ನಗೆಹನಿಗಳು ( ಹೊಸವು ?) - ಒಂಬತ್ತನೇ ಕಂತು

ನಗೆಹನಿಗಳು ( ಹೊಸವು ?) - ಒಂಬತ್ತನೇ ಕಂತು

-33-
ಒಂದು ಬಸ್ . ಅಲ್ಲಿ ಒಂದು ಕಿಟಕಿಯ ಬಳಿ ಇಬ್ಬರು ಹೆಂಗಸರು.
ಒಬ್ಬಳು ಹೇಳುತ್ತಾಳೆ - ಈ ಕಿಟಕಿ ಹಾಕಿಬಿಡಿ. ಈ ಚಳಿಗಾಳಿಗೆ ನಾನು ಸತ್ತೇ ಹೋಗುವೆ.
ಇನ್ನೊಬ್ಬಳು ಹೇಳಿದಳು. - ಕಿಟಕಿ ತೆರೆದೇ ಇರಲಿ. ಗಾಳಿ ಇಲ್ಲದೆ ನಾನು ಉಸಿರುಗಟ್ಟಿ ಸತ್ತೇ ಹೋದೇನು
ಪಾಪ , ಆತ ಏನು ಮಾಡಬೇಕು? ಸಹಾಯಕ್ಕೆ ಅತ್ತಿತ್ತ ನೋಡಿದ.
ಅಲ್ಲಿದ್ದ ಒಬ್ಬ ವ್ಯಕ್ತಿ ಹೇಳಿದ - ಅದೇನು ಮಹಾ ಸಮಸ್ಯೆ ? ಹೀಗೆ ಮಾಡು , ಮೊದಲು ಕಿಟಕಿ ತೆರೆದು ಇಡು , ಒಬ್ಬಳು ಸತ್ತುಹೋಗುತ್ತಾಳೆ . ಆಮೇಲೆ ಅದನ್ನು ಹಾಕಿಬಿಡು , ಇನ್ನೊಬ್ಬಳು ಸತ್ತುಹೋಗುತ್ತಾಳೆ ! ಸಿಂಪಲ್ !!

-34-
ರೇಲ್ವೆ ನಿಲ್ದಾಣದಲ್ಲಿ ಆಗತಾನೇ ಚಲಿಸಲು ಆರಂಭಿಸಿದ ರೈಲಿನತ್ತ ಒಬ್ಬ ಓಡಿ ಹೋದ . ರೈಲು ವೇಗ ಹೆಚ್ಚಿಸಿಕೊಂಡು ಹೋಗಿಯೇ ಬಿಟ್ಟಿತು. ಅಂವ ಏದುಸಿರು ಬಿಡುತ್ತ ನಿಂತ.
ಅಲ್ಲಿದ್ದವರೊಬ್ಬರು ಕೇಳಿದರು- ರೈಲು ತಪ್ಪಿಸಿಕೊಂಡ್ರಾ ?
ಅಂವ ಹೇಳಿದ - ಇಲ್ಲಪ್ಪ , ಅದನ್ನು ನಿಲ್ದಾಣದಿಂದ ಹೊರಗೆ ಓಡಿಸಿಬಿಟ್ಟೆ !

-35-
ಯುವಕನೊಬ್ಬ ಒಬ್ಬ ಹಿರಿಯರ ಹತ್ತಿರ ಹೋಗಿ ತಡವರಿಸಿದ - ಸರ್ ,… ಅದು … ನಾನು …ನೀವು.. ತಪ್ಪು ತಿಳಿಯುವುದಿಲ್ಲ ಅಂದರೆ. .
- ಮದುವೆ ತಾನೇ ? ನನ್ನ ಸಮ್ಮತಿ ಇದೆ..
- ಸರ್ ? ಯಾರ ಮದುವೆ ? ಯಾರ ಜೊತೆ ?
- ಇನ್ನಾರದು ? ನಿನ್ನದೇ ! ನನ್ನ ಮಗಳ ಜೊತೆ . ನೀನು ನನನ್ನ ಮಗಳನ್ನ ಪ್ರೀತಿಸ್ತೀ , ಅಲ್ಲವೇ ?
-ಇಲ್ಲ ಸರ್ , ನನಗೆ ಅರ್ಜಂಟಾಗಿ 10000 ರೂಪಾಯಿ ಬೇಕಿತ್ತು ಅಂತ ಕೇಳುವುದಕ್ಕೆ ಬಂದಿದ್ದೆ.

-36-
ಇಬ್ಬರು ಗೆಳೆಯರ ಮಾತುಕತೆ
-ಸ್ವಲ್ಪ ಪೆನ್ನು ಕೊಡ್ತೀಯಾ ?
-ತಗೋ
-ಬಿಳಿ ಕಾಗದ ?
-ಇದೋ
-ಕವರು ಇದೆಯೋ?
-ಇದೆ, ತಗೋ
- ಸ್ಟ್ಯಾಂಪ್ ?
-ಅದೂ ಇದೆ. ತಗೋ
-ನೀನು ಹೊರಗೆ ಹೋದಾಗ ಎಲ್ಲಾದರೂ ಅಂಚೆಡಬ್ಬಿ ಸಿಗುತ್ತೋ ? ಈ ಕವರ್ ಅದರಲ್ಲಿ ಹಾಕ್ತೀಯಾ ?
-ಹಾಗೆಯೇ ಆಗಲಿ
-ನಿನ್ನ ಗೆಳತಿಯ ಮನೆವಿಳಾಸ ಸ್ವಲ್ಪ ಹೇಳ್ತೀಯಾ ?
-?!

Rating
No votes yet