ನಗೆಹನಿಗಳು ( ಹೊಸವು ?) - ಹನ್ನೆರಡನೇ ಕಂತು

ನಗೆಹನಿಗಳು ( ಹೊಸವು ?) - ಹನ್ನೆರಡನೇ ಕಂತು

-45-
(ಭಿಕ್ಷುಕ )- ಅಪ್ಪಾ , ದಯಮಾಡಿ ಒಂದು ಹಳೆಯ ಹರಕು ಅಂಗಿ ದಾನ ಕೊಡಿ.
-ಯಾಕೋ ? ನಿನ್ನ ಈಗಿರುವ ಅಂಗಿ ಹೊಸ ಅಂಗಿಯ ಹಾಗೆಯೇ ಇದೆಯಲ್ಲ ?
(ಭಿಕ್ಷುಕ )- ಈ ಅಂಗಿಯಿಂದಾಗಿ ನನ್ನ ವೃತ್ತಿಗೇ ತೊಂದರೆ ಆಗ್ತಿದೆ , ಅದಕ್ಕೆ.

-46-

ಅಥೆನ್ಸ್ ಬಳಿ ಹಡಗಿನಲ್ಲಿ ಪ್ರಯಾಣಿಕನೊಬ್ಬ ಕ್ಯಾಪ್ಟನನನ್ನು ಕೇಳಿದ - ಅಲ್ಲಿ ಬೆಟ್ಟದ ತುದಿಯ ಮೇಲೆ ಕಾಣುತ್ತಿರುವ ಬೆಳ್ಳಗಿನ ವಸ್ತು ಏನು ?
ಕ್ಯಾಪ್ಟನ್ ಹೇಳಿದ - ಅದು ಹಿಮ ಅಲ್ಲವೇ , ಯಾಕೆ ಕೇಳಿದಿರಿ ?
ಪ್ರಯಾಣಿಕ- ಅಲ್ಲೊಬ್ಬ ಅದು ಗ್ರೀಸ್ ಅಂತ ಹೇಳಿದ ? ಅದಕ್ಕೇ ಕೇಳಿದೆ

-47-
ಒಬ್ಬ ಯುವತಿ - ನನ್ನ ಭಾವೀ ಪತಿ ತಾನು ಜಗತ್ತಿನಲ್ಲೇ ಅತ್ಯಂತ ಸುಂದರಿಯನ್ನು ಮದುವೆ ಆಗಲಿರುವದಾಗಿ ಎಲ್ಲರೊಂದಿಗೆ ಹೇಳುತ್ತಿದ್ದಾನೆ.
ಇನ್ನೊಬ್ಬಳು - ನಿನ್ನ ಜತೆ ಮದುವೆ ನಿಶ್ಚಯ ಆದ ಮೇಲೆ ಆತ ಹೀಗೆ ಹೇಳುತ್ತಿರುವದು ತುಂಬಾ ತಪ್ಪು.

-48-
- ನನ್ನನ್ನು ಚುಂಬಿಸಿದ ಏಕೈಕ ಗಂಡಸು ನನ್ನ ಗಂಡ.
- ಇದೇನು ಹೆಗ್ಗಳಿಕೆಯೋ , ಇಲ್ಲಾ ದೂರೋ ?

Rating
No votes yet