ಚಿತ್ರ,,,,,, ಅವ್ವನದ್ದು

ಚಿತ್ರ,,,,,, ಅವ್ವನದ್ದು

ಅವಳ ಚಿತ್ರವನ್ನು ಬಿಡಿಸಲು ಹೋಗಿ
ನನ್ನ ಅವ್ವನ ಚಿತ್ರವನ್ನು ಬಿಡಿಸಿದ್ದೆ,
ಆಕೆ ಕೋಪಿಸಿಕೊಳ್ಳುವಳೋ ಎಂದುಕೊಂಡಿದ್ದೆ,
ಆದರೆ ಆಕೆ 
ಅದನ್ನು ನೋಡಿ ಎದೆಗಪ್ಪಿಕೊಂಡು 
ಅತ್ತಿದ್ದು ಯಾಕೆಂದು, ಅಂದು ತಿಳಿದಿರಲಿಲ್ಲ,
 
ಮೊದಲ ಮಳೆಯ ಹಾಗೆ,
ಆಕೆ ಮೊದಲ ಬಾರಿ ತಾಯಾದಾಗ 
ನಾ ಬಿಡಿಸಿದ ಚಿತ್ರವನೇ ಆಕೆ ನೋಡಿ ನಕ್ಕಿದ್ದು 
ಯಾಕೆಂದು ಕೂಡ ಅರಿವಾಗಿರಲಿಲ್ಲ,
 
ಮಗು ಬೆಳೆದು, ದೊಡ್ಡದಾಗಿ
ಅವನಿಗೆ ಮದುವೆಯಾಗುವ ಹಿಂದಿನ ದಿನ
ಆ ಚಿತ್ರವನೇ ಅವನಿಗೆ ಕೊಟ್ಟು,,,
ನೋಡು! ನಿನ್ನಪ್ಪ ಅವಳವ್ವನನು ನನ್ನಲ್ಲಿ ಕಂಡ
ನೀನು ಹಾಗೆ ಮಾಡುವೆಯಲ್ಲ ಎಂದಿದ್ದಳು.
 
ಮೊನ್ನೆ ಸೊಸೆಯ ಕರೆ ಬಂದಿತ್ತು,,,,
ಅವನು ಅವಳವ್ವನ ಚಿತ್ರ ಬಿಡಿಸಿದ್ದನಂತೆ,,,,,
ಅವಳು ಅದ್ಭುತ ಸಂತೋಷದಲ್ಲಿದ್ದಳು,,,
 
ನನ್ನ ಚಿತ್ರ ಇಷ್ಟು ತಲೆಮಾರುಗಳನ್ನು ನಡೆಸಿತೆ?
 
ಆಳವಾಗಿ ಪ್ರೇಮಿಸಲು ಹೇಳಿಕೊಟ್ಟ 
ನನ್ನವ್ವನಿಗೆ ನಾನು ಋಣಿ,,,,,,,, ಚಿರಋಣಿ 
 
-ಜಿ ಕೆ ನವೀನ್ ಕುಮಾರ್