇಬರೇ , ನೀವು ನನ್ನ ಮಗನ ಸ್ಟೇಷನ್ ನಲ್ಲಿ ಇರಿಸಿದಿರಂತೆ , ಯಾಕೆ ಅಂತ ಕೇಳೋಣ ಅಂತ ಫೋನ್ ಮಾಡಿದೆ "
"ನೋಡಿ ಛೇರ್ಮನ್ ರೆ , ನಿಮ್ಮ ಮಗ ಅಕ್ರಮವಾಗಿ ಕಾಡಿಗೆ ಪ್ರವೇಶ ಮಾಡಿದ , ಅದಕ್ಕೆ ವಿಚಾರಣೆಗೆ ಅಂತ ಇರಿಸಿದಿನಿ , ನಾನು ಸ್ಟೇಷನ್ ಗೆ ಹೋದಮೇಲೆ ವಿಚಾರಣೆ ಮಾಡಿ ಕಳಿಸುತೀನಿ , ಅವನಿಗೆ ಯಾವ ತೊಂದರೆ ಇಲ್ಲದ ಹಾಗೆ ವ್ಯವಸ್ತೆ ಮಾಡಿದಿನಿ ಬಿಡಿ , ಸರಿ ಇವಾಗ ಅರ್ಜೆಂಟ್ ಅಲ್ಲಿ ಇದೀನಿ , ನಾಳೆ ನಿಮ್ಮ ಗೆಸ್ಟ್ ಹೌಸ್ ಗೆ ಬರುತ್ತೀನಿ ಅವಾಗ ಮಾತಾಡೋಣ "
"ಸರಿ ಸಾಹೇಬರ " ಅಂತ ಛೇರ್ಮನ್ ಫೋನ್ ಕಟ್ ಮಾಡಿದರು.

ರೇಂಜ್ ಆಫೀಸರ್ ತಮ್ಮ ಡಿಪಾರ್ಟ್ಮೆಂಟ್ ನವರಿಗೆ ಫೋನ್ ಮಾಡಿ ಅಲ್ಲಿನ ಪರಿಸ್ತಿತಿ ಎಲ್ಲ ಹೇಳಿ , ಒಂದು ಜೀಪ್ ಕಳಿಸುವಂತೆ ಹೇಳಿದರು. ಮತ್ತೆ ರಹಿಮನ ಕಡೆ ತಿರುಗಿ , ಅವನ್ನೇ ನೋಡುತ್ತಾ
"ಲೇ ಸಾಬಿ ಬೇಗ ಅಡುಗೆ ಮಾಡೋ , ಆಮೇಲೆ ಬೇಗ ಟೆಂಟ್ ರೆಡಿ ಮಾಡು , ಆಫೀಸ್ ಗೆ ಫೋನ್ ಮಾಡಿ ಬೆಳ್ಳಿಗೆ ಜೀಪ್ ಕಳಿಸೋದಕ್ಕೆ ಹೇಳಿದೀನಿ , ಇವತು ಎಲ್ಲ ಇಲ್ಲೇ ಟೆಂಟ್ " ಅಂತ ಹೇಳುತ್ತಾ ಕೆಳಗೆ ಕೂತ್ತಿಕೊಳಲು ಮುಂದು ಆದರು. ಅಷ್ಟರಲ್ಲಿ ಯಾವುದೊ ದೊಡ್ಡ ಪ್ರಾಣಿಯ ದೊಡ್ಡ ಗಂಟಲಿನ ಶಬ್ದ ಕೇಳಿಸಿತು. ಅದನ ಕೇಳಿದ ಸಾಹೇಬರು
 " ರೀ ಶಂಕರಪ್ಪ ಎಲ್ಲೋ ಹುಲಿ ಬರುತ್ತಾ ಇರೋ ಹಾಗೆ ಇದೆ , ಏನ್ ಘರ್ಜನೆ ರೀ ಅದರದು , ಟೆಂಟ್ ಸುತ್ತ ಎಲ್ಲ ನೋಡಿಕೊಂಡು ಅಂದರೆ ಕಾಳಿಗಿಚ್ಚು ಆಗದ ಹಾಗೆ ಬೆಂಕಿ ಹಾಕಿ ಆಯ್ತಾ".

ರಹಿಮ ಮತ್ತು ಸಯೇದ್ ಟೆಂಟ್ ರೆಡಿ ಮಾಡಿದರು. ಆಫೀಸರ್ ಆದೇಶ ದಂತೆ ಶಂಕರಪ್ಪ ಟೆಂಟ್ ಸುತ್ತ ಬೆಂಕಿ ಹಾಕಿದರು . ರಹಿಮ ಅಡುಗೆ ಮಾಡಿ ಎಲ್ಲರಿಗು ಊಟ ಕೊಟ್ಟು ತಾನು ಮಾಡಿದ. ಎಲ್ಲರು ಟೆಂಟ್ ಗಳಿಗೆ ಹೋಗಿ ಮಲಗಿದರು .

ಮಧ್ಯ ರಾತ್ರಿಲ್ಲಿ ರಹಿಮನಿಗೆ ನೇಚರ್ ಕಾಲ್ ಗೆ ಹೋಗಬೇಕು ಅನಿಸಲ್ಲು ಶುರು ಆಯಿತು. ರಹಿಮ ಹೊಟ್ಟೆ ಬಾದೆ ತಾಳಲಾರದೆ ಎನ್ನೆನೊ ಗೊಣಗುತ್ತ ಕೈ ಅಲ್ಲಿ ಒಂದು ಟಾರ್ಚ್ , ಇನ್ನೊಂದು ಕೈ ಅಲ್ಲಿ ಚೊಂಬು ಹಿಡಿದು ಕೊಂಡು ಯಾವುದೊ ಒಂದು ದೊಡ್ಡ ಮರದ ಹಿಂಬದಿಗೆ ಹೋಗಿ ಕೂತ. ಯಾವುದೊ ಹಾಡು ಹಾಡುತ್ತ ಟಾರ್ಚ್ ಮುಂದಕ್ಕೆ ಹಿಡಿದ , ಅವನ ಮುಂದೆ ಯಾವುದೊ ತೊನ್ನು ಚರ್ಮದ ವಸ್ತು ಚಲಿಸಿದ ಹಾಗೆ ಕಾಣಿಸಿತು . ಗಾಬರಿ ಆಗಿ ಲುಂಗಿ ಇಳಿಸುತ್ತಾ ಮೇಲೆ ಎದ್ದ. ಇದಕಿದ ಹಾಗೆ ಯಾವುದೊ ಆಕೃತಿ ಅವನ ಮೇಲೆ ಎರಗಿತು. ಅದರ ದೊಡ್ಡ ಗಂಟಲಿನ ಶಬ್ಧಕ್ಕೆ ಟೆಂಟ್ ಅಲ್ಲಿ ಮಲಗಿದ ಆಫೀಸರ್ ಎಚ್ಚರ ಆಗಿ ಹೊರಬಂದು ಗಾಳಿಲ್ಲಿ ಗುಂಡು ಹಾರಿಸಿದರು. ಗುಂಡಿನ ಶಬ್ದಕ್ಕೆ ಹೆದರಿ ರಹಿಮ ಮೇಲೆ ಎರಗಿದ ಕರಡಿ ಓದಿ ಹೊಇತು.

ಕರಡಿ ಓಡಿ ಹೋದ ಮೇಲೆ ಸಣ್ಣ ಪುಟ್ಟ ಗಾಯಗಳೊಂದಿಗೆ ರಹೀಮ ನಿಧಾನವಾಗಿ ಎದ್ದು ಮೆಲಗೆ ನಡೀತ್ತಾ  ಟೆಂಟ್ ಕಡೆ ಹೆಜ್ಜೆ  ಹಾಕಿದ. ಆಫೀಸರ್ ಮತ್ತೆ ಇತ್ತರರು ಅವನ ಕಡೆ  ಬಂದರು. ರಹೀಮನಾ  ಜೊತೆ ಟೆಂಟ್ಗೆ ಕರೆದುಕೊಂಡು ಹೋದರು.
"ರೀ ಶಂಕರಪ್ಪ ಆ ಸರಕಾರಿ ಹಾಸ್ಪಿಟಲ್ ಆಂಬ್ಯುಲೆನ್ಸ್ ಡ್ರೈವರ್ ನಂಬರ್ ಇದೀಯ ನಿಮ್ಮ ಹತ್ತಿರ ಇದ್ದರೆ ಕೊಡಿ"
"ತಗೋಳಿ ಸರ್" ಅಂತ ಪರ್ಸ್ ಇಂದ ಒಂದು ವಿಸಿಟಿಂಗ್ ಕಾರ್ಡ್ ಕೊಟ್ಟರು. ಆಫೀಸರ್ ಆ ನಂಬರ್ ಗೆ ಫೋನ್ ಮಾಡಿ ಅರ್ಜೆಂಟ್ ಆಗಿ ಜೇನು ಕೊಪ್ಪಕೆ ಬರೊದ್ದಕೆ ಹೇಳಿದರು.
"ರೀ ಶಂಕರಪ್ಪ ಆಂಬ್ಯುಲೆನ್ಸ್ ಬಂದ ಮೇಲೆ ಆ ರಹೀಮನ ಕಳಿಸಿಕೊಡಿ"
ಸ್ವಲ್ಪ ಹೊತ್ತಿನಲ್ಲಿ ಆಂಬ್ಯುಲೆನ್ಸ್ ಬಂತು. ರಹೀಮ್ ಅದರಲ್ಲಿ ಹಾಸ್ಪಿಟಲ್ ಗೆ ಹೋದ.
ಬೆಳ್ಳಿಗೆ ಎಲ್ಲರು ಎದ್ದು ನಿತ್ಯ ಕರಮಗಳನ್ನೆಲ್ಲ ಮುಗಿಸಿಕೊಂಡು ತಮ್ಮ ತಮ್ಮ ಟೆಂಟ್ ಗಳ ಹತ್ತಿರ ಬಂದು ಆಫೀಸರ್ ಆರ್ಡರ್ ಗಾಗಿ ಕಾಯುತ್ತ ನಿಂತರು. ಆಫೀಸರ್ ಕೈ ಅಲ್ಲಿ ಸಿಗಾರ್ ಹಿಡಿದುಕೊಂಡು ಎಲ್ಲರು ನಿಂತಿದ ಕಡೆ ಬಂದರು.ಶಂಕರಪ್ಪನ ನೋಡುತ್ತಾ "ರೀ ಶಂಕರಪ್ಪ , ಆ ಆನೆ ಕ್ಯಾಂಪ್ ಹೆಡ್ ಶ್ರೀನಿವಾಸಯ್ಯ ನಿಗೆ ಕಾಲ್ ಮಾಡಿ , ಎಲ್ಲಿ ಇದ್ದಾರೆ ಅಂತ ಕೇಳಿ " ಅಂತ ತಮ್ಮ ಮೊಬೈಲ್ ಕೊಡುತ್ತ helidaru.

ಶಂಕರಪ್ಪ ಶರ್ಟ್ ಜೆಬಿನ್ನಿಂದ ಒಂದು ಕಾರ್ಡ್ ತೆಗೆದು ಅದರಲ್ಲಿ ಇದ್ದ ನಂಬರ್ ಗೆ ಕಾಲ್  ಮಾಡಿ ಆನೆ ಕ್ಯಾಂಪ್ ಎಲ್ಲಿ ಇದೆ ಅಂತ ತಿಳಿದುಕೊಂಡುರು. ಆಫೀಸರ್ನ ನೋಡುತ್ತಾ "ಸಾರ್ , ಆನೆ ಕ್ಯಾಂಪ್ ಇಲ್ಲಿಂದ ಒಂದು ಕಿಲೋಮೀಟರು ದೂರದಲ್ಲೇ ಇದೆ , ಆಗೋ ಆನೆ ಘೀಳು  ಕೇಳಿಸುತ್ತ ಇದೆ " ಅಂತ ಹೇಳಿ ಎರಡು ಹೆಜ್ಜೆ ಮುಂದೆ ನಡೆದರೂ.

ಆಫೀಸರ್ "ರೀ ನಾಯಕರೆ ಸ್ಟೇಷನ್ ಗೆ ಫೋನ್ ಮಾಡಿ ಗಾಡಿ ಕಳಿಸೊಕ್ಕೆ ಹೇಳಿ. ಹಾಗೆ ಮೆಕ್ಯಾನಿಕ್ ಕೂಡ. ಅವರು ಬರೋವರೆಗೂ ನೀವು ಇಲ್ಲೆ ಇದ್ದು ಗಾಡಿ ರಿಪೇರ್ ಮಾಡಿಸಿಕೊಂಡು ಸ್ಟೇಶನ್ ಗೆ ಹೋಗಿ ಆಯಿತಾ" ಅಂತ ಹೇಳುತ್ತಾ ಸಿಗಾರ್ ಕೆಳಗೆ ಹಾಕಿ ಶೂ ಇಂದ ತುಳಿದರು.
ಅಷ್ಟ್ರಲ್ಲಿ ಗಜೇಂದ್ರ ಆನೆ ಪಡೆ ಇವರ ಕ್ಯಾಂಪ್ ಹತ್ತಿರ ಬಂತು. ಕ್ಯಾಂಪ್ ಹೆಡ್ ಶ್ರೀನೀವಾಸ ರೇಂಜ್ ಆಫೀಸರ್ ಕಡೆ ಕೈ ಬೀಸುತ್ತಾ ಅವರ ಬಳಿ ಮುಗುಳು ನಗೆಯೊಂದಿಗೆ ಬಂದರು.
ರೇಂಜ್ ಆಫೀಸರ್ ಶ್ರೀನಿವಾಸ್ ನ ನೋಡಿ "ನಮಸ್ತೆ ಶ್ರೀನಿ ಗೆ , ಸೌಕ್ಯವೇ " ಅಂತ ಮುಗುಳುನಗೆಯೊಂದಿಗೆ ಕೇಳಿದರು. "ಏನು ಚೆಂದಾನ ನೋ ಇಲ್ಲ ಬರಿ ಆನೆ ಕರಡಿ ಅಂತ ಜೀವನ್ ನೇ ಕಳಿಯೋ ಹಾಗೆ ಆಗಿದೆ " , "ಅದು ಸರಿ ಅನ್ನಿ ".

ರೇಂಜ್ ಆಫೀಸರ್ ತಮ್ಮ ಡ್ರೈವರ್ ಶಂಕರ ನ ಕಡೆ ಕೈ ಸನ್ನೆ ಮಾಡುತ್ತಾ ಕರೆದರು. "ರೀ ಶಂಕರ್ ಆಫೀಸ್ ಇಂದ ಜೀಪ್ ಬಂತಾ , ಮತ್ತೆ ಆ ರವಿ ಬಂದಾರ " ಅಂತ ಕೇಳಿದರು ,ಶಂಕರ್ ಕಣ್ಣು ಉಜ್ಜುತ್ತಾ "ಹಾ ಸರ್ ಗಾಡಿ ಬಂದಿದೆ , ರವಿ ಬಂದಿದ್ದಾರೆ ". "ಸರಿ ಹಾಗಿದರೆ , ನಾನು ಸ್ವಲ್ಪ ಆ ಚೇರ್ಮನ್ ಮನೆಗೆ ಹೋಗಿ ಬರುತ್ತೀನಿ , ನೀವು ಶ್ರೀನಿವಾಸ್ ಗೆ ಹೆಲ್ಪ್ ಮಾಡಿ"

"ಅಂದ ಹಾಗೆ ಶ್ರೀನಿವಾಸ್ ಎಷ್ಟು ದಿವಸ ಪಯಣ ಇಲ್ಲಿಗೆ ಬರೋದಕ್ಕೆ " ಅಂತ ಯಾವುದೋ ಗಿಡದ ಕಡ್ಡಿ ಮುರಿಯುತ್ತಾ ಕೇಳಿದರು . ಶ್ರೀನಿವಾಸ್ ಅವರ ಪಕ್ಕಕೆ ಬಂದ ಆನೆ ಸೊಂಡಿಲು ಹಿಡಿದು ಕೊಳುತ್ತಾ ರೇಂಜ್ ಆಫೀಸರ್ ಕಡೆ ನೋಡುತ್ತಾ "ಮೂರು ದಿವಸ ಆಯಿತು , ಈ ಗಜೇಂದ್ರನ ಹುಡುಕಿಸಿ ಕರೆಸೊಕ್ಕೆ ಒಂದು ದಿನ , ಇನ್ನೂ ಆನೆ ತರೋದಕ್ಕೆ ಗಾಡಿ ಸ್ಯಾಂಕ್ಶನ್ ಮಾಡಿಸಿ , ಅದರ ಬಿಲ್ ಸಬ್ಮಿಟ್ ಮಾಡಿ ಬರೋದಕ್ಕೆ ಇಷ್ಟು ದಿನ ಆಯಿತು "

"ಓ ಐ ಸೀ "

"ಸರಿ ಆಫೀಸರ್ , ಆನೆ ಫುಟ್ಪ್ರಿಂಟ್ ಡೀಟೇಲ್ಸ್ ಕೊಡಿ ನೋಡೋಣ , "

ಆಫೀಸರ್ ಜೆಬ್ಬಿನಿಂದ ಕಾಣಿಸಿಕೊಂಡ ಆನೆ ಫುಟ್ಪ್ರಿಂಟ್ ಡೀಟೇಲ್ಸ್ ತೆಗೆದು ಕೊಟ್ಟರು. ಅದನ ಓದುತ್ತಾ ಶ್ರೀನಿವಾಸ್ "ಓ ಫುಟ್ ಪ್ರಿಂಟ್ ನೋಡಿದರೆ ಇದು ೩೦-೩೫ ವಯಸ್ಸಿನ ಪುಂಡು ಆನೆ ಇರಬಹುದು , ಆದರೆ ಇದು ಭಾರಿ ಗಾತ್ರದ ಆನೆ ಅಂತು ಹೌದು , ಇಲ್ಲಿ ನೋಡಿ ಇದೆ ನಮ್ಮ ತಂಡದ ನಾಯಕ , ಗಜೇಂದ್ರ , ಸುಮ್ಮಾರು ೯ ಅಡಿ , ೬೭೫೦ ಕೇ ಜಿ ಇದೆ , ಇದ್ದರ ವಯಸ್ಸು ೩೨ ವರುಷ , ಭಾರಿ ಸಮಾಧಾನದ ವ್ಯಕ್ತಿ "

"ಸಂತೋಷ, ಗಜೇಂದ್ರ ಆಶೀರ್ವಾದ ಮಾಡಿ ಪ್ಲೀಸ್ " ಅಂತ ಆಫೀಸರ್ ಆನೆ ಸೊಂಡಿಲು ಹಿಡಿದರು. ಅಷ್ಟ್ರಲ್ಲಿ ಆನೆ ಘೀಳು ಕೇಳಿಸಿತು. ಇದನ ಕೇಳಿದ ಆಫೀಸರ್ "ಶ್ರೀನಿವಾಸ್ ಯಾವುದೋ ಆನೆ ಇಲ್ಲೆ ಇದೆ ಅನ್ನಿಸುತೆ , ನೀವು ಓಕೇ ಅಂದರೆ ನಾವು ನಿಮ್ಮ ", "ಆಫೀಸರ್ ತಿಳಿಯಿತು , ರೀ ರಾಮಣ , ಪ್ರಭ ಆನೆ ಮತ್ತೆ ಶ್ರೀರಾಮ್ ಆನೆ ಗೆ ಅಲ್ಲೇ ಇರೋದಕ್ಕೆ ಹೇಳಿ , ಮತ್ತೆ ಜವಾರೈಯ "ಗಜೇಂದ್ರ ನ ಆನೆ ಶಬ್ಧ ಬಂದ ಕಡೆ ತಿರುಗಿಸಿ , ಆನೆ ಹತ್ತಿ ಆಫೀಸರ್ "

ಶ್ರೀನಿವಾಸ್ ಮತ್ತೆ ಆಫೀಸರ್ ಕಾರ್ತಿಕೇಯ ಆನೆ ಹತ್ತಿದರು. ಆನೆ ಘೀಳು ಬಂದ  ಕಡೆ ತಂಡ ಹೊರಟಿತ್ತು. ಅಂತು ಇಂತು ಆನೆ ಪತ್ತೆ ಆಯಿತು , ಶ್ರೀನಿವಾಸ್ "ರಾಮಣ ಪ್ರಭ ನ ಲೆಫ್ಟ್ ಸೈಡ್ ಇಂದ ತನ್ನಿ , ಜವಾರೈಯ ಗಜೇಂದ್ರ ನ ಆನೆ ಹತ್ತಿರ ತೆಗೆದು ಕೊಂಡು ಹೋಗಿ , ನಾವು ಹಿಂದೆ ಇಂದ ಬರುತೀವಿ , ನೋಡ್ರಿ ಸರ್ ನಾನು ಹೇಳಿದ ಹಾಗೆ ಇದು ಭಾರಿ ಆನೆ ನೇ , ಏನು ಇಲ್ಲ ಅಂದರು ೧೦.೫ ಅಡಿ ಇದೆ , ನಮ್ಮ ಗಜೇಂದ್ರ ಗಿಂತ ಶಕ್ತಿ ಶಾಲಿ " ಅಂತ ಹೇಳುತ್ತಾ ಆನೆ ಕಡೆ ನಡೆದರು.

ಕಾಡು ಆನೆ ಹಿಡಿಯುವ ಕೆಲಸ ಮಾರಣಾಂತಿಕ ಕೆಲಸ ವೆ ಸೈ . ಸಾಕು ಆನೆ ಮೇಲೆ ಕೂತಿದವನ ಕಷ್ಟ ಅವನಿಗೆ ಪ್ರೀತಿ. ಮುಳು ಗಿಡಗಳ ಮಧ್ಯೆ ನಡೆಯೋ ಕಾಳಗದಲ್ಲಿ ಏನು ಆಗುತೋ ಹೇಳೋದಕ್ಕೆ ಆಗೋಲ್ಲ.

ಗಜೇಂದ್ರನೀಗೂ ಕಾಡು ಆನೆಗೂ ಜೋರು ಜಗಳ ಆಯಿತು , ಆದರೆ ಕಾಡು ಆನೆ ಶಕ್ತಿ ಮುಂದೆ ಗಜೇಂದ್ರ ಹಿಮೆಟ್ಟಿತು. ಇದನ ಕಂಡ ಆಫೀಸರ್ " ರೀ ರಾಮಣ ಎಲ್ಲ ಆನೆನ ವಾಪಾಸು ಕರೆದುಕೊಂಡು ಬನ್ನಿ ". "ಸರ್ ನಿಮ್ಮ ಫೋನ್ ಕೊಡಿ ಸ್ವಲ್ಪ" , ಯಾರಿಗೊ ಫೋನ್ ಮಾಡಿ "ಹೆಲೋ ಮೈಸೂರು ಕ್ಯಾಂಪ್ , " , ನಡೆದುನನೆಲ್ಲ ಹೇಳಿ "ಸ್ವಲ್ಪ ಅಭಿಮನ್ಯು ಪಡೆನ ಕಳಿಸಿ" ಅಂತ ಹೇಳಿ ಫೋನ್ ಇಟ್ಟರು . ಕಾಡು ಆನೆ ಅಲ್ಲಿಂದ ತನ್ನ ದಾರಿ ಹಿಡಿದು ಹೊರಟಿತ್ತು.