ಇನ್ನೆಂತಹ ಮೌನ ಕಾಡಬೇಕು,

ಇನ್ನೆಂತಹ ಮೌನ ಕಾಡಬೇಕು,

ಧೈತ್ಯ ನಗರದ ಅಡಿಯಲ್ಲಿ 
ನೊಂದ ಭುವಿಯ ತುಂಡೊಂದು
ಆಗಸಕ್ಕೆ ದೂರು ನೀಡಿತು,
ಭುವಿಯ ನೋವನ್ನು ಕಂಡ ಆಗಸ 
ಕಣ್ಣೀರು ಸುರಿಸಿತು,
ಬೆಂಗಳೂರು ಒದ್ದೆಯಾಗಿತ್ತು.

****************************************
ಆಳಕ್ಕಿಳಿದ ನೀರ ಹನಿಯೊಂದು,
ಭುವಿಯ ಮಡಿಲು ಸೇರುವ ತವಕದಲ್ಲಿದ್ದಾಗಲೇ
ಭೋರ್ಗರೆವ ಬೋರ್ವೆಲ್ಲಿನ ಶಬ್ಧಕ್ಕೆ
ಹೆದರಿ ಆವಿಯಾಗಿತ್ತು.

****************************************
ಎರಡು ಕನ್ನಡಿಗಳನು 
ಎದುರು ಬದುರಾಗಿ ಇರಿಸಿದರೂ,,,,,,,
ಅವು ಏನನೂ ಹಂಚಿಕೊಳ್ಳಲಿಲ್ಲ,,
ಭವಿಷ್ಯಕ್ಕೆ ಉಳಿಸಿಕೊಳ್ಳಲೂ ಇಲ್ಲ,,,,,,
ಬದುಕಿದವು, ಬಂದದ್ದನ್ನು ಬಂದಂತೆ ಸ್ವೀಕರಿಸಿ,,,

****************************************
ಮೌನ, ಬರಿಯ ಮೌನವಾಗಿ ಉಳಿದಿಲ್ಲ,,,,
ಇನ್ನಿಲ್ಲದ ದುಃಖವನೆಲ್ಲ, ಒಳಗೆ 
ಭದ್ರವಾಗಿ ಅಡಗಿಸಿ,,,,,,,
ಜ್ವಾಲಾಮುಖಿಯ ಮೇಲ್ಪದರವಾಗಿದೆ.

****************************************
ಭಾವನೆಗಳಿಗೆಲ್ಲ, ಆಗಸದಲ್ಲೊಂದು 
ನಿಲ್ದಾಣ ನಿರ್ಮಿಸಬೇಕಿದೆ,,,,,
ಇಲ್ಲೆಲ್ಲೂ ನಿಲ್ಲಲೂ ಜಾಗವಿಲ್ಲ,,,,

****************************************
ಆಕಳಿಸುತ್ತಿವೆ ಟಿ. ವಿ ಗಳು,,,,
ಮಲಗಿಸೋಣ ಅವನ್ನು,,,,,,
ನಾವು ಬದುಕಲು ಎದ್ದು ನಡೆಯೋಣ 

****************************************
ಸಮನಾಂತರ ರೇಖೆಗಳ 
ಕೊನೆಯ ತುದಿಯಲ್ಲಿ ಉಳಿದದ್ದು 
ಸೇರಬೇಕೆಂಬ ತವಕ ಮಾತ್ರ,,,,

-ಜೀ ಕೇ ನ 

Comments