ನಗೆಹನಿಗಳು ( ಹೊಸವು ?) - ಹತ್ತೊಂಬತ್ತನೇ ಕಂತು

ನಗೆಹನಿಗಳು ( ಹೊಸವು ?) - ಹತ್ತೊಂಬತ್ತನೇ ಕಂತು

-73-
-ನನ್ನ ಮದುವೆ ಘಟಿಸಿದ್ದು ಹತ್ತು ವರ್ಷದ ಹಿಂದೆ.… …
-ಮದುವೆಯಂಥವು ಆಗುತ್ತವೆ; ಅಪರಾಧ , ಅಪಘಾತ ,ಅನಾಹುತ ಮುಂತಾದವು ಘಟಿಸುತ್ತವೆ . ಗೊತ್ತಾಯಿತೇನ್ರಿ ?
- ಓ, ಹೌದಾ ? ಹಾಗಾದರೆ ಕೇಳಿ, ನನ್ನ ಮದುವೆ ಘಟಿಸಿದಾಗ ……

-74-
- ನಮ್ಮ ಮದುವೆಗೆ ನಮ್ಮ ಚಿಕ್ಕಮ್ಮ ಕೊಟ್ಟಿರೋ ನೀಲಾಂಜನಗಳು ನಿಜಕ್ಕೂ ಬೆಳ್ಳಿಯವು ಅಲ್ಲ.
- ನಿನಗೆ ಹೇಗೆ ಗೊತ್ತಾಯಿತು ? ಬೆಳ್ಳಿಯ ಬಗ್ಗೆ ಚೆನ್ನಾಗಿ ಗೊತ್ತಿದೆಯೇ ?
- ಬೆಳ್ಳಿಯ ಬಗ್ಗೆ ಗೊತ್ತಿಲ್ಲ , ಆದರೆ ಚಿಕ್ಕಮ್ಮನ ಬಗ್ಗೆ ಚೆನ್ನಾಗಿ ಗೊತ್ತು

-75-
-ನಿನ್ನೆ ನನ್ನ ಹೆಂಡತಿ ಕಣ್ಣಿಗೆ ಏನೋ ಕಸ ಬಿತ್ತು. ಅದಕ್ಕಾಗಿ ಡಾಕ್ಟರ್ ಬಳಿ ಹೋಗಬೇಕಾಗಿ ಬಂದು 300 ಖರ್ಚಾಯಿತು
-ಅಷ್ಟೇನಾ ? ನನ್ನ ಹೆಂಡತಿ ಕಣ್ಣಿಗೆ ಒಂದು ಸೀರೆ ಬಿದ್ದು 3000 ಖರ್ಚಾಯಿತು!

-76-
ಸೇಲ್ಸ್‌ಮನ್ - ಸರ್ , ಲೆಟರ್-ಓಪನರ್ ಕೊಳ್ತೀರಾ ?
ದಾರಿಹೋಕ - ಬೇಡಪ್ಪ, ನನಗೆ ಅಗತ್ಯವಿಲ್ಲ , ನನಗೆ ಮದುವೆಯಾಗಿದೆ.

Rating
No votes yet