ಸ್ಟಾರ್ ಕೊಟ್ಟ ಸ್ಟ್ರೋಕ್​..ಪತ್ರಕರ್ತ ಗಡಗಡ...!

ಸ್ಟಾರ್ ಕೊಟ್ಟ ಸ್ಟ್ರೋಕ್​..ಪತ್ರಕರ್ತ ಗಡಗಡ...!

ಹೆಸರು; ದರ್ಶನ್. ಜನ ಕರೆಯೋದು ಚಾಲೆಂಜಿಂಗ್ ಸ್ಟಾರ್. ಸ್ಥಳ; ಮಿನರ್ವಾ ಮಿಲ್. ಚಿತ್ರಿಸುತ್ತಿದ್ದ ಸಿನಿಮಾ;  ಜಗ್ಗುದಾದಾ. ಹೋಗಿದ್ದು ಬೈಟ್ ತೆಗೆದುಕೊಳ್ಳುಕೆ. ಬೈ ಚಾನ್ಸ್ ಮಾಡಿದ್ದು ಚಿಟ್​-ಚಾಟ್ (ಲಘು ಸಂದರ್ಶನ). ಆದರೆ ಅಲ್ಲಿ ಆಗಿದ್ದು ಚಿಟ್​-ಚಾಟ್ ಅಲ್ಲ. ಕಿತ್ತಾಟ್​. ಪ್ರಶ್ನೆಗೆ ಪ್ರಶ್ನೆ ಉತ್ತರಕ್ಕೂ ಪ್ರಶ್ನೆ..ಹೊಸದನ್ನ ಕೆದಿಕಿದರೆ, ಹಳೆಯದರತ್ತ ಹೊರಳಿದರು ಚಾಲೆಂಜಿಂಗ್ ಸ್ಟಾರ್.ಅದು ಹೊಸ ಅನುಭವ. ಹಳೆಯದ್ದ ಅಲ್ಲಿ ಹೆಚ್ಚು ರಿಂಗನಿಸಿದ್ದು..

ಸೆಪ್ಟೆಂಬರ್-30 2011. ಅಂದು ಸಾರಥಿ ಚಿತ್ರ ರಿಲೀಸ್ ಆಗಿತ್ತು. ನರ್ತಕಿ ಥಿಯೇಟರ್ ಎದುರು ಜನವೋ ಜನ. ಜನ ಅಂದರೆ ತಪ್ಪಾಗುತ್ತದೆ. ಅದು ಸಾರಥಿಯ ಅಪ್ಪಟ ಅಭಿಮಾನಿಗಳ ದಂಡು. ಅಲ್ಲಿ ಏನೇ ಹೇಳಿದರು ಎಲ್ಲದಕ್ಕೂ ಒಂದೇ ಉತ್ತರ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜೈ...ಅಣ್ಣನ ಚಿತ್ರಕ್ಕೆ ಜೈ. ಇದು ಅಂದಿನ ಸಾಫ್ಟ್ ಚಿತ್ರಣ..

ಅದು 9 ಗಂಟೆಯ ಲೈವ್ ಗೆ ನಿಂತ ಕ್ಷಣ. ಸುತ್ತಲೂ ಜನ.ಮಧ್ಯೆ ನಿಂತಿದ್ದೇ ನಾನು. ಸುಮ್ನೆ ಅಲ್ಲ. ಆಂಕರ್ ಸೌಮ್ಯ ಕೇಳೋ ಪ್ರಶ್ನೆಗೆ ಉತ್ತರಿಸಬೇಕು. ಕರೆದುಕೊಂಡು ಬಂದ ಅಭಿಮಾನಿಗಳನ್ನ ಮಾತನಾಡಿಸಬೇಕು. ಎಲ್ಲವೂ ರೆಡಿ. ಆಂಕರ್ ಸೌಮ್ಯ ಕೇಳಿದ್ದು ಒಂದೇ ಪ್ರಶ್ನೆ. ರೀಲ್ ಹೀರೋ. ರಿಯಲ್​ ಲೈಫ್​ನಲ್ಲಿ ಖಳನಾಯಕನಾಗಿದ್ದಾನೆ. ಅಭಿಮಾನಿಗಳು ಏನ್ ಅಂತಾರೆ ಅಂತ.

ಅದೇ ಲೈನ್​ಗಳನ್ನೇ ರಿಪೀಟ್ ಮಾಡಿದೆ. ಒಮ್ಮೆ. ಆಗ ಎಡಗಡೆಯಿಂದ ಒಂದು ಸೌಂಡ್ ಬಂತು. ಆ ಸೌಂಡ್​ ನಲ್ಲಿ ಅಭಿಮಾನ ತುಂಬಿಕೊಂಡಿತ್ತು. ಗದ್ದಲದಿಂದಾಗಿಯೇ ಆ ಪ್ರಶ್ನೆಯನ್ನೇ ಮತ್ತೆ ರಿಪೀಟ್ ಮಾಡಿದೆ. ಅಷ್ಟೇ...? ಮುಂದೆ ಆಗಿದ್ದು ಏನೂ ಇಲ್ಲ. ಎಲ್ಲರೂ ಆವರಿಸಿಕೊಂಡರು. ಮುಗಿತು ನನ್ನ ಕಥೆ ಅನ್ನೋ ಹೊತ್ತಿಗೆ, ನಾನೇ ಸ್ವತ: ಎಲ್ಲರನ್ನೂ ತಳ್ಳಿಕೊಂಡು, ಕೇಳಿದ ಪ್ರಶ್ನೆಗೆ ಉತ್ತರವನ್ನೂ ಕೊಟ್ಟು, ಲೈವ್​ನ್ನ ಎಂಡ್ ಮಾಡಿದೆ.ಆದರೆ, ಇವರೆಲ್ಲ ಹೀಗೆ ರೊಚ್ಚಿಗೆಳೋಕೆ ಕಾರಣ ಒಂದೇ. ಅದು ದರ್ಶನ್. ದರ್ಶನ್ ಹೆಂಡ್ತಿಗೆ ಹೊಡೆದು ಜೈಲು ಸೇರಿದ್ದರು. ಚಾನಲ್​ ಗಳು ಭರ್ಜರಿ ಸುದ್ದಿ ಮಾಡಿದ್ದವು. ಸಾರಥಿ ಚಿತ್ರ ರಿಲೀಸ್ ದಿನ ಎಲ್ಲ ಅಭಿಮಾನಿಗಳು, ಚಾನ್​ಗಳ ರಿಪೋರ್ಟ್ ಮೇಲೆ ಹಿಂಗೆ ಸಿಟ್ಟಾಗಿದ್ದರು.

ಆಗೊಮ್ಮೆ...ಈಗೊಮ್ಮೆ ಅಭಿಮಾನಿಗಳು ಈ ವಿಚಾರವಾಗಿ ನನನ್ನ ಸುಮ್ಮನೆ ಕೆಣಕಿದ್ದರು. ಏನೇ ಮಾಡಿದರೂ, ನೀವೇ ಬರ್ತಿರೀ..? ಸಾರಥಿ ಚಿತ್ರದ ಕವರೇಜ್​ ಗೆ ಅನ್ನೋರು. ಅಂತಹ ಪ್ರಶ್ನೆಗಳು ಒಂದರೆಡು ಭಾರಿ ಎದುರಾದವು.ಸಾರಥಿ ಚೆನ್ನಾಗಿ ಹೋಯ್ತು. ಹೆಸರು ಮಾಡ್ತು. ದುಡ್ಡು ಬಂತು. ಚಿತ್ರ ಚಿತ್ರಮಂದಿರದಿಂದಲೂ ಹೋಯ್ತು. ಆದರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಘಟನೆ ಮತ್ತೆ ನೆನಪಿಸಿದರು..

ದರ್ಶನ್ ಗೂ ನನಗು ಎಲ್ಲಿಂದ ಎಲ್ಲಿಗೆ ಹೋಲಿಕೆ. ದರ್ಶನ್ ಚಾಲೆಂಜಿಂಗ್ ಸ್ಟಾರ್. ನಾನೊಬ್ಬ ಸಾಮಾನ್ಯ ಪತ್ರಕರ್ತ. ಸಿನಿಮಾ ರಿಪೋರ್ಟರ್. ಆದರೆ, ಅಂದಿನ ಘಟನೆಯಿಂದ ನನಗೂ ಕೊಂಚ ಬೇಸರ ಇತ್ತು.ಬೇಸರಕ್ಕೆ ಕಾರಣ, ಒಂದೇ. ಲೈಫ್​ ನಲ್ಲಿ ಇಂತಹ ಎಡವಟ್ಟು ಎಂದೂ ಮಾಡಿಕೊಂಡಿರಲಿಲ್ಲ ಅನ್ನೋದು. ಆದರೆ, ಅದೇ ಘಟನೆ ಮತ್ತೆ ತಾಜಾಗೊಳಿಸಿದ್ದು ಬೇರೆ ಯಾರೂ ಅಲ್ಲ. ಅದು ದರ್ಶನ್..

ಮೊದಲೇ ಹೇಳಿದಂತೆ, ಅದು ಮಿರ್ನಾ ಮಿಲ್. ಜಗ್ಗುದಾದಾ ಚಿತ್ರೀಕರಣ ನಡೀತಿತ್ತು.  ಅಂದು ನಮ್ಮನ ಐರಾವತ ಚಿತ್ರದ ಬಗ್ಗೆ ದರ್ಶನ್ ಅವರನ್ನ ಮಾತನಾಡಿಸಲು ಕರೆದಿದ್ದರು. ನಾವೂ ಅದೇ ಮೂಡ್​ ನಲ್ಲಿಯೇ ತೆರೆಳಿದ್ದು. ಎಲ್ಲರಿಗೂ ಸಾಮೂಹಿಕವಾಗಿಯೇ ದರ್ಶನ್ ಸೌಂಡ್ ಬೈಟ್ ಕೊಟ್ಟರು. ಅಷ್ಟೇ ಇದ್ದರೇ, ಸಾರಥಿ ಘಟನೆ ಕಂಡಿತ ನೆನಪಿಗೆ ಬರುತ್ತಿರಲೇ ಇಲ್ಲ.

ಬೈಟ್ ಮುಗಿದ ಮೇಲೆ, ಯುವ ಪತ್ರಕರ್ತೆ ಚಿಟ್ ಚಾಟ್ ಮಾಡಿರಳು. ಆಗ ನಾನೂ ಮಾಡಲೇಬೇಕು ಎಂಬ ಒತ್ತಡ ನನ್ನಲ್ಲಿಯೇ ಶುರುವಾಯ್ತು. ಅದಕ್ಕೆ ನಾನೂ ಮುಂದಾದೆ, ಆಗ ದರ್ಶನ್ ನೋ ಅಂತ ಹೇಳಲೇಯಿಲ್ಲ. ಯಸ್ ಬನ್ನಿ ಅಂದರು. ಶುರು ವಾಯ್ತು ನಮ್ಮ ಚಿಟ್​-ಚಾಟ್ ಚರಿತ್ರೆ..ಅದು ಹಿಂಗಿತ್ತು..

ಪ್ರಶ್ನೆ; ಐರಾವತ ರಿಲೀಸ್ ಆಯ್ತು. ಮೊದಲ ದಿನ ರೆಸ್ಪಾನ್ಸ್ ಹೇಗಿತ್ತು..?
ಉತ್ತರ; ಚೆನ್ನಾಗಿತ್ತು. ಪೋನ್​ನಲ್ಲಿಯೇ ಎಲ್ಲ ರಿಪೋರ್ಟ್ ತೆಗೆದುಕೊಂಡೆ. ಒಳ್ಳೆ.ಒಳ್ಳೆ ರೆಸ್ಪಾನ್ಸ್ ಬಂದಿವೆ ಅಂದರು.

ಪ್ರಶ್ನೆ; ಪತ್ರಿಕೆಯಲ್ಲಿ ಒಂದು ರೀತಿ ವಿಮರ್ಶೆ ಬರುತ್ತವೆ. ಮೊದಲ ದಿನ ಜನ ಒಂದು ಕೊಡ್ತಾರೆ. ನಿಮಗೆ ಏನ್​ ಅನಿಸುತ್ತದೆ..?
ಉತ್ತರ; ದರ್ಶನ್ ಈ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ಪ್ರಶ್ನೇನೆ ಕೇಳಿದರು. ಪ್ರಶ್ನೆ ಮೇಲೆ ಪ್ರಶ್ನೆ ಕೇಳಿತಾ ಹೋದರು. ಆಗ ನಾನು ತಬ್ಬಿಬ್ಬು. ಏನ್ ಹೇಳಬೇಕು ತಿಳಿಯಲೇಯಿಲ್ಲ. ವಿಮರ್ಶೆ ಅಂದ್ರೆ ಏನೂ ಹೇಳಿ ಅಂತ ಮತ್ತೆ..ಮತ್ತೆ ಅದೇ ಪ್ರಶ್ನೆ. ಆಗ ಚಿತ್ರದಲ್ಲಿ ಲಾಜಿಕ್ ಇಲ್ಲ ಅಂದೆ.ಐಪಿಎಸ್ ಅಧಿಕಾರಿ ಒಂದೇ ಇದನಕ್ಕೆ ಪಾಸಾಗಲು ಸಾಧ್ಯವೇ ಎಂದೆ. ಆಗ ಒಂದು ಉತ್ತರ ಬಂತು. ಸಿನಿಮಾ ಒಂದು ಮನರಂಜನೆ. ಅಲ್ಲಿ ಲಾಜಿಕ್ ಹುಡುಕ ಹೋಗಬಾರದು ಅಂದರು.

ದರ್ಶನ್ ಈ ಪ್ರಶ್ನೆ ಕೇಳೊವಾಗ ಪ್ರಶ್ನೆ ಮೇಲೆ ಪ್ರಶ್ನೆ ಮಾಡ್ತಾನೇ ಹೋದರು. ಯಾವಾಗ ಸಿನಿಮಾ ಗೆಲುವು-ಸೋಲಿನ ವಿಚಾರ ಬಂತೋ. ಆಗಲೇ, ಹಳೆಯದಕ್ಕೆ ಹೊರಳಿದರು ಮಿಸ್ಟರ್ ದರ್ಶನ್. ಜನ ಚಿತ್ರ ನೋಡ್ತಾರೆ. ಅವರೇ ಸಿನಿಮಾ ಗೆಲ್ಲಿಸೋದು. ವಿರ್ಮಶೆಯಿಂದ ಬರೋ ಸ್ಟಾರ್​ ಗಳಿಂದ ಏನೂ ಆಗಬೇಕಿಲ್ಲ. ಹಣೆ ಮೇಲೆ ಜನ ಸ್ಟಾರ್ ಬರೆದಿದ್ದಾರೆ. ಅದೇ ಸ್ಟಾರ್ ಸಾಕು..

ಹೀಗಂತ ಹೇಳುತ್ತಲೇ, ಸಾರಥಿ ಸಿನಿಮಾದ ಮೊದಲ ದಿನ ನೆನಪಿಸಿಕೊಂಡ್ರು. ಅಂದು ಚಿತ್ರ ರಿಲೀಸ್ ಆದಾಗ ನೀವೇ ಇದ್ದೀರಿ. ಏನ್ ಆಯ್ತು ಅವತ್ತು. ನೀವು ಕೇಳಿದ ಪ್ರಶ್ನೆಗೆ ಜನ ಹಂಗೆ ಉತ್ತರ ಕೊಟ್ಟರು. ಅದಲ್ಲವೇ ಜನರ ಪ್ರೀತಿ. ವಿಮರ್ಶೆಯಿಂದ ಬರೋ ಸ್ಟಾರ್ ಗಳು ಏನೂ ಲೆಕಕ್ಕೆ ಬರೋದೇಯಿಲ್ಲ. ಅಭಿಮಾನಿಗಳೇ ಅಲ್ಟಿ ಮೇಟ್. ಅಭಿಮಾನಿಗಳೇ ತೀರ್ಪುಗಾರರು.

ಇಷ್ಟು ಆಗೋದರ ಹೊತ್ತಿಗೆ ಅಕ್ಕ-ಪಕ್ಕದಲ್ಲಿದ್ದ ಜನರಿಗೆ ಏನ್ ಆಗುತ್ತಿದೆ ಎಂಬ ಅಂದಾಜು ಸಿಗಲಿಲ್ಲ. ಆದರೂ, ಕೆಲವ್ರು ದರ್ಶನ್ ಚೆನ್ನಾಗಿಯೇ ಈ ರಿಪೋರ್ಟರನ್ನ ತರಾಟೆಗೆ ತೆಗೆದುಕೊಂಡ್ರು ಅಂತ ಅನ್ಕೊಂಡ್ರು. ಆದರೆ, ಆಗಿದ್ದು ಏನೂ ಇಲ್ಲ. ಆಫ್​ ದಿ ರೆಕಾರ್ಡ್ ನಲ್ಲಿ ಮತ್ತೆ ಮಾತುಶುರುವಾಯ್ತು. ಅಲ್ಲಿ ದರ್ಶನ್ ಪ್ರಶ್ನೆಗಳ ದಾಳಿ ಇರಲಿಲ್ಲ. ಕೇಳೊ ಆಸ್ತಕಿ ನನ್ನಗೂ ಇರಲಿಲ್ಲ. ಆದರೆ, ಒಂದು ಸ್ಪಷ್ಟವಾಯ್ತು. ನನ್ನಿಂದ ಆದ ಅಂದಿನ ಘಟನೆಯಿಂದ ದರ್ಶನ್ ತುಂಬಾ ಗಾಸಿಯಾಗಿದ್ದಾರೆಂದು. ಅಂದಿನ ಇದ್ದ ವಿಷ್ಯ. ಅಂದಿನ ನಮ್ಮ ಡಿಷಿನ್. ಎಲ್ಲವನ್ನೂ ಹೇಳೀ ಮುಗಿಸಿ ಆಯ್ತು. ಆಗ ದರ್ಶನ್ ಏನೂ ಹೇಳಲಿಲ್ಲ. ನನ್ನ ನೆನಪಿಟ್ಟುಕೊಂಡಿದ್ದಕ್ಕೆ ಥ್ಯಾಂಕ್ಸ್ ಹೇಳಿದೆ. ಆಗ ದರ್ಶನ್ ಹೇಳಿದ್ದ ಒಂದೇ ಮಾತು. ನಾನು ಒಮ್ಮೆ ನೆನಪಿಟ್ಟುಕೊಂಡರೆ ಮುಗಿತೂ. ಯಾರನ್ನೂ ಹತ್ತಿರ ಬಿಟ್ಟುಕೊಳ್ಳೊದಿಲ್ಲ ಅಂತ. ಅದರಿಂದ ನನಗೆ ಅರ್ಥ ವಾಗಿದ್ದು ಇಷ್ಟೇ. ಮೋಸ್ಟಲಿ ನಾನು ಇವತ್ತೇ ಮತ್ತೆ ಹತ್ತಿರವಾದೇ ಅಂತ..
-ರೇವನ್ ಪಿ.ಜೇವೂರ್